ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಾರದಲ್ಲೇ ತುಟ್ಟಿಭತ್ಯೆ ಪರಿಹಾರದ ಬಗ್ಗೆ ನಿರ್ಧಾರ ಸಾಧ್ಯತೆ?

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಬೆನ್ನಲ್ಲೇ ತುಟ್ಟಿಭತ್ಯೆ ಪರಿಹಾರ (DA arrear) ಬಾಕಿ ಒದಗಿಸುವ ಸುದ್ದಿ ಬಂದಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಈ ವಾರದಲ್ಲೇ ನಿರ್ಧಾರ ಕೈಗೊಳ್ಳಲಿದ್ದು, ಡಿಆರ್ ಬಾಕಿ ಮೊತ್ತ ಪಾವತಿ ಬಗ್ಗೆ ಅಂತಿಮ ತೀರ್ಮಾನ ಹೊರಬರಲಿದೆ. ಅದೇಶ ಹೊರಬಂದರೆ ಸರಿ ಸುಮಾರು 2 ಲಕ್ಷ ರು ನಷ್ಟು ಬಾಕಿಮೊತ್ತ ಸಿಗಲಿದೆ.

ಮಾಧ್ಯಮಗಳಲ್ಲಿ ಇತ್ತೀಚಿನ ವರದಿಗಳ ಪ್ರಕಾರ, ಡಿಎ ಬಾಕಿಯ ಕುರಿತ ಸಭೆ ಈ ವಾರ ನಡೆಯಬಹುದು. ಕ್ಯಾಬಿನೆಟ್ ಕೌನ್ಸಿಲ್ ಕಳೆದ 18 ತಿಂಗಳುಗಳಿಂದ ತಡೆಹಿಡಿಯಲಾದ ಡಿಎ ಬಾಕಿಗಳಿಗೆ ಒಂದು-ಬಾರಿ ಇತ್ಯರ್ಥ ಮೊತ್ತವನ್ನು ಯೋಜಿಸುತ್ತಿದೆ. ಇದು ಕೆಲವು ಉದ್ಯೋಗಿಗಳಿಗೆ ಅವರ ಬ್ಯಾಂಡ್ ಪ್ರಕಾರ ರೂ 2 ಲಕ್ಷದವರೆಗೆ ಬಾಕಿ ಮೊತ್ತ ಸಿಗುವ ಭರವಸೆ ಇದೆ.

ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ, ಲೆಕ್ಕಾಚಾರ ಹೇಗೆ?ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ, ಲೆಕ್ಕಾಚಾರ ಹೇಗೆ?

ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್‌ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್‌ ಮೇಲೆ ಹಲವಾರು ನಿರೀಕ್ಷೆಗಳು ಇದೆ.

ಜೆಸಿಎಂನ ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ಹೇಳಿಕೆ

ಜೆಸಿಎಂನ ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ಹೇಳಿಕೆ

ಜೀ ನ್ಯೂಸ್ ಹಿಂದಿಯಲ್ಲಿ ಬಂದಿರುವ ಇತ್ತೀಚಿನ ವರದಿಯು ಲೆವೆಲ್-1 ರಲ್ಲಿನ ಉದ್ಯೋಗಿಗಳ ಡಿಎ ಬಾಕಿ ಮೊತ್ತವು ರೂ 11,880 ಮತ್ತು ರೂ 37,554 ರ ನಡುವೆ ಇರುತ್ತದೆ ಎಂದು ಜೆಸಿಎಂನ ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ಹೇಳಿಕೆ ಉಲ್ಲೇಖಿಸಿದ್ದಾರೆ. ಹಂತ-13 ಅಥವಾ ಹಂತ-14 ಕ್ಕೆ, ಈ ಮೊತ್ತವು 1,44,200 ರಿಂದ 2,18,200 ರವರೆಗೆ ಇರುತ್ತದೆ.

ಈ ಹಿಂದೆ, ವರದಿಯ ಪ್ರಕಾರ, ರಾಷ್ಟ್ರೀಯ ಕೌನ್ಸಿಲ್ ಆಫ್ ಜೆಸಿಎಂ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮತ್ತು ಹಣಕಾಸು ಸಚಿವಾಲಯದ ನಡುವೆ ಹಲವಾರು ಬಾಕಿ ಸಂಬಂಧಿತ ಚರ್ಚೆ ನಡೆಸಲಾಗಿದೆ.

ಸಂಪುಟ ಕಾರ್ಯದರ್ಶಿ ಮುಂದೆ ಚರ್ಚೆಗೆ

ಸಂಪುಟ ಕಾರ್ಯದರ್ಶಿ ಮುಂದೆ ಚರ್ಚೆಗೆ

ಈ ವಿಚಾರವನ್ನು ಶೀಘ್ರದಲ್ಲೇ ಸಂಪುಟ ಕಾರ್ಯದರ್ಶಿ ಮುಂದೆ ಚರ್ಚೆಗೆ ತರಬಹುದು. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ ಪ್ರಸ್ತುತ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 60 ಲಕ್ಷ ಪಿಂಚಣಿದಾರರು ಇದ್ದಾರೆ.

ಜೆಸಿಎಂನ ರಾಷ್ಟ್ರೀಯ ಕೌನ್ಸಿಲ್‌ನ ಶಿವ ಗೋಪಾಲ್ ಮಿಶ್ರಾ ಪ್ರಕಾರ, ಲೆವೆಲ್-1 ನೌಕರರ ಡಿಎ ಬಾಕಿ 11,880 ರೂ.ನಿಂದ 37,554 ರೂ. ಆದರೆ, ಹಂತ-13 ಅಥವಾ ಹಂತ-14ಕ್ಕೆ, ಡಿಎ ಬಾಕಿ ಕ್ರಮವಾಗಿ 1,44,200 ಮತ್ತು 2,18,200 ರೂ ಮೊತ್ತ ಸಿಗಬೇಕಿದೆ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳ

ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳ

ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್ ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ತುಟ್ಟಿಭತ್ಯೆ ಪರಿಹಾರ ಶೇ 3ರಷ್ಟಿದೆ. ಈ ವರ್ಷ ಜುಲೈ ಮೊದಲು, ಇದು 17 ಪ್ರತಿಶತದಷ್ಟಿತ್ತು, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಡಿಎ ಶೇ 28ರಿಂದ ಶೇ 31ಕ್ಕೇರಿಕೆಯಾಗಲಿದೆ.
ತುಟ್ಟಿಭತ್ಯೆ ಹೆಚ್ಚಳ ಲೆಕ್ಕಾಚಾರ

ತುಟ್ಟಿಭತ್ಯೆ ಹೆಚ್ಚಳ ಲೆಕ್ಕಾಚಾರ

ತುಟ್ಟಿಭತ್ಯೆ ಹೆಚ್ಚಳ ಲೆಕ್ಕಾಚಾರ ಮಾಡುವುದು ಹೇಗೆ? ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76‍‍X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33‍‍X100. ತುಟ್ಟಿಭತ್ಯೆ ಇತಿಹಾಸ: 2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. ಅಂದಿನ ಇಂದಿನವರೆಗೂ(ಈಗ ದರ ಶೇ 31ಕ್ಕೇರಿದೆ) ಬೇಡಿಕೆ ಮುಂದಿಡಲಾಗುತ್ತಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ ಎಂದು ವಾದಿಸುತ್ತಿದ್ದಾರೆ.

English summary
7th Pay Commission: Big update on DA arrears - Good news soon for central government employees. An official update on DA arrears of 18 months will be released latest by this weeks says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X