ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಟ್ಯಾಪ್ ಆನ್‌ ಮಾಡಿ ನೀರು ಕುಡಿದು ಮತ್ತೆ ಆಫ್ ಮಾಡುವ ನಾಯಿ

|
Google Oneindia Kannada News

ಸಾಕುಪ್ರಾಣಿಗಳಲ್ಲಿ ನಾಯಿ ಅತ್ಯಂತ ಪ್ರೀತಿಯ ಹಾಗೂ ವಿಶ್ವಾಸವಿಡುವ ಪ್ರಾಣಿ. ಹೀಗಾಗಿ ಇದನ್ನು ಸಾಕಲು ಜನ ಇಷ್ಟಪಡುತ್ತಾರೆ. ಒಂದು ಹೊತ್ತು ಊಟ ಹಾಕಿದರೆ ಸಾಕು ಮನೆ ಜನರನ್ನು ಹಗಲು ಇರುಳು ಕಾಯುವ ಶ್ವಾನವನ್ನು ನಿಯತ್ತಿನ ಪ್ರಾಣಿ ಎಂತಲೂ ನಂಬಲಾಗುತ್ತದೆ. ಹೀಗಾಗಿನೇ ನಾಯಿ ಇಂದಿನ ಕಾಲಕ್ಕೆ ಮನೆಯ ಸದಸ್ಯರಲ್ಲಿ ಒಬ್ಬರಂತೆ ನೋಡಿಕೊಳ್ಳಲಾಗುತ್ತದೆ. ಮಕ್ಕಳೊಂದಿಗೆ ಮಗುವಾಗಿ ವಯಸ್ಸಾದವರಿಗೆ ಆಸರೆಯಾಗಿ ಮನೆ ಸದಸ್ಯರಿಗೆ ಗಾರ್ಡ್ ಆಗಿ ನಾಯಿ ಅಚ್ಚುಮೆಚ್ಚು ಪಡೆದುಕೊಂಡಿದೆ. ಹೀಗಾಗಿ ಮನೆಗೊಂದು ನಾಯಿ ಇಂದು ಸಾಮಾನ್ಯವಾಗಿವೆ.

ಕೇವಲ ಇಷ್ಟು ಮಾತ್ರವಲ್ಲ ನಾಯಿ ಮಾಡುವ ಕೆಲವೊಂದು ಕೆಲಸಗಳು ನಮಗೆ ಉತ್ತಮ ಸಂದೇಶವನ್ನೂ ನೀಡುತ್ತವೆ. ಇಂತಹ ನಾಯಿಯ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇಂತಹದೊಂದು ವಿಡಿಯೋ ಸದ್ಯ ವೈರಲ್ ಆಗಿದೆ. ಅದರಲ್ಲೂ ಕನ್ನಡದ ಚಾರ್ಲಿ ಸಿನಿಮಾದ ಬಳಿಕವಂತೂ ಸಾಮಾಜಿಕ ಜಾಲತಾಣದಲ್ಲಿ ನಾಯಿಗಳದ್ದೇ ಮಾತು.

ಸಾಮಾನ್ಯವಾಗಿ ಟ್ಯಾಪ್‌ ವಾಟರ್ ಬಳಿಕೆ ಮಾಡಿ ಟ್ಯಾಪ್ ಆಫ್ ಮಾಡದೆ ನಿರ್ಲಕ್ಷ್ಯ ತೋರುವ ಜನ ನಮ್ಮ ನಡುವೆ ಇದ್ದಾರೆ. ಆದರೆ ವೈರಲ್ ವಿಡಿಯೋದಲ್ಲಿನ ನಾಯಿಯೊಂದು ಟ್ಯಾಪ್ ಆನ್‌ ಮಾಡಿ ನೀರು ಕುಡಿದು ಬಳಿಕ ಅದನ್ನು ಆಫ್ ಕೂಡ ಮಾಡುತ್ತದೆ. ನಾಯಿ ಈ ಬುದ್ಧಿವಂತಿಕೆಗೆ ಶ್ಲಾಘನೆ ವ್ಯಕ್ತವಾಗಿದೆ.

A dog that turns on the tap, drinks water and turns it off again

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ನಾಯಿಯೊಂದು ನೀರು ಕುಡಿಯಲುಟ್ಯಾಪ್ ಆನ್‌ ಮಾಡುತ್ತದೆ. ತನ್ನ ಬಾಯಾರಿಕೆ ತಣಿಸಿದ ನಂತರ, ನಾಯಿಯು ಟ್ಯಾಪ್ ಅನ್ನು ಚುರುಕಾಗಿ ಆಫ್ ಮಾಡುತ್ತದೆ. "ಪ್ರತಿ ಹನಿಯೂ ಅಮೂಲ್ಯ. ನಾಯಿಗೂ ಅರ್ಥವಾಯಿತು, ಮನುಷ್ಯರಾದ ನಮಗೆ ಯಾವಾಗ ಅರ್ಥವಾಗುತ್ತದೆಯೋ?" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೊವು 34 ಸಾವಿರ ವೀಕ್ಷಣೆಗಳನ್ನು ಮತ್ತು ಅಧಿಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಜವಾಬ್ದಾರಿಯುತ ನಾಯಿಯ ನಡೆಗೆ ಜನರು ಪ್ರಭಾವಿತರಾಗಿದ್ದಾರೆ. ಪ್ರತಿಯೊಬ್ಬರೂ ನಾಯಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ. ನೀರನ್ನು ಹೇಗೆ ಸಂರಕ್ಷಿಸಬೇಕು ಎಂದು ಹಲವರು ಸೂಚಿಸಿದ್ದಾರೆ.

English summary
A video of a dog drinking water after turning on the tap has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X