• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಮತ್ತೆ ಗೆದ್ದಿದ್ದೇಕೆ? 5 ಕಾರಣಗಳು

|

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ. ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಆಡಳಿತಪರ ಅಲೆಯಿದೆ ಎಂದಿದ್ದ ಮೋದಿ ಅವರ ಮಾತು ಸತ್ಯವಾಗಿದೆ. ಎರಡನೇ ಬಾರಿಗೆ ಪೂರ್ಣ ಬಹುಮತದ ಮೂಲಕ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದು.

ಅದರಲ್ಲೂ ಈ ಬಾರಿ 2014 ರ ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದ್ದು, 347 ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟ ಮುನ್ನಡೆ ಹೊಂದಿದೆ.

ನರೇಂದ್ರ ಮೋದಿಯನ್ನು ಕಳ್ಳ ಎಂದು ಕರೆದರೆ ತಪ್ಪಾಗುತ್ತೆ: ನಿತಿನ್ ಗಡ್ಕರಿ

ಇದುವರೆಗಿನ ಎಲ್ಲ ಚುನಾವಣೆಗಳಿಗಿಂತ ಹೆಚ್ಚು ಕೆಸರೆರಚಾಟ, ತೇಜೋವಧೆಗೆ ಸಾಕ್ಷಿಯಾದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಚುನಾವಣೋತ್ತರ ಫಲಿತಾಂಶಗಳನ್ನೂ ಮೀರಿ ಉತ್ತಮ ಪ್ರದರ್ಶನ ತೋರಿದೆ. ಮೋದಿ ವಿರುದ್ಧದ 'ಚೌಕಿದಾರ್ ಚೋರ್ ಹೈ' ಘೋಷಣೆಯನ್ನು ಮತದಾರ ಕಿವಿಗೂ ಹಾಕಿಕೊಳ್ಳದಿರುವುದಕ್ಕೆ ಈ ಫಲಿತಾಂಶವೇ ನಿದರ್ಶನ. ಒಂದೆಡೆ ಕಾಂಗ್ರೆಸ್ ಮತ್ತು ಇನ್ನಿತರ ವಿಪಕ್ಷಗಳು ಮೋದಿ ಅವರೆದುರು ದುರ್ಬಲ ಎನ್ನಿಸಿದ್ದು ಮೋದಿ ಗೆಲುವಿಗೆ ಒಂದು ಮಹತ್ವದ ಕಾರಣವಾದರೆ, ಅದರಾಚೆ ತಮ್ಮ ಗೆಲುವಿಗಾಗಿ ಬಿಜೆಪಿ ಮತ್ತು ಮೋದಿ ಹಾಕಿಕೊಂಡ ಕಾರ್ಯತಂತ್ರ ಫಲನೀಡುವಲ್ಲಿ ಮಹತ್ವದ ಪಾತ್ರ ವಹಿಸಿತು.

ಜನಪರ ಕಾರ್ಯಗಳು ಮತ್ತು ಪ್ರಚಾರ

ಜನಪರ ಕಾರ್ಯಗಳು ಮತ್ತು ಪ್ರಚಾರ

ನರೇಂದ್ರ ಮೊದಿ ಅವರ ಸರ್ಕಾರದ ಜನ್ ಧನ್, ಉಜ್ವಲ, ಆಯುಷ್ಮಾನ್ ಭಾರತ ಮುಂತಾದ ಹತ್ತು ಹಲವು ಜನಪರ ಯೋಜನೆಗಳು ಜನರಲ್ಲಿ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಿದ್ದವು. ಅಪನಗದೀಕರಣದ ಬಗ್ಗೆ ವಿಪಕ್ಷಗಳು ಮಾಡಿದ ವಾದವನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆ ನಡೆಯಲ್ಲಿ ಮೋದಿ ಸರ್ಕಾರಕ್ಕೆ ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶ ಇತ್ತು ಎಂಬುದನ್ನೇ ಜನರು ಒಪ್ಪಿಕೊಂಡರು. ಜಿಎಸ್ಟಿಯಿಂದಲೂ ಭವಿಷ್ಯದಲ್ಲಿ ಒಳಿತಾಗತ್ತೆ ಎಂದು ಜನರಲ್ಲಿ ವಿಶ್ವಾಸ ಭರಿಸುವಲ್ಲಿಯೂ ಬಿಜೆಪಿ ಯಶಸ್ವಿಯಾಯಿತು.

ಸಿಎಂ ಆಗಲಿರುವ ನವೀನ್‌, ಜಗನ್ ಗೆ ಮೋದಿ ಅಭಿನಂದನೆ

ಪ್ರಚಾರ ಎಂಬ ಅಸ್ತ್ರ

ಪ್ರಚಾರ ಎಂಬ ಅಸ್ತ್ರ

ಬಿಜೆಪಿ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ಅದಕ್ಕೆ ಸಾಕಷ್ಟು ಪ್ರಚಾರ ಪಡೆಯುವುದನ್ನು ಎಂದಿಗೂ ಮರೆಯಲಿಲ್ಲ. ಸರ್ಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ, ಜನಪ್ರಿಯತೆಯನ್ನು ಹೆಚ್ಚಿಸುವ ಎಲ್ಲಾ ಅಸ್ತ್ರಗಳನ್ನೂ ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತ್ತು. ಸಾಮಾಜಿಕ ಜಾಲತಾಣಗಳನ್ನೂ ಸಾಕಷ್ಟು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಯಶಸಸ್ವಿಯಾಯಿತು.

ಅಡ್ವಾಣಿಯಿಂದ ನರೇಂದ್ರ ಮೋದಿಗೆ ತುಂಬು ಹೃದಯದ ಅಭಿನಂದನೆ

ಮೋದಿ ಮಾತಿನ ಮೋಡಿ

ಮೋದಿ ಮಾತಿನ ಮೋಡಿ

2014 ರ ಲೋಕಸಭೆ ಚುನಾವಣೆಯಲ್ಲೂ ಎನ್ ಡಿಎ ಗೆಲುವಿಗೆ ಮುಖ್ಯ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಮಾಡುವಂಥ ಮಾತುಗಾರಿಕೆ. ಆದರೆ 'ನುಡಿದಂತೆ ನಡೆ'ದಿಲ್ಲ, ಮೋದಿ ಹೆಚ್ಚುಗಾರಿಕೆಯೆಲ್ಲವೂ ಕೇವಲ ಭಾಷಣಕ್ಕಷ್ಟೇ ಸೀಮಿತ ಎಂಬ ಮಾತು ಸುಳ್ಳಾಗಿದೆ. ಮತ್ತೊಮ್ಮೆ ಮೋದಿ ತಮ್ಮ ಮಾತಿನ ಮೋಡಿಗೆ ಮತದಾರರನ್ನು ಸೆಳೆದಿದ್ದಾರೆ.

ಬಾಲಕೋಟ್ ಏರ್ ಸ್ಟ್ರೈಕ್

ಬಾಲಕೋಟ್ ಏರ್ ಸ್ಟ್ರೈಕ್

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಪಾಕಿಸ್ತಾನದ ಬಾಲಕೋಟ್ ನ ಉಗ್ರನೆಲೆಯ ಮೇಲೆ ದಾಳಿ ನಡೆಸಿತ್ತು. ಈ ಘಟನೆಯೂ ಮೋದಿ ಸರ್ಕಾರದ ಶ್ರೇಯಸ್ಸಾಗಿ ಮೋದಿ ಸರ್ಕಾರ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚಿಸಿತ್ತು. ಅದರೊಟ್ಟಿಗೆ ವಿಪಕ್ಷಗಳು ಈ ದಾಳಿಯ ಬಗ್ಗೆ ನೀಡಿದ ಅಪ್ರಬುದ್ಧ ಹೇಳಿಕೆಗಳು, ಮತ್ತು ಆ ಹೇಳಿಕೆಗಳಿಂದ ಸೇನೆಗೆ ವಿಪಕ್ಷಗಳು ಅವಮಾನ ಮಾಡುತ್ತಿವೆ ಎಂದು ದೂರುವಲ್ಲಿ ಯಶಸ್ವಿಯಾದ ಬಿಜೆಪಿಯಿಂದ ಸರ್ಕಾರಕ್ಕೆ ಸಾಕಷ್ಟು ನೆರವಾಯಿತು.

ಮೋದಿ VS ವಿಪಕ್ಷಗಳು

ಮೋದಿ VS ವಿಪಕ್ಷಗಳು

ಒಬ್ಬ ಮೋದಿ ಅವರನ್ನು ಸೋಲಿಸಲು ವಿಪಕ್ಷಗಳೆಲ್ಲವೂ ಸಿದ್ಧವಾಗಿ ನಿಂತಿದ್ದು, ಮೋದಿ ಅವರ ಸಾಮರ್ಥ್ಯದ ಬಗ್ಗೆ ಜನರಲ್ಲಿ ಮತ್ತಷ್ಟು ನಂಬಿಕೆ ಮೂಡುವುದಕ್ಕೆ ಸಹಾಯಕವಾಯಿತು. ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಮುಂತಾದ ನಾಯಕರು ಪ್ರಧಾನಿ ಹುದ್ದೆಯ ಘನತೆಯನ್ನೂ ಮರೆತು, ನರೇಂದ್ರ ಮೋದಿ ಅವರ ಮೇಲೆ ಮಾಡಿದ ಆರೋಪಗಳು, ಟೀಕೆಗಳು ವಿಪಕ್ಷಗಳಿಗೇ ಹಾನಿಯನ್ನುಂಟು ಮಾಡಿದವು. ರಫೇಲ್ ನಂಥ ಪ್ರಮುಖ ಸಮಸ್ಯೆಗಳನ್ನು, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಪ್ರಕರಣವನ್ನು ಸರ್ಕಾರ ವಿರುದ್ಧದ ಅಸ್ತ್ರವಾಗಿ ವಿಪಕ್ಷಗಳು ಬಳಸಿಕೊಳ್ಳುವಲ್ಲಿ ವಿಪಕ್ಷಗಳು ವಿಫಲರಾದವು. ಮಹಾಘಟಬಂಧನದಲ್ಲಿ ಹೊಂದಾಣಿಕೆಯ ಕೊರತೆ ಉಂಟಾಗಿದ್ದು ಬಿಜೆಪಿಗೆ, ಮೋದಿಗೆ ಲಾಭವಾಯಿತು.

English summary
Lok Sabha election results 2019: 5 Main Reasons Why Narendra Modi Won The 2019 Lok Sabha Elections?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X