• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!

|

ಮಂಗಳ ಗ್ರಹದಲ್ಲಿ 4 ಬಿಲಿಯನ್ ವರ್ಷ (400 ಕೋಟಿ ವರ್ಷ)ಗಳ ಹಿಂದೆ ಅಪಾರ ಪ್ರಮಾಣದಲ್ಲಿ ನೀರು ಇತ್ತು, ಆದರೆ ಮಂಗಳ ಗ್ರಹದ ಉಷ್ಣಾಂಶದ ಕಾರಣ ಆವಿಯಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಹಲವು ವರ್ಷಗಳ ಹಿಂದೆಯೇ ಮಂಗಳನಲ್ಲಿ ನೀರು ಹುದುಗಿದೆ ಎಂಬ ವಿಚಾರವನ್ನ ವಿಜ್ಞಾನಿಗಳು ತಿಳಿಸಿದ್ದಾರೆ. ಇದಕ್ಕೆ ಹಲವು ಪುರಾವೆಗಳನ್ನೂ ವಿಜ್ಞಾನಿಗಳು ಒದಗಿಸಿದ್ದಾರೆ. ಆದರೆ ಈ ನೀರು ಮಾಯವಾಗಿದ್ದು ಹೇಗೆ..? ಎಂಬ ವಿಚಾರ ಸ್ಪಷ್ಟವಾಗಿರಲಿಲ್ಲ. ಈ ಪ್ರಶ್ನೆಗೆ ಅಮೆರಿಕದ ನ್ಯೂ ಜೆರ್ಸಿ ವಿಶ್ವವಿದ್ಯಾಲಯದ ಸಂಶೋಧಕರು ಉತ್ತರ ಕಂಡುಕೊಂಡಿದ್ದಾರೆ.

ಸುಮಾರು 400 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಭೂಮಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇತ್ತು. ಆದರೆ ಮಂಗಳ ಗ್ರಹದ ತಾಪಮಾನದಿಂದ ಅದು ಆವಿಯಾಗಿದೆಯಂತೆ. ನೀರು ಹರಿದಿರುವ ಕುರುಹುಗಳು, ನದಿ ಸೃಷ್ಟಿಯಾಗಿರುವ ಬಗ್ಗೆ ಸಾಕ್ಷಿಗಳನ್ನೂ ವಿಜ್ಞಾನಿಗಳು ಒದಗಿಸಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ 400 ಕೋಟಿ ವರ್ಷದ ಹಿಂದೆ ಸೂರ್ಯ ಇನ್ನೂ ಎಳಸಾಗಿದ್ದ. ಸೂರ್ಯನ ಕಿರಣಗಳು ಅಷ್ಟಾಗಿ ಬಿಸಿ ತಾಗಿಸುತ್ತಿರಲಿಲ್ಲ.

ಅದರಲ್ಲೂ ಮಂಗಳ ಗ್ರಹಕ್ಕೆ ಸೂರ್ಯನ ಕಿರಣ ತಲುಪುವ ಹೊತ್ತಿಗೆ ಬಿಸಿಯ ಪ್ರಮಾಣ ಇನ್ನಷ್ಟು ತಗ್ಗುತ್ತಿತ್ತು. ಆದರೂ ಮಂಗಳ ಗ್ರಹದಲ್ಲಿ ಅಷ್ಟು ತಾಪಮಾನ ಸೃಷ್ಟಿಯಾಗಲು ಕಾರಣ ಏನು ಎಂದು ಅಧ್ಯಯನ ನಡೆಸಿದಾಗ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಮಂಗಳ ಗ್ರಹದ ಅಧ್ಯಯನದಲ್ಲಿ ಮಹತ್ವದ ಸಾಧನೆ ಇದಾಗಿದ್ದು, ಮಂಗಳ ಗ್ರಹ ಮಾನವನಿಗೆ ಮತ್ತಷ್ಟು ಹತ್ತಿರವಾಗಿದೆ.

ಆಂತರಿಕ ಕ್ರಿಯೆ ಮುಳುವಾಯ್ತಾ..?

ಆಂತರಿಕ ಕ್ರಿಯೆ ಮುಳುವಾಯ್ತಾ..?

ಭೂಮಿ ಒಳಗೆ ನಡೆಯುವ ಆಂತರಿಕ ಕ್ರಿಯೆಗಳಂತೆ ಮಂಗಳ ಗ್ರಹದಲ್ಲೂ ಆಂತರಿಕ ಕ್ರಿಯೆಗಳು ನಡೆಯುತ್ತವೆ. ಈ ಆಂತರಿಕ ಕ್ರಿಯೆ ಇಲ್ಲದ ಹೊರತಾಗಿ ಒಂದು ಗ್ರಹಕ್ಕೆ ಅಸ್ತಿತ್ವ ಇರುವುದಿಲ್ಲ. ಏಕೆಂದರೆ ಬಾಹ್ಯ ಒತ್ತಡಗಳಿಗೆ ಸರಿಸಮನಾಗಿ ಆಂತರಿಕ ಒತ್ತಡವೂ ಇರಬೇಕು. ಹೀಗೆ ಮಂಗಳನ ಒಳಗೆ ಕುದಿಯುತ್ತಿದ್ದ ಲಾವರಸ ಮಂಗಳನ ಮೇಲ್ಮೈ ಬಿಸಿ ಹೆಚ್ಚು ಮಾಡಿದ ಪರಿಣಾಮ ಮಂಗಳ ಗ್ರಹದ ಮೇಲೆ ಇದ್ದ ಹಿಮ ಕರಗಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಮಂಗಳನ ಮೇಲೆ ಬದುಕಿದ್ದವೂ ಎನ್ನಲಾಗಿರುವ ಜೀವಿಗಳು ಕೂಡ ನಾಶವಾಗಿವೆ ಎಂಬುದು ಸದ್ಯ ವಿಜ್ಞಾನಿಗಳ ವಾದವಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನ ಮುಂದುವರಿದಿದೆ.

2 ಕಿ.ಮೀ. ದಪ್ಪವಾಗಿತ್ತು ಹಿಮ..!

2 ಕಿ.ಮೀ. ದಪ್ಪವಾಗಿತ್ತು ಹಿಮ..!

ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ ಬರೋಬ್ಬರಿ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನ ಅಂದಾಜು ಮಾಡುವುದಾದರೆ ಮಾರ್ಕೆಟ್‌ನಿಂದ ಮೆಜೆಸ್ಟಿಕ್‌ವರೆಗೂ ಇರುವ ದೂರದಷ್ಟು ದಪ್ಪನಾಗಿತ್ತು ಮಂಗಳನಲ್ಲಿದ್ದ ಹಿಮದ ಪ್ರಮಾಣ. ಹೀಗೆ ಇಡೀ ಗ್ರಹದ ಬಹುಭಾಗದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಾ ಸಾಗಿದೆ. ಮಂಗಳ ಗ್ರಹದ ಒಳ ಭಾಗದಲ್ಲಿ ಬಿಸಿ ಹೆಚ್ಚಾದಂತೆಲ್ಲಾ ನೆಲವೂ ಕಾದ ಕಬ್ಬಿಣವಾಗಿದೆ. ಹೀಗೆ ನೆಲ ಕಾಯುತ್ತಿದ್ದಂತೆ ಸಹಜವಾಗಿಯೇ ಹಿಮವೂ ಕರಗುತ್ತಾ ಸಾಗಿದೆ. ಮುಂದೆ ಆ ತಾಪಮಾನ ವಾತಾವರಣದಲ್ಲಿ ಹರಡಿ, ಮಂಗಳ ಗ್ರಹದ ಮೇಲೆ ಹರಡಿಕೊಂಡಿದ್ದ ಜಲರಾಶಿಯನ್ನೂ ಮಾಯ ಮಾಡಿದೆ ಎಂಬುದು ಸದ್ಯದ ಸಂಶೋಧನೆಗಳಿಂದ ತಿಳಿದುಬಂದಿದೆ.

ಮಂಗಳ ಗ್ರಹದಲ್ಲಿ ಲೇಔಟ್ ಪಕ್ಕಾ..!

ಮಂಗಳ ಗ್ರಹದಲ್ಲಿ ಲೇಔಟ್ ಪಕ್ಕಾ..!

ನ್ಯೂ ಜೆರ್ಸಿ ವಿವಿ ಸಂಶೋಧಕರ ಅಧ್ಯಯನದಿಂದ ಹೊಸ ಆಸೆಗಳು ಮತ್ತೆ ಚಿಗುರಿವೆ. ಮಂಗಳ ಗ್ರಹದ ಮೇಲೆ ಜೀವಿಸುವ ಮಾನವನ ಬಹುದಿನಗಳ ಕನಸು ನನಸಾಗುವ ಸುಳಿವು ಸಿಕ್ಕಿದೆ. ಮಂಗಳ ಗ್ರಹದಲ್ಲೂ ಇಷ್ಟೊಂದು ತಾಪಮಾನ ಇದೆ ಎಂದಾದರೆ ಮುಂದೆ ಇದೇ ಬಿಸಿಯನ್ನ ಶಕ್ತಿಯಾಗಿ ಪರಿವರ್ತಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಈ ತಾಪಮಾವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿದರೆ ಭವಿಷ್ಯದಲ್ಲಿ ಮಾನವ ಮಂಗಳ ಗ್ರಹದಲ್ಲಿ ಬದುಕಲು ಅಗತ್ಯವಿರುವ ಎಲ್ಲಾ ವಸ್ತುಗಳನ್ನ ಅಲ್ಲೇ ಉತ್ಪಾದಿಸಬಹುದು. ಎಲ್ಲಕ್ಕಿಂತಲೂ ಹೆಚ್ಚಾಗಿ ಮಂಗಳನಲ್ಲಿ ಲೇಔಟ್ ನಿರ್ಮಾಣ ಮಾಡಿ, ಮನೆಯನ್ನೂ ಕಟ್ಟುವ ದಿನಗಳು ದೂರವಿಲ್ಲ.

ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿ ನೀಡಿದ ನಾಸಾ

ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿ ನೀಡಿದ ನಾಸಾ

ಮಂಗಳ ಗ್ರಹದ ಹಿಂದೆ ಬಿದ್ದಿರುವ ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿಯೊಂದನ್ನು ನಾಸಾ ನೀಡಿದೆ. ಮೊದಲ ಬಾರಿಗೆ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಇರುವ ನಾಸಾ ಇದೀಗ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ಈ ಬಾರಿ ಮಂಗಳನ ಮಣ್ಣನ್ನು ಭೂಮಿಗೆ ತರಲು ತುದಿಗಾಲಲ್ಲಿ ನಿಂತಿದೆ. ನಾಸಾ ಕೈಗೊಂಡಿರುವ ಈ ಯೋಜನೆಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಸಾಥ್ ನೀಡಿದೆ. ಹೀಗೆ ಎರಡೂ ಬಲಾಢ್ಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಒಟ್ಟಾಗಿ ಮಂಗಳ ಗ್ರಹದ ಅಂಗಳಕ್ಕೆ ನುಗ್ಗಲು ತಯಾರಿ ನಡೆಸಿವೆ.

English summary
New Studies on Mars suggest red planet had liquid water on its surface about 4 billion years ago. There is proof for water-rich environment on Martian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X