ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ 5 ಕಾರಣಗಳು

|
Google Oneindia Kannada News

Recommended Video

ನಿಖಿಲ್ ಸೋಲಿಗೆ ಇಲ್ಲಿದೆ 5 ಪ್ರಮುಖ ಕಾರಣ..?

ಪ್ರತಿಯೊಬ್ಬರೂ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಮಂಡ್ಯದ ಲೋಕಸಭೆ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸುವ ಮೂಲಕ, ನಿಖಿಲ್ ಕುಮಾರಸ್ವಾಮಿ ಅವರಿಗೆ ಭಾರೀ ಆಘಾತ ನೀಡಿದ್ದಾರೆ.

ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸುಮಲತಾ ಅವರ ಎದುರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸೋಲನುಭವಿಸಿದ್ದಾರೆ.

ಕೊನೆಯ ಘಟ್ಟದವರೆಗೂ ರೋಚಕತೆ ಉಳಿಸಿಕೊಂಡಿದ್ದ ಕ್ಷೇತ್ರದಲ್ಲಿ ಮಂಡ್ಯದ ಜನರು ಕೊನೆಗೂ 'ಸ್ವಾಭಿಮಾನ'ಕ್ಕೆ ಮತಹಾಕಿದ್ದಾರೆ.

ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಪರ ಖುದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ಪ್ರಚಾರ ಮಾಡಿದರೂ, ಮಂಡ್ಯದಲ್ಲೇ ಠಿಕಾಣಿ ಹೂಡಿ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದರೂ ಯಾವುದೂ ಫಲ ನೀಡಲಿಲ್ಲ!

ಅಷ್ಟಕ್ಕೂ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾರಣವಾದ ಐದು ಅಂಶಗಳು ಯಾವವು?

ಮಂಡ್ಯ ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲ!

ಮಂಡ್ಯ ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲ!

ಮಂಡ್ಯದ ಜನರನ್ನು ಸೆಳೆಯಲು ಎಲ್ಲಕ್ಕಿಂತ ಪ್ರಬಲ ಅಸ್ತ್ರ ಅವರಲ್ಲಿ ಅನುಕಂಪದ ಅಲೆ ಸೃಷ್ಟಿಸುವುದು ಎಂಬುದನ್ನು ಅರಿತಿದ್ದ ಸುಮಲತಾ ಅಂತೆಯೇ ನಡೆದುಕೊಂಡರು. ಆದರೆ ಅದನ್ನು ಕಂಡುಕೊಳ್ಳುವಲ್ಲಿ ನಿಖಿಲ್ ಸೋತರು. 'ನಿಖಿಲ್ ಎಲ್ಲಿದಿಯಪ್ಪಾ' ಪ್ರಹಸನ ಹಾಸ್ಯಾಸ್ಪದವಾಯಿತೇ ಹೊರತು ಅದರಿಂದ ಮಂಡ್ಯದ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ನಿಖಿಲ್ ಗೆ ಸಾಧ್ಯವಾಗಲಿಲ್ಲ!

ಮಂಡ್ಯದಲ್ಲಿ ನಿಖಿಲ್‌ಗೆ ಸೋಲು: ರಾಜ್ಯ ಸರ್ಕಾರಕ್ಕೆ ಮುಖಭಂಗ ಮಂಡ್ಯದಲ್ಲಿ ನಿಖಿಲ್‌ಗೆ ಸೋಲು: ರಾಜ್ಯ ಸರ್ಕಾರಕ್ಕೆ ಮುಖಭಂಗ

ರಾಜಕೀಯ ಅನುಭವದ ಕೊರತೆ

ರಾಜಕೀಯ ಅನುಭವದ ಕೊರತೆ

ನಿಖಿಲ್ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ್ದರು. ಮಂಡ್ಯ ಕ್ಷೇತ್ರವನ್ನು ತಾನೇ ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಜೆಡಿಎಸ್ ನಿಖಿಲ್ ಅವರನ್ನು ಕಣಕ್ಕಿಳಿಸಿತ್ತು. ತಂದೆ-ತಾತನ ನ ಹೆಸರು ಬಿಟ್ಟರೆ ರಾಜಕೀಯವಾಗಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಯಾವ ಅನುಭವವೂ ಇಲ್ಲದಿದ್ದಿದ್ದು ಅವರ ಸೋಲಿಗೆ ಒಮದು ಕಾರಣವಾಯಿತು.

ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳುಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು

ಅಪ್ರಬುದ್ಧ ಹೇಳಿಕೆಗಳು

ಅಪ್ರಬುದ್ಧ ಹೇಳಿಕೆಗಳು

ಸುಮಲತಾ ಅವರ ವಿರುದ್ಧ ಜೆಡಿಎಸ್ ನಾಯಕರ ಅಪ್ರಬುದ್ಧ ಹೇಳಿಕೆ ನಿಖಿಲ್ ಸೋಲಿಗೆ ಬಹುಮುಖ್ಯ ಕಾರಣ. 'ಗಂಡ ಸತ್ತು ಮೂರು ತಿಂಗಳಾಗಿಲ್ಲ, ಇವೆಲ್ಲ ಬೇಕಾ?', 'ಸುಮಲತಾ ಅವರು ಗೌಡ್ತಿ ಅಲ್ಲ' ಎಂಬಿತ್ಯಾದಿ ಬಾಲಿಶ ಅಸಭ್ಯ, ಬಾಲಿಶ ಹೇಳಿಕೆಗಳು ನಿಖಿಲ್ ಸೋಲಿಗೆ ಕಾರಣವಾಗಿತ್ತು. ನಿಖಿಲ್ ಸ್ವತಃ ಇಂಥ ಯಾವ ಕೇಳಿಕೆಯನ್ನು ನೀಡದೆ ಇದ್ದರೂ, ಪಕ್ಷದ ನಾಯಕರ ಹೇಳಿಕೆ ನಿಖಿಲ್ ಅವರಿಗೆ ಮುಳುವಾಯಿತು.

ಕಾಂಗ್ರೆಸ್-ಜೆಡಿಎಸ್ ನಡುವೆ ಬಿರುಕು

ಕಾಂಗ್ರೆಸ್-ಜೆಡಿಎಸ್ ನಡುವೆ ಬಿರುಕು

ಇವೆಲ್ಲದರೊಟ್ಟಿಗೆ ಜೆಡಿಎಸ್ ನಿಂದ ಹೊರಬಂದು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ, ನಾಗಮಂಗಲ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದಾರೆ ಎಂಬ ಆರೋಪವೂ ಇತ್ತು. ಅದೂ ಆಲ್ಲದೆ, ಬಿಜೆಪಿ ಸುಮಲತಾ ಅವರಿಗೆ ಬಹಿರಂಗ ಬೆಂಬಲ ನೀಡಿದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರೂ ಸುಮಲತಾ ಅವರನ್ನು ಬೆಂಬಲಿಸುವಂತೆ ಮಂಡ್ಯ ಜನತೆಗೆ ಕರೆ ನೀಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಸೋಲಬೇಕಾಯ್ತು.

English summary
Lok Sabha election results 2019: 5 reasons to JDS and Congress candidate Nikhil Kumaraswamy's defeat in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X