ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಬಲ ನರ ಆರೋಗ್ಯದ ಸೂಚನೆ ನಿರ್ಲಕ್ಷಿಸುತ್ತಿರುವ ಬೆಂಗಳೂರಿಗರು

|
Google Oneindia Kannada News

ಬೆಂಗಳೂರಿನ ಶೇ.69ರಷ್ಟು ಜನರು ದುರ್ಬಲ ನರದ ಆರೋಗ್ಯದ ಪ್ರಾರಂಭಿಕ ಸೂಚನೆಗಳನ್ನು ನಿರ್ಲಕ್ಷಿಸುತ್ತಾರೆ ಎಂದು ಪಿ & ಜಿ ನರದ ಆರೋಗ್ಯದ ಸಮೀಕ್ಷೆ ಹೇಳಿದೆ. ಈ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಶೇ.90ಕ್ಕೂ ಹೆಚ್ಚು ಮಂದಿ ಆರೋಗ್ಯಕರ ನರಗಳು ಮುಖ್ಯ ಎಂದು ನಂಬಿದ್ದಾರೆ, ಕೇವಲ ಶೇ.38ರಷ್ಟು ಮಂದಿ ಮಾತ್ರ ನರಗಳು ರಕ್ತನಾಳಗಳಿಗಿಂತ ಭಿನ್ನ ಎಂದು ತಿಳಿದಿದ್ದಾರೆ.

ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಠಿಕತೆಯ ಮಾಸವಾಗಿ ಆಚರಿಸಲಾಗುತ್ತದೆ, ಇದು ಪಥ್ಯ ಮತ್ತು ಪೌಷ್ಠಿಕತೆಗೆ ಹೆಚ್ಚು ಗಮನ ನೀಡುತ್ತದೆ ಮತ್ತು ಅದು ವಹಿಸುವ ಪಾತ್ರವು ಒಟ್ಟಾರೆ ಆರೋಗ್ಯ ಮತ್ತು ಸೌಖ್ಯವನ್ನು ಸುಧಾರಿಸಲು ನೆರವಾಗುತ್ತದೆ. ಅಪೌಷ್ಠಿಕತೆ ಹಲವು ರೋಗಗಳಿಗೆ ಅವಕಾಶ ನೀಡಿದರೆ ಬಿ ವಿಟಮಿನ್‍ಗಳ ಕೊರತೆಯು ನರದ ಅಪಾಯಕ್ಕೆ ಕಾರಣವಾಗುತ್ತದೆ.

12 ನಗರಗಳಲ್ಲಿ 1800 ಮಂದಿಯಲ್ಲಿ ನಡೆಸಿದ 'ಪಿ ಅಂಡ್ ಜಿ ನರ್ವ್ ಹೆಲ್ತ್ ಸರ್ವೇ'ಯ ಫಲಿತಾಂಶದ ಪ್ರಕಾರ ಶೇ.60ಕ್ಕೂ ಹೆಚ್ಚು ಮಂದಿ ದುರ್ಬಲ ನರ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ ಎಂದು ತೋರಿಸಿದೆ. ಆದಾಗ್ಯೂ, ಬೆಂಗಳೂರಿನಲ್ಲಿ ಈ ಸಮೀಕ್ಷೆಯು ಶೇ.69ರಷ್ಟು ಮಂದಿಯನ್ನು ದುರ್ಬಲ ನರದ ಆರೋಗ್ಯದ ಸೂಚನೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಹೀಲ್ ಹೆಲ್ತ್ ಅಂಡ್ ಹನ್ಸಾ ರೀಸರ್ಚ್, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಹೆಲ್ತ್ ಲಿಮಿಟೆಡ್ ಬೆಂಬಲದೊಂದಿಗೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಶೇ.90ರಷ್ಟು ಮಂದಿ ಆರೋಗ್ಯಕರ ನರಗಳು ಮುಖ್ಯವಾಗಿವೆ ಎಂಬ ನಂಬಿಕೆಯನ್ನು ಎತ್ತಿ ತೋರಿಸಿದೆ, ಕೇವಲ ಶೇ.38ರಷ್ಟು ಮಂದಿ ಮಾತ್ರ ನರಗಳು ರಕ್ತನಾಳಗಳಿಗಿಂತ ಭಿನ್ನ ಎಂದು ತಿಳಿದಿದ್ದಾರೆ.

ವಿಟಮಿನ್ ಸಮಗ್ರ ಆರೋಗ್ಯಕ್ಕೆ ಅವಶ್ಯಕ

ವಿಟಮಿನ್ ಸಮಗ್ರ ಆರೋಗ್ಯಕ್ಕೆ ಅವಶ್ಯಕ

''ಸಾಮಾನ್ಯವಾಗಿ ಜನರು ಸಮತೋಲನದ ಆಹಾರ ತೆಗೆದುಕೊಳ್ಳುವುದಿಲ್ಲ ಮತ್ತು ಸಾಕಷ್ಟು ಅಗತ್ಯ ವಿಟಮಿನ್‍ಗಳು ಮತ್ತು ಅಳವಡಿಕೆಗಳನ್ನು ತಪ್ಪಿಸಿಕೊಳ್ಳುತ್ತಾರೆ, ಅವು ಸಮಗ್ರ ಆರೋಗ್ಯಕ್ಕೆ ಅವಶ್ಯಕ. ನರಗಳ ಸಮಸ್ಯೆಯಿಂದ ಬಳಲುತ್ತಿರುವವರು ಅದರ ಹಿಂದಿನ ಕಾರಣ ತಿಳಿದಿರುವುದಿಲ್ಲ ಎನ್ನುವುದನ್ನು ನಾವು ಕಾಣುತ್ತೇವೆ. ಅವರು ತಮ್ಮ ಆಹಾರ ಸೇವನೆಯಲ್ಲಿ ವಿಟಮಿನ್ ಬಿ12 ಸೇವನೆ ಕುರಿತು ಗಮನಿಸುವುದಿಲ್ಲ ಮತ್ತು ಅವರ ಸಮಸ್ಯೆ ಉಳಿಯುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಮೇಲೆ ವಿಟಮಿನ್ ಬಿ12ರ ಪರಿಣಾಮ ತಿಳಿಯುವುದು ಅಗತ್ಯವಾಗಿದೆ. ಮತ್ತು ನಿಮ್ಮ ಆಹಾರದಲ್ಲಿ ವಿಟಮಿನ್ ಬಿ12 ಅಗತ್ಯವಿರುವ ಪ್ರಮಾಣವನ್ನೂ ದೃಢಪಡಿಸುವುದು ಅಷ್ಟೇ ಅಗತ್ಯವಿದೆ'' ಎಂದು ಎಂಡೊಕ್ರೈನ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ಗಣಪತಿ ಬಂಟ್ವಾಳ ಹೇಳಿದರು.

ಪಿ ಅಂಡ್ ಜಿ ನರ್ವ್ ಹೆಲ್ತ್ ಸಮೀಕ್ಷೆ

ಪಿ ಅಂಡ್ ಜಿ ನರ್ವ್ ಹೆಲ್ತ್ ಸಮೀಕ್ಷೆ

ಪಿ ಅಂಡ್ ಜಿ ನರ್ವ್ ಹೆಲ್ತ್ ಸಮೀಕ್ಷೆಯನ್ನು ನರದ ಆರೋಗ್ಯ ಕುರಿತಾದ ಅರಿವಿನ ಮಟ್ಟ ಮತ್ತು ಗ್ರಹಿಕೆಗಳನ್ನು ಹಾಗೂ ನರ ಸಂಬಂಧಿತ ಅಸೌಖ್ಯಗಳನ್ನು ಜನರು ಗುರುತಿಸಬಲ್ಲರೇ ಎಂದು ಅಳೆಯಲು ನಡೆಸಲಾಯಿತು. ಇದರಿಂದ ದೊರೆತ ಫಲಿತಾಂಶಗಳು ನರದ ಆರೋಗ್ಯದ ಕುರಿತು ಸೀಮಿತ ಜ್ಞಾನವನ್ನು ತೋರಿಸಿದೆ. ಜನರು ನರದ ಹಾನಿಯ ಸೂಚನೆಗಳನ್ನು ಅನುಭವಿಸಿದ್ದು ಅದರಲ್ಲಿ ಶೇ.50ರಷ್ಟು ನರದ ಆರೋಗ್ಯಕ್ಕೆ ಸೇರಿದೆ.

''ದೇಶದ ದೊಡ್ಡ ಪ್ರಮಾಣದ ಜನಸಂಖ್ಯೆಯು ಕಾರಣಗಳು ಗೊತ್ತಿಲ್ಲದೆ ಮತ್ತು ನರದ ಹಾನಿ ಒಳಗೊಂಡು ಅದು ತರುವ ತೊಂದರೆಗಳ ಅರಿವಿಲ್ಲದೆ ಇಂದು ವಿಟಮಿನ್ ಬಿ ಕೊರತೆಯಿಂದ ಬಳಲುತ್ತಿದೆ. ಪಿ ಅಂಡ್ ಜಿ ನರ್ವ್ ಹೆಲ್ತ್ ಸಮೀಕ್ಷೆಯು ಹೀಲ್ ಹೆಲ್ತ್ ಅಂಡ್ ಹನ್ಸಾ ರೀಸರ್ಚ್ ಸಹಯೋಗದಲ್ಲಿ ನರದ ಆರೋಗ್ಯದ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾರಂಭಿಕ ಸೂಚನೆಗಳನ್ನು ಒಳಗೊಂಡ ಜನರನ್ನು ಸಶಕ್ತಗೊಳಿಸಲಿದೆ ಮತ್ತು ಸಮತೋಲಿತ ಆಹಾರ ಮತ್ತು ಪೂರಕ ಆಹಾರದೊಂದಿಗೆ ಹೇಗೆ ಅದನ್ನು ನಿರ್ವಹಿಸಬಹುದು ಎಂದು ತಿಳಿಸುತ್ತದೆ'' ಎಂದು ಪ್ರಾಕ್ಟರ್ ಅಂಡ್ ಗ್ಯಾಂಬಲ್ ಹೆಲ್ತ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮಿಲಿಂದ್ ಥಟ್ಟೆ ಹೇಳಿದರು.

ಬಿ12 ಕೊರತೆ ಭಾರತದಲ್ಲಿ ಅತ್ಯಂತ ಸಾಮಾನ್ಯ

ಬಿ12 ಕೊರತೆ ಭಾರತದಲ್ಲಿ ಅತ್ಯಂತ ಸಾಮಾನ್ಯ

ಬಿ12 ಕೊರತೆ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿದೆ, ಇತರೆ ಕೊರತೆಗಳಲ್ಲಿ ಅಪೌಷ್ಠಿಕತೆ ಅತ್ಯಂತ ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಹಲವಿವೆ ಮತ್ತು ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿವೆ.

''ಇತರೆ ಅಂಶಗಳೊಂದಿಗೆ ವಿಟಮಿನ್-ಬಿ ಕೊರತೆಯುಳ್ಳವರಿಗೆ ನರದ ಸಮಸ್ಯೆಗಳ ಹೆಚ್ಚಿನ ಸಂಭವನೀಯತೆ ಇರುತ್ತದೆ. ವಿಶೇಷ ಪೌಷ್ಠಿಕತೆಯ ಅಭ್ಯಾಸಗಳು ಮತ್ತು ಅಪೌಷ್ಠಿಕತೆಯು ಕೆಲವು ಅಗತ್ಯ ವಿಟಮಿನ್‍ಗಳಾದ ನ್ಯೂರೊಟೊಪಿಕ್-ಬಿ ವಿಟಮಿನ್‍ಗಳ ಕೊರತೆಗೆ ಕಾರಣವಾಗಬಹುದು, ಅದು ನಿಮ್ಮ ನರಗಳನ್ನು ಆರೋಗ್ಯ ಮತ್ತು ರಕ್ಷಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಬಹಳಷ್ಟು ವಿಟಮಿನ್‍ಗಳಂತೆ ವಿಟಮಿನ್ ಬಿ12 ಅನ್ನು ದೇಹದಿಂದ ತಯಾರಿಸಲು ಸಾಧ್ಯವಿಲ್ಲ. ಬದಲಿಗೆ ಅದನ್ನು ಆಹಾರ ಮತ್ತು ಪೂರಕಗಳಿಂದ ಪಡೆಯಬೇಕು'' ಎಂದು ಡಾ.ಸತೀಶ್ ಖಡಿಕರ್ ಹೇಳಿದ್ದಾರೆ.

ವಿಟಮಿನ್ ಬಿ12 ಸೇವನೆ

ವಿಟಮಿನ್ ಬಿ12 ಸೇವನೆ

ಕೆಲವು ಜನರು ತಕ್ಕಷ್ಟು ವಿಟಮಿನ್ ಬಿ12 ಸೇವಿಸುವುದಿಲ್ಲದೇ ಇರುವುದರಿಂದ ಸಮಸ್ಯೆ ಉಳಿಯುತ್ತದೆ, ಇತರರು ಅವರು ಏನೇ ಸೇವಿಸಿದರೂ ಸಾಕಷ್ಟು ಹೀರಿಕೊಳ್ಳುವುದಿಲ್ಲ. ಇದರ ಫಲಿತಾಂಶದಿಂದ ವಿಟಮಿನ್ ಬಿ12 ಕೊರತೆ ಸಾಮಾನ್ಯವಾಗಿ ಅದರಲ್ಲಿಯೂ ವೃದ್ಧರಲ್ಲಿ ಕಂಡುಬರುತ್ತದೆ'' ಎಂದು ಬಾಂಬೆ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಡೀನ್ ಮತ್ತು ಎಚ್.ಒ.ಡಿ. ಡಾ.ಸತೀಶ್ ಖಡಿಕರ್ ಹೇಳಿದರು.

ಈ ರಾಷ್ಟ್ರೀಯ ಸಮೀಕ್ಷೆಯು ಶೇ.73ರಷ್ಟು ಮಂದಿ ತರಕಾರಿಗಳ ಮೇಲೆ ಮತ್ತು ಶೇ.69ರಷ್ಟು ಮಂದಿ ಹಣ್ಣುಗಳ ಮೇಲೆ ಅವರ ವಿಟಮಿನ್ ಬಿ12ಗಾಗಿ ಆಧಾರಪಟ್ಟಿದ್ದಾರೆ, ಅವು ಮೂಲಗಳಲ್ಲ.

English summary
September commemorates the National Nutrition Month, a reminder for a greater focus on diet and nutrition, and the role it plays to help improve our overall health and wellbeing. While malnutrition can lead to many ailments, the deficiency of B vitamins may lead to nerve damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X