ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ ಪ್ರವಾಹ ದುರಂತಕ್ಕೆ 9 ವರ್ಷ: ಇನ್ನೂ ಪತ್ತೆಯಾಗಿಲ್ಲ 3,183 ಜನ

|
Google Oneindia Kannada News

ಡೆಹ್ರಾಡೂನ್ ಜೂನ್ 16: 2013ರ ಜೂನ್ 16 ಮತ್ತು 17ರಂದು ಕೇದಾರನಾಥದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಇಂದಿಗೆ 9 ವರ್ಷಗಳು ಪೂರ್ಣಗೊಂಡಿವೆ. ಈ 9 ವರ್ಷಗಳಲ್ಲಿ ಕೇದಾರಪುರಿಯಲ್ಲಿ ದೊಡ್ಡ ಪ್ರಮಾಣದ ಪುನರ್ನಿರ್ಮಾಣದಿಂದ ಚಿತ್ರಣ ಬದಲಾಗಿದ್ದರೂ ಸಹ, ದುರಂತದ ಪ್ರವಾಹದಲ್ಲಿ ಕಳೆದುಹೋದ ಆತ್ಮೀಯರನ್ನು ಕಳೆದುಕೊಂಡ ದುಃಖ ಇನ್ನೂ ಸಾವಿರಾರು ಕುಟುಂಬಗಳಲ್ಲಿ ಗೋಚರಿಸುತ್ತದೆ. ಇಂದಿಗೆ 9 ವರ್ಷ ಪೂರೈಸಿದರೂ ಅನಾಹುತವನ್ನು ನೆನೆದು ಕುಟುಂಬದವರ ಕಣ್ಣೀರು ಮಾತ್ರ ನಿಂತಿಲ್ಲ. ಬದುಕುಳಿದವರ ಕಣ್ಣಲ್ಲಿ ಇಂದಿಗೂ ಆ ಪ್ರವಾಹವಿದೆ, ಈ ದುರಂತಕ್ಕೆ ಬಲಿಯಾದ ಅವರ ಕುಟುಂಬಗಳು ಇನ್ನೂ ತಮ್ಮ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತಿವೆ. 9 ವರ್ಷ ಕಳೆದರೂ ಅಧಿಕೃತ ಅಂಕಿ ಅಂಶ ಪ್ರಕಾರ ಇನ್ನೂ 3,183 ಜನ ಪತ್ತೆಯಾಗಿಲ್ಲ.

ಪ್ರತಿ ಬಾರಿಯೂ ಲಕ್ಷಾಂತರ ಭಕ್ತರು ಉತ್ತರಾಖಂಡದ ವಿಶ್ವವಿಖ್ಯಾತ ಚಾರ್ಧಾಮ್ ಯಾತ್ರೆಯಲ್ಲಿ ಬಾಬಾ ಕೇದಾರದ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷದಂತೆ 2013ರಲ್ಲೂ ಭಕ್ತರ ದಂಡೇ ನೆರೆದಿತ್ತು. ಆದರೆ 2013 ರ ಜೂನ್ 16 ಮತ್ತು 17 ರಂದು ಸಂಭವಿಸಿದ ಭೀಕರ ದುರಂತವು ಎಷ್ಟು ಆಳವಾದ ನೋವನ್ನು ನೀಡಿತು ಎಂದರೆ ಅನೇಕ ಕುಟುಂಬಗಳು ಇಂದಿಗೂ ಈ ದುರಂತವನ್ನು ಮರೆಯಲು ಸಾಧ್ಯವಾಗಿಲ್ಲ. ಈ ಭೀಕರ ದುರಂತದಲ್ಲಿ ಪ್ರಯಾಣಿಕರು ಮತ್ತು ಸ್ಥಳೀಯರು ಸಿಕ್ಕಿಬಿದ್ದಿದ್ದರು. ಇವರಲ್ಲಿ ಹಲವರು ಕಾಣೆಯಾಗಿದ್ದಾರೆ.

ಕೇದಾರನಾಥ ದೇವಾಲಯದ ನಿರ್ಮಾತೃ ಯಾರು ಎನ್ನುವ ಪ್ರಶ್ನೆಯ ಮಧ್ಯೆ ನಿರ್ಮಾಣದ ಹಲವು ಅಚ್ಚರಿಗಳುಕೇದಾರನಾಥ ದೇವಾಲಯದ ನಿರ್ಮಾತೃ ಯಾರು ಎನ್ನುವ ಪ್ರಶ್ನೆಯ ಮಧ್ಯೆ ನಿರ್ಮಾಣದ ಹಲವು ಅಚ್ಚರಿಗಳು

ಕೇದಾರಪುರಿ ಪ್ರವಾಹ ದುರಂತದಲ್ಲಿ 3,183 ಜನರು ಕಾಣೆ

ಕೇದಾರಪುರಿ ಪ್ರವಾಹ ದುರಂತದಲ್ಲಿ 3,183 ಜನರು ಕಾಣೆ

ಸರ್ಕಾರದ ಅಂಕಿಅಂಶಗಳ ಪ್ರಕಾರ, ದುರಂತದ ನಂತರ ಪೊಲೀಸರಿಗೆ ಒಟ್ಟು 1840 ಎಫ್ಆಐಆರ್‌ಗಳನ್ನು ದಾಖಲಿಸಿದ್ದಾರೆ. ಇದರ ಮೇಲೆ ಪೊಲೀಸರು ಕ್ರಾಸ್ ಚೆಕ್ ಮಾಡಲು ರುದ್ರಪ್ರಯಾಗದಲ್ಲಿ ಪ್ರತ್ಯೇಕ ತನಿಖಾ ಕೋಶವನ್ನು ಸ್ಥಾಪಿಸಿದ್ದರು. ಇದರಲ್ಲಿ ಎರಡು ಸ್ಥಳಗಳಲ್ಲಿ ದಾಖಲಾಗಿರುವ 584 ಎಫ್‌ಐಆರ್‌ಗಳನ್ನು ವಿಲೀನಗೊಳಿಸಲಾಗಿದೆ.

ನಂತರ ಪೊಲೀಸರು 1256 ಎಫ್‌ಐಆರ್ ಮಾನ್ಯವೆಂದು ಪರಿಗಣಿಸಿ ಕ್ರಮ ಕೈಗೊಂಡರು. 3,886 ನಾಪತ್ತೆಯಾಗಿರುವ ಬಗ್ಗೆ ಪೊಲೀಸರಲ್ಲಿ ದಾಖಲಾಗಿದ್ದು, ವಿವಿಧ ಶೋಧ ಕಾರ್ಯಾಚರಣೆಗಳಲ್ಲಿ 703 ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಇಂದಿಗೂ 3,183 ಜನರ ಶವವಾಗಲಿ ಅಸ್ತಿಪಂಜರವಾಗಲಿ ಪತ್ತೆಯಾಗಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ಘಟನೆ ಬಳಿಕ ಕೇದಾರನಾಥ ದುರಂತದಲ್ಲಿ 4700 ಯಾತ್ರಾರ್ಥಿಗಳ ಶವಗಳನ್ನು ಪತ್ತೆಹಚ್ಚಲಾಗಿದ್ದು ಆದರೆ ಸರ್ಕಾರದ ಅಂಕಿ ಅಂಶಗಳ ಬಗ್ಗೆಯೂ ಹಲವು ಬಾರಿ ಪ್ರಶ್ನೆಗಳು ಎದ್ದಿವೆ.

ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?

ದೇವಸ್ಥಾನದ ಉಳಿವಿಗೆ ಆ ಬಂಡೆ ಕಾರಣ

ದೇವಸ್ಥಾನದ ಉಳಿವಿಗೆ ಆ ಬಂಡೆ ಕಾರಣ

ಕೇದಾರಪುರಿಯಲ್ಲಿ ಉಂಟಾದ ಜಲಪ್ರಳಯದಿಂದ ಎಲ್ಲರೂ ತಲ್ಲಣಗೊಂಡಿದ್ದರು. ಚಿತ್ರಗಳನ್ನು ನೋಡಿದವರಿಗೆ ಜೀವವೇ ನಿಂತಂತೆ ಭಾಸವಾಗುತ್ತಿತ್ತು. ಏನಾಯಿತು ಎಂದು ಊಹಿಸಲು ಕಷ್ಟವಾಯಿತು. ಆದರೆ ಸುತ್ತಮುತ್ತಲಿನ ಚಿತ್ರಣವನ್ನು ನೋಡಿದಾಗ, ದೇವಾಲಯದಲ್ಲಿ ಅದೇ ಚಿತ್ರ ಕಾಣದಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಪ್ರಳಯದ ಸಮಯದಲ್ಲಿ ಅನೇಕ ದೊಡ್ಡ ಕಲ್ಲುಗಳು ದೇವಾಲಯದ ಹಿಂದೆ ಬರುತ್ತಿದ್ದವು.

ಇದೆಲ್ಲದರ ಜೊತೆಗೆ ದೇವಸ್ಥಾನದ ಸ್ವಲ್ಪ ಹಿಂದೆ ನಿಂತಿದ್ದ ಒಂದು ದೊಡ್ಡ ಬಂಡೆಯಿಂದಾಗಿ ದೇವಸ್ಥಾನ ಉಳಿಯಿತು ಎಂದು ಹೇಳಲಾಗುತ್ತಿದೆ. ಈ ದೈತ್ಯ ಕಲ್ಲಿಗೆ ಭೀಮಶೀಲ ಎಂದು ಹೆಸರಿಸಲಾಯಿತು. ಪ್ರವಾಹದ ದಿನದಿಂದ ಹಲವು ತಿಂಗಳುಗಳ ಕಾಲ ದೇವಸ್ಥಾನದಲ್ಲಿ ಪೂಜೆ ಇರಲಿಲ್ಲ. ಆದರೆ ಪ್ರವಾಹ ಉಂಟಾದಾಗ, ಬೆಲ್ಪಾತ್ರ ಶಿವಲಿಂಗದ ಮೇಲೆ ಇತ್ತು.

ಶಿವ ಸಮಾಧಿಯಲ್ಲಿ ಕುಳಿತಿರುವಂತೆ ಶಿವಲಿಂಗದ ಅರ್ಧ ಭಾಗವು ಅವಶೇಷಗಳಲ್ಲಿ ಹೂತುಹೋಗಿತ್ತು. ಪ್ರವಾಹದ ಬಳಿಕವೂ ಕೇದಾರನಾಥದಲ್ಲಿ ಪುರೋಹಿತರು ನೋಡಿದಾಗ ನಿತ್ಯ ದ್ವೀಪ ಉರಿಯುತ್ತಿತ್ತು. ದೇವಾಲಯದ ಬಾಗಿಲು ಚಳಿಗಾಲದಲ್ಲಿ 6 ತಿಂಗಳು ಮುಚ್ಚಿರುತ್ತದೆ ಮತ್ತು ಬೇಸಿಗೆಯಲ್ಲಿ 6 ತಿಂಗಳು ತೆರೆದಿರುತ್ತದೆ. ದೇವಾಲಯದ ಬಾಗಿಲು ತೆರೆದಾಗ, ಶಾಶ್ವತ ಜ್ವಾಲೆಯು ಉರಿಯುತ್ತಲೇ ಇರುತ್ತದೆ. ಅವರ ದರ್ಶನಕ್ಕೆ ಸಾವಿರಾರು ಜನ ಚಾರ್‌ಧಾಮ್‌ಗೆ ಭೇಟಿ ನೀಡುತ್ತಾರೆ.

ಚಿತ್ರ ಕ್ಷಣ ಕ್ಷಣಕ್ಕೂ ಹೇಗೆ ಬದಲಾಯಿತು

ಚಿತ್ರ ಕ್ಷಣ ಕ್ಷಣಕ್ಕೂ ಹೇಗೆ ಬದಲಾಯಿತು

ಕೇದರನಾಥ್ ಪ್ರವಾಹ ದುರಂತದಲ್ಲಿ 4700 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

ಇಂದಿಗೂ ಕಾಣೆಯಾದವರ ಸಂಖ್ಯೆ 3,183

ದಾಖಲಾದ ಎಫ್‌ಐಆರ್ 1840

ಮಾನ್ಯ ಪಡೆದ ಎಫ್‌ಐಆರ್ 1256

ನಾಪತ್ತೆಯಾದವರ ದಾಖಲು 3,886

ಶೋಧ ಕಾರ್ಯಾಚರಣೆಯಲ್ಲಿ ಅಸ್ಥಿಪಂಜರ ಪತ್ತೆ 703


2013ರ ಕೇದರನಾಥದ ಚಿತ್ರಣ ಕ್ಷಣ ಕ್ಷಣಕ್ಕೂ ಹೇಗೆ ಬದಲಾಯಿತು-


ಜೂನ್ 15 - ಉತ್ತರಾಖಂಡದ ಹಲವು ಭಾಗಗಳಲ್ಲಿ ಮಳೆ ಪ್ರಾರಂಭವಾಯಿತು.

ಜೂನ್ 16 - ಸಂಜೆ, ಚೋರಬರಿ ತಾಳದ ಭಂಗದಿಂದಾಗಿ, ಕೇದಾರನಾಥದಲ್ಲಿ ಮಂದಾಕಿನಿ ಭಗ್ನಾವಶೇಷಗಳಿಂದ ತುಂಬಿತ್ತು. ರಾಮಬಾಡ ಸಂಪೂರ್ಣ ಹಾಳಾಗಿತ್ತು.

ಜೂನ್ 17ರ ಬೆಳಗ್ಗೆ ಮತ್ತೊಮ್ಮೆ ಚೋರಬರಿ ತಾಳದಿಂದ ಮೊದಲಿಗಿಂತ ಹೆಚ್ಚು ನೀರು ಮತ್ತು ಅವಶೇಷಗಳು ಬಂದಿತು. ಕೇದಾರನಾಥ ಸಂಪೂರ್ಣವಾಗಿ ನಾಶವಾಯಿತು. ಇಡೀ ಮಂದಾಕಿನಿ ಕಣಿವೆಯಲ್ಲಿ ವಿನಾಶ ಸಂಭವಿಸಿದೆ.

ಜೂನ್ 18 - ಮೊದಲ ಬಾರಿಗೆ ಕೇದಾರನಾಥ ಮತ್ತು ಕಣಿವೆಯಲ್ಲಿ ವಿನಾಶದ ವರದಿಗಳು ಬಂದವು.

ಜೂನ್ 19 - ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದವು.

2013ರ ಕೇದರನಾಥ ಪ್ರವಾಹದಿಂದಾದ ಹಾನಿ

2013ರ ಕೇದರನಾಥ ಪ್ರವಾಹದಿಂದಾದ ಹಾನಿ

1853 ಸಂಪೂರ್ಣ ಹಾನಿಗೊಳಗಾದ ಪಕ್ಕಾ ಮನೆಗಳು

361 ಸಂಪೂರ್ಣ ಹಾನಿಗೀಡಾದ ಕಚ್ಚೆ ಮನೆಗಳು

2349 ಕೆಟ್ಟದಾಗಿ ಹಾನಿಗೊಳಗಾದ ಪಕ್ಕಾ ಕಟ್ಟಡಗಳು

340 ಕೆಟ್ಟುಹೋದ ಕಚ್ಚೆ ಮನೆಗಳು

9808 ಭಾಗಶಃ ಹಾನಿಗೊಳಗಾದ ಪಕ್ಕಾ ಮನೆಗಳು

1656 ಭಾಗಶಃ ಹಾನಿಗೊಳಗಾದ ಕಚ್ಚಾ ಮನೆಗಳು

2162 ರಸ್ತೆಗಳು ಹಾನಿಗೊಳಗಾದವು, ಸೇತುವೆಗಳು ಮುರಿದು ಹೋಗಿವೆ.

ಒಟ್ಟು 13,844.34 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ.

Recommended Video

ಕತ್ತೆ ಹಾಲಿನಿಂದ 17 ಲಕ್ಷಕ್ಕೂ ಅಧಿಕ ದುಡಿಮೆ: ಮಂಗಳೂರಿನ ಈ ವ್ಯಕ್ತಿಯ ಯಶೋಗಾಥೆ | Oneindia Kannada

English summary
The horrific tragedy that occurred at Kedarnath on June 16 and 17, 2013, has just completed 9 years. The bodies of 4700 pilgrims and 703 skeletons have been found in the disaster and 3183 people are missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X