ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020 ರಲ್ಲಿ ನಡೆಯಲಿರುವ ಟಾಪ್ 10 ಸಂಗತಿಗಳು ಇಲ್ಲಿವೆ ನೋಡಿ...

|
Google Oneindia Kannada News

ಬೆಂಗಳೂರು, ಜನವರಿ 2: 2019 ಕ್ಕೆ ಗುಡ್‌ಬೈ ಹೇಳಿ 2020 ನ್ನು ಬರಮಾಡಿಕೊಂಡಿದ್ದೇವೆ. ಹಲವು ಸಿಹಿ ಕಹಿ ಘಟನೆಗಳ ಮೂಲಕ 2019 ಕಳೆದು ಹೋಗಿದೆ. ಪ್ರತಿ ವರ್ಷ ಜಗತ್ತಿನಲ್ಲಿ ಅನೇಕ ಪ್ರಮುಖ ಘಟನೆಗಳು ನಡೆಯುತ್ತಾ ಇರುತ್ತವೆ. ಪೂರ್ವನಿರ್ಧಾರಿತವಾದ ಅತ್ಯಂತ ಪ್ರಮುಖವಾದ ಘಟನೆಗಳ ಬಗ್ಗೆ ಹಲವರಿಗೆ ಕುತೂಹಲ ಇದ್ದೇ ಇರುತ್ತದೆ.

Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳುFlashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು

ಈ ವರ್ಷ ನಮ್ಮ ರಾಜ್ಯ, ದೇಶ ಹಾಗೂ ಜಗತ್ತಿನಲ್ಲಿ ಪ್ರಮುಖ ಘಟನೆಗಳು ನಡೆಯಲಿವೆ. ಎಲ್ಲವೂ ಒಂದೇ ಬಾರಿ ನಡೆಯುವುದಿಲ್ಲ. ಹೀಗಾಗಿ ಜನರಲ್ಲಿ ಗೊಂದಲ ಇರುತ್ತೇ. 2020 ರಲ್ಲಿ ನಡೆಯುವ ಪ್ರಮುಖ ಹತ್ತು ಘಟನೆಗಳು ಯಾವುವು ಹಾಗೂ ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನಿಮ್ಮ ಒನ್ ಇಂಡಿಯಾ ಇಲ್ಲಿ ಹೊತ್ತು ತಂದಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದ ಅವಧಿ ಈ ವರ್ಷ ಡಿಸೆಂಬರ್ 14 ಕ್ಕೆ ಅಂತ್ಯವಾಗುತ್ತೆ. 2020 ರ ನವೆಂಬರ್ 3 ರಂದು ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಆ ದೇಶದ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆಂತರಿಕ ಚುನಾವಣೆ ನಡೆಯಲಿದೆ. ಇದು 2020 ರ ಪ್ರಮುಖ ಜಾಗತಿಕ ವಿದ್ಯಮಾನವಾಗಿದೆ.

ಟೊಕಿಯೋ ಒಲಂಪಿಕ್

ಟೊಕಿಯೋ ಒಲಂಪಿಕ್

ವಿಶ್ವ ಕ್ರೀಡಾ ಜಾತ್ರೆ ಒಲಂಪಿಕ್ ಈ ವರ್ಷ ನಡೆಯಲಿದೆ. ಜುಲೈ 24 ರಿಂದ ಆಗಸ್ಟ್ 9 ರವೆರೆಗೆ ಜಪಾನ್ ರಾಜಧಾನಿ ಟೊಕಿಯೋದಲ್ಲಿ ಒಲಂಪಿಕ್ ನಡೆಯಲಿದೆ. 200 ಕ್ಕೂ ಹೆಚ್ಚು ದೇಶಗಳ ಹನ್ನೊಂದು ಸಾವಿರ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ಬ್ರೆಜಿಲ್‌ನಲ್ಲಿ ಒಲಂಪಿಕ್ ನಡೆದಿತ್ತು.

2019 ರಲ್ಲಿ ವೈರಲ್ ಆದ ಟಾಪ್ 10 ವಿಡಿಯೋಗಳು..2019 ರಲ್ಲಿ ವೈರಲ್ ಆದ ಟಾಪ್ 10 ವಿಡಿಯೋಗಳು..

ಐಸಿಸಿ 20-20 ವಿಶ್ವಕಪ್

ಐಸಿಸಿ 20-20 ವಿಶ್ವಕಪ್

ಈ ಬಾರಿ ಐಸಿಸಿ ಪುರುಷರ 20-20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ನಡೆಯಲಿವೆ. ಭಾರತ ಸೇರಿದಂತೆ 16 ದೇಶದ ತಂಡಗಳು ಭಾಗಿಯಾಗಲಿದ್ದು, ಆರು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ಬಾರಿ ವೆಸ್ಟ್‌ ಇಂಡಿಸ್ ಚಾಂಪಿಯನ್ ಆಗಿತ್ತು.

ಜಗತ್ತಿನ ಅತಿದೊಡ್ಡ ಕಟ್ಟಡ ಆರಂಭ

ಜಗತ್ತಿನ ಅತಿದೊಡ್ಡ ಕಟ್ಟಡ ಆರಂಭ

ಈ ವರ್ಷ ಜಗತ್ತಿನಲ್ಲೇ ಅತಿ ದೊಡ್ಡ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಸೌದಿ ಅರೇಬಿಯಾದಲ್ಲಿ ಆರಂಭವಾಗಲಿರುವ ಈ ಕಟ್ಟಡಕ್ಕೆ ಜೆಡ್ಡಾ ಟವರ್ ಎಂದು ಹೆಸರಿಡಲಾಗಿದೆ. 126 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡ 1 ಕಿಲೋ ಮೀಟರ್ (೩೩೦೦ ಅಡಿ ಎತ್ತರ) ಇರಲಿದೆ. ಇದುವರೆಗೆ ದುಬೈನ ಬುರ್ಜ್ ಖಲೀಪಾ ಕಟ್ಟಡ ಅತಿ ದೊಡ್ಡದು ಎನಿಸಿಕೊಂಡಿತ್ತು. 2600 ಅಡಿ ಎತ್ತರ ಹೊಂದಿದೆ.

ಜನಸಂಖ್ಯೆ 775 ಕೋಟಿ

ಜನಸಂಖ್ಯೆ 775 ಕೋಟಿ

ಈ ವರ್ಷ ವಿಶ್ವದ ಜನಸಂಖ್ಯೆ 775 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ತಜ್ಞರು ಈ 700 ಕೋಟಿ ಜನಸಂಖ್ಯೆಯನ್ನು ಜನಸಂಖ್ಯಾ ಸ್ಪೋಟ ಎಂದು ಕರೆದಿದ್ದರು. ಈಗ ಮತ್ತೆ 75 ಕೋಟಿ ಹೆಚ್ಚಾಗುವ ನಿರೀಕ್ಷೆ ಇದೆ. ಇದೇ ವೇಳೆ ಭಾರತದ ಜನಸಂಖ್ಯೆ 135 ಕೋಟಿ ತಲುಪಲಿದ್ದು, ಚೀನಾ ಜನಸಂಖ್ಯೆ ಬೆಳವಣಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಿದೆ.

ಚಂದ್ರಯಾನ 3

ಚಂದ್ರಯಾನ 3

ಚಂದ್ರಯಾನ 2 ವಿಫಲತೆಯ ನಂತರ ಇಸ್ರೋ ನಿರಾಶೆಯಾಗಿಲ್ಲ. ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದು, ಈ ವರ್ಷವೇ ಚಂದ್ರಯಾನ 3 ನಡೆಸುತ್ತೇವೆ ಎಂದು ಘೋಷಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ನವೆಂಬರ್ 2020 ಕ್ಕೆ ರಾಕೆಟ್ ಹಾರಲಿದೆ. ಕಳೆದ ವರ್ಷ ಚಂದ್ರಯಾನ 2 ಯೋಜನೆಯ ಮುಖ್ಯ ಉದ್ದೇಶವಾಗಿದ್ದ ವಿಕ್ರಮ್‌ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಗೆ ಇಳಿಯುವುದಕ್ಕೆ ಸಾಧ್ಯವಾಗಿರಲಿಲ್ಲ.

ದೆಹಲಿ, ಬಿಹಾರ ಚುನಾವಣೆ

ದೆಹಲಿ, ಬಿಹಾರ ಚುನಾವಣೆ

ಈ ವರ್ಷ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರಿಗೆ ಅಗ್ನಿ ಪರೀಕ್ಷೆ ಕಾದಿದ್ದು, ಸದ್ಯ ದೆಹಲಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ಇಸ್ರೋದಿಂದ ಆದಿತ್ಯ 1

ಇಸ್ರೋದಿಂದ ಆದಿತ್ಯ 1

ಭಾರತದ ಹೆಮ್ಮೆಯ ಇಸ್ರೋ ಈ ವರ್ಷ ಮತ್ತೊಂದು ಮಹತ್ವದ ಸಾಧನೆ ಮಾಡಲಿದೆ. ಸೂರ್ಯನ ಹೊರ ಭಾಗ ಕರೋನಾದ ಅಧ್ಯಯನಕ್ಕೆ ನೌಕೆಯೊಂದನ್ನು ಕಳುಹಿಸಲಿದೆ. ಈ ಯೋಜನೆಗೆ ಆದಿತ್ಯ 1 ಎಂದು ಹೆಸರಿಡಲಾಗಿದೆ. ಇದಕ್ಕಾಗಿ ಏಪ್ರೀಲ್ ನಲ್ಲಿ ರಾಕೆಟ್ ಉಡಾವಣೆ ಮಾಡುವ ಸಂಭವವಿದೆ.

ಕಲಬುರಗಿ ಸಾಹಿತ್ಯ ಸಮ್ಮೇಳನ

ಕಲಬುರಗಿ ಸಾಹಿತ್ಯ ಸಮ್ಮೇಳನ

ಈ ವರ್ಷ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆಯಲಿದೆ. ಫೆಬ್ರುವರಿ 5, 6 ಹಾಗೂ 7 ರಂದು ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಕಳೆದ ಬಾರಿ ಸಮ್ಮೇಳನ ಧಾರವಾಡದಲ್ಲಿ ನಡೆದಿತ್ತು.

ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಈ ವರ್ಷ ಚುನಾವಣೆ ನಡೆಯಲಿದೆ. ಆಗಸ್ಟ್‌ನಲ್ಲಿ ಪ್ರಸ್ತುತ ಅವಧಿ ಕೊನೆಗೊಳ್ಳಲಿದೆ. ಅದೇ ತಿಂಗಳಲ್ಲಿ ಚುನಾವಣೆ ನಡೆಯಬಹುದು. 198 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

English summary
Upcoming Top 10 events in India, Karnataka And World In 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X