ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯನನ್ನು ಸ್ಪರ್ಶಿಸಿದ ಬಾಹ್ಯಾಕಾಶ ನೌಕೆ: ವಿಜ್ಞಾನ ಜಗತ್ತಿನಲ್ಲಿ ನಂಬಲಾಗದ ಸಾಧನೆ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 15: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಅಸಾಧ್ಯವಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ ವಿಜ್ಞಾನ ಜಗತ್ತಿನಲ್ಲಿ ಐತಿಹಾಸಿಕ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ನಾಸಾದ ಬಾಹ್ಯಾಕಾಶ ನೌಕೆಯು ಮೊದಲ ಬಾರಿಗೆ ಸೂರ್ಯನನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ.

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ ಬಾಹ್ಯಾಕಾಶ ನೌಕೆಯು ಅಸಾಧ್ಯವೆಂದು ಪರಿಗಣಿಸಲಾದ ಸಾಧನೆಯನ್ನು ಮಾಡಿದೆ. ಸೂರ್ಯನ ಹೊರಪದರದ ಉಷ್ಣತೆಯು 2 ಮಿಲಿಯನ್ ಡಿಗ್ರಿ ಫ್ಯಾರನ್‌ಹೀಟ್ ಆಗಿರುವುದರಿಂದ ಈ ಕಾರ್ಯಾಚರಣೆಯು ಅಸಾಧ್ಯವಾಗಿತ್ತು. ಆದರೂ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಹೊರಪದರವನ್ನು ಸ್ಪರ್ಶಿಸಿದೆ. ಹೀಗಾಗಿ ನಾಸಾದ ಈ ಸಾಧನೆಯೂ ವಿಜ್ಞಾನ ಪ್ರಪಂಚದ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ ಮತ್ತು ಮಾನವರಿಗೆ ಒಂದು ಮೈಲಿಗಲ್ಲಾಗಿದೆ.

ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ’!ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ’!

ನಾಸಾ ವಿಜ್ಞಾನಿಗಳು ಈ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಸೌರ ವಿಜ್ಞಾನ ಕ್ಷೇತ್ರದಲ್ಲಿ ನಂಬಲಾಗದ ಸಾಧನೆಯನ್ನು ಮಾಡಿದ್ದಾರೆ. ವರದಿಯ ಪ್ರಕಾರ, ಪಾರ್ಕರ್ ಸೋಲಾರ್ ಪ್ರೋಬ್ ಹೆಸರಿನ ರಾಕೆಟ್‌ಶಿಪ್ ಏಪ್ರಿಲ್ 28 ರಂದು ಉಡಾವಣೆಯಾಗಿ ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಮೇಲ್ಪದರವನ್ನು ಯಶಸ್ವಿಯಾಗಿ ಪ್ರವೇಶಿಸಿತು. ಇದರೊಂದಿಗೆ ಈ ನಾಸಾ ರಾಕೆಟ್ ಸೂರ್ಯನ ಮೇಲ್ಮೈಯಲ್ಲಿರುವ ಕಣಗಳು ಮತ್ತು ಕೆಲ ಮಾದರಿಗಳನ್ನು ಸಹ ತೆಗೆದುಕೊಂಡಿದೆ.

A human-made object just touched the Sun

ಹಾರ್ವರ್ಡ್ ಮತ್ತು ಸ್ಮಿತ್ಸೋನಿಯನ್ (CfA) ನಲ್ಲಿನ ಖಗೋಳ ಭೌತಶಾಸ್ತ್ರದ ಕೇಂದ್ರದ ಸದಸ್ಯರು ಸೇರಿದಂತೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ದೊಡ್ಡ ಸಹಯೋಗದೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಸಾಧಿಸಲಾಗಿದೆ. ತನಿಖೆಯಲ್ಲಿ ಪ್ರಮುಖ ಸಾಧನವನ್ನು ನಿರ್ಮಿಸಿದ ಮತ್ತು ಮೇಲ್ವಿಚಾರಣೆ ಮಾಡಿದವರು ಸೋಲಾರ್ ಪ್ರೋಬ್ ಕಪ್ ಎಂಬ ವಿಜ್ಞಾನಿ. ಸೂರ್ಯನ ವಾತಾವರಣದಿಂದ ಕಣಗಳನ್ನು ಸಂಗ್ರಹಿಸುವ ಏಕೈಕ ಸಾಧಕರ ಪಟ್ಟ ಕಪ್ ಅವರಿಗೆ ಸಿಗಲಿದೆ.

A human-made object just touched the Sun

ಸುಮಾರು 2 ಮಿಲಿಯನ್ ಡಿಗ್ರಿ ಫ್ಯಾರನ್ ಹೀಟ್ ತಾಪಮಾನದಲ್ಲಿ ಹೋಗುವ ಈ ಬಾಹ್ಯಾಕಾಶ ನೌಕೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಜ್ಞಾನಿ ಆಂಥೋನಿ ಕೇಸ್ ಅವರ ಪ್ರಕಾರ " ಬಾಹ್ಯಾಕಾಶ ನೌಕೆಯು ಸೂರ್ಯನ ಬಳಿ ಹೋದಾಗ ಎಷ್ಟು ಬಿಸಿಯಾಗಿರುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಲಾಯಿತು. ನಂತರ ಅದಕ್ಕೆ ತಕ್ಕಂತೆ ನೌಕೆಯನ್ನು ಸಿದ್ದಪಡಿಸಲಾಗಿದೆ" ಎಂದರು.

A human-made object just touched the Sun

ಬಾಹ್ಯಾಕಾಶ ನೌಕೆಯನ್ನು ರಕ್ಷಿಸಲು ಎರಡು ಕಪ್‌ ಆಕಾರದ ರಕ್ಷಾ ಕವಚಗಳನ್ನು ತಯಾರಿಸಲಾಗಿದೆ. ಇದನ್ನು ಬಾಹ್ಯಾಕಾಶ ನೌಕೆಗೆ ಅಂಟಿಸಲಾಗಿದೆ. ಈ ಎರಡೂ ಕಪ್‌ಗಳು ಸೂರ್ಯನ ಶಾಖಕ್ಕೆ ನೇರವಾಗಿದ್ದು ಅವುಗಳಿಂದಲೇ ನೌಕೆಯನ್ನು ರಕ್ಷಿಸಲಾಗಿದೆ ಎಂದು ವಿಜ್ಞಾನಿ ಕೇಸ್ ಹೇಳಿದ್ದಾರೆ. ಈ ಕಪ್ ಸೂರ್ಯನ ಶಾಕಕ್ಕೆ ಕರಗದಂತೆ ಹೆಚ್ಚಿನ ಲೋಹಗಳು, ಟಂಗ್‌ಸ್ಟನ್, ನಿಯೋಬಿಯಂ, ಮಾಲಿಬ್ಡಿನಮ್ ಮತ್ತು ನೀಲಮಣಿಯಂತಹ ಕಲ್ಲುಗಳಿಂದ ತಯಾರಿಸಲಾಗಿದೆ.

A human-made object just touched the Sun

ಭೂಮಿಗಿಂತ ಭಿನ್ನವಾಗಿ, ಸೂರ್ಯನಿಗೆ ಘನ ಮೇಲ್ಮೈ ಇಲ್ಲ. ಇದು ಅತ್ಯಂತ ಬಿಸಿ ವಾತಾವರಣವನ್ನು ಹೊಂದಿದೆ. ಕರೋನಾವು ಸೂರ್ಯನ ವಾತಾವರಣದ ಹೊರ ಪದರವಾಗಿದೆ. ಈ ಕರೋನಾ ಸೂರ್ಯನ ಮೇಲ್ಮೈಯಿಂದ 4.3 ರಿಂದ 8.6 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. NASA ಪ್ರಕಾರ, ಸೂರ್ಯನ ವಾತಾವರಣದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯ ಆಗಮನವು ಊಹಿಸಿದ್ದಕ್ಕಿಂತ ಹೆಚ್ಚಿನ ತಂತ್ರಜ್ಞಾನದ ಪ್ರಗತಿಯನ್ನು ಸೂಚಿಸುತ್ತದೆ. ಬಾಹ್ಯಾಕಾಶ ನೌಕೆಯ ಐತಿಹಾಸಿಕ ಸಾಧನೆಯು ವಿಜ್ಞಾನಿಗಳಿಗೆ ಕೆಂಪು-ಬಿಸಿ ನಕ್ಷತ್ರವಾದ ಸೂರ್ಯನ ಬಗ್ಗೆ ಶತಮಾನಗಳಷ್ಟು ಹಳೆಯ ರಹಸ್ಯಗಳನ್ನು ಪರಿಹರಿಸುವ ಹೊಸ ಭರವಸೆಯನ್ನು ನೀಡಿದೆ. ಉದಾಹರಣೆಗೆ, ಸೂರ್ಯನ ಹೊರಗಿನ ವಾತಾವರಣ (2 ಮಿಲಿಯನ್ ಡಿಗ್ರಿ ಸೆಲ್ಸಿಯಸ್) ಎಂದು ನಮಗೆ ನಿಜವಾಗಿಯೂ ತಿಳಿದಿಲ್ಲ ಎಂದು ನಾಸಾ ಹೇಳಿದೆ.

English summary
NASA's spacecraft has succeeded in touching the corona of the sun for the first time. A spacecraft launched by the US space agency NASA has achieved a feat considered impossible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X