ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾದಲ್ಲಿ ಗಂಡ-ಹೆಂಡತಿ ಜಗಳ ಉಂಡು ಮಲಗಿದ ಮೇಲೇ ಶುರು: ಶೇ.82ರಷ್ಟು ದಂಪತಿಗಳದ್ದು ಇದೇ ಕಥೆ!

|
Google Oneindia Kannada News

ನವದೆಹಲಿ, ಮೇ 11: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವುದೆಲ್ಲ ಈಗ ಓಲ್ಡ್. ಇಂಡಿಯಾದಲ್ಲಿ ಗಂಡ-ಹೆಂಡತಿಯರ ಜಗಳ ಉಂಡು ಮಲಗಿದ ಮೇಲೆಯೇ ಶುರು ಆಗುತ್ತಂತೆ. ಇಂಥದೊಂದು ಅಚ್ಚರಿ ಹುಟ್ಟಿಸುವ ಸಮೀಕ್ಷೆ ಹೊರ ಬಿದ್ದಿದೆ.

ಭಾರತದಲ್ಲಿ ಪ್ರೀತಿ, ಪ್ರೇಮ ಓಕೆ. ಪ್ರಣಯದ ವಿಷಯಕ್ಕೆ ಬಂದರೆ ಜೋಕೆ ಅಂತಾ ಆವಾಜ್ ಹಾಕುವ ಹೆಂಡತಿಯರ ಸಂಖ್ಯೆ ಶೇ.82.40ರಷ್ಟಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರ ವರದಿಯಲ್ಲಿ ಹೇಳಲಾಗಿದೆ.

ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?

ದೇಶದ ಐವರಲ್ಲಿ ನಾಲ್ವರು ಮಹಿಳೆಯರು ತನ್ನ ಪತಿ ಬಯಸಿದಾಗ ಲೈಂಗಿಕ ಸಮ್ಮಿಲನಕ್ಕೆ ನಿರಾಕರಿಸುತ್ತಾರೆ. ಪತಿ ಹತ್ತಿರ ಕರೆದಾಗಲೆಲ್ಲ ದೂರ ತಳ್ಳುವ ಪತ್ನಿಯರ ಸಂಖ್ಯೆ ಯಾವ ರಾಜ್ಯದಲ್ಲಿ ಎಷ್ಟಿದೆ?, ರೊಮ್ಯಾನ್ಸ್ ಎಂದಾಗಲೆಲ್ಲ ಮಹಿಳೆಯರು ರಾಂಗ್ ಆಗುವುದಕ್ಕೆ ಕಾರಣವೇನು?, ಯಾವ ಮಾನದಂಡದ ಮೇಲೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರ ವರದಿಯನ್ನು ಸಿದ್ಧಪಡಿಸಲಾಗಿದೆ?, ದಂಪತಿಯಲ್ಲಿನ ಪ್ರೀತಿ, ಪ್ರೇಮ, ಪ್ರಣಯದ ಕುರಿತು ಸಮೀಕ್ಷೆಯಲ್ಲಿ ಏನೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ದೈಹಿಕ ಸಾಂಗತ್ಯಕ್ಕೆ ಡೋಂಟ್ ಕೇರ್ ಎನ್ನುವವರ ಸಂಖ್ಯೆ ಎಲ್ಲಿ ಹೆಚ್ಚು?

ದೈಹಿಕ ಸಾಂಗತ್ಯಕ್ಕೆ ಡೋಂಟ್ ಕೇರ್ ಎನ್ನುವವರ ಸಂಖ್ಯೆ ಎಲ್ಲಿ ಹೆಚ್ಚು?

ಭಾರತದಲ್ಲಿ ಲೈಂಗಿಕ ಬಯಕೆ ಹೊತ್ತು ಬರುವ ಗಂಡನಿಗೆ ಗುದ್ದು ನೀಡುವ ಪತ್ನಿಯರ ಸಂಖ್ಯೆ ಶೇ.82.40ರಷ್ಟಿದೆ. ಗಂಡನಿಗೆ ಚುರುಕು ಮುಟ್ಟಿಸುವ ಹಂಡತಿಯರ ಸಂಖ್ಯೆ ಹೆಚ್ಚಾಗಿರುವುದು ಪುಟ್ಟ ರಾಜ್ಯ ಗೋವಾದಲ್ಲಿ ಅಂತೆ. ಗೋವಾದಲ್ಲಿ ಶೇ.92ರಷ್ಟು ಪತ್ನಿಯರು ಗಂಡನನ್ನು ದೂರ ತಳ್ಳುತ್ತಾರಂತೆ. ಅದರ ಪ್ರಮಾಣವು ಹಿಮಾಚಲ ಪ್ರದೇಶ, ಕೇರಳ, ಮಿಜೋರಾಂ, ಪುದುಚೇರಿ, ಲಕ್ಷದ್ವೀಪಗಳಲ್ಲಿ ಶೇ. 90ಕ್ಕಿಂತ ಹೆಚ್ಚಾಗಿದೆ. ಕರ್ನಾಟಕದಲ್ಲಿ ಇದರ ಪ್ರಮಾಣವು ಶೇ.81.40ರಷ್ಟಿದೆ.

ಅದೇ ರೀತಿ ಅರುಣಾಚಲ ಪ್ರದೇಶದಲ್ಲಿ ಶೇ.63, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.65ರಷ್ಟು ಮಹಿಳೆಯರು ಗಂಡನಿಗೆ No ಎಂದು ಹೇಳುತ್ತಾರೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕಳೆದ ವಾರ ಬಿಡುಗಡೆ ಮಾಡಿದ NFHS-5 ವರದಿಯಲ್ಲಿ ಹೇಳಲಾಗಿದೆ.

NFHS-5 ಸಮೀಕ್ಷೆ ನಡೆಸಿದ ಮಾದರಿ ಹೇಗಿದೆ?

NFHS-5 ಸಮೀಕ್ಷೆ ನಡೆಸಿದ ಮಾದರಿ ಹೇಗಿದೆ?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ಅನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. 2019ರ ಜೂನ್ 17 ರಿಂದ 2020ರ ಜನವರಿ 30ರವರೆಗೆ ಮೊದಲ ಹಂತದಲ್ಲಿ 17 ರಾಜ್ಯ ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಅದೇ ರೀತಿ 2020 ಜನವರಿ 2 ರಿಂದ 2021ರ ಏಪ್ರಿಲ್ 31ರವರೆಗೂ ಎರಡನೇ ಹಂತದಲ್ಲಿ 11 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು.

ಗಂಡನನ್ನು ದೂರ ತಳ್ಳಲು ಇಲ್ಲಿವೆ ನಾಲ್ಕು ಕಾರಣ

ಗಂಡನನ್ನು ದೂರ ತಳ್ಳಲು ಇಲ್ಲಿವೆ ನಾಲ್ಕು ಕಾರಣ

ವೈವಾಹಿಕ ಅತ್ಯಾಚಾರವು ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ 'ಅತ್ಯಾಚಾರ'ದ ವ್ಯಾಖ್ಯಾನಕ್ಕೆ ಒಂದು ಅಪವಾದವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ತನ್ನ ಹೆಂಡತಿಯ ಮೇಲೆ ಪುರುಷನು ತನ್ನನ್ನು ತಾನೇ ಬಲವಂತವಾಗಿ ಒತ್ತಾಯಪಡಿಸುವಂತಿಲ್ಲ. ಆದಾಗ್ಯೂ, ಮದುವೆಯಲ್ಲಿ ಎರಡೂ ಕಡೆಯ ವರ್ತನೆಗಳಲ್ಲಿ ಕ್ರಮೇಣ ಬದಲಾವಣೆ ಕಂಡುಬರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಈ ಸಮೀಕ್ಷೆಯ ಸಮಯದಲ್ಲಿ, ಅವನು ಬಯಸಿದಾಗ ಮಹಿಳೆಯು ತನ್ನ ಪತಿಯೊಂದಿಗೆ ಸಂಭೋಗಿಸಲು ನಿರಾಕರಿಸುವ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಲಿಂಗ ವರ್ತನೆಗಳನ್ನು ನಿರ್ಣಯಿಸಲು ಪುರುಷರಿಗೆ ಕೆಲವು ಹೆಚ್ಚುವರಿ ಪ್ರಶ್ನೆಗಳನ್ನು ಕೇಳಲಾಯಿತು. ನಾಲ್ಕು ಸಂದರ್ಭಗಳಲ್ಲಿ ಗಂಡನನ್ನು ದೂರ ತಳ್ಳುವ ಅಧಿಕಾರ ಪತ್ನಿಗೆ ಇರುತ್ತದೆ ಎಂದು ಸ್ವತಃ ಪುರುಷರೇ ಒಪ್ಪಿಕೊಂಡಿದ್ದಾರೆ. ಆ ನಾಲ್ಕು ಅಂಶಗಳು ಹೀಗಿವೆ:

ಹೆಂಡತಿ ಮುನಿಸಿಗೆ ನಾಲ್ಕು ಕಾರಣಗಳು:

* ಹಂಡತಿ ಮುನಿಸಿಕೊಂಡ ಸಮಯದಲ್ಲಿ ಮನವೊಲಿಕೆ ಬದಲು ಸಂಭೋಗ ಬಯಸಿದಾಗ ಕೋಪ ಹೆಚ್ಚುತ್ತದೆ

* ಪತ್ನಿ ಕೇಳಿದಾಗ ಹಣ ಅಥವಾ ಆರ್ಥಿಕ ಬೆಂಬಲವನ್ನು ನೀಡದಿದ್ದಾಗ ಪತಿಯ ಬಗ್ಗೆ ಅಸಮಾಧಾನಗೊಂಡಿರುತ್ತಾಳೆ

* ಆಕೆಗೆ ಇಷ್ಟವಿಲ್ಲದ ಸಂದರ್ಭದಲ್ಲೂ ಸಂಭೋಗಕ್ಕೆ ಒತ್ತಾಯಪಡಿಸಿದಾಗ ದೂರ ತಳ್ಳುತ್ತಾಳೆ

* ಗಂಡನು ತನ್ನ ಹೊರತಾಗಿ ಬೇರೊಬ್ಬ ಮಹಿಳೆಯ ಜೊತೆಗೆ ಸಂಪರ್ಕ ಹೊಂದಿರುವುದು ಮುನಿಸಿಗೆ ಕಾರಣವಾಗಿರುತ್ತದೆ

ಹೆಂಡತಿ ನೀನೇ ಕರೆಕ್ಟ್ ಎನ್ನುವವರ ಸಂಖ್ಯೆ ಎಷ್ಟಿದೆ?

ಹೆಂಡತಿ ನೀನೇ ಕರೆಕ್ಟ್ ಎನ್ನುವವರ ಸಂಖ್ಯೆ ಎಷ್ಟಿದೆ?

"15-49 ವರ್ಷ ವಯಸ್ಸಿನ ಪುರುಷರಲ್ಲಿ ಕೇವಲ ಶೇ.6ರಷ್ಟು ಪುರುಷರು ಮಾತ್ರ ಪತ್ನಿ ಲೈಂಗಿಕತೆಯನ್ನು ನಿರಾಕರಿಸಿದರೆ ಈ ಎಲ್ಲಾ ನಾಲ್ಕು ನಡವಳಿಕೆಗಳನ್ನು ಪ್ರದರ್ಶಿಸಲು ಪುರುಷರಿಗೆ ಹಕ್ಕಿದೆ ಎಂದು ಒಪ್ಪುತ್ತಾರೆ. ಆದರೆ ಶೇ.72 ಪ್ರತಿಶತದಷ್ಟು ಜನರು ನಾಲ್ಕು ನಡವಳಿಕೆಗಳಲ್ಲಿ ಯಾವುದನ್ನೂ ಒಪ್ಪುವುದಿಲ್ಲ. ಹೇಗಾದರೂ ಸರಿ ಶೇ.19ರಷ್ಟು ಪುರುಷರು ಮಹಿಳೆ ತನ್ನ ಪತಿಯೊಂದಿಗೆ ಲೈಂಗಿಕತೆಯನ್ನು ನಿರಾಕರಿಸಿದರೆ ಕೋಪಗೊಳ್ಳುವ ಹಕ್ಕು ಪತಿಗೂ ಇದೆ ಎಂಬುದಾಗಿ ಒಪ್ಪುತ್ತಾರೆ," ಎಂದು ಸಮೀಕ್ಷೆ ಹೇಳುತ್ತದೆ.

ದುಡಿಯುವ ಹೆಂಡತಿಯರದ್ದು ಇನ್ನೊಂದು ರೀತಿಯ ಕಥೆ

ದುಡಿಯುವ ಹೆಂಡತಿಯರದ್ದು ಇನ್ನೊಂದು ರೀತಿಯ ಕಥೆ

ಭಾರತದಲ್ಲಿ ಮದುವೆಯಾದ ಶೇ.32ರಷ್ಟು ಮಹಿಳೆಯರು ಉದ್ಯೋಗಕ್ಕೆ ಹೋಗುತ್ತಾರೆ. ಆದರೆ ಶೇ.44ರಷ್ಟು ಮಹಿಳೆಯರು ಒಬ್ಬಂಟಿಯಾಗಿ ಮಾರುಕಟ್ಟೆಗೆ ಹೋಗುವುದಕ್ಕೂ ಸ್ವಾತಂತ್ರ್ಯ ಇಲ್ಲ. ಭಾರತದಲ್ಲಿ ಪ್ರಸ್ತುತ 15-49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಶೇಕಡಾ 32ರಷ್ಟು ಮಹಿಳೆಯರು ಮಾತ್ರ ಉದ್ಯೋಗದಲ್ಲಿ ಇದ್ದಾರೆ. ಪ್ರಸ್ತುತ 15-49 ವರ್ಷ ವಯಸ್ಸಿನ ಶೇ.98 ಪ್ರತಿಶತದಷ್ಟು ವಿವಾಹಿತ ಪುರುಷರು ಉದ್ಯೋಗವನ್ನು ಮಾಡುತ್ತಾರೆ," ಎಂದು ಸಮೀಕ್ಷೆ ಹೇಳುತ್ತದೆ. ಕಳೆದ 2016-16ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4ರಲ್ಲಿ ಮದುವೆಯ ನಂತರವೂ ಉದ್ಯೋಗಕ್ಕೆ ಹೋಗುವ ಮಹಿಳೆಯರ ಶೇಕಡಾವಾರು ಪ್ರಮಾಣ ಶೇ.31ರಷ್ಟಿತ್ತು.

"ಉದ್ಯೋಗಸ್ಥ ಮಹಿಳೆಯರಲ್ಲಿ ಶೇಕಡಾ 83ರಷ್ಟು ಮಂದಿ ನಗದು ಗಳಿಸುತ್ತಾರೆ. ಶೇಕಡಾ 8ರಷ್ಟು ಜನರು ನಗದು ಮತ್ತು ವಸ್ತು ಎರಡರಲ್ಲೂ ಆದಾಯ ಹೊಂದಿದ್ದಾರೆ. ಶೇ.15ರಷ್ಟು ಉದ್ಯೋಗಸ್ಥ ಮಹಿಳೆಯರಿಗೆ ಅವರು ಮಾಡುವ ಕೆಲಸಕ್ಕೆ ಸಂಬಳವಿಲ್ಲ. ಇದಕ್ಕೆ ಹೋಲಿಸಿದರೆ ಶೇ.95ರಷ್ಟು ಉದ್ಯೋಗಸ್ಥ ಪುರುಷರು ಹಣ ಗಳಿಸುತ್ತಾರೆ ಹಾಗೂ ಶೇ.4ರಷ್ಟು ಪುರುಷರು ತಾವು ಮಾಡುವ ಕೆಲಸಕ್ಕೆ ಯಾವುದೇ ಸಂಬಳವನ್ನು ಪಡೆಯುವುದಿಲ್ಲ," ಎಂದು ಸಮೀಕ್ಷೆ ವರದಿ ಹೇಳಿದೆ.

Recommended Video

ಪಫ್ಸ್ ಖರೀದಿ ಮಾಡೋಕೆ ಸೆಕ್ಯೂರಿಟಿ ಇಲ್ಲದೆ ಹೊರಟ ವಿರಾಟ್ ಕೊಹ್ಲಿ!! | Oneindia Kannada

English summary
82% women in India can say no to their husband if they do not want to have Love Making, according to government's National Family Health Survey 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X