ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆದ 10 ತಿಂಗಳ ಹೆಣ್ಣು ಮಗು

|
Google Oneindia Kannada News

ಛತ್ತೀಸ್‌ಗಢದಲ್ಲಿ ನಡೆದ ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ 10 ತಿಂಗಳ ಬಾಲಕಿಗೆ ರೈಲ್ವೆ ಇಲಾಖೆಯು ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ಪಡೆದುಕೊಂಡಿರುವ ಮಗು 18 ವರ್ಷ ವಯಸ್ಸಿನ ನಂತರ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಚಾರ ರದ್ದು: ಹೆಚ್ಚು ಹಣ ವ್ಯಯಿಸುತ್ತಿರುವ ಪ್ರಯಾಣಿಕರುರೈಲು ಸಂಚಾರ ರದ್ದು: ಹೆಚ್ಚು ಹಣ ವ್ಯಯಿಸುತ್ತಿರುವ ಪ್ರಯಾಣಿಕರು

ಅನುಕಂಪದ ಆಧಾರದ ಮೇಲೆ ಈ ವಯಸ್ಸಿನ ಮಗುವಿಗೆ ಇಂತಹ ಕೊಡುಗೆ ನೀಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅನುಕಂಪದ ನೇಮಕಾತಿಗಳು ಮೃತ ಸರ್ಕಾರಿ ನೌಕರರ ಕುಟುಂಬಗಳಿಗೆ ತಕ್ಷಣದ ಸಹಾಯವನ್ನು ನೀಡುವ ಗುರಿ ಹೊಂದಿವೆ.

A 10 Month Old Girl Appointed In Indian Railways

"ಜುಲೈ 4 ರಂದು, ರಾಯ್‌ಪುರ ರೈಲ್ವೆ ವಿಭಾಗದ ಆಗ್ನೇಯ ಮಧ್ಯ ರೈಲ್ವೆಯ ಸಿಬ್ಬಂದಿ ಇಲಾಖೆ (SECR) ನಲ್ಲಿ 10 ತಿಂಗಳ ಹೆಣ್ಣು ಮಗುವನ್ನು ಸಹಾನುಭೂತಿಯ ನೇಮಕಾತಿಗಾಗಿ ನೋಂದಾಯಿಸಲಾಗಿದೆ".

ಮಗುವಿನ ತಂದೆ ರಾಜೇಂದ್ರ ಕುಮಾರ್ ಭಿಲಾಯಿಯ ರೈಲ್ವೆ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಜೂನ್ 1 ರಂದು ಅವರು ತಮ್ಮ ಪತ್ನಿಯೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು, ಆದರೆ ಮಗು ಬದುಕುಳಿದಿದೆ ಎಂದು ಮಧ್ಯ ರೈಲ್ವೆಯ ಸಿಬ್ಬಂದಿ ಇಲಾಖೆಯ ಹೇಳಿಕೆ ತಿಳಿಸಿದೆ.

A 10 Month Old Girl Appointed In Indian Railways

ಮೃತ ನೌಕರನ ಕುಟುಂಬಕ್ಕೆ ಸಹಾಯ

ನಿಯಮಗಳ ಪ್ರಕಾರ ಕುಮಾರ್ ಅವರ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ರಾಯ್‌ಪುರ ರೈಲ್ವೆ ವಿಭಾಗವು ಒದಗಿಸಿದೆ ಎಂದು ಹೇಳಲಾಗಿದೆ. ರೈಲ್ವೆ ದಾಖಲೆಗಳಲ್ಲಿ ಅಧಿಕೃತ ನೋಂದಣಿ ಮಾಡಲು ಮಗುವಿನ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕೆಯ ಸಂಬಂಧಿಕರೊಂದಿಗೆ, ಹೆಬ್ಬೆರಳಿನ ಗುರುತನ್ನು ತೆಗೆದುಕೊಳ್ಳುವಾಗ ಮಗು ಅಳುತ್ತಿತ್ತು ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಂಡರು. ಅದೊಂದು ಹೃದಯ ವಿದ್ರಾವಕ ಕ್ಷಣವಾಗಿತ್ತು. ಇಷ್ಟು ಚಿಕ್ಕ ಮಗುವಿನ ಹೆಬ್ಬೆರಳಿನ ಗುರುತನ್ನು ತೆಗೆಯುವುದೂ ಕೂಡ ಕಷ್ಟವಾಗಿತ್ತು ಎಂದರು.

English summary
The railway department has given an appointment on compassionate grounds to a 10-month-old girl who lost her parents in an accident in Chhattisgarh, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X