• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

150 ಕೋಟಿ ಆಸ್ತಿವಂತ 'ಗೋಲ್ಡನ್ ಬಾಬಾ' ಮೈಮೇಲೆ 20 ಕೇಜಿ ಚಿನ್ನ

By ಒನ್ಇಂಡಿಯಾ ಡೆಸ್ಕ್
|

ನಡೆದಾಡುವ ಆಭರಣದ ಮಳಿಗೆಯಂತೆ ಕಾಣುವ ಇವರು ಸನ್ಯಾಸಿಗಳು ಅಂದರೆ ನೀವು ನಂಬಲೇಬೇಕು. ಐವತ್ತೆಂಟು ವರ್ಷದ ಈ 'ಚಿನ್ನದ ಬಾಬಾ' ಗಾಜಿಯಾಬಾದ್ ಗೆ ಸೋಮವಾರ ಬಂದಿಳಿದಾಗ ಇವರನ್ನು ನೋಡಲು ಜನವೋ ಜನ. ಇವರ ಮೈ ಮೇಲಿನ ಒಡವೆಗಳ ಬಗ್ಗೆ ಬರೆದರೆ ಅದೇ ಮತ್ತೊಂದು ಮಹಾನ್ ವರದಿ ಆಗುತ್ತದೆ.

ಇಪ್ಪತ್ತೈದು ಸರ ಹಾಕಿಕೊಂಡಿರುವ ಈ ಸರ್ವಸಂಗ ಪರಿತ್ಯಾಗಿಯನ್ನು ಹತ್ತಿರದಿಂದ ನೋಡಬೇಕು. ಒಂದೊಂದು ಸರವು ಕನಿಷ್ಠ ಐನೂರು ಗ್ರಾಮ್ ಗೆ ಕಡಿಮೆ ಇಲ್ಲದಂತೆ ತೂಗುತ್ತವೆ. ಹ್ಞಾಂ, ಒಂದ್ನಿಮಿಷ. ಇವೆಲ್ಲ ಚಿನ್ನದ್ದೇನಾ ಅಂತ ಅನುಮಾನ ಪಡಬೇಡಿ. ಇವುಗಳ ಜತೆಗೆ ಇನ್ನೂ ಸಾಕಷ್ಟು ಆಭರಣಗಳನ್ನು ಈ ಬಾಬಾ ಮೈಮೇಲೆ ಹಾಕಿಕೊಂಡಿದ್ದಾರೆ.

ಕಪ್ಪು ಪಲ್ಸರ್, ಒಂಟಿಯಾಗಿ ಸರಗಳ್ಳತನ, ಇದು 'ಚಿನ್ನದ ಗಣಿ' ಕಥೆ

ಕಂವಾರಾ ಯಾತ್ರೆಯ ಕೊನೆಯ ಇನ್ನೂರು ಕಿಲೋಮೀಟರ್ ಸಾಗಬೇಕಿರುವ ಇವರ ಜತೆಗೆ ಇಪ್ಪತ್ತೊಂದು ವಿಲಾಸಿ ಕಾರುಗಳು ಸಹ ಇವೆ. ದೆಹಲಿ- ಮೀರತ್ ರಸ್ತೆಯ ರೆಸಾರ್ಟ್ ವೊಂದರಲ್ಲಿ ವಿಶ್ರಾತಿ ಪಡೆಯುವ ವೇಳೆ ಸುಧೀರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಆರೋಗ್ಯ ಅವಕಾಶ ನೀಡಿದರೆ ಮುಂದೆ ಕೂಡ ಇಂಥ ಯಾತ್ರೆಗಳನ್ನು ಮಾಡುತ್ತೇನೆ ಎಂದಿದ್ದಾರೆ.

ಈ ವರ್ಷ ಯಾತ್ರೆಯಲ್ಲಿ 20 ಕೇಜಿ ಚಿನ್ನಾಭರಣ

ಈ ವರ್ಷ ಯಾತ್ರೆಯಲ್ಲಿ 20 ಕೇಜಿ ಚಿನ್ನಾಭರಣ

ಕಳೆದ ವರ್ಷ 14.5 ಕೇಜಿ ತೂಕದ ಆಭರಣ ಧರಿಸಿದ್ದ ಬಾಬಾ, ಈ ವರ್ಷ ಯಾತ್ರೆಯಲ್ಲಿ 20 ಕೇಜಿ ಚಿನ್ನಾಭರಣ ಧರಿಸಿದ್ದಾರೆ. ಈ ಚಿನ್ನವು ಜಾಸ್ತಿ ಆಗುವುದಕ್ಕೆ ಆ ದೇವರ ಕೃಪೆಯೇ ಕಾರಣ ಎನ್ನುವ ಬಾಬಾ, ತನಗಿರುವ ಗಂಭೀರ ಹೊಟ್ಟೆ ಸೋಂಕಿನ ಸಮಸ್ಯೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಆರೋಗ್ಯ ಕೈ ಕೊಡದಿದ್ದರೆ ಇನ್ನಷ್ಟು ಯಾತ್ರೆ ಮಾಡುವುದಾಗಿ ಹೇಳುತ್ತಾರೆ. ಈ ವರ್ಷಕ್ಕೆ ಇಪ್ಪತ್ತೈದನೇ ಕಂವಾರಾ ಯಾತ್ರೆ ಕೈಗೊಳ್ಳುತ್ತಿರುವ ಬಾಬಾ, ಕಳೆದ ವರ್ಷವೇ ಇದು ನನ್ನ ಕೊನೆ ಯಾತ್ರೆ ಎಂದು ಹೇಳಿದ್ದರು. ವಾಟರ್ ಪ್ರೂಫ್ ಟೆಂಟ್ ಗಳು, ಅಡುಗೆ ಸರಬರಾಜುದಾರರಿಗೆ ಹಾಗೂ ಬಾಡಿಗೆ ಕಾರುಗಳು, ವೈದ್ಯರು, ಆಂಬುಲೆನ್ಸ್ ಗಳಿಗೆ 1.25 ಕೋಟಿ ರುಪಾಯಿ ಖರ್ಚು ಮಾಡಿದ್ದೇನೆ ಎಂದು ಬಾಬಾ ಹೇಳಿದ್ದಾರೆ.

ಮೊದಲ ಯಾತ್ರೆಗೆ ಇನ್ನೂರೈವತ್ತು ರುಪಾಯಿ ಖರ್ಚು

ಮೊದಲ ಯಾತ್ರೆಗೆ ಇನ್ನೂರೈವತ್ತು ರುಪಾಯಿ ಖರ್ಚು

ನನ್ನ ಮೊದಲ ಯಾತ್ರೆಗೆ ಇನ್ನೂರೈವತ್ತು ರುಪಾಯಿ ಖರ್ಚು ಮಾಡಿದ್ದೆ. ಪ್ರತಿ ವರ್ಷ ಅದು ಹೆಚ್ಚಾಗುತ್ತಲೇ ಬರುತ್ತಿದೆ. ಮತ್ತೆ ಆ ದಿನಗಳು ಬರಲ್ಲ ಎನ್ನುತ್ತಾರೆ. ಅಂದಹಾಗೆ ಬಾಬಾ ಅವರ ಬಳಿ ಇಪ್ಪತ್ತೈದು ಚಿನ್ನದ ಸರದ ಜತೆಗೆ ಇಪ್ಪತ್ತೊಂದು ಲಾಕೆಟ್ (ವಿವಿಧ ದೇವರುಗಳದು), ಚಿನ್ನದ ಚೈನ್ ಒಳಗೊಂಡ ಅರ್ಧ ಕೇಜಿ ತೂಗುವ ರೋಲೆಕ್ಸ್ ವಾಚ್ ಕೂಡ ಇದೆ ಅದರ ಬೆಲೆ ಅಂದಾಜು ಇಪ್ಪತ್ತೇಳು ಲಕ್ಷ ರುಪಾಯಿ.

ಬಿಎಂಡಬ್ಲ್ಯು, ಫಾರ್ಚೂನರ್, ಔಡಿ ಕಾರುಗಳು

ಬಿಎಂಡಬ್ಲ್ಯು, ಫಾರ್ಚೂನರ್, ಔಡಿ ಕಾರುಗಳು

ಈ ಬಾಬಾ ಬಳಿ ಬಿಎಂಡಬ್ಲ್ಯು ಕಾರು, ಮೂರು ಫಾರ್ಚೂನರ್, ಎರಡು ಔಡಿ, ಎರಡು ಇನ್ನೋವಾ ಕಾರುಗಳಿವೆ. ಹಲವು ಸಂದರ್ಭಗಳಲ್ಲಿ ಬಾಬಾ ಹಮ್ಮರ್ಸ್, ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಕಾರುಗಳನ್ನು ಬಾಡಿಗೆಗೆ ಪಡೆದು ಯಾತ್ರೆಗಳನ್ನು ಮಾಡಿದ್ದಿದೆ. "ಚಿನ್ನ ಹಾಗೂ ಕಾರುಗಳ ಬಗೆಗಿನ್ ನನ್ನ ಪ್ರೀತಿ ಸಾಯಲ್ಲ. ಈ ಜಗತ್ತು ಬಿಟ್ಟು ಹೋಗುವಾಗ ಮೆಚ್ಚಿನ ಅನುಯಾಯಿಗೆ ಇವೆಲ್ಲವನ್ನೂ ಬಿಟ್ಟು ಹೋಗ್ತೀನಿ" ಎನ್ನುತ್ತಾರೆ ಬಾಬಾ.

ಯಶಸ್ವಿ ಬಟ್ಟೆ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ

ಯಶಸ್ವಿ ಬಟ್ಟೆ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ

ಅಧ್ಯಾತ್ಮ ಜೀವನಕ್ಕೆ ಕಾಲಿಡುವ ಮುನ್ನ ಸುಧೀರ್ ಮಕ್ಕರ್ ದೆಹಲಿಯ ಗಾಂಧಿನಗರ ಮಾರ್ಕೆಟ್ ನಲ್ಲಿ ಯಶಸ್ವಿ ಬಟ್ಟೆ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ. ಸದ್ಯಕ್ಕೆ ಅವರಿಗೆ ಗಾಜಿಯಾಬಾದ್ ನಲ್ಲಿ ಅತ್ಯಂತ ದುಬಾರಿ ಫ್ಲ್ಯಾಟ್ ಇದೆ. ಹಾಗಂತ ಮಕ್ಕರ್ ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ಬದುಕು ಹುಡುಕಿಕೊಂಡು ಆರನೇ ವಯಸ್ಸಿಗೇ ಹರ್ ದ್ವಾರಕ್ಕೆ ಹೋದವರು. ಅಷ್ಟ ಕಷ್ಟಗಳನ್ನು ಕಂಡವರು.

ಅಂದಾಜು 150 ಕೋಟಿ ಆಸ್ತಿ

ಅಂದಾಜು 150 ಕೋಟಿ ಆಸ್ತಿ

ಏನೋ ದೇವರ ದಯೆಯಿಂದ, ಆ ಶಿವನ ಕೃಪೆಯಿಂದ ನನ್ನ ವ್ಯಾಪಾರವು ಏಳಿಗೆಯಾಯಿತು. ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಕೈ ಹಿಡಿಯಿತು ಎನ್ನುತ್ತಾರೆ ಮಕ್ಕರ್. ಸುಧೀರ್ ಮಕ್ಕರ್ ಬಾಬಾ ಯಾತ್ರೆ ಕೈಗೊಳ್ಳುವ ವೇಳೆಯಲ್ಲಿ ಬೌನ್ಸರ್ ಗಳು, ಸೆಕ್ಯೂರಿಟಿಗಳು ಇರುತ್ತಾರೆ. ಶ್ರೀ ಮಹಂತ ಜೀ ಗೋಲ್ಡಾನ್ ಪುರಿ ಬಾಬಾಜಿ ಎಂದು ಭಕ್ತರು ಇವರನ್ನು ಕರೆಯುತ್ತಾರೆ. ಈ ಬಾಬಾಜಿ ಬಳಿ ಅಂದಾಜು 150 ಕೋಟಿ ಆಸ್ತಿ ಇದೆಯಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy gold ornaments, including 25 chains— each not less than 500 gm. 58-year-old ‘Golden Baba’ arrived in Ghaziabad on Monday, in his cavalcade comprising 21 luxury cars, for the final leg of the 200km Kanwar Yatra. Sudhir Makkar alias Golden Baba wearing heavy gold ornaments As against 14.5kg last year, he is wearing 20kg of gold during this year’s yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more