ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ರಾಷ್ಟ್ರೀಯ ಪಕ್ಷಗಳ ಆದಾಯ ಮೊತ್ತ ಬಹಿರಂಗ, ಮುಂಚೂಣಿಯಲ್ಲಿ ಬಿಜೆಪಿ

|
Google Oneindia Kannada News

ನವದೆಹಲಿ, ಜನವರಿ 16: ದೇಶದ ಹಲವಾರು ರಾಜಕೀಯ ಪಕ್ಷಗಳಿಗೆ ವಿವಿಧಮೂಲಗಳಿಂದ ''ಪಾರ್ಟಿ ಫಂಡ್" ಗೆ ಮೊತ್ತ ಬಂದು ಸೇರುತ್ತದೆ. ಅಕೌಂಟಿಂಗ್ ವಿಧಾನ ಪಾರದರ್ಶಕವಾಗಿರದಿದ್ದು, ವಾರ್ಷಿಕವಾಗಿ ಪಕ್ಷದ ಆದಾಯ ಗಳಿಕೆಯನ್ನು ಬಹಿರಂಗಪಡಿಸಬೇಕಾಗುತ್ತದೆ. ಅದರಂತೆ ಪ್ರಮುಖ ಆರು ಪಕ್ಷಗಳ ಆರ್ಥಿಕ ಸ್ಥಾನಮಾನದ ಬಗ್ಗೆ ಮಾಹಿತಿ ಬಹಿರಂಗವಾಗಿದ್ದು, ಬಿಜೆಪಿ ಮುಂಚೂಣಿಯಲ್ಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ), ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ), ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ( ಎನ್ ಸಿಪಿ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮ್ಯಾರ್ಕ್ಸಿಸ್ಟ್) (ಸಿಪಿಎಂ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್(ಎಐಟಿಸಿ) ಪ್ರಮುಖ ರಾಷ್ಟ್ರ್ರೀಯ ಪಕ್ಷಗಳಾಗಿವೆ.

ಲೋಕಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಖರ್ಚು ಮಾಡಿದ ಹಣದ ಲೆಕ್ಕಲೋಕಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಖರ್ಚು ಮಾಡಿದ ಹಣದ ಲೆಕ್ಕ

2019ರ ಅಕ್ಟೋಬರ್ 31ಕ್ಕೆ ವಾರ್ಷಿಕ ಆಡಿಟೆಕ್ ಖಾತೆ ವಿವರಗಳನ್ನು ಸಲ್ಲಿಸಬೇಕಾಗಿತ್ತು. ಎಐಟಿಸಿ, ಸಿಪಿಎಂ ಹಾಗೂ ಬಿಎಸ್ಪಿ ನಿಗದಿತ ಸಮಯಕ್ಕೆ ವಿವರ ಸಲ್ಲಿಸಿದ್ದರೆ, ಬಿಜೆಪಿ 24 ದಿನಗಳ ನಂತರ, ಕಾಂಗ್ರೆಸ್ ಹಾಗೂ ಸಿಪಿಐ 42 ದಿನಗಳ ನಂತರ ಹಾಗೂ ಎನ್ ಸಿಪಿ 76 ದಿನಗಳ ನಂತರ ವರದಿ ಸಲ್ಲಿಸಿವೆ.

ಒಟ್ಟು ಆದಾಯ, ಖರ್ಚು ವೆಚ್ಚ 2018-19

ಒಟ್ಟು ಆದಾಯ, ಖರ್ಚು ವೆಚ್ಚ 2018-19

* 2018-19ರಲ್ಲಿ ಬಿಜೆಪಿ ಒಟ್ಟು 2,4108.08 ಕೋಟಿ ರು ಆದಾಯ ಗಳಿಸಿತ್ತು. ಆದರೆ ಒಟ್ಟು ಗಳಿಕೆಯಲ್ಲಿ 41.71%(1005.33 ಕೋಟಿ ರು) ಮಾತ್ರ ಖರ್ಚು ಮಾಡಿದೆ.
* ಕಾಂಗ್ರೆಸ್ ಒಟ್ಟು ಆದಾಯ 918.03 ಕೋಟು ರು ನಷ್ಟಿದೆ. ಈ ಪೈಕಿ 51.19%(469.92 ಕೋಟಿ ರು ) ವ್ಯಯಿಸಿದೆ.
* ಎಐಟಿಸಿ ಆದಾಯ 192.65 ಕೋಟಿ ರು, ಇದರಲ್ಲಿ 5.97%(11.50 ಕೋಟಿ ರು) ಖರ್ಚು ಮಾಡಲಾಗಿದೆ.
* ಸಿಪಿಎಂ ಒಟ್ಟು ಆದಾಯ 100.75 ಕೋಟಿ ರು ಗಳಿಸಿದ್ದು, 76.15 ಕೋಟಿ ರು (75.43%) ಖರ್ಚು ಮಾಡಿದೆ.

ಎಲ್ಲಾ ಪಕ್ಷಗಳ ಒಟ್ಟಾರೆ ಆದಾಯ ಗಳಿಕೆ

ಎಲ್ಲಾ ಪಕ್ಷಗಳ ಒಟ್ಟಾರೆ ಆದಾಯ ಗಳಿಕೆ

* ಎಲ್ಲಾ ಪ್ರಮುಖ 6 ರಾಷ್ಟ್ರೀಯ ಪಕ್ಷ(ಬಿಜೆಪಿ, ಐಎನ್ ಸಿ, ಸಿಪಿಎಂ, ಬಿಎಸ್ಪಿ, ಎಐಟಿಸಿ ಹಾಗೂ ಸಿಪಿಐ) ಗಳು ದೇಶದೆಲ್ಲೆಡೆಯಿಂದ ಒಟ್ಟು ಆದಾಯ ಗಳಿಕೆಯ ಮೊತ್ತ 3,698.66 ಕೋಟಿ ರು
* ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಗಳಿಕೆ ತೋರಿಸಿದೆ. ಬಿಜೆಪಿ 2410.08 ಕೋಟಿ ರು 2018-19 ಆರ್ಥಿಕ ವರ್ಷದಲ್ಲಿ ಬಿಜೆಪಿ ಗಳಿಸಿದೆ. 6 ಪಕ್ಷಗಳ ಆದಾಯದ ಶೇ 65.16% ರಷ್ಟು ಬಿಜೆಪಿಯೊಂದೇ ಗಳಿಕೆ ಮಾಡಿದೆ.
* ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, 918.03 ಕೋಟಿ ರು ಗಳಿಸಿದ್ದು, ಶೇ24. 82ರಷ್ಟು ಗಳಿಕೆಯನ್ನು ಹೊಂದಿದೆ.

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ

ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ

* 2017-18 ಹಾಗೂ 2018-19ರ ಅವಧಿಯನ್ನು ಹೋಲಿಸಿ ನೋಡಿದರೆ ಬಿಜೆಪಿಯ ಆದಾಯ ಶೇ 134.59 (1382.74 ಕೋಟಿ ರು) ಏರಿಕೆಯಾಗಿದೆ. 2017-18ರಲ್ಲಿ 1027.34 ಕೋಟಿ ರು ಇತ್ತು. 2018-19ರಲ್ಲಿ 2410.08 ಕೋಟಿ ರುಗೇರಿದೆ.
* ಕಾಂಗ್ರೆಸ್ ಆದಾಯ ಶೇ 360.97ರಷ್ಟು (718.88 ಕೋಟಿ ರು) ಏರಿಕೆ ಕಂಡಿದ್ದು, 2017-18ರಲ್ಲಿ 199.15 ಕೋಟಿ ರು, 2018-19ರಲ್ಲಿ 918.03 ಕೋಟಿ ರು

ಖರ್ಚು ವೆಚ್ಚ ಲೆಕ್ಕಾಚಾರ

ಖರ್ಚು ವೆಚ್ಚ ಲೆಕ್ಕಾಚಾರ

* ಬಿಜೆಪಿ ತನ್ನ ಆದಾಯದಲ್ಲಿ ಹೆಚ್ಚಿನ ಭಾಗವನ್ನು ಚುನಾವಣೆಗಾಗಿ ಖರ್ಚು ಮಾಡಿದೆ. 79.39 ಕೋಟಿ ರು ಚುನಾವಣೆಗೆ ಖರ್ಚಾಗಿದ್ದರೆ, 178.35 ಕೋಟಿ ರು ಆಡಳಿತ ಖರ್ಚುವೆಚ್ಚವಾಗಿದೆ.
* ಕಾಂಗ್ರೆಸ್ ಚುನಾವಣಾ ಖರ್ಚು ವೆಚ್ಚ 308.96 ಕೋಟಿ ರು ಹಾಗೂ 125.80 ಕೋಟಿ ರು ಆಡಳಿತಾತ್ಮಕ ವೆಚ್ಚಗಳಾಗಿವೆ.
* ಸಿಪಿಎಂ 2018-19ರಲ್ಲಿ ಶೇ 46.01ರಷ್ಟು ಒಟ್ಟಾರೆ ಖರ್ಚು ವೆಚ್ಚ ತೋರಿಸಿದ್ದು, 35.04ಕೋಟಿ ರು ಆಡಳಿತಾತ್ಮಕ ಖರ್ಚು ವೆಚ್ಚವಾಗಲಿದೆ. ಬಿಎಸ್ ಪಿ 33.11 ಕೋಟಿ ರು ಅಥವಾ 67.74% ಒಟ್ಟಾರೆ ವೆಚ್ಚದಲ್ಲಿ ಚುನಾವಣೆಗೆ ಬಳಸಿದೆ.

English summary
Political parties have multiple sources of funding and thus accountability and transparency should be an important aspect of their functioning. 6 national parties declared income of Rs 3,698.66 crore: BJP leads the pack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X