ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಿಂದಲೇ ಭಾರತದಲ್ಲಿ 5ಜಿ; ಇಲ್ಲಿದೆ ಬಿಡ್ಡಿಂಗ್ ವಿವರ

|
Google Oneindia Kannada News

ಐಪಿಎಲ್ ಆಕ್ಷನ್‌ನಂತೆ ಭಾರೀ ಕುತೂಹಲ ಕೆರಳಿಸಿದ್ದ 5ಜಿ ತರಂಗಾಂತರ ಹಂಚಿಕೆಯಲ್ಲಿ ಬಿಡಿಂಗ್ ಕಾರ್ಯ ಮುಕ್ತಾಯವಾಗಿದೆ. ಏಳು ದಿನಗಳ ಕಾಲ 40 ಸುತ್ತುಗಳು ನಡೆದ ಬಿಡ್ಡಿಂಗ್‌ನಲ್ಲಿ ಸರಕಾರದ ಬೊಕ್ಕಸಕ್ಕೆ 1.5 ಲಕ್ಷ ಕೋಟಿ ರೂ. ಪ್ರಾಪ್ತಿಯಾಗಿದೆ.

ನಿರೀಕ್ಷಿಸಿದಂತೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಸಂಸ್ಥೆ ಅತಿ ಹೆಚ್ಚು ಬಿಡ್ ಸಲ್ಲಿಸಿದೆ. ಒಟ್ಟಾರೆ ಬಿಡ್ಡಿಂಗ್‌ನಲ್ಲಿ ಜಿಯೋ ಪಾಲು ಅರ್ಧಕ್ಕಿಂತ ಹೆಚ್ಚು. ಅದು 88,078 ಕೋಟಿ ರೂ. ಮೊತ್ತಕ್ಕೆ ವಿವಿಧ ಸ್ಪೆಕ್ಟ್ರಂಗಳನ್ನು ಖರೀದಿ ಮಾಡಿದೆ.

5G: ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?5G: ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?

ಸರ್ಕಾರ 10 ವಿವಿಧ ಬ್ಯಾಂಡ್‌ಗಳನ್ನು ಒಳಗೊಂಡಂತೆ ಒಟ್ಟು 72 ಗಿಗಾಹರ್ಟ್ಜ್‌ಗಳಷ್ಟು ತರಂಗಾಂತರಗಳನ್ನು ಹರಾಜಿನಲ್ಲಿ ಇಟ್ಟಿತ್ತು. ಒಟ್ಟೂ ಮೂಲ ಬೆಲೆ 4.3 ಲಕ್ಷ ಕೋಟಿ ರೂ. ನಿಗದಿ ಮಾಡಲಾಗಿತ್ತು. ಬಹುತೇಕ ಬ್ಯಾಂಡ್‌ಗಳು ಮೂಲ ಬೆಲೆಯಲ್ಲೇ ಮಾರಾಟವಾಗಿವೆ. ಹರಾಜಿನಲ್ಲಿ ಇಡಲಾಗಿದ್ದ ಸ್ಪೆಕ್ಟ್ರಂನಲ್ಲಿ ಶೇ. 71ರಷ್ಟು ಮಾರಾಟವಾಗಿದೆ ಎಂದು ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ರಿಲಾಯನ್ಸ್ ಜಿಯೋ ಅತಿ ಹೆಚ್ಚು ಬಿಡ್ಡಿಂಗ್ ಮಾಡಿರುವುದು ಹೌದು. ಹಾಗೆಯೇ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳೂ 5ಜಿ ಸೇವೆ ನೀಡುವಷ್ಟು ಮಟ್ಟದಲ್ಲಿ ಸ್ಪೆಕ್ಟ್ರಂ ಖರೀದಿ ಮಾಡಿರುವುದು ತಿಳಿದುಬಂದಿದೆ. ಗೌತಮ್ ಅದಾನಿ ಅವರ ಅದಾನಿ ಡಾಟಾ ನೆಟ್ವರ್ಕ್ ಖಾಸಗಿ 5ಜಿ ನೆಟ್ವರ್ಕ್ ಖರೀದಿಗೆ ಮಾತ್ರ ಸೀಮಿತವಾಗಿದೆ.

ಹರಾಜಿನಲ್ಲಿದ್ದ 5ಜಿ

ಹರಾಜಿನಲ್ಲಿದ್ದ 5ಜಿ

ಒಟ್ಟು 72,098 ಮೆಗಾಹರ್ಟ್ಜ್ (72 ಗಿಗಾ ಹರ್ಟ್ಜ್) ಸ್ಪೆಕ್ಟ್ರಂ ಅನ್ನು ಹರಾಜಿಗಿಡಲಾಗಿತ್ತು. ಅದರಲ್ಲಿ 10 ಬ್ಯಾಂಡ್‌ಗಳು ಒಳಗೊಂಡಿದ್ದವು.

ಕೆಳ ಶ್ರೇಣಿಯ ಬ್ಯಾಂಡ್‌ಗಳು:
600 ಮೆಗಾಹರ್ಟ್ಜ್
700 ಮೆಗಾಹರ್ಟ್ಜ್
800 ಮೆಗಾಹರ್ಟ್ಜ್
900 ಮೆಗಾಹರ್ಟ್ಜ್
1800 ಮೆಗಾಹರ್ಟ್ಜ್
2100 ಮೆಗಾಹರ್ಟ್ಜ್
2300 ಮೆಗಾಹರ್ಟ್ಜ್
2500 ಮೆಗಾಹರ್ಟ್ಜ್

ಮಧ್ಯಮ ಶ್ರೇಣಿ ಬ್ಯಾಂಡ್: 3.3-3.67 ಗಿಗಾಹರ್ಟ್ಜ್ (ಇದನ್ನು ಮಿಡ್ ಬ್ಯಾಂಡ್ ಅಥವಾ ಸಿ ಬ್ಯಾಂಡ್ ಎಂದೂ ಕರೆಯುತ್ತಾರೆ.

ಹೈ ಬ್ಯಾಂಡ್: 26 ಗಿಗಾಹರ್ಟ್ಜ್.

ಇವಿಷ್ಟೂ ಕೂಡ ಈ ಬಾರಿ ಹರಾಜಿನಲ್ಲಿದ್ದ ಸ್ಪೆಕ್ಟ್ರಂ ಬ್ಯಾಂಡ್‌ಗಳು.

ರಿಲಾಯನ್ಸ್ ಜಿಯೋ ಪಡೆದದ್ದೆಷ್ಟು?

ರಿಲಾಯನ್ಸ್ ಜಿಯೋ ಪಡೆದದ್ದೆಷ್ಟು?

ಹರಾಜಿನಲ್ಲಿದ್ದ 72 ಸಾವಿರ ಮೆಗಾಹರ್ಟ್ಜ್ ಪೈಕಿ ಜಿಯೋವೊಂದೇ 24,740 ಮೆಗಾಹರ್ಟ್ಜ್‌ನಷ್ಟು ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನು ಖರೀದಿ ಮಾಡಿದೆ. 700 ಮೆಗಾಹರ್ಟ್ಜ್, 800 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2300 ಮೆಗಾಹರ್ಟ್ಜ್, ಸಿ ಬ್ಯಾಂಡ್ ಮತ್ತು 26 ಗಿಗಾಹರ್ಟ್ಜ್ ಬ್ಯಾಂಡ್‌ಗಳಲ್ಲಿ ಜಿಯೋ ಖರೀದಿ ಮಾಡಿದೆ.

ಇಲ್ಲಿ ದೇಶಾದ್ಯಂತ ಎಲ್ಲಾ 22 ಸರ್ಕಲ್‌ಗಳಿಗೂ ಜಿಯೋ 700 ಮೆಗಾಹರ್ಟ್ಜ್ ಖರೀದಿ ಮಾಡಿರುವುದು ವಿಶೇಷ. ಸಿ ಬ್ಯಾಂಡ್ ಮತ್ತು ಹೈ ಬ್ಯಾಂಡ್‌ಗಳನ್ನೂ ಖರೀದಿಸುವ ಮೂಲಕ ಜಿಯೋ ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡಿದೆ.

700 ಮೆಗಾಹರ್ಟ್ಜ್ ಬ್ಯಾಂಡ್‌ವಿಡ್ತ್‌ನಲ್ಲಿ ಒಂದು ಸಿಂಗಲ್ ಟವರ್‌ನಿಂದ 6-10 ಕಿಮೀ ವ್ಯಾಪ್ತಿ ಪ್ರದೇಶವನ್ನು ಕವರ್ ಮಾಡಬಹುದು. ದುಬಾರಿಯಾಗಿರುವ 700 ಮೆಗಾಹರ್ಟ್ಜ್ ಬ್ಯಾಂಡ್‌ ಈ ಹಿಂದಿನ ಹರಾಜುಗಳಲ್ಲಿ ಮಾರಾಟವಾಗದೇ ಉಳಿದಿತ್ತು. ಈ ಬಾರಿ ಅದರ ಮೂಲ ಬೆಲೆಯನ್ನೇ ತಗ್ಗಿಸಲಾಗಿತ್ತು. ಜಿಯೋ ಎಲ್ಲಾ ಸರ್ಕಲ್‌ಗಳಿಗೂ ಆ ಬ್ಯಾಂಡ್ ಅನ್ನು ಖರೀದಿಸಿ ತನ್ನ ಪ್ರತಿಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸಿದೆ.

ಭಾರ್ತಿ ಏರ್‌ಟೆಲ್ ಪಡೆದದ್ದೆಷ್ಟು?

ಭಾರ್ತಿ ಏರ್‌ಟೆಲ್ ಪಡೆದದ್ದೆಷ್ಟು?

ಏರ್‌ಟೆಲ್ ಸಂಸ್ಥೆ 43,084 ಕೋಟಿ ರೂ ಮೌಲ್ಯದ 19,867.8 ಮೆಗಾಹರ್ಟ್ಜ್ ಅನ್ನು ಖರೀದಿ ಮಾಡಿದೆ. ಕಡಿಮೆ ಬಜೆಟ್ ಹೊಂದಿದ್ದ ಏರ್‌ಟೆಲ್ ಬಹಳ ಎಚ್ಚರಿಕೆಯಿಂದ ಅಗತ್ಯ ಇರುವ ಸ್ಪೆಕ್ಟ್ರಂ ಅನ್ನು ಸಾಧ್ಯವಾದಷ್ಟೂ ಕಡಿಮೆ ಬೆಲೆಗೆ ಖರೀದಿ ಮಾಡಿರುವುದು ತಿಳಿದುಬಂದಿದೆ.

ಏರ್‌ಟೆಲ್ 850 ಮೆಗಾಹರ್ಟ್ಜ್, 900 ಮೆಗಾರ್ಟ್ಜ್, 1800 ಮತ್ತು 2100 ಮೆಗಾಹರ್ಟ್ಜ್ ಬ್ಯಾಂಡ್‌ವಿಡ್ತ್‌ಗಳನ್ನು ಖರೀದಿ ಮಾಡಿದೆ. 180 ಮತ್ತು 2100 ಮೆಗಾಹರ್ಟ್ಜ್ ಬ್ಯಾಂಡ್‌ಗಳು ತನಗೆ ಬಹಳ ಮುಖ್ಯ ಎಂದು ಏರ್‌ಟೆಲ್ ಹೇಳಿದೆ. ಬಿಡ್ಡಿಂಗ್‌ನಲ್ಲಿ ತಾನು ಮಾಡಿರುವ ಖರೀದಿ

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

ಏರ್‌ಟೆಲ್‌ನಂತೆ ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆ ಹಣಕಾಸು ವಿಚಾರದಲ್ಲಿ ಬಹಳ ಸಂಕಷ್ಟದಲ್ಲಿದೆ. 5ಜಿ ಸ್ಪರ್ಧೆಯಲ್ಲಿ ಉಳಿಯುವ ಅನಿವಾರ್ಯತೆಯಲ್ಲಿ ವಿಐ ಬಹಳ ಅಗತ್ಯ ಇರುವ ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನಷ್ಟೇ ಖರೀದಿ ಮಾಡಿದೆ. ಒಟ್ಟು 18,799 ಕೋಟಿ ರೂ ಮೌಲ್ಯದ 6,228.4 ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನು ವೊಡಾಫೋನ್ ಐಡಿಯಾ ಖರೀದಿ ಮಾಡಿದೆ.

"ನಮ್ಮ ಆದ್ಯತೆಯ 17 ಸರ್ಕಲ್‌ಗಳಲ್ಲಿ ಮಿಡ್ ಬ್ಯಾಂಡ್ 5ಜಿ ಸ್ಪೆಕ್ಟ್ರಂ (3300 ಮೆಗಾಹರ್ಟ್ಜ್) ಅನ್ನು ನಾವು ಖರೀದಿಸಿದ್ದೇವೆ. 16 ಸರ್ಕಲ್‌ಗಳಲ್ಲಿ 26 ಗಿಗಾಹರ್ಟ್ಜ್ ಬ್ಯಾಂಡ್ ಪಡೆದಿದ್ದೇವೆ. ಇದರಿಂದ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ 5ಜಿ ಸೇವೆ ನೀಡಲು ಸಾಧ್ಯವಾಗುತ್ತದೆ" ಎಂದು ವೊಡಾಫೋನ್ ಐಡಿಯಾ ಸಂಸ್ಥೆ ಹೇಳಿದೆ.

ಅದಾನಿ ಡಾಟಾ ನೆಟ್ವರ್ಕ್ಸ್

ಅದಾನಿ ಡಾಟಾ ನೆಟ್ವರ್ಕ್ಸ್

ಗೌತಮ್ ಅದಾನಿ ಮಾಲಕತ್ವದ ಕಂಪನಿ 5ಜಿ ಬಿಡ್ಡಿಂಗ್‌ಗೆ ಇಳಿದಾಗ ಜಿಯೋಗೆ ದೊಡ್ಡ ಸ್ಪರ್ಧೆ ಒಡ್ಡುವ ನಿರೀಕ್ಷೆ ಇತ್ತು. ಆದರೆ, 212 ಕೋಟಿ ರೂ ಮೌಲ್ಯದ 400 ಮೆಗಾಹರ್ಟ್ಜ್‌ನಷ್ಟು ಮಾತ್ರ ಅದು ಸ್ಪೆಕ್ಟ್ರಂ ಖರೀದಿ ಮಾಡಿದೆ.

ಅದಾನಿ ಖರೀದಿಸಿದ ಸ್ಪೆಕ್ಟ್ರಂ 26 ಗಿಗಾಹರ್ಟ್ಜ್ ಬ್ಯಾಂಡ್‌ನದ್ದಾಗಿದೆ. ಇದು ಸಾರ್ವಜನಿಕ ಮೊಬೈಲ್ ಸೇವೆಗೆ ಲಭ್ಯ ಇರುವುದಿಲ್ಲ. ಖಾಸಗಿ ನೆಟ್ವರ್ಕ್‌ಗೆ ಮಾತ್ರ ಸೀಮಿತವಾಗಿದೆ.

ಮುಂದೇನು?

ಮುಂದೇನು?

ಈಗ ಖರೀದಿಯಾದ ಸ್ಪೆಕ್ಟ್ರಂಗಳನ್ನು ಈ ಕಂಪನಿಗಳು 20 ವರ್ಷದವರೆಗೆ ಇಟ್ಟುಕೊಳ್ಳಬಹುದು. ಬಿಡ್ ಮಾಡಿದ ಎಲ್ಲಾ ಹಣವನ್ನೂ ಒಟ್ಟಿಗೆ ಕಟ್ಟಬೇಕೆಂದಿಲ್ಲ. ಪ್ರತೀ ವರ್ಷವೂ ಸಮ ಕಂತುಗಳ ಮೂಲಕ 20 ವರ್ಷಗಳವರೆಗೆ ಕಟ್ಟಿಕೊಂಡು ಹೋಗುವ ಅವಕಾಶವನ್ನು ಕೇಂದ್ರ ಸರಕಾರ ನೀಡಿದೆ. ಹಾಗೆಯೇ, ಯಾರಿಗಾದರೂ ಕೂಡ ನಿರ್ದಿಷ್ಟ ಸ್ಪೆಕ್ಟ್ರಂ ಬೇಡ ಎನಿಸಿದಲ್ಲಿ 10 ವರ್ಷಗಳ ಬಳಿಕ ಅದನ್ನು ಮರಳಿಸಬಹುದು. ಸಂಪೂರ್ಣ ಕಂತು ಕಟ್ಟುವ ಅಗತ್ಯ ಇಲ್ಲ.

ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಿಸಬಹುದು. 2-3 ವರ್ಷಗಳಲ್ಲಿ ದೇಶಾದ್ಯಂತ ಸಂಪೂರ್ಣವಾಗಿ 5ಜಿ ಅಳವಡಿಕೆ ಆಗುವ ಸಾಧ್ಯತೆ ಇದೆ. ಮುಂದಿನ ಕೆಲ ವರ್ಷಗಳಲ್ಲಿ 5ಜಿ ನೆಟ್ವರ್ಕ್ ಅಭಿವೃದ್ಧಿಗೆ ಟೆಲಿಕಾಂ ಕಂಪನಿಗಳಿಂದ 3 ಲಕ್ಷ ಕೋಟಿ ರೂ ಹೂಡಿಕೆಯಾಗುವ ನಿರೀಕ್ಷೆಯೂ ಇದೆ.

(ಒನ್ಇಂಡಿಯಾ ಸುದ್ದಿ)

English summary
Over 70 per cent of the bandwidths that were put up for sale were sold in the 40 rounds of 5G Auction. 60% spectrum were purchased by Reliance Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X