ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ಆಹಾರ ಪದ್ಧತಿಯನ್ನೇ ಬದಲಿಸಿದ ಲಾಕ್‌ಡೌನ್‌ ಸಮಯ

|
Google Oneindia Kannada News

ನವದೆಹಲಿ, ಜುಲೈ 29: ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕಳೆದ ವರ್ಷ ದೇಶದಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ಸಮಯದಲ್ಲಿ ಮಹಿಳೆಯರ ಆಹಾರ ಪದ್ಧತಿಯೂ ಬದಲಾಗಿದೆ. ದೇಶದ ಪ್ರತಿ ಹತ್ತರಲ್ಲಿ ಒಂಬತ್ತು ಮಹಿಳೆಯರು ಈ ಸಮಯದಲ್ಲಿ ಕನಿಷ್ಠ ಆಹಾರ ಸೇವನೆ ಮಾಡಿದ್ದಾರೆ. ಇದು ಅವರ ದೇಹದಲ್ಲಿನ ಪೌಷ್ಟಿಕಾಂಶದ ಮಟ್ಟದ ಮೇಲೂ ಪರಿಣಾಮ ಬೀರಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಟಾಟಾ ಕಾರ್ನೆಲ್ ಇನ್‌ಸ್ಟಿಟ್ಯೂಟ್ ಫಾರ್ ಅಗ್ರಿಕಲ್ಚರ್ ಅಂಡ್ ನ್ಯೂಟ್ರಿಷನ್‌ನ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಆಹಾರ ವೆಚ್ಚ, ಆಹಾರ ಪದ್ಧತಿಯ ಬದಲಾವಣೆ ಹಾಗೂ ಪೌಷ್ಟಿಕಾಂಶ ಸಂಬಂಧ ಅಂಶಗಳ ಕುರಿತು ಸಂಶೋಧನೆ ನಡೆಸಿ ಕೆಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಮುಂದೆ ಓದಿ...

 ಮನೆಗೆ ಖರೀದಿಸಿ ತರುವ ಆಹಾರ ಪ್ರಮಾಣ ತಗ್ಗಿದೆ

ಮನೆಗೆ ಖರೀದಿಸಿ ತರುವ ಆಹಾರ ಪ್ರಮಾಣ ತಗ್ಗಿದೆ

ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಮಹಿಳೆಯರಲ್ಲಿ ಶೇ 90ರಷ್ಟು ಮಹಿಳೆಯರು ಲಾಕ್‌ಡೌನ್ ಸಂದರ್ಭ ಕಡಿಮೆ ಆಹಾರ ಸೇವಿಸಿದ್ದಾಗಿ ತಿಳಿಸಿದ್ದಾರೆ. ಮೇ 2019ಕ್ಕೆ ಹೋಲಿಸಿದರೆ, ಮೇ 2020ರಲ್ಲಿ ಮನೆಗೆ ತಂದ ಆಹಾರ ಧಾನ್ಯಗಳ ಪ್ರಮಾಣವೂ ಕಡಿಮೆಯಾಗಿದೆ. ಅದರಲ್ಲೂ ಮಾಂಸ, ಮೊಟ್ಟೆ, ತರಕಾರಿ ಹಾಗೂ ಹಣ್ಣಿನಂಥ ಆಹಾರ ಖರೀದಿ ಕಡಿಮೆಯಾಗಿದ್ದಾಗಿ ತಿಳಿಸಿದ್ದಾರೆ.

ಕೊರೊನಾ ಕಾಲದಲ್ಲಿ ಮಕ್ಕಳ ತೂಕ ಹೆಚ್ಚಳ: ಪೋಷಕರು ಮಾಡಬೇಕಾಗಿದ್ದೇನು?ಕೊರೊನಾ ಕಾಲದಲ್ಲಿ ಮಕ್ಕಳ ತೂಕ ಹೆಚ್ಚಳ: ಪೋಷಕರು ಮಾಡಬೇಕಾಗಿದ್ದೇನು?

 ಮಹಿಳೆಯರು ಸೇವಿಸುತ್ತಿದ್ದ ವೈವಿಧ್ಯಮಯ ಆಹಾರ ಪ್ರಮಾಣ ಕ್ಷೀಣಿಸಿದೆ

ಮಹಿಳೆಯರು ಸೇವಿಸುತ್ತಿದ್ದ ವೈವಿಧ್ಯಮಯ ಆಹಾರ ಪ್ರಮಾಣ ಕ್ಷೀಣಿಸಿದೆ

ಜೊತೆಗೆ ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರು ಸೇವಿಸುತ್ತಿದ್ದ ವೈವಿಧ್ಯಮಯ ಆಹಾರ ಪ್ರಮಾಣವೂ ಕ್ಷೀಣಿಸಿರುವುದಾಗಿ ತಿಳಿಸಿದೆ. ಈ ಮುನ್ನವೂ ಭಾರತೀಯ ಮಹಿಳೆಯರ ಆಹಾರ ಪದ್ಧತಿ ಅಷ್ಟು ಪೌಷ್ಟಿಕಾಂಶವಾಗಿರಲಿಲ್ಲ. ಲಾಕ್‌ಡೌನ್‌ನಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದು ಸಂಶೋಧಕಿ ಸೌಮ್ಯಾ ಗುಪ್ತಾ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಇದು ಋಣಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

 ಮಹಿಳೆಯರ ಆಹಾರ ಪದ್ಧತಿ ಮೇಲೆ ಲಾಕ್‌ಡೌನ್ ಪರಿಣಾಮ

ಮಹಿಳೆಯರ ಆಹಾರ ಪದ್ಧತಿ ಮೇಲೆ ಲಾಕ್‌ಡೌನ್ ಪರಿಣಾಮ

ದೇಶದಲ್ಲೇ ಹಿಂದುಳಿದ ಜಿಲ್ಲೆಗಳಾಗಿರುವ ಉತ್ತರ ಪ್ರದೇಶದ ಮಹಾರಾಜ್‌ಗಂಜ್, ಬಿಹಾರದ ಮುಂಗೇರ್ ಹಾಗೂ ಒಡಿಶಾದ ಕಂದಮಾಲ್, ಕಾಳಹಂದಿ ಈ ನಾಲ್ಕು ಸ್ಥಳಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. "ಎಕೊನೊಮಿಯಾ ಪೊಲಿಟಿಕಾ" ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಲಾಕ್‌ಡೌನ್ ಸಮಯದಲ್ಲಿ ಆಹಾರದ ವೆಚ್ಚ ಹಾಗೂ ಮಹಿಳೆಯರ ವೈವಿಧ್ಯ ಆಹಾರ ಪದ್ಧತಿಯಲ್ಲಿನ ಬದಲಾವಣೆಗೆ ಅಧ್ಯಯನ ಆದ್ಯತೆ ನೀಡಿದೆ.

ಲಸಿಕೆ ಪಡೆದ ನಂತರ ಮಧುಮೇಹಿಗಳು ಯಾವ ಆಹಾರ ಸೇವಿಸಬೇಕು? ಏನನ್ನು ತ್ಯಜಿಸಬೇಕು?ಲಸಿಕೆ ಪಡೆದ ನಂತರ ಮಧುಮೇಹಿಗಳು ಯಾವ ಆಹಾರ ಸೇವಿಸಬೇಕು? ಏನನ್ನು ತ್ಯಜಿಸಬೇಕು?

 ಕೃಷಿ ಸಾಮಗ್ರಿಗಳ ಬೆಲೆ ಏರಿಳಿತ

ಕೃಷಿ ಸಾಮಗ್ರಿಗಳ ಬೆಲೆ ಏರಿಳಿತ

ಲಾಕ್‌ಡೌನ್ ಸಂದರ್ಭ ಕೃಷಿ ಸಾಮಗ್ರಿಗಳ ಸರಬರಾಜು ತೊಡಕಾಗಿದ್ದು ಕೂಡ ಪರೋಕ್ಷ ಕಾರಣವಾಗಿದೆ. ಈ ಸಮಯದಲ್ಲಿ ಬೆಲೆ ಏರಿಳಿತವಾಗಿರುವುದು ಆಹಾರ ಸೇವನೆ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ. ವಿಶೇಷ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ಆಹಾರ ಪೂರೈಕೆ, ಜನರ ಖಾತೆಗೆ ನೇರ ಹಣ ವರ್ಗಾವಣೆ, ಅಂಗನವಾಡಿಗಳ ಮೂಲಕ ಪಡಿತರ ವಿತರಣೆಯಂಥ ಸೌಲಭ್ಯಗಳನ್ನು ತಲುಪಿಸಿರುವ ನಡುವೆಯೂ ಮಹಿಳೆಯರ ಪೌಷ್ಟಿಕಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

English summary
Nine out of 10 women in India had less food, impacting their nutrition levels, during the 2020 nationwide lockdown imposed in response to the COVID-19 pandemic, according to a new study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X