ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: 200 ದಿನಗಳಲ್ಲಿ ವಿಶ್ವದ ಅತಿದೊಡ್ಡ ಕೋವಿಡ್‌ ಲಸಿಕೆ ಅಭಿಯಾನ ಸಾಧಿಸಿದ್ದೇನು?

|
Google Oneindia Kannada News

ನವದೆಹಲಿ, ಆ.05: ವಿಶ್ವದ ಅತೀ ದೊಡ್ಡ ಕೋವಿಡ್‌ ಲಸಿಕೆ ಅಭಿಯಾನವನ್ನು ಮೊದಲು ಆರಂಭಿಸಿದ ಭಾರತವು ತನ್ನ ಕೋವಿಡ್ -19 ಲಸಿಕೆ ಅಭಿಯಾನದ 200 ದಿನಗಳನ್ನು ಆಗಸ್ಟ್ 3 ರಂದು ಪೂರ್ಣಗೊಳಿಸಿದೆ. ಈವರೆಗೆ ಒಟ್ಟು 48,52,86,570 ಡೋಸ್‌ ಲಸಿಕೆಗಳನ್ನು ದೇಶದಲ್ಲಿ ನೀಡಲಾಗಿದೆ. ಈ 200 ದಿನಗಳಲ್ಲಿ, ಸರಾಸರಿ, ಭಾರತವು ಪ್ರತಿದಿನ 24,26,432 ಲಸಿಕೆ ಡೋಸ್‌ಗಳನ್ನು ನೀಡಿದೆ.

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 94 ಕೋಟಿ ವ್ಯಕ್ತಿಗಳಿದ್ದು, ಒಟ್ಟಾರೆ ಜನಸಂಖ್ಯೆ 136 ಕೋಟಿ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅತೀ ದೊಡ್ಡ ಲಸಿಕೆ ಅಭಿಯಾನ ನಡೆಸಿದ್ದರೂ, ಇನ್ನೂರು ದಿನದಲ್ಲಿ 10,71,95,973 ವ್ಯಕ್ತಿಗಳು, ಅಂದರೆ, ವಯಸ್ಕ ಜನಸಂಖ್ಯೆಯ 11.40% ಮತ್ತು ಭಾರತದ ಒಟ್ಟು ಜನಸಂಖ್ಯೆಯ 7.87% ಜನರಿಗೆ ಮಾತ್ರ ಕೋವಿಡ್‌ ಲಸಿಕೆ ಹಾಕಲಾಗಿದೆ.

ಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನ

ಭಾರತವು ಪ್ರಸ್ತುತ ಮೂರು ಕೋವಿಡ್ ಲಸಿಕೆಗಳನ್ನು ಬಳಸುತ್ತಿದೆ. ಭಾರತದಲ್ಲಿ ತಯಾರಿಸಿದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್, ಮತ್ತು ರಷ್ಯಾದಿಂದ ಆಮದು ಮಾಡಿದ ಸ್ಪುಟ್ನಿಕ್ ವಿ. ದೇಶದಲ್ಲಿ ಶೇ. 90 ಕ್ಕಿಂತ ಹೆಚ್ಚು ಕೋವಿಡ್‌ ಲಸಿಕೆ ಪಡೆಯುವವರು ಕೊವಿಶೀಲ್ಡ್ ಪಡೆದಿದ್ದಾರೆ. ಒಂದೇ ಲಸಿಕೆಯ ಎರಡು ಶಾಟ್‌ಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಒಟ್ಟಾರೆ ಸರಾಸರಿ 24 ಲಕ್ಷ ಡೋಸೇಜ್‌ಗಳ ವ್ಯಾಕ್ಸಿನೇಷನ್ ದರವನ್ನು ಹೊಂದಿದ್ದರೂ, ಕೋವಿಡ್‌ ಲಸಿಕೆ ನೀಡಿಕೆ ವೇಗವು ಜೂನ್ ಮತ್ತು ಜುಲೈ ತಿಂಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ನೀಡಿಕೆಯು ದಿನಕ್ಕೆ 40 ಲಕ್ಷ ದಾಟಿದೆ.

 ಜುಲೈ ಕೋವಿಡ್‌ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ? ಜುಲೈ ಕೋವಿಡ್‌ ಲಸಿಕೆ ಗುರಿ ತಲುಪಿದ ಭಾರತ ಆಗಸ್ಟ್‌ನ 25 ಕೋಟಿ ಗುರಿ ತಪ್ಪುತ್ತಾ?

ಹಾಗಾದರೆ ಭಾರತದಲ್ಲಿ ಕೋವಿಡ್‌ ಲಸಿಕೆ ನೀಡುವಿಕೆಯು ಇಲ್ಲಿಯವರೆಗೆ ಹೇಗೆ ಮುಂದುವರೆದಿದೆ ಎಂಬುದನ್ನು ತಿಂಗಳುವಾರು ವಿಂಗಡನೆಯಲ್ಲಿ ನಾವು ನೋಡೋಣ, ಮುಂದೆ ಓದಿ...

 ಮೊದಲ ಮೂರು ಹಂತಗಳು ಹೇಗಿತ್ತು?

ಮೊದಲ ಮೂರು ಹಂತಗಳು ಹೇಗಿತ್ತು?

ಹಂತ 1 - ಜನವರಿ 2021: ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ತುರ್ತು ಬಳಕೆಯ ಅನುಮೋದನೆಯೊಂದಿಗೆ ಭಾರತ ತನ್ನ ಕೋವಿಡ್‌ ಲಸಿಕೆಅಭಿಯಾನವನ್ನು ಜನವರಿ 16, 2021 ರಂದು ಆರಂಭಿಸಿತು. ಭಾರತ ಸರ್ಕಾರದ (ಜಿಒಐ) ಅಂದಾಜಿನ ಪ್ರಕಾರ, ಕೋವಿಡ್ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿರುವ ಸುಮಾರು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ (ಎಚ್‌ಸಿಡಬ್ಲ್ಯೂ) ಜನವರಿಯಲ್ಲಿ ಮೊದಲ ಹಂತದ ಲಸಿಕೆ ಹಾಕಲಾಗಿದೆ. ಕೋವಿಡ್‌ ವಾರಿಯರ್‌ಗಳಾದ ಅವರು ಆದ್ಯತೆಯ ಪಟ್ಟಿಯಲ್ಲಿ ಮೊದಲಿಗರು. ಈ ಕೋವಿಡ್‌ ಲಸಿಕೆ ಅಭಿಯಾನದ 16 ದಿನಗಳಲ್ಲಿ ಒಟ್ಟು 37,58,843 ಕೋವಿಡ್‌ ಲಸಿಕೆಗಳನ್ನು ನೀಡಲಾಗಿದ್ದು, ದಿನಕ್ಕೆ ಸರಾಸರಿ 2,34,927 ಎಚ್‌ಸಿಡಬ್ಲ್ಯೂ ಲಸಿಕೆ ಹಾಕಲಾಗಿದೆ.

ಹಂತ 1 - ಫೆಬ್ರವರಿ 2021: ಭಾರತ ಸರ್ಕಾರದ ಅಂದಾಜಿನ ಪ್ರಕಾರ, ಸುಮಾರು 2 ಕೋಟಿ ಮುಂಚೂಣಿ ಕಾರ್ಯಕರ್ತರನ್ನು (FLWs) ಫೆಬ್ರವರಿಯಲ್ಲಿ 1 ನೇ ಹಂತದ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಸೇರಿಸಲಾಯಿತು, ಇದು ಫಲಾನುಭವಿಗಳ ಸಂಖ್ಯೆಯನ್ನು 3 ಕೋಟಿಗೆ ಹೆಚ್ಚಿಸಿತು. FLW ಗಳು ಸಮಾಜ, ಉದ್ಯಮ ಮತ್ತು ಆಡಳಿತದ ನಡುವಿನ ಸಂಪರ್ಕದ ಕೊಂಡಿಗಳು ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ಪೊಲೀಸ್ ವ್ಯಕ್ತಿಗಳು, ಪತ್ರಕರ್ತರು, ಚಾಲಕರು ಮತ್ತು ಕೊರಿಯರ್ ಹುಡುಗರನ್ನು ಈ ಮುಂಚೂಣಿ ಕಾರ್ಯಕರ್ತರಲ್ಲಿ ಒಳಗೊಂಡಿರುತ್ತಾರೆ. ಒಟ್ಟು 1,05,42,423 ಡೋಸ್ ಕೋವಿಡ್‌ ಲಸಿಕೆಗಳನ್ನು ಎಚ್‌ಸಿಡಬ್ಲ್ಯೂ ಮತ್ತು ಎಫ್‌ಎಲ್‌ಡಬ್ಲ್ಯೂಗಳಿಗೆ ವಿತರಿಸಿದೆ. ದಿನಕ್ಕೆ ಸರಾಸರಿ 3,76,515 ಡೋಸ್‌ಗಳನ್ನು ನೀಡಲಾಗಿದೆ.

ಹಂತ 2 - ಮಾರ್ಚ್ 2021: ಭಾರತವು ತನ್ನ ಸಾಮೂಹಿಕ ಕೋವಿಡ್‌ ಲಸಿಕೆ ಅಭಿಯಾನವನ್ನು ಮಾರ್ಚ್ 2021 ರಿಂದ ಆರಂಭಿಸಿತು. ಈ ಹಂತದಲ್ಲಿ ಉದ್ದೇಶಿತ ಫಲಾನುಭವಿಗಳ ಮೂಲವು 27 ಕೋಟಿಗಳಷ್ಟಿತ್ತು, ಸರ್ಕಾರದ ಅಂದಾಜಿನ ಪ್ರಕಾರ, ಫಲಾನುಭವಿಗಳ ಸಂಖ್ಯೆಯನ್ನು 30 ಕೋಟಿಗೆ ಏರಿಸಲಾಯಿತು. ಇದರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಜನಸಂಖ್ಯೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಬೇರೆ ರೋಗಗಳನ್ನು ಹೊಂದಿರುವವರು ಒಳಗೊಳ್ಳುತ್ತಾರೆ. 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 13.79 ಕೋಟಿ ಜನರಿದ್ದಾರೆ. ಕೋವಿಡ್‌ ಲಸಿಕೆ ಅಭಿಯಾನದ 2 ನೇ ಹಂತದಲ್ಲಿ 5,08,16,630 ಕೋವಿಡ್‌ ಲಸಿಕೆ ಡೋಸ್‌ಗಳನ್ನು ಅಥವಾ ದಿನಕ್ಕೆ ಸರಾಸರಿ 16,39,246 ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಹಂತ 3 - ಏಪ್ರಿಲ್ 2021: 2011 ರ ಜನಗಣತಿ ಯೋಜನೆಯ ಪ್ರಕಾರ 45 ವರ್ಷಕ್ಕಿಂತ ಮೇಲ್ಪಟ್ಟ 34.51 ಕೋಟಿ ಜನರಿಗೆ ಮೂರನೇ ಹಂತದ ಲಸಿಕೆಯನ್ನು ಏಪ್ರಿಲ್ 1 ರಂದು ತೆರೆಯಲಾಯಿತು. ಆ ತಿಂಗಳ ಅಭಿಯಾನದಲ್ಲಿ 8,98,71,739 ಕೋವಿಡ್‌ ಲಸಿಕೆ ಡೋಸ್‌ಗಳನ್ನು ಅಥವಾ ದಿನಕ್ಕೆ 29,95,724 ಕೋವಿಡ್‌ ಡೋಸ್‌ಗಳನ್ನು ನೀಡಲಾಗಿದೆ. ಏಪ್ರಿಲ್‌ನಲ್ಲಿ 45,882 ಕೋವಿಡ್ ಸಾವುಗಳೊಂದಿಗೆ ಮಾರಕವಾದ ಎರಡನೇ ಕೋವಿಡ್ ಅಲೆಯನ್ನು ಭಾರತವು ಎದುರಿಸಿತು. ಭಾರತದಲ್ಲಿ ಕೋವಿಡ್‌ನಿಂದ ವರದಿಯಾದ ಸಾವುಗಳ ಸಂಖ್ಯೆಯು 200,000 ಗಡಿ ದಾಟಿತು. ಏಪ್ರಿಲ್‌ನಲ್ಲಿ ಭಾರತವು 66 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ, ಈ ಮೂಲಕ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 1.9 ಕೋಟಿಗೆ ಏರಿದೆ. ದೇಶವು ಜಾಗತಿಕವಾಗಿ ಅತ್ಯಧಿಕ ದೈನಂದಿನ ಪ್ರಕರಣಗಳಿಗೆ ಸಾಕ್ಷಿಯಾಗಿದೆ, ಇದು ಮೇ ತಿಂಗಳಲ್ಲಿ ಇನ್ನಷ್ಟು ಅಧಿಕವಾಯಿತು.

 ಕೋವಿಡ್‌ ಲಸಿಕೆ ನೀತಿಯಲ್ಲಿ ಉದಾರೀಕರಣ

ಕೋವಿಡ್‌ ಲಸಿಕೆ ನೀತಿಯಲ್ಲಿ ಉದಾರೀಕರಣ

3 ನೇ ಹಂತದವರೆಗೆ ಕೋವಿಡ್‌ ಲಸಿಕೆ ನೀಡುವಿಕೆ ಪ್ರಕ್ರಿಯೆಯ್ನು ಕೇಂದ್ರ ಸರ್ಕಾರ ನಡೆಸಿತು. ಆದರೆ ಮೇ ತಿಂಗಳಿನಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ಅನೇಕ ರಾಜ್ಯ ಸರ್ಕಾರಗಳ ಬೇಡಿಕೆಯಂತೆ, ಈ ಕೋವಿಡ್‌ ಲಸಿಕೆ ವಿಕೇಂದ್ರೀಕರಿಸಲು ಉದಾರೀಕೃತ ಲಸಿಕೆ ನೀತಿಯನ್ನು ಪರಿಚಯಿಸಿತು. ಕೋವಿಡ್ ಪ್ರಕರಣಗಳು ಮತ್ತು ಸಾವುನೋವುಗಳು ಹೆಚ್ಚಾಗುತ್ತಿದ್ದಂತೆ, ಕೋವಿಡ್‌ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಹಾಕಲು ಹೆಚ್ಚು ಜನರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ಕಂಡವು, ಇದರ ಪರಿಣಾಮವಾಗಿ ಲಸಿಕೆಗಳ ಕೊರತೆಯುಂಟಾಯಿತು, ಅನೇಕ ರಾಜ್ಯಗಳು ಇದರ ಬಗ್ಗೆ ದೂರುಗಳನ್ನು ನೀಡಲು ಆರಂಭಿಸಿತು. ಹಾಗೆಯೇ ಅನೇಕ ತಜ್ಞರು ಭಾರತ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ವಿಶ್ವದ ಅತೀ ದೊಡ್ಡ ಲಸಿಕೆ ಅಭಿಯಾನಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದರು. ಕೋವಿಡ್ ಲಸಿಕೆಗಳ ಕೊರತೆ ನೀಗಿಸಲು ವಿದೇಶದಿಂದ ಆಮದು ಮಾಡಿಕೊಳ್ಳುವಂತೆ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿತು. ಅನೇಕರು, ಇತರ ಅನೇಕ ರಾಜಕೀಯ ನಾಯಕರೊಂದಿಗೆ ಕೋವಿಡ್‌ ಲಸಿಕೆ ಅಭಿಯಾನ ಎಲ್ಲರಿಗೂ ಮುಕ್ತವಾಗಿರಬೇಕು ಎಂದು ಆಗ್ರಹಿಸಿದರು. ಆ ಬಳಿಕ ಕೋವಿಡ್‌ ಲಸಿಕೆ ಡ್ರೈವ್ ಅನ್ನು ಎಲ್ಲಾ ವಯಸ್ಕರಿಗೆ ತೆರೆದಿರುವ ಕಾರ್ಯಾಚರಣೆಯ ಮಿಶ್ರ ವಿಧಾನವಾಗಿ ಮಾಡಲಾಗಿದೆ. ಎಚ್‌ಸಿಡಬ್ಲ್ಯೂ, ಎಫ್‌ಎಲ್‌ಡಬ್ಲ್ಯೂ ಮತ್ತು 45+ ಜನಸಂಖ್ಯೆಗೆ ಉಚಿತ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿತು. ಆದರೆ ಆರಂಭದಲ್ಲಿ ಕೋವಿಡ್‌ ಲಸಿಕೆ ಅಭಿಯಾನದ ಜವಾಬ್ದಾರಿಯ್ನು ತಾನು ಹೊತ್ತಿದ ಕೇಂದ್ರ ಸರ್ಕಾರ ಬಳಿಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳು 18 ರಿಂದ 44 ವರ್ಷದೊಳಗಿನ ಜನಸಂಖ್ಯೆಗೆ ಲಸಿಕೆ ಹಾಕುವ ಜವಾಬ್ದಾರಿಯನ್ನು ನೀಡುವ ಮೂಲಕ ಭಾರೀ ಕೋವಿಡ್‌ ಲಸಿಕೆ ಕೊರತೆ ಕಾಣಿಸಿಕೊಂಡಿತು.

ಹಂತ 4 - ಮೇ 2021: ಎರಡನೇ ಕೋವಿಡ್‌ ಅಲೆಯ ಏರಿಕೆ ಚಿಂತಾಜನಕವಾಗಿರುವಾಗ, ದೇಶದ ಎಲ್ಲ ವಯಸ್ಕರಿಗೆ ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆ, ಅಂದರೆ 94 ಕೋಟಿ ಜನರಿಗೆ ಕೋವಿಡ್‌ ಲಸಿಕೆ ಅಭಿಯಾನವನ್ನು ಆರಂಭ ಮಾಡಲಾಯಿತು. ಮೇ ತಿಂಗಳಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ತಿಂಗಳು ಎರಡನೇ ಕೋವಿಡ್ ಅಲೆಯ ಉತ್ತುಂಗವನ್ನು ಭಾರತ ಕಂಡಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಲಸಿಕೆ ನೀತಿಯು ದೇಶಕ್ಕೆ ಭಾರೀ ಗೊಂದಲವನ್ನು ಉಂಟು ಮಾಡಿತು. ರಾಜ್ಯ ಸರ್ಕಾರಗಳಿಗೆ ಸರಿಯಾದ ಸಮಯಕ್ಕೆ ಹಾಗೂ ಅಗತ್ಯವಿದ್ದಷ್ಟು ಕೋವಿಡ್‌ ಲಸಿಕೆಯು ದೊರೆಯದೆ ಭಾರೀ ಸಂಕಷ್ಟ ಉಂಟಾಯಿತು.

ಏಪ್ರಿಲ್ 1 ರಂದು 80,000 ಪ್ರಕರಣಗಳಿಂದ, ಭಾರತವು ಮೇ 6 ರಂದು 4.14 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳ ಅತಿಹೆಚ್ಚು ಏಕದಿನ ಜಾಗತಿಕ ದಾಖಲೆಯನ್ನು ಮುಟ್ಟಿತು. ಸಕ್ರಿಯ ಕೋವಿಡ್‌ ಪ್ರಕರಣಗಳ ಹೊರೆ 37 ಲಕ್ಷಕ್ಕಿಂತ ಹೆಚ್ಚಾಯಿತು. ಇದರೊಂದಿಗೆ ಚೇತರಿಕೆಯ ದರದಲ್ಲಿ ತೀವ್ರ ಕುಸಿತ ಕಂಡು ಬಂದಿತು. ಅಂದರೆ ಸುಮಾರು 97% ರಿಂದ 80% ಕ್ಕಿಂತ ಕಡಿಮೆ ಚೇತರಿಕೆ ದರವಿತ್ತು. ಸಾವಿನ ಪ್ರಮಾಣವು ಅನೇಕ ದಿನಗಳಲ್ಲಿ 3,000-4,000 ಸಾವುನೋವುಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಹೆಚ್ಚಾಗಿತ್ತು. ಇದು ಜೂನ್ 9 ರಂದು ಅತಿ ಹೆಚ್ಚು 6,148 ಸಾವುಗಳನ್ನು ದಾಟಿದೆ, ಅಂದರೆ ಇಡೀ ತಿಂಗಳಲ್ಲಿ 1,20,770 ಕೋವಿಡ್ ಸಾವುನೋವುಗಳನ್ನು ಸಂಭವಿಸಿತು. ಭಾರತದಲ್ಲಿ ಆಕ್ಸಿಜನ್‌ ಕೊರತೆ, ಬೆಡ್‌ ಕೊರತೆ, ವೆಂಟಿಲೇಟರ್‌ ಕೊರತೆಗಳು ಉತ್ತುಂಗಕ್ಕೆ ಏರಿ, ಸಾವು ನೋವುಗಳಿಗೆ ಕಾರಣವಾಯಿತು.

 'ಅಲೆಮಾರಿಗಳು, ನಿರ್ಗತಿಕರಿಗೆ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಿ': ರಾಜ್ಯಗಳಿಗೆ ಕೇಂದ್ರ ಸೂಚನೆ 'ಅಲೆಮಾರಿಗಳು, ನಿರ್ಗತಿಕರಿಗೆ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಿ': ರಾಜ್ಯಗಳಿಗೆ ಕೇಂದ್ರ ಸೂಚನೆ

 ದೇಶದಲ್ಲಿ ಕಳವಳ ಮೂಡಿಸಿದ ಕೋವಿಡ್‌ ಲಸಿಕೆ ಕೊರತೆ

ದೇಶದಲ್ಲಿ ಕಳವಳ ಮೂಡಿಸಿದ ಕೋವಿಡ್‌ ಲಸಿಕೆ ಕೊರತೆ


ಏಪ್ರಿಲ್‌ನಿಂದ ಮೇ ವರೆಗೆ ಉದ್ದೇಶಿತ ಜನಸಂಖ್ಯೆ 2.7 ಪಟ್ಟು ಹೆಚ್ಚಾಗಿತ್ತು, ಆದರೆ ದೇಶದಲ್ಲಿ ಲಭ್ಯವಿರುವ ಲಸಿಕೆ ಉತ್ಪಾದನಾ ಸಾಮರ್ಥ್ಯವು ಅದೇ ಆಗಿತ್ತು. ತಿಂಗಳಿಗೆ ಸುಮಾರು 7.5 ಕೋಟಿ ಡೋಸ್‌ಗಳು ಲಸಿಕೆ ಉತ್ಪಾದಣೆಯಾಗುತ್ತಿತ್ತು. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಒದಗಿಸುವ ಲಸಿಕೆಯು ಕುಸಿತ ಕಂಡಿತು. ಕೋವಿಡ್‌ ಲಸಿಕೆಗಳ ಲಭ್ಯತೆಯ ಕೊರತೆಯಿಂದಾಗಿ ಭಾರತದ ನಾಗರಿಕರಿಗೆ ಲಸಿಕೆ ಹಾಕುವ ವೇಗವು ಮೇ ತಿಂಗಳಲ್ಲಿ ಕುಸಿಯಿತು. ತಿಂಗಳಲ್ಲಿ ಕೇವಲ 6,10,57,003 ಡೋಸ್‌ಗಳನ್ನು ನೀಡಲಾಗಿದ್ದು ಅದು ದಿನಕ್ಕೆ ಸರಾಸರಿ 20.35 ಲಕ್ಷ ಡೋಸ್‌ಗಳಿಗೆ ಬರುತ್ತದೆ, ಇದು ಏಪ್ರಿಲ್‌ನಿಂದ ಶೇ. 32 ದಷ್ಟು ಕುಸಿತವಾಗಿದೆ. ಕೋವಿಡ್‌ ಲಸಿಕೆ ಕೊರತೆಯು ದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ಉತ್ಪಾದಕರಿಂದ ಕೋವಿಡ್‌ ಲಸಿಕೆ ಪ್ರಮಾಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ಆದೇಶಗಳಿಂದಾಗಿ ಕೋವಿಡ್‌ ಲಸಿಕೆ ಪಡೆಯುವುದು ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌ ಲಸಿಕೆಗಳು ಲಭಿಸುತ್ತಿದ್ದವು. ರಾಜ್ಯ ಸರ್ಕಾರಗಳು ಮೇ ಹದಿನೈದು ದಿನಗಳ ನಂತರ ನೇರ ಲಸಿಕೆ ಪೂರೈಕೆಯನ್ನು ಪಡೆಯಲು ಪ್ರಾರಂಭಿಸಿದರು. ಹಲವಾರು ಜಾಗತಿಕ ಟೆಂಡರ್‌ಗಳನ್ನು ಕರೆಯಲು ಪ್ರಯತ್ನಿಸಿದರು, ಆದರೆ ಫೈಝರ್‌ ಮತ್ತು ಮಾಡರ್ನಾದಂತಹ ಅಂತರಾಷ್ಟ್ರೀಯ ತಯಾರಕರು ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿದರು. ಇದರಿಂದಾಗಿ ರಾಜ್ಯ ಸಕಾರಗಳಿಗೆ ಕೋವಿಡ್‌ ಲಸಿಕೆ ಸಿಗದಂತಾಯಿತು. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿದರೆ ಲಭಿಸುತ್ತಿರುವ ಲಸಿಕೆಯು ಭಾರತ ಸರ್ಕಾರದ ಲಸಿಕೆ ಅಭಿಯಾನದಲ್ಲಿ ಅಸಮಾನತೆಯನ್ನು ಎತ್ತಿ ತೋರಿಸಿತು.

ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಸಿಕೆಗಳ ಬೆಲೆಯಲ್ಲಿನ ವ್ಯತ್ಯಾಸ, ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಭಾರತದಲ್ಲಿ ಲಸಿಕೆಗಳ ಹಿಂಜರಿಕೆ, ಸರ್ಕಾರದ ಕೋ-ವಿನ್ ಪೋರ್ಟಲ್ ಇಂಗ್ಲಿಷ್ ನಲ್ಲಿ ಮಾತ್ರ ಲಭ್ಯವಿರುವ ಸಮಸ್ಯೆ ಮತ್ತು ಡಿಜಿಟಲ್ ವಿಭಜನೆ ನಗರ, ಸಣ್ಣ ಪಟ್ಟಣ ಮತ್ತು ಗ್ರಾಮೀಣ ಭಾರತ, ಮತ್ತು ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಲಸಿಕೆ ವ್ಯರ್ಥ ದರ ಇವೆಲ್ಲವೂ ಭಾರೀ ಸಮಸ್ಯೆಯಾಯಿತು. ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಸರ್ಕಾರಗಳು ವಾಗ್ದಾಳಿ ನಡೆಸಲು ಆರಂಭಿಸಿತು. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಹೇಳಿತು. ಹಾಗೆಯೇ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಈ ಕೋವಿಡ್‌ ಲಸಿಕೆ ಅಭಿಯಾನವು ಕೇಂದ್ರ ಮಟ್ಟದಲ್ಲಿ ನಡೆಯಬೇಕು ಎಂದು ಒತ್ತಾಯಿಸಿತು. ಹಾಗೆಯೇ ಹಲವಾರು ವಿದೇಶಗಳು ಕೂಡಾ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ಕೋವಿಡ್‌ ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರವೇ ನಡೆಸಲು ಸಲಹೆ ನೀಡಿತು. ರಾಜ್ಯ ಸರ್ಕಾರಗಳ ಈ ಆಗ್ರಹದ ಬೆನ್ನಲ್ಲೇ, ಕೇಂದ್ರಕ್ಕೆ ಹಿಂದಿರುಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ, ಬಳಿಕ ಕೋವಿಡ್‌ ಲಸಿಕೆ ಚಾಲನೆಯನ್ನು ಮತ್ತೊಮ್ಮೆ ತನ್ನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡಿತು.

ಹಂತ 5 - ಜೂನ್ 2021: ಲಸಿಕೆ ಅಭಿಯಾನವನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಲಾಯಿತು, ಜೂನ್ 21 ರಿಂದ 86 ಲಕ್ಷ ಲಸಿಕೆ ನೀಡಿಕೆಗೆ ಭಾರತ ಸಾಕ್ಷಿಯಾಯಿತು. ಮುಂದಿನ 21 ದಿನಗಳು, ಜೂನ್ 21 ರಿಂದ ಜೂನ್ 30 ರವರೆಗೆ ಪ್ರತಿದಿನ ಸರಾಸರಿ 52,55,937 ಕೋವಿಡ್‌ ಡೋಸ್‌ಗಳನ್ನು ನೀಡಲಾಗುತ್ತಿದೆ. ಅಂದರೆ ಜೂನ್ ತಿಂಗಳಲ್ಲಿ ನೀಡಲಾದ ಒಟ್ಟು ಡೋಸ್‌ಗಳ 44% ಅಥವಾ 5,25,59,373 ಕೋವಿಡ್ ಲಸಿಕೆ ಪ್ರಮಾಣವನ್ನು ಕೇವಲ 10 ದಿನಗಳಲ್ಲಿ ಮಾಡಲಾಯಿತು. ಒಟ್ಟು 11,96,69,381 ಕೋವಿಡ್ ಲಸಿಕೆ ಡೋಸ್‌ಗಳು, ಸರಾಸರಿ, ದಿನಕ್ಕೆ 39,88,979 ಡೋಸ್‌ಗಳನ್ನು ಜೂನ್‌ನಲ್ಲಿ ನೀಡಲಾಯಿತು. ಇದು ಮೇ ತಿಂಗಳಲ್ಲಿ 96% ನಷ್ಟು ದೊಡ್ಡ ಜಿಗಿತವಾಗಿದೆ. ಜೂನ್ ತಿಂಗಳಲ್ಲಿ ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗವು ಕಡಿಮೆಯಾಗುತ್ತಿದೆ.

ಹಂತ 7-ಜುಲೈ 2021: ಜುಲೈನಲ್ಲಿ ಆರ್-ಮೌಲ್ಯದಂತಹ ಪ್ರಮುಖ ನಿಯತಾಂಕಗಳು ಕಳೆದ 15 ದಿನಗಳಲ್ಲಿ ಮತ್ತೆ ಏರಿಕೆಯಾಯಿತು ಮತ್ತು ಮೂರನೇ ಕೋವಿಡ್ ಅಲೆಯು ಆಗಸ್ಟ್ ತಿಂಗಳಲ್ಲಿ ಶೀಘ್ರದಲ್ಲೇ ಭಾರತಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ. ಒಟ್ಟು 13,45,82,577 ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ದಿನಕ್ಕೆ ಸರಾಸರಿ 43,41,373 ಡೋಸ್‌ಗಳನ್ನು ನೀಡಲಾಗುತ್ತಿದೆ. ಇದು ಜೂನ್ ನಲ್ಲಿ ಲಸಿಕೆಯ ವೇಗಕ್ಕಿಂತ 12.5% ​​ಹೆಚ್ಚಳವಾಗಿದೆ. ಚೀನಾ ಮತ್ತು ಯುಎಸ್ ನಂತರ ಭಾರತವು ಜುಲೈನಲ್ಲಿ ಸಂಪೂರ್ಣ ಲಸಿಕೆ ಹಾಕಿದ ನಾಗರೀಕರ 10 ಕೋಟಿ ಗಡಿ ದಾಟಿದ ಮೂರನೇ ರಾಷ್ಟ್ರವಾಯಿತು.

 ಕೋವಿಡ್‌ ಲಸಿಕೆ: ಭಾರತದ ಮುಂದಿನ ಗುರಿಯೇನು?

ಕೋವಿಡ್‌ ಲಸಿಕೆ: ಭಾರತದ ಮುಂದಿನ ಗುರಿಯೇನು?

ಸಕ್ರಿಯ ಕೋವಿಡ್‌ ಪ್ರಕರಣಗಳ ಹೊರೆಯು ಜುಲೈನಲ್ಲಿ ಗಮನಾರ್ಹ ಇಳಿಕೆ ಕಂಡಿತು. ಸಕ್ರಿಯ ಕೋವಿಡ್‌ ಪ್ರಕರಣಗಳ ಹೊರೆಯು ವಾಸ್ತವವಾಗಿ, ಕಳೆದ ವಾರದಲ್ಲಿ ಪ್ರತಿದಿನ ಹೆಚ್ಚಾಗುತ್ತಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗಲು ಆರ್-ಮೌಲ್ಯವು 1 ಕ್ಕಿಂತ ಕಡಿಮೆ ಇರಬೇಕು. ಆದರೆ ಅದು ಈಗಾಗಲೇ ಆ ಮಟ್ಟವನ್ನು ದಾಟಿದೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್, ಚೆನ್ನೈ, ಜುಲೈ 27 ರಂದು ಭಾರತದ ಆರ್-ಮೌಲ್ಯ 1 ರ ಗಡಿಯನ್ನು ದಾಟಿದೆ ಎಂದು ಅಂದಾಜಿಸಿದೆ. ಇದು ಮೂರನೇ ಕೋವಿಡ್ ಅಲೆಯು ಭಾರತವನ್ನು ಶೀಘ್ರದಲ್ಲೇ ಅಪ್ಪಳಿಸಲಿದೆ ಎಂಬುವುದರ ಸೂಚನೆ ಎನ್ನಲಾಗಿದೆ. ಹಾಗೆಯೇ ಈ ತಿಂಗಳಲ್ಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹಾಗೂ ಇತರ ಆರೋಗ್ಯ ತಜ್ಞರು ಮೂರನೇ ಕೋವಿಡ್ ಅಲೆಯು ಭಾರತವನ್ನು ಶೀಘ್ರದಲ್ಲೇ ಅಪ್ಪಳಿಸಲಿದೆ ಎಂದು ತಿಳಿಸಿದ್ದಾರೆ. ಇಂತಹ ��ಮಯದಲ್ಲಿ, ಕೋವಿಡ್‌ಗೆ ಬೇರೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲದೆಯೇ ರಕ್ಷಣೆಯಾಗಿ ಲಭ್ಯವಿರುವ ಏಕೈಕ ಆಯ್ಕೆಯೆಂದರೆ ಲಸಿಕೆ ಎಂದು ಕೂಡಾ ತಜ್ಞರು ಹೇಳಿದ್ದಾರೆ. ಆದರೆ ಕೋವಿಡ್‌ ಡೆಲ್ಟಾ ರೂಪಾಂತರ ಹೆಚ್ಚು ಮಾರಕವಾಗುತ್ತಿದೆ.

ಆಗಸ್ಟ್‌ನಲ್ಲಿ ಭಾರತ ತನ್ನ ಕೋವಿಡ್‌ ಲಸಿಕೆ ಗುರಿಯನ್ನು ಪರಿಷ್ಕರಿಸಿದ್ದು, ಇದುವರೆಗೆ ಮೊದಲ ಮೂರು ದಿನಗಳಲ್ಲಿ 1,40,69,926 ಡೋಸ್‌ಗಳನ್ನು ವಿತರಿಸಲಾಗಿದೆ. ನೀತಿ ಆಯೋಗದ ಡಾ. ವಿ ಕೆ ಪೌಲ್ ಪ್ರಕಾರ ಈ ತಿಂಗಳು ಭಾರತವು ಸುಮಾರು 15 ಕೋಟಿ ಲಸಿಕೆಗಳನ್ನು ನೀಡುವ ನಿರೀಕ್ಷೆಯಿದೆ. ಇದು ಮೇ ತಿಂಗಳಲ್ಲಿ ನಿಗದಿಯಾಗಿದ್ದ 25 ಕೋಟಿ ಗುರಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಮೇ 31 ರಂದು, ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್‌ನ ಡಾ. ಎನ್‌ಕೆ ಅರೋರಾ ಭಾರತವು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬಹುದು ಮತ್ತು ಆಗಸ್ಟ್‌ನಲ್ಲಿ ಸುಮಾರು 25 ಕೋಟಿ ಲಸಿಕೆ ಪ್ರಮಾಣವನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ದೇಶೀಯ ತಯಾರಕರು ನಿರೀಕ್ಷಿಸಿದಂತೆ ತಮ್ಮ ಉತ್ಪಾದನಾ ಮಟ್ಟವನ್ನು ಅಪೇಕ್ಷಿತ ಸಾಮರ್ಥ್ಯಕ್ಕೆ ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅಲ್ಲದೆ, ಇಲ್ಲಿಯವರೆಗೆ, ರಷ್ಯಾದಿಂದ ಸ್ಪುಟ್ನಿಕ್ ವಿ ಹೊರತುಪಡಿಸಿ ಇತರ ವಿದೇಶಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಯಾವುದೇ ಹೊಸ ಒಪ್ಪಂದವನ್ನು ಅಂತಿಮಗೊಳಿಸಲು ಭಾರತಕ್ಕೆ ಸಾಧ್ಯವಾಗಿಲ್ಲ.

(ಒನ್‌ಇಂಡಿಯಾ ಸುದ್ದಿ)

English summary
7.87% India's Population Fully Vaccinated: What World's Largest Covid Inoculation Drive Achieved in 200 Days, Explained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X