ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರೇ ನೋಡಿ ಇನ್ಮುಂದೆ ಅಫ್ಘಾನಿಸ್ತಾನ ಆಳುವ ತಾಲಿಬಾನ್ ನಾಯಕರು..!

|
Google Oneindia Kannada News

ತಾನು ಮಾಡಿದ್ದ ತಪ್ಪಿಗೆ ಅಮೆರಿಕ ಭೀಕರ ಸಮಸ್ಯೆಗೆ ಸಿಲುಕಿದೆ. ಹಾಗೇ ತನ್ನ ಎಡವಟ್ಟಿನಿಂದ ತಪ್ಪನ್ನೇ ಮಾಡದ ಮುಗ್ಧ ಜನರನ್ನೂ ಸಂಕಷ್ಟದ ಬಲೆಗೆ ಸಿಲುಕಿಸಿಬಿಟ್ಟಿದೆ ಜಗತ್ತಿನ ಪಾಲಿನ 'ದಡ್ಡಣ್ಣ' ಅಲ್ಲಲ್ಲ 'ದೊಡ್ಡಣ್ಣ' ಅಮೆರಿಕ. ಅಫ್ಘಾನಿಸ್ತಾನದಲ್ಲಿ ಈಗ ಅಮೆರಿಕದ ಕಂಟ್ರೋಲ್ ತಪ್ಪಿದೆ.

ತಾಲಿಬಾನ್ ಇಡೀ ಅಫ್ಘಾನಿಸ್ತಾನವನ್ನ ತನ್ನ ವಶಕ್ಕೆ ಪಡೆದುಕೊಂಡಿದೆ. ಹಾಗಾದ್ರೆ ಅಲ್ಲಿ ಸರ್ಕಾರ ನಡೆಸುವವರು ಯಾರು..? ತಾಲಿಬಾನ್ ಅಧಿಕಾರ ಹಿಡಿದ ಬಳಿಕ ಅಫ್ಘಾನ್ ನಾಯಕರು ಯಾರಾಗ್ತಾರೆ..? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಜನರನ್ನ ಕಾಡುತ್ತಿವೆ.

ತಾಲಿಬಾನ್ ಆಡಳಿತ ಕಿತ್ತೆಸೆದ ಅಮೆರಿಕ..! ಹೇಗಿತ್ತು 20 ವರ್ಷಗಳ ಭೀಕರ ಸಂಘರ್ಷ..?ತಾಲಿಬಾನ್ ಆಡಳಿತ ಕಿತ್ತೆಸೆದ ಅಮೆರಿಕ..! ಹೇಗಿತ್ತು 20 ವರ್ಷಗಳ ಭೀಕರ ಸಂಘರ್ಷ..?

ಅದಕ್ಕೆ ಸ್ಪಷ್ಟವಾದ ಹಾಗೂ ಸರಳ ಉತ್ತರ ಏನೆಂದರೆ ಇನ್ನುಮುಂದೆ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವದಲ್ಲಿರಲ್ಲ..! ಇನ್ನುಮುಂದೆ ಏನಿದ್ದರೂ ತಾಲಿಬಾನ್‌ನ ಆ 7 ಮುಖಂಡರದ್ದೇ ಆಟ. ಅವರು ಮಾಡಿದ್ದೇ ರೂಲ್ಸ್, ಅವರದ್ದೇ ಕಾನೂನು. ಇವರ ವಿರುದ್ಧ ಹೆಚ್ಚು ಕಡಿಮೆ ಮಾತನಾಡಿದವರು ಮಸಣ ಸೇರೋದಂತೂ ಗ್ಯಾರಂಟಿ. ಹಾಗಾದ್ರೆ ಯಾರವರು..? ತಾಲಿಬಾನ್ ಸರ್ಕಾರದಲ್ಲಿ ಆ 7 ಮುಖಂಡರ ಪಾತ್ರವೇನು ಅನ್ನೋದನ್ನ ಇಲ್ಲಿ ತಿಳಿಯೋಣ.

ನಂಬಿಗಸ್ತರ ಕಮಾಂಡರ್

ನಂಬಿಗಸ್ತರ ಕಮಾಂಡರ್

ತಾಲಿಬಾನ್ ಮುಖ್ಯಸ್ಥರಾಗಿದ್ದ ಹಿಂದಿನ ಇಬ್ಬರು ನಾಯಕರ ಬಳಿಕ ಅಧಿಕಾರ ವಹಿಸಿಕೊಂಡಿದ್ದೇ ಹೈಬತುಲ್ಲಾ ಅಖುಂಡಜಾದ. ದಕ್ಷಿಣ ಅಫ್ಘಾನ್ ಪಟ್ಟಣದ ಕಂದಹಾರ್‌ ಮೂಲದ ಹೈಬತುಲ್ಲಾ ತಾಲಿಬಾನ್‌ಗೆ ಅತ್ಯುನ್ನತ ನಾಯಕ. 'ಅಮೀರ್ ಅಲ್-ಮು'ಮಿನಿನ್' ಎಂಬ ಬಿರುದು ಈ ಹೈಬತುಲ್ಲಾ ಅಖುಂಡಜಾದಗೆ ಇದೆ. ಇದರ ಅರ್ಥ 'ನಂಬಿಗಸ್ತರ ಕಮಾಂಡರ್' ಅಂತಾ. ಹೈಬತುಲ್ಲಾ ತಾಲಿಬಾನ್ ಪಾಲಿಗೆ ಸುಪ್ರೀಂ ಇದ್ದಂತೆ, ಹೈಬತುಲ್ಲಾ ನಿರ್ಣಯಗಳೇ ಇಲ್ಲಿ ಅಂತಿಮ. ಹಾಗೇ ತಾಲಿಬಾನ್‌ನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ 'ರಹಬರಿ' ಅಧ್ಯಕ್ಷತೆ ವಹಿಸುವುದು ಕೂಡ ಇದೇ ಹೈಬತುಲ್ಲಾ. ತಾಲಿಬಾನ್‌ ಪಡೆಗೆ ಮೊದಲ ಅಮೀರ್ ಆಗಿದ್ದ ಮುಲ್ಲಾ ಮುಹಮ್ಮದ್ ಒಮರ್, ಮನ್ಸೂರ್ ಬಳಿಕ ಹೈಬತುಲ್ಲಾ ಅಖುಂಡಜಾದ ಈ ಸ್ಥಾನ ಅಲಂಕರಿಸಿದ್ದಾನೆ.

3ನೇ ಉಪನಾಯಕನ ಪಟ್ಟ

3ನೇ ಉಪನಾಯಕನ ಪಟ್ಟ

ಘನಿ ಬರದಾರ್, ತಾಲಿಬಾನ್‌ ರಾಜಕೀಯ ವಿಭಾಗದ ಮುಖ್ಯಸ್ಥ. ಗುಂಪಿನ ಪ್ರಮುಖ ಸಮಾಲೋಚಕನಾಗಿ 3ನೇ ಉಪನಾಯಕನ ಪಟ್ಟ ಅಲಂಕರಿಸಿದ್ದಾನೆ ಬರದಾರ್. ತಾಲಿಬಾನ್ ಮತ್ತೆ ಅಧಿಕಾರ ಪಡೆಯುತ್ತಿದ್ದಂತೆ ಬರದಾರ್ ಸುದ್ದಿಗೋಷ್ಠಿ ನಡೆಸಿ ಅಫ್ಘಾನ್‌ನಲ್ಲಿ ಜಾರಿಯಾಗಲಿರುವ ಸರ್ಕಾರದ ಮಾದರಿಯನ್ನ ಸ್ಪಷ್ಟಪಡಿಸಿದ್ದ. ಹಾಗೇ ಹೊಸ ಸರ್ಕಾರ ನಾಗರಿಕರ ರಕ್ಷಣೆಗೆ ಬದ್ಧ ಎಂಬುದನ್ನೂ ಬರದಾರ್ ತಿಳಿಸಿದ್ದು, ತಾಲಿಬಾನ್ 'ಮುಕ್ತ ಇಸ್ಲಾಮಿಕ್ ಸರ್ಕಾರ' ರಚಿಸುವುದಾಗಿ ಬರದಾರ್ ಮಾಹಿತಿ ನೀಡಿದ್ದ. ಮುಂದೆ ತಾಲಿಬಾನ್ ಸರ್ಕಾರದಲ್ಲಿ ಮುಲ್ಲಾ ಅಬ್ದುಲ್ ಘನಿ ಬರದಾರ್ ಬಹುಮುಖ್ಯ ಪಾತ್ರ ವಹಿಸುವುದು ಗ್ಯಾರಂಟಿ.

ಬಿಹುಲ್ಲಾ ಮುಜಾಹಿದ್ ಪ್ರಮುಖ ಪಾತ್ರ

ಬಿಹುಲ್ಲಾ ಮುಜಾಹಿದ್ ಪ್ರಮುಖ ಪಾತ್ರ

ಜಗತ್ತಿಗೆ ತಾಲಿಬಾನ್ ಸಂದೇಶ ಸಾಗಿಸುವಲ್ಲಿ ಜಬಿಹುಲ್ಲಾ ಮುಜಾಹಿದ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಆದರೆ ಈವರೆಗೂ ಜಬಿಹುಲ್ಲಾ ಮುಜಾಹಿದ್ ಸಾರ್ವಜನಿಕವಾಗಿ ಮುಖ ತೋರಿಸಿರಲಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿ. ಈತನ ಬಗ್ಗೆ ಹೆಚ್ಚಿನ ಮಾಹಿತಿಗಳು ಕೂಡ ಈವರೆಗೆ ಹೊರಬಿದ್ದಿರಲಿಲ್ಲ. ಏಕೆಂದರೆ 20 ವರ್ಷಗಳಿಂದ ಮಾಧ್ಯಮಗಳ ಜೊತೆ ಕೇವಲ ಫೋನ್ ಅಥವಾ ಆಡಿಯೋ ಸಂಭಾಷಣೆಯಲ್ಲೇ ಸಂಪರ್ಕದಲ್ಲಿ ಇರುತ್ತಿದ್ದ ಜಬಿಹುಲ್ಲಾ ಮುಜಾಹಿದ್. ಆದ್ರೆ ಮೊನ್ನೆ ಮೊನ್ನೆ ತಾಲಿಬಾನ್‌ನಿಂದ ಹತ್ಯೆಗೀಡಾದ ಅಫ್ಘಾನಿಸ್ತಾನದ ಮಾಧ್ಯಮ ಮತ್ತು ಮಾಹಿತಿ ಕೇಂದ್ರದ ನಿರ್ದೇಶಕರ ಕುರ್ಚಿ ಮೇಲೆ ಕುಳಿತು, ಕಾಬೂಲ್‌ನಲ್ಲಿ ತಾಲಿಬಾನ್‌ನ ಮೊದಲ ಸುದ್ದಿಗೋಷ್ಠಿ ನಡೆಸಿದ್ದು ಇದೇ ಜಬಿಹುಲ್ಲಾ ಮುಜಾಹಿದ್..!

ಅತಿಹೆಚ್ಚು ಟಾರ್ಗೆಟ್ ಆಗಿದ್ದವನೇ ಸಿರಾಜುದ್ದೀನ್ ಹಕ್ಕಾನಿ

ಅತಿಹೆಚ್ಚು ಟಾರ್ಗೆಟ್ ಆಗಿದ್ದವನೇ ಸಿರಾಜುದ್ದೀನ್ ಹಕ್ಕಾನಿ

ತಾಲಿಬಾನ್‌ ನಾಯಕರ ಪೈಕಿ ಅತಿಹೆಚ್ಚು ಟಾರ್ಗೆಟ್ ಆಗಿದ್ದವನೇ ಸಿರಾಜುದ್ದೀನ್ ಹಕ್ಕಾನಿ. ಅಮೆರಿಕ ಈತನ ತಲೆಗೆ ಬರೋಬ್ಬರಿ 40 ಕೋಟಿ ರೂಪಾಯಿ ಬೆಲೆ ಕಟ್ಟಿತ್ತು..! ಅಷ್ಟೇ ಅಲ್ಲದೆ ಹಕ್ಕಾನಿ ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತು. ಹಕ್ಕಾನಿ ಬಂಧನಕ್ಕೆ ಮಾಹಿತಿ ನೀಡಿದ್ರೆ 40 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು ಅಮೆರಿಕ. ಬಂಡಾಯ ನಡೆಸುವ ಉಸ್ತುವಾರಿ ಹೊತ್ತಿರುವ ಹಕ್ಕಾನಿ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಹೋರಾಟದ ಬೆನ್ನೆಲುಬು. ಈತನ ನಟೋರಿಯಸ್ ನೆಟ್‌ವರ್ಕ್‌ಗೆ ಖುದ್ದು ಅಮೆರಿಕ ಕೂಡ ಬೆಚ್ಚಿತ್ತು. ಸಿರಾಜುದ್ದೀನ್ ಹಕ್ಕಾನಿ ತನ್ನ ತಂದೆಯಿಂದ ಇಷ್ಟು ಲಿಂಕ್ ಬೆಳಿಸಿಕೊಂಡು ತಾಲಿಬಾನ್‌ಗೆ ನೆರವಾಗಿದ್ದಾನೆ. ಅಲ್-ಖೈದಾ ಜೊತೆ ಬಲವಾದ ಸಂಪರ್ಕ ಹೊಂದಿದ್ದಾನೆ ಹಕ್ಕಾನಿ.

ತಾಲಿಬಾನ್‌ಗೆ ಅಬ್ದುಲ್ ಹಕೀಂ ಹಕ್ಕಾನಿ ಕೂಡ ನೆರವು

ತಾಲಿಬಾನ್‌ಗೆ ಅಬ್ದುಲ್ ಹಕೀಂ ಹಕ್ಕಾನಿ ಕೂಡ ನೆರವು

ಇನ್ನೊಂದು ಕಡೆ ತಾಲಿಬಾನ್‌ಗೆ ಅಬ್ದುಲ್ ಹಕೀಂ ಹಕ್ಕಾನಿ ಕೂಡ ನೆರವಾಗುತ್ತಾ ಬಂದಿದ್ದಾನೆ. ಈ ಅಬ್ದುಲ್ ಹಕೀಂ ಹಕ್ಕಾನಿ ತಾಲಿಬಾನ್‌ ಸಮಾಲೋಚನಾ ತಂಡದ ಮುಖ್ಯಸ್ಥ. ಈತನೇ ಅಖುಂಡಜಾದಗೆ ವಿಶ್ವಾಸಾರ್ಹ ಸಹಾಯಕ. ಹಕ್ಕಾನಿ 2001 ರಿಂದ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಮದರಸಾ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 2020 ರಲ್ಲಿ ಅಫ್ಘಾನ್ ಮಾತುಕತೆಗೆ ಮುಖ್ಯ ಸಮಾಲೋಚಕನಾಗಿ ನೇಮಿಸಲಾಯಿತು. ಧಾರ್ಮಿಕ ವಿದ್ವಾಂಸರ ಹಿರಿಯ ಮಂಡಳಿಯನ್ನೂ ಮುನ್ನಡೆಸಿರುವ ಅನುಭವ ಈ ಅಬ್ದುಲ್ ಹಕೀಂ ಹಕ್ಕಾನಿಗೆ ಇದೆ.

ತಾಲಿಬಾನ್‌ನಲ್ಲಿ ಬದಲಾವಣೆಯ ಬಿರುಗಾಳಿ

ತಾಲಿಬಾನ್‌ನಲ್ಲಿ ಬದಲಾವಣೆಯ ಬಿರುಗಾಳಿ

ಈತನನ್ನ ಬಿಟ್ಟು ತಾಲಿಬಾನ್ ಉಳಿಯಲಾರದು, ಏಕೆಂದರೆ ಈತನೇ ಸಂಸ್ಥಾಪಕನ ಮಗ. ಈ ಮೊಹಮ್ಮದ್ ಯಾಕೂಬ್ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಮಗ. ಈ ಹಿಂದೆ ತಾಲಿಬಾನ್‌ನಲ್ಲಿ ಬದಲಾವಣೆಯ ಬಿರುಗಾಳಿ ಎದ್ದಾಗ, ತಾಲಿಬಾನ್ ಮುಖ್ಯಸ್ಥನ ಹುದ್ದೆಗೆ ಸ್ಪರ್ಧೆಯಲ್ಲಿದ್ದ. ಉತ್ತಮ ಶಿಕ್ಷಣ ಯಾಕೂಬ್‌ಗೆ ಪ್ಲಸ್ ಪಾಯಿಂಟ್. ಹಾಗೇ ಭವಿಷ್ಯದಲ್ಲಿ ತಾಲಿಬಾನ್‌ನಲ್ಲಿ ಮುಖ್ಯಸ್ಥನ ಪಟ್ಟವನ್ನ ಈತ ಪಡೆಯಬಹುದು ಎನ್ನುತ್ತಿವೆ ಮೂಲಗಳು. ಮೊಹಮ್ಮದ್ ಯಾಕೂಬ್ ಮುಲ್ಲಾ ಒಮರ್ ಮಗನಾಗಿರುವ ಹಿನ್ನೆಲೆಯಲ್ಲಿ ತಾಲಿಬಾನ್‌ನಲ್ಲಿ ಈತನಿಗೆ ಉತ್ತಮ ಸ್ಥಾನಮಾನವಿದೆ. ತಾಲಿಬಾನ್ ಸರ್ಕಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.

ತಾಲಿಬಾನ್ ಸರ್ಕಾರಕ್ಕೆ ಕಾನೂನು ಬದ್ಧ ಮಾನ್ಯತೆ

ತಾಲಿಬಾನ್ ಸರ್ಕಾರಕ್ಕೆ ಕಾನೂನು ಬದ್ಧ ಮಾನ್ಯತೆ

ತಾಲಿಬಾನ್ ಇತಿಹಾಸದಲ್ಲಿ ಈ ಹೆಸರನ್ನು ಮರೆಯುವವರೆ ಇಲ್ಲ. ಏಕೆಂದರೆ 1996ರಲ್ಲಿ ತಾಲಿಬಾನ್‌ ಪರ ಅಮೆರಿಕಗೆ ತೆರಳಿ, ತಾಲಿಬಾನ್ ಸರ್ಕಾರಕ್ಕೆ ಕಾನೂನು ಬದ್ಧ ಮಾನ್ಯತೆ ನೀಡಲು ಮನವಿ ಮಾಡಿದ್ದು ಇದೇ ಹಸಿಬುಲ್ಲಾ ಸ್ಟಾನಿಕ್ ಜಾಯ್. ತಾಲಿಬಾನ್‌ನ ಲೋಗರ್ ಪ್ರಾಂತೀಯ ಮಂಡಳಿ ಮುಖ್ಯಸ್ಥನೂ ಆಗಿರುವ ಹಸಿಬುಲ್ಲಾ ಸ್ಟಾನಿಕ್ ಜಾಯ್, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿದ್ದಾನೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಹಸಿಬುಲ್ಲಾ ಸ್ಟಾನಿಕ್ ಜಾಯ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್‌ನ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾನೆ. ಹಾಗೇ ಅಫ್ಘಾನ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವಾಗ ಹಸಿಬುಲ್ಲಾ ಸ್ಟಾನಿಕ್ ಜಾಯ್ ತಾಲಿಬಾನ್ ಪರವಾಗಿ ಸಂಧಾನಕಾರನ ಪಾತ್ರ ವಹಿಸಿದ್ದ.

English summary
These 7 leaders will play important role in new Taliban govt in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X