ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶ ನಂತರ ಈ ರಾಜ್ಯದ ನೌಕರರಿಗೂ ಡಿಎ ಹೆಚ್ಚಳ ಗಿಫ್ಟ್

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ನಂತರ ತುಟ್ಟಿಭತ್ಯೆ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಕೇಂದ್ರ ಬಜೆಟ್ 2022ರಲ್ಲಿ ಈ ಬಗ್ಗೆ ಘೋಷಣೆ ಸಾಧ್ಯತೆಯಿದೆ. ಆದರೆ, ಇದಕ್ಕೂ ಮುನ್ನ ಕೆಲ ರಾಜ್ಯಗಳು ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಏರಿಕೆ, ನಿವೃತ್ತಿ ವಯೋಮಿತಿ ಏರಿಕೆ ಮಾಡಿವೆ. ಆಂಧಪ್ರದೇಶದ ನಂತರ ಒಡಿಶಾ ರಾಜ್ಯದಲ್ಲಿ ಅಲ್ಲಿನ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಿಸಲಾಗಿದೆ.

ಆಂಧ್ರಸರ್ಕಾರದ ಸರ್ಕಾರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಸಿಗುತ್ತಿದೆ. ನಿವೃತ್ತಿ ವಯೋಮಿತಿಯನ್ನು 60 ರಿಂದ 62ಕ್ಕೇರಿಸಲಾಗಿದೆ. ಸಂಬಳ ಕೂಡಾ ಶೇ 23.39ಕ್ಕೇರಿಸಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಸರ್ಕಾರ ಆದೇಶ ಹೊರಡಿಸಿದೆ.

ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರ ಮೂಲ ವೇತನ ಏರಿಕೆ?ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರ ಮೂಲ ವೇತನ ಏರಿಕೆ?

ಒಡಿಶಾ ರಾಜ್ಯ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ನವೀನ್ ಪಟ್ನಾಯಕ್ ಸರ್ಕಾರವು 7 ನೇ ವೇತನ ಆಯೋಗದ ಅಡಿಯಲ್ಲಿ 2022 ರ ಹೊಸ ವರ್ಷದಂದು ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಿ ನೌಕರರಾಗಲಿ ಅಥವಾ ಕೇಂದ್ರ ಸರ್ಕಾರಿ ನೌಕರರಾಗಲಿ ಸಂಬಳ ಏರಿಕೆ ಎಲ್ಲರಿಗೂ ಸಂತಸದ ಸುದ್ದಿ. ಛತ್ತೀಸ್‌ಗಢ ಸರ್ಕಾರ ಮತ್ತು ಆಂಧ್ರಪ್ರದೇಶ ಸರ್ಕಾರದ ಇದೇ ರೀತಿಯ ನಿರ್ಧಾರದ ನಂತರ ಒಡಿಶಾ ಸರ್ಕಾರದ ನಿರ್ಧಾರವು ಹೊರಬಂದಿದೆ.

7th Pay Commission: DA Hiked By 3 Per Cent In THIS State For Govt Employees

ಈ ಎಲ್ಲಾ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಿವೆ. ಹೊಸ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ ಹೆಚ್ಚಳ ಜುಲೈ 1, 2022 ರಿಂದ ಅನ್ವಯವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಡಿಎ ಹೆಚ್ಚಳವನ್ನು ಶೇಕಡಾ 31 ಕ್ಕೆ ಘೋಷಿಸಿದೆ. ಒಡಿಶಾ ರಾಜ್ಯ ಸರ್ಕಾರಿ ನೌಕರರು ಈಗ 31 ಶೇಕಡಾ ಡಿಎ ಗಳಿಸಲಿದ್ದಾರೆ

ಒಡಿಶಾ ಸಿಎಂ ನವೀನ್ ಪಟ್ನಾಯಕ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದು 7.5 ಲಕ್ಷ ಒಡಿಶಾ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ DA ಪರಿಹಾರ ಜೊತೆಗೆ ಸಂಬಳ ಏರಿಕೆ?ಕೇಂದ್ರ ಸರ್ಕಾರಿ ನೌಕರರಿಗೆ DA ಪರಿಹಾರ ಜೊತೆಗೆ ಸಂಬಳ ಏರಿಕೆ?

ಡಿಎ ಹೆಚ್ಚಳದ ಜತೆಗೆ ನೌಕರರಿಗೆ ಶೇ 30ರಷ್ಟು 7ನೇ ವೇತನ ಆಯೋಗದ ಬಾಕಿ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ನೌಕರರು 2016 ಮತ್ತು 2017 ರ ವೇತನದಲ್ಲಿ ಉಳಿದ 50 ಪ್ರತಿಶತವನ್ನು ಪಡೆಯುತ್ತಾರೆ. ಈ ನಿರ್ಧಾರವು ಸುಮಾರು 6 ಲಕ್ಷ ಒಡಿಶಾ ರಾಜ್ಯ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ.

ಕೇಂದ್ರ ಸರ್ಕಾರದ ಡಿಎ ಹೆಚ್ಚಳ: ಶೇ 1ರಷ್ಟು ಡಿಎ ಹೆಚ್ಚಳ ಸಾಧ್ಯತೆ

ಒಳ್ಳೆಯ ಸುದ್ದಿ ಇಲ್ಲಿಗೆ ಮುಗಿಯುವುದಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ನರೇಂದ್ರ ಮೋದಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 1 ರಷ್ಟು ಡಿಎ ಹೆಚ್ಚಳವನ್ನು ಶೀಘ್ರದಲ್ಲೇ ಘೋಷಿಸಬಹುದು. ಸದ್ಯ ಶೇ.33ರಷ್ಟು ಡಿಎ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 2021 ರಲ್ಲಿ ಡಿಎಯನ್ನು ಶೇಕಡಾ 33 ಕ್ಕೆ ಹೆಚ್ಚಿಸಲಾಗಿದೆ.

ಹಣದುಬ್ಬರದ ಅಂಕಿಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸಿದರೆ, ಅವರು ಜನವರಿ 1, 2022 ರಿಂದ ಶೇಕಡಾ 34 ರಷ್ಟು ಡಿಎ ಪಡೆಯುತ್ತಾರೆ.

Recommended Video

INS ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ,ಭಾರತೀಯ ನೌಕಾಪಡೆಯ 3 ಯೋಧರು ಹುತಾತ್ಮ | Oneindia Kannada

ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.34 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ4.59 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ 3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಜುಲೈ 2021ಕ್ಕೆ ಹೊಂದಾಣಿಕೆ ರಹಿತ ಸಿಪಿಐ ಶೇ 5.4ರಷ್ಟಿದೆ.

English summary
Odisha state government employees have a piece of good news. Naveen Patnaik government has decided to increase the Dearness Allowance (DA) by 3 per cent for the employees on New Year 2022 under the 7th pay commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X