ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆದ ಐಎಎಸ್ ಅಧಿಕಾರಿ ಹರ್ಷಗುಪ್ತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆದಿದೆ. ಚುನಾವಣೆ ಮುಂದೂಡಲು ಬಿಜೆಪಿ ಸರ್ಕಾರ ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದ್ದು ಐಎಎಸ್ ಅಧಿಕಾರಿ ಹರ್ಷಗುಪ್ತ.

" ಬಿಬಿಎಂಪಿ ಚುನಾವಣೆ ವಿಚಾರ ಹೈಕೋರ್ಟ್‌ನಲ್ಲಿರುವುದರಿಂದ ಮೇಯರ್ ಚುನಾವಣೆ ಮುಂದೂಡಲಾಗಿದೆ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಸೋಮವಾರ ಬೆಳಗ್ಗೆ ಹೇಳಿದ್ದರು. ಸೋಮವಾರ ಸಂಜೆ ಹರ್ಷಗುಪ್ತ ಚುನಾವಣೆ ನಿಗದಿಯಾದಂತೆ ಅಕ್ಟೋಬರ್ 1ರಂದು ನಡೆಯಲಿದೆ ಎಂದು ಹೇಳಿದರು.

ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

ಹರ್ಷಗುಪ್ತ ಬೆಂಗಳೂರು ಪ್ರಾದೇಶಿಕ ವಿಭಾಗದ ಆಯುಕ್ತರು. ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸುವ ಹೊಣೆ ಅವರ ಮೇಲಿರುತ್ತದೆ. ಚುನಾವಣೆ ಮುಂದೂಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ. ರಮಣ ರೆಡ್ಡಿ ಹರ್ಷಗುಪ್ತಗೆ ಪತ್ರ ಬರೆದಿದ್ದರು.

ಬಿಜೆಪಿಗೆ ಭಾರಿ ಹಿನ್ನಡೆ; ಇಂದೇ ಬಿಬಿಎಂಪಿ ಮೇಯರ್ ಆಯ್ಕೆ!ಬಿಜೆಪಿಗೆ ಭಾರಿ ಹಿನ್ನಡೆ; ಇಂದೇ ಬಿಬಿಎಂಪಿ ಮೇಯರ್ ಆಯ್ಕೆ!

"ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಅಕ್ಟೋಬರ್ 1ರಂದು ನಡೆಯಲಿದೆ. ಇದರ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಸದಸ್ಯರ ಆಯ್ಕೆ ನಡೆಯಲಿದೆ" ಎಂದು ಹೇಳಿ ಬಿಜೆಪಿಗೆ ಇಕ್ಕಟ್ಟು ತಂದಿಟ್ಟವರು ಹರ್ಷಗುಪ್ತ. ಹರ್ಷಗುಪ್ತ ಯಾರು, ಇಲ್ಲಿದೆ ಪರಿಚಯ

ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು ಸಿಬಿಐ ದಾಳಿ ಮಾಡಿದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಯಾರು

ಪ್ರಾದೇಶಿಕ ಆಯುಕ್ತರು

ಪ್ರಾದೇಶಿಕ ಆಯುಕ್ತರು

1997ನೇ ಕರ್ನಾಟಕ ಬ್ಯಾಚ್ ಐಎಎಸ್ ಅಧಿಕಾರಿ ಹರ್ಷಗುಪ್ತ. ಪ್ರಸ್ತುತ ಬೆಂಗಳೂರು ಪ್ರಾದೇಶಿಕ ವಿಭಾಗದ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವಿಚಾರಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ವಿವಿಧ ಹುದ್ದೆಗಳಲ್ಲಿ ಕಾರ್ಯ

ವಿವಿಧ ಹುದ್ದೆಗಳಲ್ಲಿ ಕಾರ್ಯ

ಹರ್ಷಗುಪ್ತ ಬೀದರ್, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕವನ್ನು ಸೀಮೆಎಣ್ಣೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಹರ್ಷಗುಪ್ತರ ಕಾರ್ಯವೂ ಶ್ಲಾಘನೀಯವಾಗಿದೆ.

ಕಾರ್ಮಿಕ ಇಲಾಖೆ ಆಯುಕ್ತರು

ಕಾರ್ಮಿಕ ಇಲಾಖೆ ಆಯುಕ್ತರು

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿ, ಕಾರ್ಮಿಕ ಇಲಾಖೆ ಆಯುಕ್ತರಾಗಿ ಹರ್ಷಗುಪ್ತ ಕೆಲಸ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರದ ಬಗ್ಗೆ ಭಾರಿ ಚರ್ಚೆ ನಡೆದಿತ್ತು.

ಸಚಿವರ ವಿರುದ್ಧ ದೂರು ನೀಡಿದ್ದರು

ಸಚಿವರ ವಿರುದ್ಧ ದೂರು ನೀಡಿದ್ದರು

ಭದ್ರಾವತಿಯ ಎಂಪಿಎಂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹರ್ಷಗುಪ್ತ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿ ಸುದ್ದಿ ಮಾಡಿದ್ದರು. ಸಾರ್ವಜನಿಕರ ಮುಂದೆ ಸಚಿವರು ತಮ್ಮನ್ನು ನಿಂದಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಆಗ ಐಐಎಸ್ ಅಧಿಕಾರಿಗಳ ಸಂಘ ಸಹ ಅವರ ಬೆಂಬಲಕ್ಕೆ ನಿಂತಿತ್ತು.

ಸುದೀರ್ಘ ರಜೆ ಕೇಳಿದ್ದರು

ಸುದೀರ್ಘ ರಜೆ ಕೇಳಿದ್ದರು

ಎಂಪಿಎಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹರ್ಷಗುಪ್ತ ರಾಜಕೀಯ ಒತ್ತಡಗಳಿಂದ ಬೇಸತ್ತು ರಜೆ ಕೇಳಿದ್ದರು. ಯಾವುದೇ ಒತ್ತಡಕ್ಕೆ ಮಣಿಯಬೇಡಿ, ಸರ್ಕಾರ ನಿಮ್ಮ ಜೊತೆ ಇದೆ ಎಂದು ಅವರ ಮನವೊಲಿಸಲು ಸರ್ಕಾರ ಸಫಲವಾಗಿತ್ತು. ಬಳಿಕ ಹರ್ಷಗುಪ್ತ ಸುಧೀರ್ಘ ರಜೆಯ ಅರ್ಜಿ ವಾಪಸ್ ಪಡೆದಿದ್ದರು.

English summary
Karnataka BJP government made efforts to postpone BBMP mayor election. However, Harsh Gupta regional commissioner of the Bengaluru Division had decided to go ahead with elections. Who is Harsh Gupta, Here are the profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X