ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರ ಮೂಲ ವೇತನ ಏರಿಕೆ?

|
Google Oneindia Kannada News

ನವದೆಹಲಿ, ಜನವರಿ 16: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ಭರ್ಜರಿ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಫಿಟ್‌ಮೆಂಟ್ ಅಂಶದ ಹೆಚ್ಚಳದೊಂದಿಗೆ ಕೇಂದ್ರ ನೌಕರರ ಮೂಲ ವೇತನವನ್ನು ಹಿಂದಿನ 18,000 ರೂ.ಗಳಿಂದ 26,000 ರೂ.ಗೆ ಹೆಚ್ಚಿಸಬಹುದು ಎಂದು ಅನೇಕ ಮಾಧ್ಯಮಗಳ ವರದಿಗಳು ಬಂದಿವೆ.

ಕೇಂದ್ರ ಸರ್ಕಾರವು ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಪರಿಗಣಿಸುತ್ತಿದೆ. ಫಿಟ್‌ಮೆಂಟ್ ಅಂಶವು ಹೆಚ್ಚಾದರೆ, ಮೂಲ ವೇತನವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ನಂತರ ತುಟ್ಟಿಭತ್ಯೆ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಡಿಎ ಹೆಚ್ಚಳವಾದರೂ ನೇರವಾಗಿ ಸಂಬಳ ಏರಿಕೆ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಈಗ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಶುಭ ಸುದ್ದಿ ಸಿಕ್ಕಿದೆ. ಈ ಬಗ್ಗೆ ಕೇಂದ್ರ ಬಜೆಟ್ 2022ರಲ್ಲಿ ಘೋಷಿಸುವ ಸಾಧ್ಯತೆಯಿದೆ.

ಕೊರೊನಾವೈರಸ್ ಸಾಂಕ್ರಾಮಿಕದ ಕಾಲದಲ್ಲಿ ಕಳೆದ ಎರಡು ವರ್ಷಗಳಿಂದ ಡಿಎ ಹೆಚ್ಚಳ ಮಾಡಲಾಗಿರಲಿಲ್ಲ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು [ಡಿಆರ್] 01.01.2020, 01.07.2020 ಮತ್ತು 01.01.2021, ಸ್ಥಗಿತಗೊಳಿಸಲಾಗಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ DA ಪರಿಹಾರ ಜೊತೆಗೆ ಸಂಬಳ ಏರಿಕೆ?ಕೇಂದ್ರ ಸರ್ಕಾರಿ ನೌಕರರಿಗೆ DA ಪರಿಹಾರ ಜೊತೆಗೆ ಸಂಬಳ ಏರಿಕೆ?

ಈ ಸಂಬಂಧ ವಿವಿಧ ಸಂಸ್ಥೆಗಳು ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಯೋಜಿಸುತ್ತಿದ್ದು, ನಂತರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಹೆಚ್ಚಿನ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಇತರ ವರದಿಗಳು ತಿಳಿಸಿವೆ.

ಫಿಟ್‌ಮೆಂಟ್ ಅಂಶ ಹೆಚ್ಚಳ

ಫಿಟ್‌ಮೆಂಟ್ ಅಂಶ ಹೆಚ್ಚಳ

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.68 ಕ್ಕೆ ಹೆಚ್ಚಿಸಬೇಕೆಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಹೆಚ್ಚಳಕ್ಕೆ ಕೇಂದ್ರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ನೌಕರರ ಕನಿಷ್ಠ ಮೂಲವೇತನವನ್ನು 6,000 ರೂ.ನಿಂದ 18,000 ರೂ.ಗೆ ಹೆಚ್ಚಿಸಿದಾಗ 2016 ರಲ್ಲಿ ಫಿಟ್‌ಮೆಂಟ್ ಅಂಶವನ್ನು ಕೊನೆಯ ಬಾರಿಗೆ ಹೆಚ್ಚಿಸಲಾಗಿದೆ ಎಂಬುದನ್ನು ಸರ್ಕಾರಿ ನೌಕರರು ನೆನಪಿಟ್ಟುಕೊಳ್ಳಬೇಕು. ಇನ್ನೊಂದು ಪ್ರಮುಖ ಅಂಶವೆಂದರೆ ಮೂಲವೇತನ 18,000 ರೂ.ನಿಂದ 26,000 ರೂ.ಗೆ ಏರಿಕೆ ಅಲ್ಲದೆ, ಸರಕಾರಿ ನೌಕರರಿಗೆ ತುಟ್ಟಿ ಭತ್ಯೆಯೂ ಹೆಚ್ಚಾಗಲಿದೆ. ಲೆಕ್ಕಾಚಾರದ ಪ್ರಕಾರ, ತುಟ್ಟಿಭತ್ಯೆ ಮೂಲ ವೇತನದ 31 ಪ್ರತಿಶತಕ್ಕೆ ಸಮನಾಗಿರುತ್ತದೆ.

ದಿನಕ್ಕೆ 9 ಗಂಟೆಗಳ ಕಾಲ ಕೆಲಸ

ದಿನಕ್ಕೆ 9 ಗಂಟೆಗಳ ಕಾಲ ಕೆಲಸ

ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ರೈಲ್ವೆ ಇಲಾಖೆಯಲ್ಲಿ ಮಾತ್ರ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೊಸ ಸಚಿವರು ಕೆಲವು ವಿಭಾಗಕ್ಕೆ ಅನ್ವಯವಾಗುವಂತೆ ಆದೇಶ ನೀಡಿದ್ದರು. ಇನ್ನು ವಾರದಲ್ಲಿ ಎರಡು ದಿನ ರಜೆ ಬದಲಿಗೆ ಮೂರು ದಿನ ರಜೆ ಅಥವಾ ವಾರಕ್ಕೆ 4 ದಿನಗಳು ಮಾತ್ರ ಕಾರ್ಯ ನಿರ್ವಹಿಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಇದು ಸದ್ಯಕ್ಕೆ ಕಾರ್ಯಸಾಧುವಲ್ಲ ಎಂದು ಕೈಬಿಡಲಾಗಿದೆ.

Fact Check: ತುಟ್ಟಿಭತ್ಯೆ ಹೆಚ್ಚಳ ಅಧಿಕೃತ ಅದೇಶ ಹೊರಬಂದಿದೆಯೇ?
ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ

ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ

ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಸದ್ಯ ಡಿಎ ಮತ್ತೆ ಶೇ 3ರಷ್ಟು ಏರಿಕೆಯಾದರೆ ಭತ್ಯೆ 73,440 ರು ತನಕ ಸಿಗಲಿದೆ. ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆ ಇನ್ನೂ ಈಡೇರಿಲ್ಲ. ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದ್ದರೂ ಮುಂದಿನ ಬಜೆಟ್ ತನಕ ಘೋಷಣೆಯಾಗುವುದಿಲ್ಲ.

Recommended Video

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada
ಹಣದುಬ್ಬರದ ಪರಿಣಾಮ

ಹಣದುಬ್ಬರದ ಪರಿಣಾಮ

ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.34 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ4.59 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ 3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಜುಲೈ 2021ಕ್ಕೆ ಹೊಂದಾಣಿಕೆ ರಹಿತ ಸಿಪಿಐ ಶೇ 5.4ರಷ್ಟಿದೆ.

ಬಜೆಟ್‌ಗೂ ಮುನ್ನ ಈ ರಾಜ್ಯದ ಸರ್ಕಾರಿ ಸಿಬ್ಬಂದಿಗಳಿಗೆ ಸಂಬಳ ಏರಿಕೆ

English summary
7th Pay Commission: Ahead of the assembly elections in five states, the Central government employees are likely to get a big gift from the Centre. Media reports also suggested that the basic salary of central employees can be increased to Rs 26,000 from the earlier Rs 18,000 with the hike in the fitment factor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X