ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಗ್ರಹಗಳ ಸಂಯೋಜನೆ, ಬರಿಗಣ್ಣಿಗೆ ಕಾಣುವ ಕೌತುಕ- ಇದು ನೋಡುವುದು ಹೇಗೆ?

|
Google Oneindia Kannada News

ನಮ್ಮ ಬ್ರಹ್ಮಾಂಡದಲ್ಲಿ ಕಣ್ಣಿಗೆ ನಿಲುಕದ ಅಸಂಖ್ಯಾತ ಕೌತುಕಗಳು ನಡೆಯುತ್ತಲೇ ಇರುತ್ತವೆ. ಹಲವು ಸಹಜ ವಿದ್ಯಮಾನಗಳಾದರೂ ನಮಗೆ ಅತೀವ ಕುತೂಹಲ ಕೆರಳಿಸುವ ಸಂಗತಿ ನಮ್ಮ ಸುತ್ತಮುತ್ತಲ ಪ್ರಪಂಚದಲ್ಲಿ ಇದ್ದೇ ಇರುತ್ತದೆ. ಸೂರ್ಯಗ್ರಹಣ, ಚಂದ್ರಗ್ರಹಣ, ಹುಣ್ಣಿಮೆ, ಅಮಾವಾಸ್ಯೆ ಇತ್ಯಾದಿ ವಿದ್ಯಮಾನ ಘಟಿಸುತ್ತಲೇ ಇರುತ್ತವೆ.

ಇದೀಗ ನಮ್ಮ ನೆತ್ತಿಯ ಮೇಲೆ ಐದು ಗ್ರಹಗಳ ಸಂಯೋಜನೆ ರಚನೆಯಾಗಿದೆ. ಗುರು (Jupiter), ಶನಿ (Saturn), ಮಂಗಳ (Mars), ಶುಕ್ರ (Venus) ಮತ್ತು ಬುಧ (Mercury) ಗ್ರಹಗಳು ನಾಲ್ಕು ದಿನಗಳ ಕಾಲ ಆಗಸದಲ್ಲಿ ಒಟ್ಟಿಗೆ ಕಾಣಸಿಗುತ್ತವೆ.

ಈ ವಿದ್ಯಮಾನ ನೋಡಲು ಯಾವ ದೂರದರ್ಶಕವೂ ಬೇಕಿಲ್ಲ. ಬರಿಗಣ್ಣಿನಲ್ಲೇ ಈ ಕೌತುಕವನ್ನು ವೀಕ್ಷಿಸಲು ಸಾಧ್ಯ. ಸಂಜೆ ಸೂರ್ಯಾಸ್ತದ ಒಳಗೆ ನೀವು ಐದು ಗ್ರಹಗಳ ರಚನೆಯನ್ನು ನೋಡಿ ಖುಷಿ ಪಡಬಹುದು. ಆಗಲಿಲ್ಲವೆಂದರೂ ಚಿಂತೆ ಇಲ್ಲ ಅದಕ್ಕಾಗಿಯೇ ಬೇರೆ ಪರ್ಯಾಯ ಮಾರ್ಗಗಳಿವೆ.

18 ವರ್ಷಗಳಿಗೊಮ್ಮೆ ನಡೆಯುವ ವಿದ್ಯಮಾನ

ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಈ ಐದು ಗ್ರಹಗಳು ಆಕಾಶದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಅಪರೂಪ. ಈ ಐದು ಗ್ರಹಗಳ ಜೊತೆ ಚಂದ್ರ ಅಥವಾ ಸೂರ್ಯನೂ ಇರುತ್ತಾನೆ. 18 ವರ್ಷಗಳಿಗೆ ಒಮ್ಮೆ ಮಾತ್ರ ಇವು ಒಟ್ಟಿಗೆ ಕಾಣಸಿಗುತ್ತವೆ. 2002ರಲ್ಲಿ ಇದು ಕೊನೆಯ ಬಾರಿ ಆಗಿದ್ದು. ಮತ್ತೆ ಇದನ್ನು ನೋಡಬೇಕಾದರೆ 2040ರವರೆಗೂ ಕಾಯಬೇಕು.

 ಗ್ರಹಗಳ ಸಂಯೋಜನೆ ಹೇಗಿರುತ್ತೆ?

ಗ್ರಹಗಳ ಸಂಯೋಜನೆ ಹೇಗಿರುತ್ತೆ?

ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ನಮ್ಮ ಭೂಮಿಯ ತುದಿಯಿಂದ ಹಾರ ಪೋಣಿಸಿದ ಮುತ್ತುಗಳಂತೆ ಹರಡಿದಂತೆ ಕಾಣುತ್ತವೆ. ವಿಶೇಷ ಎಂದರೆ ಸೂರ್ಯನಿಂದ ಎಷ್ಟು ಅಂತದಲ್ಲಿ ಗ್ರಹಗಳು ಇರುತ್ತವೋ ಅದೇ ಕ್ರಮದಲ್ಲಿ ಇವುಗಳ ಸಂಯೋಜನೆ ಇರುತ್ತದೆ.

 ಯಾವಾಗ ಕಾಣಿಸುತ್ತದೆ?

ಯಾವಾಗ ಕಾಣಿಸುತ್ತದೆ?

ಜೂನ್ 24, ಅಂದರೆ ನಿನ್ನೆ ಶುಕ್ರವಾರವೇ ಈ ಕೌತುಕದ ವಿದ್ಯಮಾನ ಆರಂಭವಾಗಿದೆ. ಜೂನ್ 27ರವರೆಗೂ ಇದು ಆಗಸದಲ್ಲಿ ಮೂಡುತ್ತಲೇ ಇರುತ್ತದೆ. ಅಂದರೆ ಇನ್ನೂ ಮೂರು ದಿನಗಳ ಕಾಲ ಇದನ್ನು ನೋಡಲು ಅವಕಾಶ ಇದೆ. ಜೂನ್ 24 ಇದು ಸ್ಪಷ್ಟವಾಗಿ ಕಾಣಿಸಿತ್ತಾದರೂ ಬೇರೆ ಬೇರೆ ದೇಶಗಳಲ್ಲಿ ಜೂನ್ 27ರವರೆಗೂ ಇದನ್ನು ನೋಡಬಹುದು. ಭಾರತದಲ್ಲೂ ಜೂನ್ 27ರವರೆಗೆ ಇದು ಆಗಸದಲ್ಲಿ ಮೂಡಿರುತ್ತದೆ.

 ಯಾವ ಸಮಯ ಸರಿ?

ಯಾವ ಸಮಯ ಸರಿ?

ಈ ಗ್ರಹ ಸಂಯೋಜನೆಯನ್ನು ಸರಿಯಾಗಿ ನೋಡಬೇಕೆಂದರೆ, ಅದರಲ್ಲೂ ಬರಿಗಣ್ಣಿನಲ್ಲಿ ನೋಡುವುದಾದರೆ ಬೆಳಗಿನ 3:39ರಿಂದ 4:43ರ ಅವಧಿಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಅಂದರೆ ಸೂರ್ಯೋದಯಕ್ಕೆ ಮುನ್ನವೇ ನೀವು ಎದ್ದು ಆಗಸದ ದೂರಕ್ಕೆ ಕಣ್ಣಿಟ್ಟು ನೋಡಲು ಯತ್ನಿಸಿ, ಕಾಣಿಸಬಹುದು.

ನಿಮಗೆ ಬರಿಗಣ್ಣಿನಲ್ಲಿ ನೋಡಲು ಆಗುತ್ತಿಲ್ಲವೆಂದರೆ ಇಂಟರ್ನೆಟ್‌ನಲ್ಲಿ ಲೈವ್ ಸ್ಟ್ರೀಮಿಂಗ್‌ನಲ್ಲೇ ಈ ವಿದ್ಯಮಾನದ ಪ್ರಸಾರ ಇರುತ್ತದೆ. ಇಟಲಿಯ ರೋಮ್ ನಗರದಲ್ಲಿ ಇದಕ್ಕಾಗಿ ಟೆಲಿಸ್ಕೋಪ್ ಇಟ್ಟು ಲೈವ್ ಸ್ಟ್ರೀಮಿಂಗ್ ಕೊಡಲಾಗುತ್ತಿದೆ. ಇದೂ ನಿಮಗೆ ನೋಡಲು ಸಾಧ್ಯವಿಲ್ಲವೆಂದರೂ ಯೂಟ್ಯೂಬ್ ಇತ್ಯಾದಿ ಕಡೆ ರೆಕಾರ್ಡೆಡ್ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ. ನಾಸಾ ಕೂಡ ವಿಡಿಯೋಗಳನ್ನು ಬಿಡುಗಡೆ ಮಾಡುತ್ತದೆ.

(ಒನ್ಇಂಡಿಯಾ ಸುದ್ದಿ)

English summary
5 Planets Align For 1st Time After 18 Yrs In Rare Planetary Conjunction. Know When, Where and How To Watch It in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X