• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಒನ್ಇಂಡಿಯಾ ವಿಡಿಯೋಗಳು

|
Google Oneindia Kannada News

ಸುದ್ದಿ ಸ್ವಾರಸ್ಯಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ ಇಂಡಿಯಾ ಕನ್ನಡ ಮೈಗೂಡಿಸಿಕೊಂಡು, ವೀಕ್ಷಕರ ಮೆಚ್ಚುಗೆ ಗಳಿಸಿದೆ, ಕೆಲವು ಬಾರಿ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ, ತಿದ್ದುಕೊಂಡು ಮುನ್ನಡೆಯುವಂತೆ ಅನೇಕ ವೀಕ್ಷಕರು ಮಾಡಿದ್ದಾರೆ, ಇದಕ್ಕೆ ನಾವು ಧನ್ಯವಾದ ಅರ್ಪಿಸುತ್ತಿದ್ದೇವೆ. ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಒನ್ಇಂಡಿಯಾ ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ 2018ರಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಮೆಲುಕು ಇಲ್ಲಿದೆ.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡು ಸುದ್ದಿ ಹಾಗೂ ಸಿನಿಮಾ ಜಗತ್ತಿನ ಆಗು ಹೋಗುಗಳನ್ನು ನಿಮ್ಮ ಮುಂದಿಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.

ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು

ಒನ್ಇಂಡಿಯಾ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ
* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ
* oneindia kannada youtube channel ಎಂದು ಟೈಪಿಸಿ
* ಮೊದಲಿಗೆ ಬರುವ oneindia kannada- youtube ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.
* ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.
* ಒನ್ಇಂಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ (ಒನ್ ಇಂಡಿಯಾ ಸುದ್ದಿ)

ಯಾವ ರಾಶಿಚಕ್ರದವರು ಶ್ರೀಮಂತರಾಗುತ್ತಾರೆ

ಯಾವ ರಾಶಿಚಕ್ರದವರು ಶ್ರೀಮಂತರಾಗುತ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಮುಂದಿನ ದಿನದಲ್ಲಿ ಶ್ರೀಮಂತಿಕೆಯನ್ನು ಅನುಭವಿಸುವರು ಎನ್ನಲಾಗುತ್ತಿದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಅದೃಷ್ಟವೇನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ಈ ವಿಡಿಯೋ ಸುಮಾರು 19,87,758 ಬಾರಿ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ

ಉತ್ತರ ಕರ್ನಾಟಕದ ಬಗ್ಗೆ ಎಚ್ ಡಿ ಕುಮಾರಸ್ವಾಮಿ

ಉತ್ತರ ಕರ್ನಾಟಕದ ಬಗ್ಗೆ ಎಚ್ ಡಿ ಕುಮಾರಸ್ವಾಮಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹೊರ ಬಂದಿದ್ದು. ರಾಜಕಾರಣಿಗಳು ಹಾಗೂ ಸ್ವಾಮೀಜಿಗಳ ಬೆಂಬಲವೂ ದೊರೆತಿರುವುದು ಹೋರಾಟಕ್ಕೆ ಬಲ ಹೆಚ್ಚಿಸಿದೆ. ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬಗ್ಗೆ ಹೇಳಿದ್ದು ಹೀಗೆ... ಈ ವಿಡಿಯೋ 9,89,052 ಈ ಬಾರಿ ವೀಕ್ಷಣೆ ಪಡೆದುಕೊಂಡಿದೆ.

2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು 2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು

ಕೆಎಸ್ ಆರ್ ಟಿಸಿ ಬಸ್ ಅಪಘಾತದ ಸುದ್ದಿ

ಕೆಎಸ್ ಆರ್ ಟಿಸಿ ಬಸ್ ಅಪಘಾತದ ಸುದ್ದಿ

ಶಾಂತಿನಗರ ಒಂದನೇ ಡಿಪೋದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿ ಶವ, ಅಪಘಾತದಿಂದ ಮೃತಪಟ್ಟಿರುವುದಾಗಿ ತನಿಖೆ ವೇಳೆ ತಿಳಿದುಬಂದಿತ್ತು. ಅಪಘಾತ ನಡೆದ ಸ್ಥಳದಲ್ಲಿ ಬಸ್ ನಿಲ್ಲಿಸದೆ ಬಸ್ ಚಾಲಕ ಬಸ್ ಚಲಾಯಿಸಿಕೊಂಡು ಬಂದು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ, ಚಾಲಕ ಮೊಯಿನುದ್ದೀನ್ ವಿರುದ್ಧ ಸಾಕ್ಷ್ಯ ನಾಶಕ್ಕೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಹೆಚ್ಚಿನ ವಿವರ ಈ ವಿಡಿಯೊದಲ್ಲಿ ಲಭ್ಯ. ಈ ವಿಡಿಯೋ 25,52,879 ಬಾರಿ ವೀಕ್ಷಿಸಲ್ಪಟ್ಟಿದೆ.

ಶಬರಿಮಲೆ ಮಕರ ಜ್ಯೋತಿ ರಹಸ್ಯ ಬಯಲು

ಶಬರಿಮಲೆ ಮಕರ ಜ್ಯೋತಿ ರಹಸ್ಯ ಬಯಲು

ಕೇರಳದ ಶಬರಿಮಲೆ ದೇವಾಲಯದಲ್ಲಿ ಒಂದು ವಿಸ್ಮಯ ನಡೆಯುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. "ಮಕರ ಜ್ಯೋತಿ". ಈ ವಿಸ್ಮಯವನ್ನು ಕಾಣಲು ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಮಾಡಿ ಪುನೀತರಾಗುತ್ತಾರೆ. ಈ ಮಕರ ಜ್ಯೋತಿಯ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳಿವೆ. ಒಬ್ಬರು ಇದು ವಿಸ್ಮಯ ಎಂದರೆ ಮತ್ತೆ ಕೆಲವರು ಇದೆಲ್ಲಾ ಮೋಸ ಎಂದು ವಾದಿಸುತ್ತಾರೆ. ಇದಕ್ಕೆ ಉತ್ತರವನ್ನು ದೇವಾಲಯದ ಕಮಿಟಿಯವರು ನೀಡಿದ್ದಾರೆ. ಹೆಚ್ಚಿನ ವಿವರಣೆ ಈ ವಿಡಿಯೋದಲ್ಲಿದೆ. ಈ ವಿಡಿಯೋ 14,44,726 ಬಾರಿ ವೀಕ್ಷಿಸಲ್ಪಟ್ಟಿದೆ

ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು

ಎಚ್ ಡಿ ಕುಮಾರಸ್ವಾಮಿ ಎರಡನೇ ಮದುವೆ

ಎಚ್ ಡಿ ಕುಮಾರಸ್ವಾಮಿ ಎರಡನೇ ಮದುವೆ

ಎಚ್.ಡಿ.ಕುಮಾರಸ್ವಾಮಿ ಎರಡನೇ ಮದುವೆಯಾಗಿ, ಹೆಣ್ಣುಮಗು ಹುಟ್ಟಿದರೆ ಮತ್ತೆ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿ ಆಗುತ್ತಾರೆ ಎಂದು ಯಾರೋ ಜ್ಯೋತಿಷಿಗಳು ಹೇಳಿದ್ದರಿಂದ ಕುಮಾರಸ್ವಾಮಿ ಎರಡನೇ ಮದುವೆ ಆಗಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದರು. ಈ ವಿಡಿಯೋ 20,76,913 ಬಾರಿ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿ

2 ರುಪಾಯಿಯಿಂದ ಲಕ್ಷಾಂತರ ಗಳಿಕೆ ಹೇಗೆ?

2 ರುಪಾಯಿಯಿಂದ ಲಕ್ಷಾಂತರ ಗಳಿಕೆ ಹೇಗೆ?

ನಿಮ್ಮ ಬಳಿ 2 ರೂಪಾಯಿ ಹಳೇ ನಾಣ್ಯವಿದ್ದರೆ ಮೂರು ಲಕ್ಷ ರೂಪಾಯಿಗಳಿಸಬಹದು..ಅದು ಹೇಗೆ ಮೂರು ಲಕ್ಷ ರೂಪಾಯಿಗಳಿಸಬಹುದು ಅನ್ನೋದಕ್ಕೆ ಈ ವೀಡಿಯೋ ನೋಡಿ..

ಈ ವಿಡಿಯೋ 17,27,741 ಬಾರಿ ವೀಕ್ಷಿಸಲ್ಪಟ್ಟಿದೆ.

ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ

ಶ್ರಾವಣ ಮಾಸದಲ್ಲಿ ಈ 7 ತಪ್ಪುಗಳನ್ನು ಮಾಡಲೇಬೇಡಿ

ಶ್ರಾವಣ ಮಾಸದಲ್ಲಿ ಈ 7 ತಪ್ಪುಗಳನ್ನು ಮಾಡಲೇಬೇಡಿ

ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಪವಿತ್ರವಾದ ತಿಂಗಳು. ಈ ಮಾಸದಲ್ಲಿ ವ್ರತ, ಉಪವಾಸ, ಹೋಮ, ಹವನ, ತೀರ್ಥ ಕ್ಷೇತ್ರಗಳ ದರ್ಶನ ಸೇರಿದಂತೆ ಅನೇಕ ಪುಣ್ಯ ಕೆಲಸಗಳನ್ನು ಮಾಡುತ್ತಾರೆ. ಕೆಲವು ಆಚರಣೆಗಳಿಂದ ಜೀವನದಲ್ಲಿ ಕಷ್ಟಗಳು ಕಳೆದು ಸುಖ ಪ್ರಾಪ್ತಿಯಾಗುವುದು ಎನ್ನಲಾಗುವುದು. ಧಾರ್ಮಿಕ ಆಚರಣೆಗೆ ಮೀಸಲಾಗಿರುವ ಈ ಮಾಸವು ಶಿವನಿಗೂ ಸಮರ್ಪಿಸಲಾಗಿದೆ. ಈ ಪವಿತ್ರ ತಿಂಗಳಲ್ಲಿ ಮನುಷ್ಯನು ತನ್ನ ಕೆಟ್ಟ ಚಿಂತನೆಗಳು ಹಾಗೂ ವರ್ತನೆಗಳಿಂದ ದೂರ ಇರಬೇಕು. ಇಲ್ಲವಾದರೆ ಕೆಲವು ತೊಂದರೆಗಳು ನಮ್ಮನ್ನು ಸುತ್ತಿಕೊಳ್ಳುವುದು ಎನ್ನಲಾಗುತ್ತದೆ. ಈ ವಿಡಿಯೋ 726,820 ಬಾರಿ ವೀಕ್ಷಿಸಲ್ಪಟ್ಟಿದೆ. ಹೆಚ್ಚಿನ ವಿವರ ಈ ವಿಡಿಯೋದಲ್ಲಿದೆ

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನು ಅರ್ಥ?

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನು ಅರ್ಥ?

ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನು ಅರ್ಥ? ಈ ರೀತಿ ಕನಸುಗಳು ಏಕೆ ಬೀಳುತ್ತವೆ. ಇಂಥ ಕನಸು ಬಿದ್ದ ಬಳಿಕ ಏನು ಮಾಡಬೇಕು? ಇದಕ್ಕೆಲ್ಲ ಏನು ಪರಿಹಾರ ಹೆಚ್ಚಿನ ವಿವರಣೆ ಈ ವಿಡಿಯೋದಲ್ಲಿದೆ.

2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು 2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು

ನಟ ಅಂಬರೀಷ್ ಮನೆ ಕಟ್ಟಿ, ಮದುವೆಯಾದ ಕಥೆ

ನಟ ಅಂಬರೀಷ್ ಮನೆ ಕಟ್ಟಿ, ಮದುವೆಯಾದ ಕಥೆ

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ಶನಿವಾರ(ನವೆಂಬರ್ 24) ಮೃತಪಟ್ಟಿದ್ದಾರೆ. ಹಿರಿಯ ನಟ, ಮಾಜಿ ಸಚಿವ ಎಂ.ಎಚ್.ಅಂಬರೀಶ್ ಅಂಬರೀಶ್ ಮನೆ ಕಟ್ಟಿ ಮದುವೆ ಮಾಡಿಕೊಂಡಿದ್ದರ ಕಥೆ ಇಲ್ಲಿದೆ

ವಿಡಿಯೋ 810,474 ಬಾರಿ ವೀಕ್ಷಿಸಲಪಟ್ಟಿದೆ.

ರಾಣಿ ಪದ್ಮಾವತಿ (ಪದ್ಮಿನಿ)ಯ ಅಸಲಿ ಕಥೆ

ರಾಣಿ ಪದ್ಮಾವತಿ (ಪದ್ಮಿನಿ)ಯ ಅಸಲಿ ಕಥೆ

ರಾಣಿ ಪದ್ಮಿನಿ ( ಪದ್ಮಾವತಿ ) ಅತ್ಯಂತ ಸುಂದರ ರೂಪವತಿ ರಾಣಿ. ರಾಣಿ ಪದ್ಮಿನಿ ರಜಪೂತ ರಾಣಿಯಾಗಿದ್ದು ತಂದೆ ಗಂಧರ್ವ ಸೇನಾ ಹಾಗು ತಾಯಿ ಚಂಪಾವತಿ. ರಾಣಿ ಪದ್ಮಾವತಿ ತನ್ನ ಬಾಲ್ಯದಲ್ಲಿ ಹೀರಾ ಮಣಿ ಎಂಬ ಗಿಳಿಯ ಜೊತೆ ಅತಿ ಹೆಚ್ಚು ಸಮಯವನ್ನ ಕಳೆಯುತ್ತಿದ್ದಳು. ರಾಣಿ ಪದ್ಮಾವತಿ ಮದುವೆಯ ವಯಸ್ಸಿಗೆ ಬಂದಾಗ ತಂದೆ ಗಂಧರ್ವ ಸೇನಾ ಮಗಳಿಗೆ ಮಾಡುವೆ ಮಾಡಲೆಂದು ಆಲೋಚಿಸಿ ಸ್ವಯಂವರವನ್ನ ಏರ್ಪಡಿಸುತ್ತಾರೆ. ಆ ಸ್ವಯಂವರಕ್ಕೆ
ಎಲ್ಲಾ ಹಿಂದೂ ರಾಜರು ಹಾಗು ರಜಪೂತ ರಾಜರಿಗೆ ಆಹ್ವಾನವನ್ನ ಕೊಡಲಾಗಿತ್ತು. ಇದೇ ಸ್ವಯಂವರಕ್ಕೆ ಒಂದು ಸಣ್ಣ ಪ್ರದೇಶದ ರಾಜನಾದ ಮಲ್ಕಾನ್ ಸಿಂಗ್ ಹಾಗು ಮೇವಾರ್ ರಾಜ್ಯದ ರಾಜ ರಾವಲ್ ರತನ್ ಸಿಂಗ್ ಕೂಡ ಬಂದಿರುತ್ತಾನೆ. ಈ ಸ್ವಯಂವರದಲ್ಲಿ ರಾಜ ರತನ್ ಸಿಂಗ್ ರಾಜ ಮಲ್ಕಾನ್ ಸಿಂಗ್ ನನ್ನ ಸೋಲಿಸಿ ರಾಣಿ ಪದ್ಮಾವತಿಯ ಕೈ ಹಿಡೀತಾನೆ. ಮುಂದೇನಾಯ್ತು ಎಂದು ತಿಳಿಯಲು ಈ ವಿಡಿಯೋ ನೋಡಿ. ಈ ವಿಡಿಯೋ 8 ಲಕ್ಷ ಬಾರಿ ವೀಕ್ಷಣೆ ಪಡೆದುಕೊಂಡಿದೆ

English summary
2018 Year End special articles: Here is a list Top viewed videos in 2018 on Oneindia Kannada Youtube channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X