ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಜಿಎಸ್‌ಟಿಗೆ ಸೇರಿಸಲು ಬಯಸುವ ಶೇ.77 ಭಾರತೀಯರು: ಸಮೀಕ್ಷೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 17: ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರವು ಹಿಂದೆಂದಿಗಿಂತಲೂ ಭಾರೀ ಅಧಿಕವಾಗಿದೆ. ಈ ನಡುವೆ ಶೇಕಡ 77 ಮಂದಿ ಪೆಟ್ರೋಲ್‌ ಹಾಗೂ ಡೀಸೆಲ್ ಸರಕು ಹಾಗೂ ಸೇವೆ ತೆರಿಗೆ (ಜಿಎಸ್‌ಟಿ) ಅಡಿಗೆ ಸೇರಿಸಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ಈ ಸಮೀಕ್ಷೆಯನ್ನು ನಡೆಸಿದೆ. ಹಾಗೆಯೇ "ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಸಂದರ್ಭದ ಬಳಿಕ, ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಪೆಟ್ರೋಲ್‌ ಹಾಗೂ ಡೀಸೆಲ್ ಖರ್ಚನ್ನು ನಿಭಾಯಿಸುವ ಸಲುವಾಗಿ ಶೇಕಡ 51 ರಷ್ಟು ಮಂದಿ ತಮ್ಮ ಇತರೆ ಖರ್ಚಿನಲ್ಲಿ ಕಡಿತವನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ," ಎಂದು ಈ ಸಮೀಕ್ಷೆಯು ಹೇಳಿದೆ.

ಕಳೆದ 12 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಿಲ್ಲಕಳೆದ 12 ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಿಲ್ಲ

ಇನ್ನು ಈ ಸಂದರ್ಭದಲ್ಲೇ ಶೇಕಡ 21 ರಷ್ಟು ಮಂದಿ ಈ ಪೆಟ್ರೋಲ್‌, ಡೀಸೆಲ್ ಗಾಗಿ ಬೇಕಾಗುವ ಖರ್ಚನ್ನು ಸಮದೂಗಿಸಲು ತಮ್ಮ ಅಗತ್ಯ ವಸ್ತುಗಳ ಖರೀದಿಯಲ್ಲೇ ಕಡಿತವನ್ನು ಮಾಡಿಕೊಂಡಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ. ಇನ್ನು 14 ಶೇಕಡ ಮಂದಿ ತಮ್ಮ ಉಳಿತಾಯವನ್ನೆಲ್ಲಾ ಈ ಡೀಸೆಲ್, ಪೆಟ್ರೋಲ್‌ ಖರ್ಚಿಗಾಗಿ ಬಳಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

 ಜಿಎಸ್‌ಟಿ ಅಡಿ ಬಂದರೆ ಎಷ್ಟು ಬೆಲೆ ಇಳಿಕೆ?

ಜಿಎಸ್‌ಟಿ ಅಡಿ ಬಂದರೆ ಎಷ್ಟು ಬೆಲೆ ಇಳಿಕೆ?

ಇನ್ನು ಪೆಟ್ರೋಲ್‌ ಹಾಗೂ ಡೀಸೆಲ್ ಅನ್ನು ಜಿಎಸ್‌ಟಿ ಅಡಿಯಲ್ಲಿ ತಂದರೆ ಅನೇಕರ ಜೀವನ ವೆಚ್ಚವನ್ನು ಗಮರ್ನಾಹವಾಗಿ ಸುಧಾರಿಸುತ್ತದೆ. ಪೆಟ್ರೋಲ್‌ ಹಾಗೂ ಡೀಸೆಲ್ ದರವು ಭಾರೀ ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್‌, ಡೀಸೆಲ್ ಬಂದರೆ ಶೇಕಡ 28 ರಷ್ಟು ಜಿಎಸ್‌ಟಿ ಅನ್ವಯ ಮಾಡಿದ ಬಳಿಕ ಪೆಟ್ರೋಲ್‌ ಬೆಲೆ 75 ರೂಪಾಯಿ ಹಾಗೂ ಡೀಸೆಲ್ 70 ರೂಪಾಯಿ ಆಗಿರಲಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಎರಡು ಸರ್ಕಾರಗಳಿಗೆ ಇದರಿಂದಾಗಿ ಈಗ ಇರುವ ಲಾಭ ಇರುವುದಿಲ್ಲ, ನಷ್ಟ ಉಂಟಾಗಲಿದೆ ಎಂದು ಸಮೀಕ್ಷೆಯು ಹೇಳುತ್ತದೆ.

 ಎಲ್ಲೆಲ್ಲಿ ಸಮೀಕ್ಷೆ ನಡೆದಿದೆ?

ಎಲ್ಲೆಲ್ಲಿ ಸಮೀಕ್ಷೆ ನಡೆದಿದೆ?

ಈ ಸಮೀಕ್ಷೆಯು ಸುಮಾರು 7500 ಮಂದಿಯ ಮೇಲೆ ಮಾಡಲಾಗಿದೆ. 379 ಜಿಲ್ಲೆಗಳ 7500 ಮಂದಿಯ ಪ್ರತಿಕ್ರಿಯೆಯನ್ನು ಈ ಸಮೀಕ್ಷೆಗಾಗಿ ಪಡೆಯಲಾಗಿದೆ. ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ ಜನರಲ್ಲಿ ಶೇಕಡ 61 ಮಂದಿ ಪುರುಷರು ಆಗಿದ್ದು, ಶೇಕಡ 39 ಮಂದಿ ಮಹಿಳೆಯರು ಆಗಿದ್ದಾರೆ. ಇನ್ನು ಈ ಪೈಕಿ ಶೇಕಡ 44 ಮಂದಿ ಮೊದಲ ಶ್ರೇಣಿಯ ಜಿಲ್ಲೆಗೆ ಸೇರಿದವರು ಆಗಿದ್ದಾರೆ, ಶೇಕಡ 29 ಮಂದಿ ಬೇರೆ ಎರಡನೇ ಶ್ರೇಣಿಯ ಜಿಲ್ಲೆಗಳಿಗೆ ಸೇರಿದವರು ಆಗಿದ್ದಾರೆ, ಇನ್ನು ಶೇಕಡ 27 ರಷ್ಟು ಮಂದಿ ಮೂರನೇ ಹಾಗೂ ನಾಲ್ಕನೇ ಶ್ರೇಣಿ, ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಸೇರಿದವರು ಆಗಿದ್ದಾರೆ.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ಸೆ. 17ಕ್ಕೆ ನಿರ್ಣಯ ಸಾಧ್ಯತೆ?ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್, ಸೆ. 17ಕ್ಕೆ ನಿರ್ಣಯ ಸಾಧ್ಯತೆ?

 ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ

ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ

ಶುಕ್ರವಾರ ಜಿಎಸ್‌ಟಿ ಕೌನ್ಸಿಲ್‌ ಸಭೆಯು ನಡೆದಿದೆ. ಈ ನಡುವೆ ಈ ಸಮೀಕ್ಷೆಯ ಅಂತಿಮ ವರದಿ ಬಂದಿದೆ. ಪೆಟ್ರೋಲ್‌, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಬೆಲೆ ಇಳಿಕೆ ಮಾಡುವ ಕಾರ್ಯ ಮಾಡುವ ಬಗ್ಗೆ ಈ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. "ಈ ಪೆಟ್ರೋಲ್‌ ಹಾಗೂ ಡೀಸೆಲ್ ದರವು ಎಲ್ಲಿಯವರೆಗೆ ಜಿಎಸ್‌ಟಿ ಅಡಿಯಲ್ಲಿ ಬರುವುದನ್ನು ನೋಡಲು ಶೇಕಡ 77 ಮಂದಿ ಕಾಯುತ್ತಿದ್ದಾರೆ. ಪೆಟ್ರೋಲ್‌ ಹಾಗೂ ಡೀಸೆಲ್ ಜಿಎಸ್‌ಟಿ ಅಡಿಯಲ್ಲಿ ಬಂದರೆ ಬೆಲೆಯು ಇಳಿಕೆಯಾಗುವ ಮೂಲಕ ಜನರಿಗೆ ಸಹಕಾರವಾಗಲಿದೆ ಎಂದು ಜನರು ನಂಬಿದ್ದಾರೆ," ಎಂದು ಸಮೀಕ್ಷೆಯು ವಿವರಿಸಿದೆ.

 ಪ್ರಸ್ತುತ ಪೆಟ್ರೋಲ್‌, ಡೀಸೆಲ್ ಬೆಲೆ

ಪ್ರಸ್ತುತ ಪೆಟ್ರೋಲ್‌, ಡೀಸೆಲ್ ಬೆಲೆ

ಹಲವಾರು ದಿನಗಳಿಂದ ಏರಿಕೆ ಕಾಣುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್ ದರವು ಕಳೆದ 12 ದಿನಗಳಿಂದ ಏರಿಕೆಯಾಗಿಲ್ಲ. ಆದರೆ ಇಳಿಕೆಯೂ ಕೂಡಾ ಕಂಡಿಲ್ಲ. ಕಳೆದ ಬುಧವಾರ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಉಳಿದ ದಿನಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಸೆ.5 ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲಾಗಿತ್ತು, ಸರಾಸರಿ 18-19 ಪೈಸೆ ಪ್ರತಿ ಲೀಟರ್ ತಗ್ಗಿಸಲಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 101.19ರೂ- ಡೀಸೆಲ್ 88.62ರೂ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 104.70 ರೂ- ಡೀಸೆಲ್ 94.04ರೂ ಆಗಿದೆ.

(ಒನ್‌ ಇಂಡಿಯಾ ಸುದ್ದಿ)

English summary
A new survey has found that 77 per cent of citizens want petrol and diesel to be included under the ambit of the Goods and Services Tax (GST).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X