ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬ್ಯಾನ್ ಆದ್ರೂ ಟಿಕ್‌ ಟಾಕ್ ಆ್ಯಪ್ ಫಸ್ಟ್‌: ವಿಶ್ವದಲ್ಲೇ ಅತಿ ಹೆಚ್ಚು ಡೌನ್‌ಲೋಡ್

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಚೀನಾದೊಂದಿಗೆ ಗಡಿ ವಿವಾದ ಉಲ್ಬಣಗೊಂಡ ಬಳಿಕ ಭಾರತವು ಚೀನಾ ಕಂಪನಿಗಳ ಆ್ಯಪ್ ಮೇಲೆ ನಿಷೇಧ ಹೇರಿತು. ಅದರಲ್ಲೂ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ನೂರಾರು ಚೀನಿ ಆ್ಯಪ್‌ಗಳನ್ನು ಭಾರತದಿಂದ ಹೊರಗಿಟ್ಟಿತು. ಇದರಲ್ಲಿ ಬೈಟ್ ಡ್ಯಾನ್ ಒಡೆತನದ ಟಿಕ್‌ಟಾಕ್ ಕೂಡ ಒಂದು.

ಭಾರತದ ನಂಬರ್ ಒನ್ ಕಿರು ವೀಡಿಯೋ ಅಪ್ಲಿಕೇಶನ್ ಆಗಿದ್ದ ಟಿಕ್ ಟಾಕ್ ಅನ್ನು ರಾತ್ರೋ ರಾತ್ರಿ ನಿಷೇಧಿಸಲಾಯಿತು. ಇದರ ಜೊತೆಗೆ ಅಮೆರಿಕಾದಲ್ಲೂ ಕೂಡ ಟಿಕ್‌ ಟಾಕ್ ಕಠಿಣ ಸಂದರ್ಭವನ್ನು ಎದುರಿಸುತ್ತಿದೆ. ಆದರೆ ಈ ಎಲ್ಲಾ ಘಟನೆಗಳು ಜಾಗತಿಕವಾಗಿ ಟಿಕ್‌ ಟಾಕ್ ಮೇಲೆ ಪರಿಣಾಮ ಬೀರಿಲ್ಲ ಎಂದು ಅಂಕಿ-ಅಂಶಗಳು ತೋರಿಸಿವೆ. ಟಿಕ್‌ ಟಾಕ್ ಜಗತ್ತಿನಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿದ್ದು, ಈ ವರ್ಷ ಯಾವೆಲ್ಲಾ ಆ್ಯಪ್ ಹೆಚ್ಚು ಡೌನ್‌ಲೋಡ್ ಆಗಿವೆ ಎಂಬ ಮಾಹಿತಿ ಇಲ್ಲಿದೆ.

2020ರಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆ್ಯಪ್

2020ರಲ್ಲಿ ಅತಿಹೆಚ್ಚು ಡೌನ್‌ಲೋಡ್ ಆದ ಆ್ಯಪ್

ಟಿಕ್ ಟೋಕ್ 2020 ರಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಎಂದು ವರದಿಯಾಗಿದೆ. ಪ್ರಮುಖ ವಿಶ್ಲೇಷಣಾ ಸಂಸ್ಥೆ ಆ್ಯಪ್ ಅನ್ನಿ ಈ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. ಟಿಕ್ ಟೋಕ್ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಮುಂಚೂಣಿಯಲ್ಲಿದೆ.

ICICI ಬ್ಯಾಂಕ್‌ನಿಂದ ಹೊಸ ಆ್ಯಪ್: ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಪಾವತಿ ಸೇವೆICICI ಬ್ಯಾಂಕ್‌ನಿಂದ ಹೊಸ ಆ್ಯಪ್: ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಪಾವತಿ ಸೇವೆ

ಫೇಸ್‌ಬುಕ್ ಅನ್ನು ಹಿಂದಿಕ್ಕಿದ ಟಿಕ್ ಟಾಕ್‌

ಫೇಸ್‌ಬುಕ್ ಅನ್ನು ಹಿಂದಿಕ್ಕಿದ ಟಿಕ್ ಟಾಕ್‌

ಕಳೆದ ವರ್ಷ, ಫೇಸ್‌ಬುಕ್ ಅಪ್ಲಿಕೇಶನ್ ಹೆಚ್ಚು ಡೌನ್‌ಲೋಡ್ ಮಾಡಲಾದ ಮೊಬೈಲ್ ಅಪ್ಲಿಕೇಶನ್ ಆಗಿತ್ತು. ಈ ಬಾರಿ ಟಿಕ್ ಟಾಕ್ ಫೇಸ್‌ಬುಕ್‌ನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿರುವುದು ಗಮನಾರ್ಹ. ಈ ಮೂಲಕ ಫೇಸ್‌ಬುಕ್ ಎರಡನೇ ಸ್ಥಾನ ಪಡೆದಿದ್ದು, ಟಿಕ್ ಟಾಕ್‌ನ ಜಾಗತಿಕ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.

ವಾಟ್ಸಾಪ್‌ಗೆ ಮೂರನೇ ಸ್ಥಾನ

ವಾಟ್ಸಾಪ್‌ಗೆ ಮೂರನೇ ಸ್ಥಾನ

ಡೌನ್‌ಲೋಡ್‌ಗಳ ವಿಷಯದಲ್ಲಿ, ಫೇಸ್‌ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್‌ನ ವಾಟ್ಸಾಪ್ ನಂತರದ ಸ್ಥಾನದಲ್ಲಿದೆ. ಇನ್ನು ಫೇಸ್‌ಬುಕ್‌ನ ಒಡೆತನದ ಇನ್‌ಸ್ಟಾಗ್ರಾಮ್ ಐದನೇ ಸ್ಥಾನ ಮತ್ತು ಫೇಸ್‌ಬುಕ್ ಮೆಸೆಂಜರ್ ಆರನೇ ಸ್ಥಾನದಲ್ಲಿದೆ.

ಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರ

ಜ್ಹೂಮ್ ಅಪ್ಲಿಕೇಶನ್‌ ಅತಿ ಹೆಚ್ಚು ಡೌನ್‌ಲೋಡ್

ಜ್ಹೂಮ್ ಅಪ್ಲಿಕೇಶನ್‌ ಅತಿ ಹೆಚ್ಚು ಡೌನ್‌ಲೋಡ್

ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ ಆಗಿರುವ ಜ್ಹೂಮ್ ಆ್ಯಪ್ ಲಾಕ್‌ಡೌನ್ ಮತ್ತು ಕೋವಿಡ್‌ನ ಸಮಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಡೌನ್‌ಲೋಡ್‌ಗಳ ವಿಷಯದಲ್ಲಿ ಜ್ಹೂಮ್ ಅಪ್ಲಿಕೇಶನ್ ನಾಲ್ಕನೇ ಸ್ಥಾನದಲ್ಲಿದೆ. ಏಳನೇ ಸ್ಥಾನದಲ್ಲಿ ಗೂಗಲ್‌ನ ವೀಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಗೂಗಲ್ ಮೀಟ್ ಇದ್ದು, ಮೊದಲ ಹತ್ತು ಸ್ಥಾನಗಳಲ್ಲಿ ಸ್ನ್ಯಾಪ್ ಚಾಟ್, ಟೆಲಿಗ್ರಾಮ್ ಮತ್ತು ಲೈಕ್ ಸೇರಿವೆ.

English summary
As per the report from analytics firm App Annie which covers global markets, TikTok, which is currently banned in India, is the most downloaded app in 2020 globally on both Android and iOS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X