ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವೇತನ ಆಯೋಗ: 2021ರಲ್ಲಿ ಸರ್ಕಾರಿ ನೌಕರರ ಸಂಬಳ ಹೆಚ್ಚಳ

|
Google Oneindia Kannada News

2021ರಲ್ಲಿ ಕೇಂದ್ರ ಸರ್ಕರಿ ನೌಕರರು ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡು ಬಂದಿದೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಏರಿಕೆಯಾಗಲಿದೆ. ಕಳೆದ ವರ್ಷ ವೇತನ ಸಂಹಿತೆಯ ಕರಡು ಪ್ರತಿ ಶಿಫಾರಸ್ಸಿನಲ್ಲಿ ಕೆಲಸದ ಅವಧಿ ಬಗ್ಗೆ ಬದಲಾವಣೆ ಇದ್ದರೂ ಕನಿಷ್ಠ ವೇತನದಲ್ಲಿ ಬದಲಾವಣೆ ಮಾಡಿಲ್ಲ. ಕೊವಿಡ್ 19 ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗದ ಕಾರಣ ನೌಕರರಿಗೆ ಶೇ 21ರ ದರಂತೆ ಸಂಬಳ ಹಾಗೂ ತುಟ್ಟಿಭತ್ಯೆ ಶೇ 17ಕ್ಕೆ ಇಳಿಕೆ ಮಾಡಲಾಗಿತ್ತು.

ಸದ್ಯ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರಿಗೆ 18,000 ರು ಕನಿಷ್ಠ ವೇತನ ಪ್ರತಿ ತಿಂಗಳಿಗೆ ಸಿಗಲಿದೆ. ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸರ್ಕಾರ ಅಸ್ತುಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸರ್ಕಾರ ಅಸ್ತು

ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ, ಶೇ 21ಕ್ಕೆ ನಿಗದಿ ಪಡಿಸಿ ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ.

ಜೂನ್ 2021ರ ತನಕ ಇದೆ ವೇತನ ಶ್ರೇಣಿ?

ಜೂನ್ 2021ರ ತನಕ ಇದೆ ವೇತನ ಶ್ರೇಣಿ?

7ನೇ ವೇತನ ಆಯೋಗದ ಅನ್ವಯ ಹಾಲಿ ಸಂಬಳ ಹಾಗೂ ಭತ್ಯೆ ದರವನ್ನು ಕೇಂದ್ರ ಸರ್ಕಾರ ಜೂನ್ 2021ರ ತನಕ ಜಾರಿಯಲ್ಲಿಡಲು ಮುಂದಾಗಿದೆ. ಇದಾದ ಬಳಿಕ ತುಟ್ಟಿಭತ್ಯೆ ಮಾತ್ರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಹಾಗೂ ಸಂಬಳ ಏರಿಕೆಯಾಗಲಿದೆ. ಪ್ರತಿ ವರ್ಷದಂತೆ ಜುಲೈ ತಿಂಗಳಿನಲ್ಲೇ ತುಟ್ಟಿಭತ್ಯೆ ಕಾಣಬಹುದು ಎಂದು ಒನ್ಇಂಡಿಯಾಕ್ಕೆ ತಿಳಿದು ಬಂದಿದೆ.

2020ರಲ್ಲಿ ಬೋನಸ್ ಮಾತ್ರ ಪಡೆದ ನೌಕರರು

2020ರಲ್ಲಿ ಬೋನಸ್ ಮಾತ್ರ ಪಡೆದ ನೌಕರರು

ಆರ್ಥಿಕ ಪರಿಸ್ಥಿತಿ ಹಾಗೂ ಕೊವಿಡ್ 19 ನಿರ್ಬಂಧ ಹೆಚ್ಚಾಗುವ ಮುನ್ನವೇ ಏಪ್ರಿಲ್ ತಿಂಗಳಲ್ಲೇ 2020ರಲ್ಲಿ ಸಂಬಳ ಏರಿಕೆ, ಡಿಎ ಹೆಚ್ಚಳ ನೀಡದಿರುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಕಾಣುತ್ತಿದ್ದ ಸರ್ಕಾರಿ ನೌಕರರು ಈ ವರ್ಷ ಭಾರಿ ಹೊಡೆತ ತಿಂದಿದ್ದರು.

ಸರ್ಕಾರಿ ನೌಕರರಿಗೆ ಶುಭಸುದ್ದಿ: ನೈಟ್ ಡ್ಯೂಟಿಗೆ ಹೆಚ್ಚಿನ ಭತ್ಯೆಸರ್ಕಾರಿ ನೌಕರರಿಗೆ ಶುಭಸುದ್ದಿ: ನೈಟ್ ಡ್ಯೂಟಿಗೆ ಹೆಚ್ಚಿನ ಭತ್ಯೆ

ಕೊನೆಗೆ ಸುಮಾರು 30 ಲಕ್ಷ ಸಿಬ್ಬಂದಿಗಳಿಗೆ ದೀಪಾವಳಿ ಬೋನಸ್ ಸಿಕ್ಕಿದರೆ, ಹಲವಾರು ನೌಕರರು ಎಲ್ ಟಿ ಸಿ, ಎಲ್ ಟಿಎ ಸೌಲಭ್ಯ ಬಳಸಲು ಉತ್ತೇಜಿಸಲಾಯಿತು. ಎಲ್ ಟಿಸಿ ನಗದು ವೋಚರ್ ಯೋಜನೆಯನ್ನು ಅಕ್ಟೋಬರ್ 12ರಂದು ಪರಿಚಯಿಸಲಾಯಿತು.

ಸಂಬಳ ಏರಿಕೆ ನಿರೀಕ್ಷೆ

ಸಂಬಳ ಏರಿಕೆ ನಿರೀಕ್ಷೆ

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆ ಇಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆ (Travel Allowance) ಕೂಡಾ ನೀಡಲಾಗುತ್ತಿದೆ. ಟಿಎ ಮೌಲ್ಯ ಸೇರಿಸಿದ ಬಳಿಕ ಸಂಬಳ 810 ರು ನಿಂದ 4,320ರುಗೇರಲಿದೆ. ಒಟ್ಟಾರೆ 720 ರು ನಿಂದ 10,000 ರು ತನಕ ಸಂಬಳ ಏರಿಕೆ ನಿರೀಕ್ಷೆಯಿದೆ.

ಕನಿಷ್ಠ ವೇತನ ಏರಿಕೆ ಬೇಡಿಕೆ

ಕನಿಷ್ಠ ವೇತನ ಏರಿಕೆ ಬೇಡಿಕೆ

ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆಯಿದೆ ಎಂಬ ವರದಿ ಬಂದಿದ್ದರೂ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಡಿಮೆ.ದೆಹಲಿ ಸರ್ಕಾರ ಮಾತ್ರ ಇತ್ತೀಚೆಗೆ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಕನಿಷ್ಠ ವೇತನ, ಭತ್ಯೆ ಹೆಚ್ಚಳ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 8 ಸಾವಿರ ರು ಸಂಬಳ ಏರಿಕೆ?ಕೇಂದ್ರ ಸರ್ಕಾರಿ ನೌಕರರಿಗೆ 8 ಸಾವಿರ ರು ಸಂಬಳ ಏರಿಕೆ?

ತುಟ್ಟಿಭತ್ಯೆ ಹೆಚ್ಚಳ

ತುಟ್ಟಿಭತ್ಯೆ ಹೆಚ್ಚಳ

3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100.

English summary
7th Pay Commission: The CG employees and pensioners likely to get more salary from 2021. due to COVID-19 and the effect on the state exchequer, the DA was reduced to 17 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X