ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪೌರತ್ವ ಸಿಗಲಿಲ್ಲ, ನಾವು ಭಾರತದಲ್ಲಿ ಇರಲ್ಲ'; ದೇಶ ಬಿಟ್ಟು ಪಾಕಿಸ್ತಾನದ ಹೊರಟವರ ಕಥೆ

|
Google Oneindia Kannada News

ನವದೆಹಲಿ, ಮೇ 9: ಪಾಕಿಸ್ತಾನದಲ್ಲಿ ಧಾರ್ಮಿಕ ಹಿಂಸೆಯನ್ನು ತಡೆಯುವುದಕ್ಕೆ ಆಗುತ್ತಿಲ್ಲ. ನಾವು ಭಾರತದಲ್ಲೇ ಬದುಕುತ್ತೇವೆ. ಇಲ್ಲಿಯೇ ಜೀವನ ಕಟ್ಟಿಕೊಳ್ಳುತ್ತೇವೆ. ನಮಗೂ ಭಾರತದ ಪೌರತ್ವ ನೀಡಿ ಎಂದು ಅಂಗಲಾಚುತ್ತಿದ್ದ 800 ಪಾಕಿಸ್ತಾನಿ ಹಿಂದೂಗಳ ಮತ್ತೆ ವಾಪಸ್ ಪಾಕಿಸ್ತಾನಕ್ಕೇ ಹೋಗಿದ್ದಾರಂತೆ.

ಕಳೆದ 2021ರಲ್ಲಿ ಭಾರತದ ಪೌರತ್ವಕ್ಕಾಗಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಯಾವುದೇ ಪ್ರಗತಿ ಕಂಡು ಬಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಹಿಂದೂಗಳು ಮತ್ತೆ ಪಾಕಿಸ್ತಾನಕ್ಕೇ ವಾಪಸ್ ಹೋಗಿದ್ದಾರೆ ಎಂದು ಸೀಮಂತ್ ಲೋಕ ಸಂಘಟನೆ(ಎಸ್ಎಲ್ಎಸ್) ಆರೋಪಿಸಿದೆ.

CAA Rules : ಸಿಎಎ ನಿಯಮಗಳನ್ನು ರೂಪಿಸಲು 6 ತಿಂಗಳ ಕಾಲಾವಕಾಶ ಕೇಳಿದ ಕೇಂದ್ರ ಸರ್ಕಾರCAA Rules : ಸಿಎಎ ನಿಯಮಗಳನ್ನು ರೂಪಿಸಲು 6 ತಿಂಗಳ ಕಾಲಾವಕಾಶ ಕೇಳಿದ ಕೇಂದ್ರ ಸರ್ಕಾರ

"ಅವರು ಹಿಂತಿರುಗಿದ ನಂತರ, ಅವರನ್ನು ಪಾಕಿಸ್ತಾನದ ಏಜೆನ್ಸಿಗಳು ಭಾರತದ ಮಾನಹಾನಿ ಮಾಡಲು ಬಳಸುತ್ತವೆ. ಅವರನ್ನು ಮಾಧ್ಯಮಗಳ ಎದುರಿಗೆ ಪರೇಡ್ ಮಾಡಿಸಲಾಗುತ್ತಿದ್ದು, ಇಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಹೇಳುವಂತೆ ಒತ್ತಾಯಿಸಲಾಗುತ್ತಿದೆ ಎಂದು SLS ಅಧ್ಯಕ್ಷ ಹಿಂದೂ ಸಿಂಗ್ ಸೋಧಾ ಹೇಳಿದ್ದಾರೆ.

ಗಡಿ ಭದ್ರತಾ ಪಡೆಯಲ್ಲಿ ಗ್ರೂಪ್ ಬಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನ ಗಡಿ ಭದ್ರತಾ ಪಡೆಯಲ್ಲಿ ಗ್ರೂಪ್ ಬಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬದುಕು ಕಟ್ಟಿಕೊಳ್ಳಲು ಬಂದವರನ್ನು ನಿಜವಾಗಿಯೂ ನಿರ್ಲಕ್ಷಿಸಲಾಯಿತಾ?, ಪೌರತ್ವ ಸಿಗದೇ ಪಾಕಿಸ್ತಾನಕ್ಕೆ ಹಿಂತಿರುಗುವುದಕ್ಕೆ ಕಾರಣವಾದ ಅಂಶಗಳೇನು?, ಭಾರತಕ್ಕೆ ವಲಸೆ ಬಂದ ಹಿಂದೂಗಳ ಬಗ್ಗೆ ಸರ್ಕಾರ ಏಕೆ ತಲೆ ಕೆಡಿಸಿಕೊಳ್ಳಲಿಲ್ಲ?, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.

ಪೌರತ್ವಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ

ಪೌರತ್ವಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ

ಕಳೆದ 2018ರಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಆನ್‌ಲೈನ್ ಮೂಲಕ ಪೌರತ್ವಕ್ಕಾಗಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸಿದ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳು, ಜೈನ ಮತ್ತು ಬೌದ್ಧರಿಗೆ ಭಾರತದ ಪೌರತ್ವ ನೀಡಲು ಏಳು ರಾಜ್ಯಗಳಲ್ಲಿ 16 ಕಲೆಕ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಆನ್‌ಲೈನ್ ಮೂಲಕವೇ ಈ ಅರ್ಜಿಗಳನ್ನು ಸ್ವೀಕರಿಸುವಂತೆ ಮಾಡಲಾಗಿತ್ತು.

ಕಳೆದ ಮೇ 2021ರಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆ 1955ರ ವಿಭಾಗ 5 (ನೋಂದಣಿ) ಮತ್ತು ವಿಭಾಗ 6 (ನೈಸರ್ಗಿಕೀಕರಣ) ಅಡಿಯಲ್ಲಿ ಆರು ಸಮುದಾಯಗಳಿಗೆ ಸೇರಿದ ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನೀಡಲು ಗುಜರಾತ್, ಛತ್ತೀಸ್‌ಗಢ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ 13 ಜಿಲ್ಲಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಅಧಿಕಾರ ನೀಡಿತು.

ಅವಧಿ ಮೀರಿದ ಪಾಕಿಸ್ತಾನಿ ಪಾಸ್‌ಪೋರ್ಟ್‌ ಸ್ವೀಕರಿಸುವುದಿಲ್ಲ

ಅವಧಿ ಮೀರಿದ ಪಾಕಿಸ್ತಾನಿ ಪಾಸ್‌ಪೋರ್ಟ್‌ ಸ್ವೀಕರಿಸುವುದಿಲ್ಲ

ಪೌರತ್ವವನ್ನು ನೀಡುವ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನ ಮೂಲಕವೇ ನಡೆಯುತ್ತದೆ. ಈ ಹಂತದಲ್ಲಿ ಪೋರ್ಟಲ್ ಅವಧಿ ಮೀರಿದ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಸ್ವೀಕರಿಸುವುದಿಲ್ಲ. ತದನಂತರದಲ್ಲಿ ಪಾಸ್‌ಪೋರ್ಟ್‌ಗಳನ್ನು ನವೀಕರಿಸಲು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಧಾವಿಸಬೇಕು. ಅದಕ್ಕಾಗಿ ದುಬಾರಿ ಮೊತ್ತವನ್ನು ತೆರಬೇಕಾಗುತ್ತದೆ. "ಇದು ಹತ್ತು ಜನರ ಕುಟುಂಬವಾಗಿದ್ದರೆ, ಅವರು ಪಾಸ್‌ಪೋರ್ಟ್‌ಗಳನ್ನು ನವೀಕರಿಸಲು ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕನಿಷ್ಠ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದರಿಂದ ಜನರು ಭಾರೀ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಯಿತು. ಇಷ್ಟು ಹಣವನ್ನು ತೆತ್ತು ಪಾಸ್‌ಪೋರ್ಟ್‌ಗಳನ್ನು ನವೀಕರಿಸುವುದು ಸುಲಭವಾಗಿರಲಿಲ್ಲ" ಎಂದು ಜೋಧ್‌ಪುರದಲ್ಲಿ ನೆಲೆಸಿರುವ ಸಿಂಗ್ ಹೇಳಿದರು.

ಆನ್‌ಲೈನ್‌ ಅರ್ಜಿ ಸಲ್ಲಿಸದಿದ್ದರೆ ಪೌರತ್ವ ಪಡೆಯುವುದೇ ಸವಾಲು

ಆನ್‌ಲೈನ್‌ ಅರ್ಜಿ ಸಲ್ಲಿಸದಿದ್ದರೆ ಪೌರತ್ವ ಪಡೆಯುವುದೇ ಸವಾಲು

ಭಾರತದ ಪೌರತ್ವಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೇ ಸರಿಯಾದ ರೀತಿಯಲ್ಲಿ ಪೌರತ್ವ ಸಿಗುವುದು ಅನುಮಾನವಾಗಿದೆ. ಇಂಥದರ ಮಧ್ಯೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದವರು ನೇರವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ಈ ಪ್ರಕ್ರಿಯೆಯು ತೀರಾ ಕಷ್ಟಕರವಾಗಿತ್ತು ಎಂದು ಸಿಂಗ್ ಹೇಳಿದ್ದಾರೆ. ಇನ್ನೊಂದು ಕಡೆಯಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಪೌರತ್ವಕ್ಕಾಗಿ ಸಲ್ಲಿಸಿದ ಎಷ್ಟು ಅರ್ಜಿಗಳು ಬಾಕಿ?

ಭಾರತದ ಪೌರತ್ವಕ್ಕಾಗಿ ಸಲ್ಲಿಸಿದ ಎಷ್ಟು ಅರ್ಜಿಗಳು ಬಾಕಿ?

ಆನ್‌ಲೈನ್ ಮಾದರಿಯ ಪ್ರಕಾರ, ಕಳೆದ ಡಿಸೆಂಬರ್ 14ರವರೆಗೆ ಪೌರತ್ವಕ್ಕಾಗಿ ಸಲ್ಲಿಸಿದ 10,635 ಅರ್ಜಿಗಳು ಸಚಿವಾಲಯದಲ್ಲಿ ಬಾಕಿ ಉಳಿದಿವೆ. ಈ ಪೈಕಿ 7,306 ಅರ್ಜಿದಾರರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು 2021ರ ಡಿಸೆಂಬರ್ 22ರಂದು ರಾಜ್ಯಸಭೆಗೆ ಮಾಹಿತಿ ನೀಡಿತು. ಆದರೆ ಸಿಂಗ್ ಪ್ರಕಾರ, ರಾಜಸ್ಥಾನವೊಂದರಲ್ಲಿಯೇ 25,000 ಪಾಕಿಸ್ತಾನಿ ಹಿಂದೂಗಳು ಪೌರತ್ವಕ್ಕಾಗಿ ಕಾಯುತ್ತಿದ್ದಾರೆ, ಕೆಲವರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಪೌರತ್ವಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರಲ್ಲಿ ಬಹುಪಾಲು ಜನರು ಆಫ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿದ್ದಾರೆ.

ಪೌರತ್ವಕ್ಕೆ ಪೂರ್ವಭಾವಿಯಾಗಿ ದೀರ್ಘಾವಧಿ, ಪ್ರವಾಸಿ ವೀಸಾ

ಪೌರತ್ವಕ್ಕೆ ಪೂರ್ವಭಾವಿಯಾಗಿ ದೀರ್ಘಾವಧಿ, ಪ್ರವಾಸಿ ವೀಸಾ

ಕಳೆದ 2015ರಲ್ಲಿ ಕೇಂದ್ರ ಗೃಹ ಸಚಿವಾಲಯವು ಪೌರತ್ವ ನಿಯಮಗಳನ್ನು ತಿದ್ದುಪಡಿ ಮಾಡಿತು. ಆರು ಸಮುದಾಯಗಳಿಗೆ ಸೇರಿದ ವಿದೇಶಿ ವಲಸಿಗರ ವಾಸ್ತವ್ಯವನ್ನು ಕಾನೂನುಬದ್ಧಗೊಳಿಸಿತು. ಡಿಸೆಂಬರ್ 2014ರಂದು ಅಥವಾ ಅದಕ್ಕೂ ಮೊದಲು ಧರ್ಮದ ಆಧಾರದ ಮೇಲೆ ಕಿರುಕುಳಕ್ಕೆ ತುತ್ತಾಗಿ ಭಾರತಕ್ಕೆ ಬಂದಿದ್ದರೆ, ಅಂಥವರಿಗೆ ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಯಿತು. ಭಾರತದಲ್ಲಿ ಆಶ್ರಯ ಪಡೆಯುವ ವ್ಯಕ್ತಿಗಳು ದೀರ್ಘಾವಧಿಯ ವೀಸಾ (LTV) ಅಥವಾ ಪ್ರವಾಸಿ ವೀಸಾಗಳಲ್ಲಿ ಬರುತ್ತಾರೆ. ಐದು ವರ್ಷಗಳ ಕಾಲ ನೀಡಿದ ದೀರ್ಘಾವಧಿಯ ವೀಸಾಗಳು ಪೌರತ್ವಕ್ಕೆ ಪೂರ್ವಭಾವಿಯಾಗಿವೆ.

2011ರಲ್ಲಿ ದೀರ್ಘಾವಧಿ ವೀಸಾ ನೀಡಿದ ಯುಪಿಎ ಸರ್ಕಾರ

2011ರಲ್ಲಿ ದೀರ್ಘಾವಧಿ ವೀಸಾ ನೀಡಿದ ಯುಪಿಎ ಸರ್ಕಾರ

ಕಳೆದ 2011ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ದೀರ್ಘಾವಧಿಯ ವೀಸಾಗಳನ್ನು ನೀಡಿತು. ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳವನ್ನು ತಾಳದೇ ಭಾರತಕ್ಕೆ ಆಗಮಿಸಿದ ನೂರಾರು ಹಿಂದೂಗಳು ಮತ್ತು ಸಿಖ್‌ಗಳಿಗೆ ಈ ದೀರ್ಘಾವಧಿಯ ವೀಸಾಗಳನ್ನು ನೀಡಲು ನಿರ್ಧರಿಸಲಾಗಿತ್ತು. ಅನೇಕರು ಪ್ರವಾಸಿ ವೀಸಾದಲ್ಲಿ ಬಂದಿದ್ದು, ತಮ್ಮ ಪಾಸ್‌ಪೋರ್ಟ್‌ಗಳ ಅವಧಿ ಮುಗಿದ ನಂತರವೂ ಭಾರತದಲ್ಲಿಯೇ ಉಳಿದುಕೊಂಡಿದ್ದರುರು. ಕೇಂದ್ರ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, 2011-2014ರಲ್ಲಿ ಪಾಕಿಸ್ತಾನಿ ಹಿಂದೂಗಳಿಗೆ ನೀಡಲಾದ ದೀರ್ಘಾವಧಿ ವೀಸಾಗಳ ಸಂಖ್ಯೆ 14,726 ಆಗಿದೆ. ಈ ವರ್ಷ ನವೆಂಬರ್ 2021-ಫೆಬ್ರವರಿ ವೇಳೆಗೆ 600ಕ್ಕೂ ಹೆಚ್ಚು ದೀರ್ಘಾವಧಿ ವೀಸಾಗಳನ್ನು ಪಾಕಿಸ್ತಾನಿ ಹಿಂದೂಗಳಿಗೆ ನೀಡಲಾಗಿದೆ.

ನಾಲ್ಕು ವರ್ಷಗಳಲ್ಲಿ 8,244 ಅರ್ಜಿ ಸ್ವೀಕಾರ; ಕಳೆದ ನಾಲ್ಕು ವರ್ಷಗಳಲ್ಲಿ ಆರು ಅಲ್ಪಸಂಖ್ಯಾತ ಸಮುದಾಯದ ಜನರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲಿ 2018, 2019, 2020 ಮತ್ತು 2022ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ 8,244 ಜನರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ

ಕಳೆದ 2014ರ ಡಿಸೆಂಬರ್ 31ಕ್ಕಿಂತ ಪೂರ್ವದಲ್ಲಿ ಭಾರತದ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಆರು ಸಮುದಾಯಗಳ ಜನರಿಗೆ ಭಾರತದ ಪೌರತ್ವವನ್ನು ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ಜಾರಿಗೊಳಿಸಲಾಗಿತ್ತು. 11 ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದವರಿಗೆ ಪೌರತ್ವ ನೀಡುವುದಕ್ಕಾಗಿ ಈ ತಿದ್ದುಪಡಿಯನ್ನು ಜಾರಿಗೊಳಿಸಲಾಗುತ್ತಿತ್ತು. ಆದರೆ ದೇಶದಲ್ಲಿ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇಂದಿಗೂ ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿಲ್ಲ.

ಭಾರತದ ಪೌರತ್ವಕ್ಕಾಗಿ ಅರ್ಹತೆ ಪಡೆಯಲು ಈ ಮೊದಲು ಕನಿಷ್ಠ 11 ವರ್ಷಗಳ ಕಾಲ ಇಲ್ಲಿಯೇ ವಾಸವಿರಬೇಕಿತ್ತು. ಆದರೆ ಈ ಅವಧಿಯನ್ನು 11 ರಿಂದ 5 ವರ್ಷಗಳಿಗೆ ತಗ್ಗಿಸಲಾಗಿತ್ತು. ಇಂಥ ಕಾರಣದಿಂದಾಗಿ ಈ ಕಾನೂನು ಅಲ್ಪಸಂಖ್ಯಾತ ವಲಸಿಗರಿಗೆ ತಮ್ಮ ಅರ್ಜಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಪೌರತ್ವ ತಿದ್ದುಪಡಿ ಕಾಯ್ದೆಯು ಸಹಾಯ ಮಾಡಬಹುದಿತ್ತು.

English summary
800 Pakistani Hindus in Rajasthan, who came to India seeking citizenship on the basis of religious persecution, returned to the neighbouring country in 2021, according to Seemant Lok Sangathan (SLS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X