ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ಮಾಲೀಕತ್ವ ಪಡೆದರೆ ಟ್ವಿಟ್ಟರ್‌ನಲ್ಲಿ ಈ 4 ಬದಲಾವಣೆ..

|
Google Oneindia Kannada News

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಒಪ್ಪಂದವನ್ನು ಇಂದೇ ಮಾಡಿಕೊಳ್ಳಲಿದ್ದಾರೆ ಎಂದು ವರದಿಗಳು ಆಗಿದೆ. ಟೆಸ್ಲಾ ಸಂಸ್ಥಾಪಕರು ಈಗಾಗಲೇ ಟ್ವಿಟರ್‌ನ ಅತಿದೊಡ್ಡ ಷೇರುದಾರರಾಗಿದ್ದಾರೆ. ಸುಮಾರು ಶೇಕಡ 9.1ರಷ್ಟು ಟ್ವಿಟ್ಟರ್ ಪಾಲುದಾರಿಕೆ ಎಲಾನ್ ಮಸ್ಕ್ ಹೊಂದಿದ್ದಾರೆ.

ಟ್ವಿಟ್ಟರ್‌ ಅನ್ನು ಇಂದೆ ಎಲಾನ್ ಮಸ್ಕ್ ಖರೀದಿ ಮಾಡುವ ಸಾಧ್ಯತೆ ಬಗ್ಗೆ ವರದಿಯ ಮಧ್ಯೆ ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ತಾನು ಇಷ್ಟಪಡದ ಹಾಗೂ ತಾನು ಬಯಸುವ ಬದಲಾವಣೆಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಈ ಬದಲಾವಣೆಗಳ ಬಗ್ಗೆ ಉಲ್ಲೇಖ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಇದಕ್ಕಾಗಿ ಪೋಲ್ ಮೂಲಕ ಜನರ ಅಭಿಪ್ರಾಯವನ್ನು ಕೂಡಾ ಪಡೆಯುತ್ತಿದ್ದಾರೆ. ವರ್ಷಗಳಲ್ಲಿ ಟ್ವೀಟ್‌ಗಳು ಮತ್ತು ಸಮೀಕ್ಷೆಗಳ ಸರಣಿಯಲ್ಲಿ ಎಲಾನ್ ಮಸ್ಕ್ ತಮ್ಮ 83 ಮಿಲಿಯನ್ ಫಾಲೋವರ್ಸ್ ಬಳಿ ಟ್ವಿಟರ್ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್‌ಗಳನ್ನೇ ವಿಶ್ವದ ಈ ಶ್ರೀಮಂತ ವ್ಯಕ್ತಿ ಟ್ವಿಟ್ಟರ್‌ನಲ್ಲಿ ಯಾವೆಲ್ಲಾ ಬದಲಾವಣೆ ತರಲು ಬಯಸುತ್ತಾರೆ ಎಂಬುವುದು ತಿಳಿಯುತ್ತದೆ.

ಇಂದೇ ಎಲಾನ್ ಮಸ್ಕ್‌ಗೆ ಟ್ವಿಟ್ಟರ್ ಮಾರಾಟ ಸಾಧ್ಯತೆ!ಇಂದೇ ಎಲಾನ್ ಮಸ್ಕ್‌ಗೆ ಟ್ವಿಟ್ಟರ್ ಮಾರಾಟ ಸಾಧ್ಯತೆ!

ಸುದ್ದಿ ಸಂಸ್ಥೆ ರಾಯಿಟರ್ಸ್, ನ್ಯೂಯಾರ್ಕ್ ಟೈಮ್ಸ್ ಮತ್ತು ಬ್ಲೂಮ್‌ಬರ್ಗ್ ಪ್ರಕಾರ, ಕಂಪನಿಯ ಮಂಡಳಿಯು ಮಸ್ಕ್ ಜೊತೆ 43 ಬಿಲಿಯನ್ ಡಾಲರ್‌ನಲ್ಲಿ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದೆ. ಎಲಾನ್ ಮಸ್ಕ್ ಮೊದಲು ಏಪ್ರಿಲ್ 14 ರಂದು ಟ್ವಿಟ್ಟರ್ ಅನ್ನು ಖರೀದಿ ಮಾಡುವ ಪ್ರಸ್ತಾಪವನ್ನು ಮಾಡಿದ್ದಾರೆ. ಕಂಪನಿಯ 100 ಪ್ರತಿಶತ ಪಾಲನ್ನು ಖರೀದಿ ಮಾಡಲು ಪ್ರತಿ ಷೇರಿಗೆ 54.20 ಡಾಲರ್ ಪಾವತಿ ಮಾಡಲು ತಾನು ಸಿದ್ಧ ಇರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ನಡುವೆ ಮಸ್ಕ್ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳನ್ನು ಕೂಡಾ ಮಾಡುವ ಚಿಂತನೆಯಲ್ಲಿ ಇದ್ದಾರೆ. ಹಾಗಾದರೆ ಆ ಬದಲಾವಣೆಗಳು ಯಾವುದು ಎಂದು ತಿಳಿಯೋಣ ಮುಂದೆ ಓದಿ.....

ನಿಮಗೆ ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕೇ?

ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಎಪ್ರಿಲ್ 4 ರಂದು ನಡೆಸಿದ ಟ್ವಿಟರ್ ಸಮೀಕ್ಷೆಯಲ್ಲಿ ಎಡಿಟ್ ಬಟನ್‌ನ ಕಲ್ಪನೆಯನ್ನು ಒತ್ತಿ ಹೇಳಿದ್ದಾರೆ. "ಟ್ವಿಟ್ಟರ್‌ನಲ್ಲಿ ನಿಮಗೆ ಎಡಿಟ್ ಬಟನ್ ಬೇಕೇ?," ಎಂದು ಎಲಾನ್ ಮಸ್ಕ್ ತನ್ನ ಪೋಸ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಇದಕ್ಕಾಗಿ ಹೌದು ಹಾಗೂ ಇಲ್ಲ ಎಂಬ ಎರಡು ಆಯ್ಕೆಗಳನ್ನು ನೀಡಿದ್ದಾರೆ. ಆದರೆ ಅದನ್ನು ತಪ್ಪಾಗಿ ಬರೆಯಲಾಗಿದೆ. yes ಬದಲಿಗೆ yse ಹಾಗೂ no ಬದಲಿಗೆ on ಎಂದು ಬರೆಯಲಾಗಿದೆ. ತಪ್ಪಾಗಿ ಬರೆಯುವ ಮೂಲಕವೇ ತಪ್ಪಾಗಿ ಟ್ವೀಟ್ ಮಾಡಿದರೆ ಎಡಿಟ್ ಆಯ್ಕೆ ಬೇಕೇ ಎಂಬ ಪ್ರಶ್ನೆ ಕೇಳಿದ್ದಾರೆ. ಹೆಚ್ಚಿನ ಬಳಕೆದಾರರು ಇದಕ್ಕೆ yes ಎಂಬ ಆಯ್ಕೆಯನ್ನು ಒತ್ತಿದ್ದಾರೆ. ಸುಮಾರು 82.7 ಜನರು ಎಡಿಟ್ ಬಟನ್ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಸ್ಕ್ ಆಫರ್‌ಗೆ ಮುನ್ನ ಟ್ವಿಟ್ಟರ್ ಮಾರಾಟಕ್ಕಿತ್ತಾ? ಇಲ್ಲಿದೆ ಡೀಟೇಲ್ಸ್ಮಸ್ಕ್ ಆಫರ್‌ಗೆ ಮುನ್ನ ಟ್ವಿಟ್ಟರ್ ಮಾರಾಟಕ್ಕಿತ್ತಾ? ಇಲ್ಲಿದೆ ಡೀಟೇಲ್ಸ್

ಟ್ವಿಟ್ಟರ್ ಅಲ್ಗಾರಿದಮ್ ತೆರೆಯುವುದು...

ಮಾರ್ಚ್ 24 ರ ಟ್ವೀಟ್‌ನಲ್ಲಿ, ಟ್ವಿಟರ್‌ನ ಅಲ್ಗಾರಿದಮ್ ಓಪನ್ ಸೋರ್ಸ್ ಆಗಿರಬೇಕು ಎಂದು ಎಲಾನ್ ಮಸ್ಕ್ ಸಲಹೆ ನೀಡಿದ್ದಾರೆ. ಇದನ್ನು ಕೂಡಾ ಸಮೀಕ್ಷೆ ಮಾದರಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಒಂದು ಮಿಲಿಯನ್‌ಗೂ ಅಧಿಕ ಮಂದಿ ಪ್ರತಿಕ್ರಿಯೆ ನೀಡಿದ್ದು, 83 ಪ್ರತಿಶತ ಜನರು ಈ ಕಲ್ಪನೆಗೆ ಹೌದು ಎಂದು ಹೇಳಿದ್ದಾರೆ. ಟ್ವಿಟರ್ ಬಳಕೆದಾರರು ತಮ್ಮ ಪೋಸ್ಟ್ ಅನ್ನು ಕೆಳದರ್ಜೆಗೇರಿಸಲಾಗಿದೆಯೇ ಅಥವಾ ಪ್ರಚಾರ ಮಾಡಲಾಗಿದೆಯೇ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ ಎಂದು ತಾನು ಭಾವಿಸುವುದಾಗಿ ಈ ತಿಂಗಳ ಆರಂಭದಲ್ಲಿ ಟೆಡ್ ಟಾಕ್‌ನಲ್ಲಿ ಹೇಳಿದರು. ಹಾಗೆಯೇ ಗಿಥಬ್‌ನಲ್ಲಿ (Software developer) ಕೋಡ್ ಅನ್ನು ಪೋಸ್ಟ್ ಮಾಡಲು ಸಲಹೆ ನೀಡಿದರು. ಇದರಿಂದ ಜನರು ದೋಷಗಳನ್ನು ಹುಡುಕಬಹುದು ಮತ್ತು ಬದಲಾವಣೆಗಳನ್ನು ಸೂಚಿಸಬಹುದು ಎಂದು ಕೂಡಾ ಹೇಳಿದ್ದರು.

ಕ್ರಿಪ್ಟೋಕರೆನ್ಸಿ ಹಗರಣ ನಿಭಾವಣೆ

ಎಲಾನ್ ಮಸ್ಕ್ ಖಾತೆಯನ್ನು ಅವರ ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿಯನ್ನು ತೆಗೆದುಕೊಂಡ ಸ್ಕ್ಯಾಮರ್‌ಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. 2020 ರಲ್ಲಿ ಅವರ ಖಾತೆ ಹ್ಯಾಕ್ ಆಗಿರುವ ಬಗ್ಗೆ ವರದಿಗಳು ಬಂದಿದ್ದವು. ಜನವರಿಯಲ್ಲಿ, ಫಂಗಬಲ್ ಅಲ್ಲದ ಟೋಕನ್‌ಗಳನ್ನು ಪ್ರದರ್ಶಿಸುವ ಪ್ರೊಫೈಲ್ ಚಿತ್ರಗಳಲ್ಲಿ ಟ್ವಿಟರ್ ಎಂಜಿನಿಯರಿಂಗ್ ಸಂಪನ್ಮೂಲಕ್ಕಾಗಿ ಖರ್ಚು ಮಾಡುತ್ತಿದೆ ಎಂದು ಆರೋಪ ಕೂಡಾ ಮಾಡಿದ್ದರು.

ಟ್ವಿಟ್ಟರ್ ತತ್ವಕ್ಕೆ ಬದ್ಧತೆ

ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಮತ್ತೊಂದು ವಿಚಾರವನ್ನು ಸಮೀಕ್ಷೆ ಮೂಲಕವೇ ಜನರ ಮುಂದೆ ತೆರೆದಿಟ್ಟಿದ್ದರು. ಮಾರ್ಚ್‌ನಲ್ಲಿ ನಡೆಸಿದ ಮತ್ತೊಂದು ಟ್ವಿಟರ್ ಸಮೀಕ್ಷೆಯಲ್ಲಿ, ಅವರು ಬಳಕೆದಾರರನ್ನು, "ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವಕ್ಕೆ ಮುಕ್ತ ವಾಕ್ ಸ್ವಾತಂತ್ಯ ಅತ್ಯಗತ್ಯವಾಗಿದೆ. ಟ್ವಿಟ್ಟರ್ ಈ ತತ್ವಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿದೆ ಎಂದು ನೀವು ನಂಬುತ್ತೀರಾ?," ಎಂದು ಪ್ರಶ್ನೆ ಮಾಡಿದ್ದರು. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 70 ಕ್ಕಿಂತ ಹೆಚ್ಚು ಬಳಕೆದಾರರು ಇಲ್ಲ ಎಂದು ಹೇಳಿದ್ದಾರೆ.

English summary
4 Changes Expected At Twitter If Elon Musk Buys It, Here's Details, Read On.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X