ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.65ರಷ್ಟು ಭಾರತೀಯರು ತೆರಿಗೆ ರಚನೆಯಿಂದ ಅತೃಪ್ತರು: ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 28: ದೇಶದಲ್ಲಿ ಪ್ರಸ್ತುತ ತೆರಿಗೆ ರಚನೆಯ ಬಗ್ಗೆ ಸುಮಾರು ಮೂರನೇ ಎರಡರಷ್ಟು ಅಥವಾ ಶೇಕಡಾ 65 ರಷ್ಟು ಜನರು ಅತೃಪ್ತರಾಗಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. YouGov ನ ಇತ್ತೀಚಿನ ಸಮೀಕ್ಷೆಯು ಆದಾಯ ತೆರಿಗೆಯ ಬಗ್ಗೆ ಸಾರ್ವಜನಿಕರ ಭಾವನೆಗಳನ್ನು ಹಾಗೂ ಮುಂಬರುವ ಬಜೆಟ್‌ನಿಂದ ಜನರ ನಿರೀಕ್ಷೆಗಳನ್ನು ಬಹಿರಂಗಪಡಿಸಿದೆ.

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ 2022 ರ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ಮುಕ್ಕಾಲು ಭಾಗದಷ್ಟು (74 ಪ್ರತಿಶತ) ನಗರದಲ್ಲಿ ವಾಸಿಸುವ ಭಾರತೀಯರು ದೇಶದ ಆರ್ಥಿಕ ಅಭಿವೃದ್ಧಿಗೆ ಆದಾಯ ತೆರಿಗೆ ಮುಖ್ಯವಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಬಜೆಟ್ 2022: ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣ ಏರಿಕೆಗೆ ಒತ್ತಾಯಬಜೆಟ್ 2022: ಆದಾಯ ತೆರಿಗೆ ವಿನಾಯಿತಿ ಕಡಿತ ಪ್ರಮಾಣ ಏರಿಕೆಗೆ ಒತ್ತಾಯ

ಮುಂಬರುವ ಬಜೆಟ್‌ನಿಂದ ನೀವು ಏನನ್ನು ನಿರೀಕ್ಷೆ ಮಾಡುತ್ತೀರಿ ಎಂದು ಕೇಳಿದಾಗ, ಐದರಲ್ಲಿ ಇಬ್ಬರು (38 ಪ್ರತಿಶತ) ನಗರದಲ್ಲಿ ವಾಸಿಸುವ ಭಾರತೀಯರು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಬಡವರು ಅಥವಾ ಮಧ್ಯಮ ವರ್ಗದವರು ಎಂದು ಗುರುತಿಸಿಕೊಳ್ಳುವ ಜನರಿಗೆ ಇದು ಪ್ರಮುಖ ನಿರೀಕ್ಷೆಯಾಗಿದೆ.

 ಬಜೆಟ್‌ 2022: ತೆರಿಗೆದಾರರು ಹೊಂದಿರುವ ಐದು ನಿರೀಕ್ಷೆಗಳು ಇಲ್ಲಿದೆ ಬಜೆಟ್‌ 2022: ತೆರಿಗೆದಾರರು ಹೊಂದಿರುವ ಐದು ನಿರೀಕ್ಷೆಗಳು ಇಲ್ಲಿದೆ

 ತೆರಿಗೆ ಹೊರೆ ಕಡಿಮೆ ಮಾಡಲು ಬಯಸುವವರು ಎಷ್ಟು ಮಂದಿ?

ತೆರಿಗೆ ಹೊರೆ ಕಡಿಮೆ ಮಾಡಲು ಬಯಸುವವರು ಎಷ್ಟು ಮಂದಿ?

ಸುಮಾರು 10 ರಲ್ಲಿ ಮೂರು (ಶೇಕಡಾ 31) ಜನರು ಒಟ್ಟಾರೆ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 1.5 ಲಕ್ಷದಿಂದ ಅಧಿಕ ಮಾಡಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ (32 ಪ್ರತಿಶತ) ಜನರು ಅಸ್ತಿತ್ವದಲ್ಲಿರುವ ರೂ 50,000 ನಿಂದ ಪ್ರಮಾಣಿತ ಕಡಿತದ ಮಿತಿ (ಸ್ಟಾಂಡರ್ಡ್ ಡಿಡಕ್ಷನ್‌ ಲಿಮಿಟ್‌) ಅನ್ನು ಹೆಚ್ಚಿಸುವ ಮೂಲಕ ಸಂಬಳ ಪಡೆಯುವ ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಬಯಸುತ್ತದೆ. ಕಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ನಿರೀಕ್ಷೆಗಳನ್ನು ಹೊಂದಿದ್ದಾರೆ.

 ಕೋವಿಡ್‌ ಚಿಕಿತ್ಸೆ: ತೆರಿಗೆ ವಿನಾಯಿತಿ ಬೇಡಿಕೆ

ಕೋವಿಡ್‌ ಚಿಕಿತ್ಸೆ: ತೆರಿಗೆ ವಿನಾಯಿತಿ ಬೇಡಿಕೆ

ಕೋವಿಡ್ -19 ಸಾಂಕ್ರಾಮಿಕ ಮತ್ತು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು, ಮೂರನೇ ಒಂದು ಭಾಗದಷ್ಟು (35 ಪ್ರತಿಶತ) ಜನರು ಕೋವಿಡ್ ಚಿಕಿತ್ಸೆ-ಸಂಬಂಧಿತ ವೆಚ್ಚಗಳನ್ನು ತೆರಿಗೆ ವಿನಾಯಿತಿಗಳ ಅಡಿಯಲ್ಲಿ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಕೆಲವರು (30 ಪ್ರತಿಶತ) ಹಣಕಾಸು ಸಚಿವರು 80D ಅಡಿಯಲ್ಲಿ ವೈದ್ಯಕೀಯ ವೆಚ್ಚಗಳಿಗೆ ಕಡಿತಗಳನ್ನು ಹೆಚ್ಚಿಸುತ್ತಾರೆ ಎಂದು ನಿರೀಕ್ಷಿಸುತ್ತಾರೆ.

 ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ಕಡಿತ

ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ಕಡಿತ

ಗೃಹ ಸಾಲದ ಬಡ್ಡಿಯ ಮೇಲೆ ಹೆಚ್ಚಿನ ತೆರಿಗೆ ಕಡಿತವು ಭಾರತದಲ್ಲಿನ ಸಂಬಳ ಪಡೆಯುವ ವರ್ಗದ ನಿರೀಕ್ಷೆಯಾಗಿದೆ. ಕುತೂಹಲಕಾರಿಯಾಗಿ, Gen X ಅಂದರೆ 17-19 ವರ್ಷದವರು (28 ಶೇಕಡಾ) ಮತ್ತು Gen Z ಅಂದರೆ 1997 and 2010ರಲ್ಲಿ ಜನಿಸಿದವವರಿಗೆ (19 ಶೇಕಡಾ) ಗೆ ಹೋಲಿಸಿದರೆ ಮಿಲೇನಿಯಲ್‌ಗಳು ಅಂದರೆ 1980 and 1995ರಲ್ಲಿ ಜನಿಸಿದವರು (32 ಶೇಕಡಾ) ಈ ತೆರಿಗೆ ಪ್ರೋತ್ಸಾಹವನ್ನು ನಿರೀಕ್ಷಿಸುವ ಸಾಧ್ಯತೆಯಿದೆ. ಸ್ವಯಂ-ಗುರುತಿಸಲ್ಪಟ್ಟ ಬಡವರ ಪೈಕಿ ಶೇಕಡ 80 ಪ್ರತಿಶತದಷ್ಟು ಜನರು 5 ಪ್ರತಿಶತದಷ್ಟು ತೆರಿಗೆ ದರವು ನ್ಯಾಯಯುತವಾಗಿದೆ ಎಂದು ಉಲ್ಲೇಖ ಮಾಡಿದರೆ, ಆದರೆ ಉಳಿದವರಲ್ಲಿ 25 ಪ್ರತಿಶತದಷ್ಟು ಮಂದಿ ಜನರು ಪಾವತಿಸಬೇಕಾದ ನ್ಯಾಯಯುತವಾದ ತೆರಿಗೆಯು 10 ಪ್ರತಿಶತ ಎಂದು ಒಪ್ಪುತ್ತಾರೆ.

 ರೈತರು ತೆರಿಗೆ ಪಾವತಿ ಮಾಡಬೇಕೇ?

ರೈತರು ತೆರಿಗೆ ಪಾವತಿ ಮಾಡಬೇಕೇ?

ಆದಾಯ ತೆರಿಗೆಯನ್ನು ಪಾವತಿಸುವುದು ದೇಶದ ನಾಗರಿಕರಿಗೆ ಕಾನೂನು ಬಾಧ್ಯತೆಯಾಗಿದೆ ಆದರೆ ಕೆಲವು ವೃತ್ತಿಗಳು (ರೈತರಂತೆ) ಪ್ರಸ್ತುತ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿವೆ. ತೆರಿಗೆಯ ವ್ಯಾಪ್ತಿಯ ಅಡಿಯಲ್ಲಿ ಬರಬೇಕಾದ ವಿವಿಧ ವೃತ್ತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವವರು 10 ರಲ್ಲಿ ಆರು (60 ಪ್ರತಿಶತ) ನಗರ ನಿವಾಸಿಗಳು ರೈತರು ಯಾವುದೇ ತೆರಿಗೆಯನ್ನು ಪಾವತಿಸಬಾರದು ಎಂದು ಭಾವಿಸುತ್ತಾರೆ. ಆದರೆ 35 ಪ್ರತಿಶತದಷ್ಟು ಜನರು ಇತರ ಎಲ್ಲ ನಾಗರಿಕರಂತೆ ತೆರಿಗೆ ವಿಧಿಸಬೇಕೆಂದು ಭಾವಿಸುತ್ತಾರೆ.

"ಉದ್ಯಮಿಗಳಿಗೆ ತೆರಿಗೆ ಹೆಚ್ಚಿಸಬೇಕು"

ಭಾರತದಲ್ಲಿ ಶ್ರೀಮಂತ ವರ್ಗ ಎಂದು ಭಾವಿಸಲಾದ ಉದ್ಯಮಿಗಳಿಗೆ ತೆರಿಗೆ ವಿಚಾರದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು (51 ಪ್ರತಿಶತ) ಜನರು ಈ ವರ್ಗದವರು ಇತರ ನಾಗರಿಕರಿಗಿಂತ ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕಡಿಮೆ ಪ್ರಮಾಣದ ಜನರು (37 ಪ್ರತಿಶತ) ಒಂದೇ ತೆರಿಗೆಯನ್ನು ಪಾವತಿಸಬೇಕು ಅಥವಾ ಯಾವುದೇ ತೆರಿಗೆಯನ್ನು ಪಾವತಿಸಬಾರದು (12 ಪ್ರತಿಶತ) ಎಂದು ಭಾವಿಸುತ್ತಾರೆ.

 ಬಜೆಟ್‌: ಯಾರ ಮೇಲೆ ಎಷ್ಟು ಪ್ರಭಾವ?

ಬಜೆಟ್‌: ಯಾರ ಮೇಲೆ ಎಷ್ಟು ಪ್ರಭಾವ?

YouGov Omnibus ಡೇಟಾವನ್ನು ಜನವರಿ 18-21 ರ ನಡುವೆ ಭಾರತದಲ್ಲಿ ಸುಮಾರು 1022 ಪ್ರತಿಸ್ಪಂದಕರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗಿದೆ. ಅಂಕಿಅಂಶಗಳ ಪ್ರಕಾರ, ನಗರವಾಸಿಗಳಲ್ಲಿ ಅರ್ಧದಷ್ಟು ಜನರು ಪ್ರತಿ ವರ್ಷ ಕೇಂದ್ರ ಬಜೆಟ್‌ ಬಗ್ಗೆ ತಿಳಿಯುತ್ತಾರೆ. (ಶೇ. 47) ಮತ್ತು 10 ರಲ್ಲಿ ಮೂರು (ಶೇ. 27) ಕೆಲವೊಮ್ಮೆ ಮಾತ್ರ ಬಜೆಟ್‌ ಬಗ್ಗೆ ಮಾಹಿತಿ ತಿಳಿಯುತ್ತಾರೆ. ಇದಲ್ಲದೆ, ಮೂರನೇ ಎರಡರಷ್ಟು (67 ಪ್ರತಿಶತ) ಜನರು ತಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಬಜೆಟ್ ಪ್ರಭಾವ ಬೀರುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಮಧ್ಯಮ ವರ್ಗ ಅಥವಾ ಮೇಲ್ಮಧ್ಯಮ-ವರ್ಗ ಎಂದು ಸ್ವಯಂ-ಗುರುತಿಸಲ್ಪಟ್ಟವರು ಇಬ್ಬರೂ ಬಜೆಟ್ ಅನ್ನು ಅನುಸರಿಸುತ್ತಾರೆ. ಅವರ ವೈಯಕ್ತಿಕ ಆದಾಯದ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಿದ್ದಾರೆ. ಬಡವರು ಅಥವಾ ಶ್ರೀಮಂತರು ಎಂದು ಗುರುತಿಸಿಕೊಂಡಿರುವ ಜನರು, ಬಜೆಟ್ ಅನ್ನು ಅನುಸರಿಸುವುದಿಲ್ಲ ಮತ್ತು ಅದು ಅವರ ವೈಯಕ್ತಿಕ ಆದಾಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ನಂಬಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
65 Per Cent Indians Unhappy With Existing Tax Structure Says Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X