ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಮಸಾಲೆ ದೋಸೆ ತಿಂದರೆ ಇನ್ನೊಂದು ತುತ್ತು ಬಾಯಿಗಿಡುವಂತೆಯೇ ಇಲ್ಲ!

|
Google Oneindia Kannada News

ತೆಳುವಾದ, ಬಂಗಾರದ ಬಣ್ಣದ ದೋಸೆ, ಅದರೊಳಗೆ ಆಲೂ ಪಲ್ಯ, ಸುತ್ತ ಹರಡಿಕೊಂಡಿರುವ ಕೆಂಪು ಚಟ್ನಿ, ಇಷ್ಟಿಷ್ಟೇ ಕರಗುವ ಬೆಣ್ಣೆ... ಮಸಾಲೆ ದೋಸೆಯನ್ನು ಹೀಗೆ ವಿವರಿಸುತ್ತಿದ್ದರೆ ನಾಲಗೆ ಮೇಲೆ ಧಾರಾಕಾರ ನೀರು ಜಿನುಗುತ್ತದೆ. ಆದರೆ ನಿಮಗೆ ಗೊತ್ತಿರಬೇಕಾದ ವಿಚಾರವೊಂದಿದೆ.

ನೀವು ಒಂದು ಮಸಾಲೆ ದೋಸೆ ತಿಂದಿರಿ ಅಂದರೆ, ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಬೇಕಾದ ಕ್ಯಾಲೋರಿಯ ಅರ್ಧದಷ್ಟು ನಿಮ್ಮ ದೇಹ ಸೇರಿದಂತೆಯೇ. ಐದು ಖಂಡ ವ್ಯಾಪ್ತಿಯ, ಐದು ದೇಶಗಳ ಅಧ್ಯಯನ ತಂಡವು ಅಧ್ಯಯನ ನಡೆಸಿದೆ.ಬೆಂಗಳೂರಿನಲ್ಲಿ ಮಾರಾಟ ಮಾಡುವ ಮಸಾಲೆ ದೋಸೆಯೆಂದರೆ 1023 ಕಿಲೋ ಕ್ಯಾಲೋರಿ ಇರುತ್ತದಂತೆ.

ಬೆಳಗ್ಗಿನ ತಿಂಡಿಯಲ್ಲಿ ಅಗ್ರಸ್ಥಾನ ಪಡೆಯಿತು 'ದೋಸೆ'ಬೆಳಗ್ಗಿನ ತಿಂಡಿಯಲ್ಲಿ ಅಗ್ರಸ್ಥಾನ ಪಡೆಯಿತು 'ದೋಸೆ'

ಆರೊಗ್ಯವಂತ ವ್ಯಕ್ತಿಗೆ ದಿನಕ್ಕೆ 2,200 ಕಿಲೋ ಕ್ಯಾಲೋರಿ ಬೇಕಾಗುತ್ತದೆ. ಈ ಅಂಶವು ಈಚೆಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಭಾರತ, ಚೀನಾ, ಫಿನ್ ಲ್ಯಾಂಡ್ ಹಾಗೂ ಘಾನಾದಲ್ಲಿ ಆಹಾರ-ಖಾದ್ಯಗಳನ್ನು ಕ್ಯಾಲೋರಿ ಪ್ರಕಾರ ಅಳೆದು, ಅಧ್ಯಯನ ನಡೆಸಲಾಗಿದೆ.

2 masala dosas enough to provide calories needed in a day for healthy person

ಇನ್ನು ಈ ಅಧ್ಯಯನದ ನೇತೃತ್ವ ವಹಿಸಿದ ಪ್ರೊ ರೆಬೆಕಾ ಪ್ರಕಾರ, ಒಂದು ಹೊತ್ತಿನ ಊಟ ಆರುನೂರು ಕಿಲೋ ಕ್ಯಾಲೋರಿಗಿಂತ ಕಡಿಮೆ ಇರಬೇಕು. ಇನ್ನು ಸೇವಾ ಸೌಲಭ್ಯದಲ್ಲಿ ಇರುವ ರೆಸ್ಟೋರೆಂಟ್ ಗಳಲ್ಲಿ 94% ಹಾಗೂ 74% ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ ನೀಡುವ ಆಹಾರ ಪದಾರ್ಥಗಳು 600 ಕಿಲೋಕ್ಯಾಲೋರಿಗಿಂತ ಹೆಚ್ಚೇ ಇರುತ್ತದೆ.

ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ

ಸರಕಾರಗಳು ರೆಸ್ಟೋರೆಂಟ್ ಗಳಿಗೆ ಕಡ್ಡಾಯ ಮಾಡಿ, ಯಾವ ಆಹಾರ ಪದಾರ್ಥಗಳು ಎಷ್ಟು ಕ್ಯಾಲೋರಿ ಇರುತ್ತವೆ ಎಂಬುದನ್ನು ಮೆನು ಲಿಸ್ಟ್ ನಲ್ಲಿ ಹಾಕಬೇಕು ಎಂದು ನಿಯಮಾವಳಿ ರೂಪಿಸಬೇಕು ಎಂದು ಅಧ್ಯಯನದಲ್ಲಿ ಅಭಿಪ್ರಾಯ ಪಡಲಾಗಿದೆ.

English summary
The all-time favourite masala dosa may be deceiving you with its thin, golden look and humble potato filling. The aroma of melting butter and red chilli chutney would make you crave for one, but what probably only a few would know is that a single masala dosa provides almost half the calories a healthy human being requires in a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X