ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಓಡಲಿವೆ 50 ಸಾವಿರ ಇವಿ ಬಸ್‌ಗಳು; ಬರಲಿದೆ ಬ್ಯಾಟರಿ ವಿನಿಮಯ ನೀತಿ ?

|
Google Oneindia Kannada News

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ (ಇವಿ)ಗಾಗಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಕೇಂದ್ರ ನೀತಿ(NITI)ಆಯೋಗವು ಹಲವಾರು ಇವಿ ಯೋಜನೆಗಳಲ್ಲಿ ಜಾರಿಗೆ ತರಲು ಮುಂದಾಗಿದೆ. ಇವಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಬಸ್‌ಗಳ ವಿಭಾಗದಲ್ಲಿ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದಿದೆ.

ಇತ್ತೀಚೆಗೆ ನೀತಿ ಆಯೋಗದ ಇ-ಮೊಬಿಲಿಟಿ ನಿರ್ದೇಶಕ ರಣಧೀರ್ ಸಿಂಗ್, ಹರಿಯಾಣದ ಗುರುಗ್ರಾಮ್‌ನಲ್ಲಿ ಇವಿ ಮೊಬಿಲಿಟಿ ಕುರಿತು ಆಯೋಜಿಸಲಾದ EVConನ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಯತಕಾಲಿಕೆಯೊಂದಿಗೆ ನಡೆಸಿದ ಸಂವಾದದಲ್ಲಿ ಇವಿ ಕುರಿತು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಹಲವು ಯೋಜನೆಗಳ ಕುರಿತು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ನೀತಿ ಆಯೋಗದ ಇ-ಮೊಬಿಲಿಟಿ ನಿರ್ದೇಶಕ ರಣಧೀರ್ ಸಿಂಗ್ ಮಾತನಾಡಿ, "ಕೇಂದ್ರ ಸರ್ಕಾರವು ದೇಶಾದ್ಯಂತ 50,000 ಎಲೆಕ್ಟ್ರಿಕ್ ಬಸ್‌ಗಳಿಗೆ ಮೊದಲು ಬಂದವರಿಗೆ ಮೊದಲ ಆಧಾರದ ಮೇಲೆ ಟೆಂಡರ್‌ಗಳನ್ನು ನೀಡುತ್ತಿದೆ. ಮುಂದಿನ ವರ್ಷ ಮಾರ್ಚ್ 2023ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರಿಂದಾಗಿ ಇ-ಬಸ್‌ಗಳು ದೇಶಾದ್ಯಂತ ಓಡಲು ಪ್ರಾರಂಭ ಸಿಗಲಿದೆ," ಎಂದು ಅವರು ತಿಳಿಸಿದ್ದಾರೆ.

 ದ್ವಿಚಕ್ರ ವಾಹನ ಶೇ. 76-80ರಷ್ಟು ಮಾರುಕಟ್ಟೆ

ದ್ವಿಚಕ್ರ ವಾಹನ ಶೇ. 76-80ರಷ್ಟು ಮಾರುಕಟ್ಟೆ

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಇವಿ ವಿಭಾಗದ ವಾಹನಗಳ ಮೇಲೆಯೂ ಸರ್ಕಾರದ ಗಮನ ಹೆಚ್ಚಿದೆ. ದ್ವಿಚಕ್ರ ವಾಹನ ವಿಭಾಗವು ಶೇಕಡಾ 76ರಿಂದ 80ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ನಾಲ್ಕು ಚಕ್ರ ವಾಹನಗಳ ಒಟ್ಟು ಪಾಲು ಶೇಕಡಾ 13ರಷ್ಟಿದೆ ಮತ್ತು ಪ್ರಯಾಣಿಕ ವಾಹನಗಳು ಶೇಕಡಾ 10ಕ್ಕಿಂತ ಕಡಿಮೆ ಇದೆ ಎಂದು ರಣಧೀರ್ ಸಿಂಗ್ ಹೇಳಿದರು.

 ಇವಿಗಾಗಿ 10,000 ಕೋಟಿ ರೂ. ಮೀಸಲು

ಇವಿಗಾಗಿ 10,000 ಕೋಟಿ ರೂ. ಮೀಸಲು

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ (FAME)-2ನ್ನು ವೇಗವಾಗಿ ಅಳವಡಿಸಿಕೊಳ್ಳಲು ಮತ್ತು ತಯಾರಿಸಲು ಸರ್ಕಾರ 10,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅದರಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾತ್ರ ಮೀಸಲಿಡಲಾಗಿದೆ. ಇದರೊಂದಿಗೆ ಉದ್ಯಮಕ್ಕೆ ಆಟೋ ಪಿಎಲ್‌ಇ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್)ಗಾಗಿ ಹಣವನ್ನು ಸಹ ಮೀಸಲಿಡಲಾಗಿದೆ. ಇದರಲ್ಲಿ, ಇವಿಗಳನ್ನು ಉತ್ಪಾದಿಸಲು ಅನೇಕ OEMಗಳಿಗೆ (ಮೂಲ ಸಲಕರಣೆ ತಯಾರಕರು) ಪತ್ರಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 100 ಕಿಮೀಗೆ ವೇಗದ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

100 ಕಿಮೀಗೆ ವೇಗದ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಎರಡೂ ಬದಿಗಳಲ್ಲಿ ಪ್ರತಿ 25 ಕಿಲೋಮೀಟರ್‌ಗಳಿಗೆ ನಿಧಾನವಾದ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಮತ್ತು ಪ್ರತಿ 100 ಕಿಮೀಗೆ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ರಣಧೀರ್ ಸಿಂಗ್ ಮಾಹಿತಿ ನೀಡಿದರು. ಇವಿ ಬಸ್‌ಗಳನ್ನು ಪ್ರತಿ ಬಾರಿಯೂ ಸಂಪೂರ್ಣವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ. ನಿಧಾನಗತಿಯ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಇವಿ ಬಸ್‌ಗಳು ಒಂದು ಬಾರಿಗೆ 50 ಕಿಲೋಮೀಟರ್‌ಗಳವರೆಗೆ ಚಾರ್ಜ್ ಮಾಡಬಹುದು. ಇವಿ ಬಸ್ಸುಗಳು ಸಂಪೂರ್ಣ 250 ಕಿ.ಮೀ.ಗಳಿಗೆ ಏಕಕಾಲದಲ್ಲಿ ಚಾರ್ಜ್ ಮಾಡಬೇಕಾದ ಅಗತ್ಯವಿಲ್ಲ. ಅಲ್ಲಲ್ಲಿ ಇವಿ ಸ್ಟೇಷನ್‌ನಲ್ಲಿ ಜಾರ್ಜ್‌ ಮಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ.

 ಏನಿದು ಬ್ಯಾಟರಿ ವಿನಿಮಯ ನೀತಿ

ಏನಿದು ಬ್ಯಾಟರಿ ವಿನಿಮಯ ನೀತಿ

ಇವಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ನೀತಿ ಬಹಳ ಮುಖ್ಯ ಎಂದು ರಣಧೀರ್ ಸಿಂಗ್ ಸಂವಾದದ ವೇಳೆ ತಿಳಿಸಿದ್ದಾರೆ. ಈ ಎರಡೂ ವಿಭಾಗಗಳಿಗೆ ಚಾರ್ಜಿಂಗ್ ಸ್ಟೇಷನ್‌ಗಳ ಅಗತ್ಯವಿಲ್ಲ. ಬ್ಯಾಟರಿ ವಿನಿಮಯ ನೀತಿಯೊಂದಿಗೆ ಜನರು ಲಿಥಿಯಂ ಐರನ್ ಬ್ಯಾಟರಿಯನ್ನು ಗುತ್ತಿಗೆಗೆ ತೆಗೆದುಕೊಳ್ಳಬಹುದು ಮತ್ತು ಅದನ್ನು ತಮ್ಮ ಇವಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಲ್ಲಿ ಸ್ಥಾಪಿಸಬಹುದು. ಇದರಲ್ಲಿ ಜನರು ಬ್ಯಾಟರಿಯನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ. ಇದು ಜನರಿಗೆ ಅಗ್ಗವಾಗಲಿದೆ. ಈ ನೀತಿಯನ್ನು ಆಗಸ್ಟ್ ಅಂತ್ಯದಲ್ಲಿ ಪ್ರಾರಂಭಿಸಲಾಗುವುದು. ಇದರಲ್ಲಿ ಪ್ರತಿ ಬ್ಯಾಟರಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಸಹ ನೀಡಲಾಗುತ್ತದೆ. ಈ ಸಂಖ್ಯಗಳಿಂದ ಬ್ಯಾಟರಿಯನ್ನು ಪತ್ತೆ ಹಚ್ಚಬಹುದು ಇದರಿಂದ ಮರುಬಳಕೆ ಮಾಡಲು ಸಹಾಯ ಮಾಡುತ್ತದೆ. ಇ-ತ್ಯಾಜ್ಯ ನಿರ್ವಹಣೆಗೆ ಇಂತಹ ನೀತಿ ಬಹಳ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

English summary
The central government is preparing several schemes for Electric Vehicle (EV). The Central Policy Commission (NITI) has decided to implement several EV projects check here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X