ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ಪ್ರವೇಶಕ್ಕೆ ಅವಕಾಶ ದೊರೆಯುತ್ತಿದ್ದಂತೆ ಅರ್ಜಿ ಸಲ್ಲಿಸಿದ 178,000 ಮಹಿಳೆಯರು!

|
Google Oneindia Kannada News

ನವದೆಹಲಿ, ಅಕ್ಟೋಬರ್‌ 30: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಯ ಪರೀಕ್ಷೆಯು ನವೆಂಬರ್‍ 14 ರಂದು ನಡೆಯಲಿದೆ. ಕಳೆದ ತಿಂಗಳು ಎನ್‌ಡಿಎ ಪರೀಕ್ಷೆಗೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಈ ಬಾರಿ ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪೈಕಿ ಮೂರನೇ ಒಂದು ಭಾಗದಷ್ಟು ಅಭ್ಯರ್ಥಿಗಳು ಮಹಿಳೆಯರು ಆಗಿರಲಿದ್ದಾರೆ ಎಂದು ಹೆಸರನ್ನು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯಾ ನ್ಯೂಸ್‌ ವರದಿ ಮಾಡಿದೆ.

2021 ರ ಆಗಸ್ಟ್ 18 ರಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶದಲ್ಲಿ ಮಹಿಳೆಯರಿಗೆ ಅಕಾಡೆಮಿಯ ಬಾಗಿಲು ತೆರೆದಿದೆ. ಈ ವರ್ಷ ಮೊದಲ ಬಾರಿಗೆ ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಯ ಪರೀಕ್ಷೆಗೆ ಹಾಜರಾಗಲಿದ್ದಾರೆ. "ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪರೀಕ್ಷೆಗೆ ಹಾಜರಾಗಲು ಸರಿಸುಮಾರು 570,000 ಅಭ್ಯರ್ಥಿಗಳ ಅರ್ಜಿಯನ್ನು ಸ್ವೀಕಾರ ಮಾಡಲಾಗಿದೆ. ಈ ಪೈಕಿ 178,000 ಮಂದಿ ಮಹಿಳೆಯರು ಆಗಿದ್ದಾರೆ," ಎಂದು ಅಧಿಕಾರಿಗಳು ಹೇಳಿದ್ದಾರೆ.

 ಎನ್‌ಡಿಎ ಪ್ರವೇಶಿಸಲು ದಶಕಗಳಿಂದ ಮಹಿಳೆಯರು ಕಂಡಿದ್ದ ಕನಸು ನನಸು ಎನ್‌ಡಿಎ ಪ್ರವೇಶಿಸಲು ದಶಕಗಳಿಂದ ಮಹಿಳೆಯರು ಕಂಡಿದ್ದ ಕನಸು ನನಸು

66 ವರ್ಷಗಳ ಹಿಂದೆ ಔಪಚಾರಿಕವಾಗಿ ಉದ್ಘಾಟನೆಗೊಂಡ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಈವರೆಗೆ ಪುರುಷರು ಮಾತ್ರ ಪರೀಕ್ಷೆಯನ್ನು ಬರೆಯಲು ಅವಕಾಶವಿತ್ತು. ಈಗ ಮಹಿಳೆಯರಿಗೂ ಅವಕಾಶವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶವು ಸುಮಾರು ಮೂರು ದಶಕಗಳ ಬಳಿಕ ಬಂದಿದೆ.

 178,000 women apply for NDA as forces lift gender barrier

ಎನ್‌ಡಿಎ ಪರೀಕ್ಷೆಗೆ ಸಜ್ಜಾದ 12 ತರಗತಿಯ ವಿದ್ಯಾರ್ಥಿನಿ

ಇನ್ನು ಈ 178,000 ಮಂದಿ ಮಹಿಳೆಯರ ಪೈಕಿ ಗಾಜಿಯಾಬಾದ್‌ನ ಡಿಎಲ್‌ಎಫ್‌ ಖಾಸಗಿ ಶಾಲೆಯ 12 ತರಗತಿಯ ವಿದ್ಯಾರ್ಥಿನಿ ಅನನ್ಯ ಮಧುರ್‌ ಶರ್ಮಾ ಕೂಡಾ ಇದ್ದಾರೆ ಎಂದು ವರದಿಯು ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನನ್ಯ ಶರ್ಮಾ, "ಎನ್‌ಡಿಎಗೆ ಮಹಿಳೆಯರು ಕೂಡಾ ಸೇರಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ, ಆ ತೀರ್ಪು ನನಗಾಗಿಯೇ ಬಂದಿದೆ ಎಂದು ನಾನು ತಿಳಿದೆ. ಇದಕ್ಕೂ ಮುನ್ನ ನಾನು ಮುಂದೆ ಭವಿಷ್ಯದಲ್ಲಿ ಏನು ಮಾಡುವುದು ಎಂಬ ಬಗ್ಗೆ ಬಹಳಷ್ಟು ಗೊಂದಲದಿಂದ ಕೂಡಿದ್ದೆ. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ನನಗೆ ನನ್ನ ಭವಿಷ್ಯದ ಸ್ಪಷ್ಟತೆ ಬಂದಿದೆ," ಎಂದು ತಿಳಿಸಿದರು.

2021ನೇ ಸಾಲಿನ ನೀಟ್ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್2021ನೇ ಸಾಲಿನ ನೀಟ್ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂಕೋರ್ಟ್

"ನಾನು ಈ ಪರೀಕ್ಷೆಯನ್ನು ಬರೆದು ಎನ್‌ಡಿಎ ಸೇರುತ್ತೇನೋ ಎಂಬ ಹರ್ಷದಲ್ಲಿ ಇದ್ದೇವೆ. ನಂತರ ವಿಶೇಷ ಪಡೆಗಳನ್ನು ಆಯ್ಕೆ ಆಗುವ ಆಸೆಯಿದೆ," ಎಂದು ಕೂಡಾ ವಿದ್ಯಾರ್ಥಿನಿ ಅನನ್ಯಾ ಹೇಳಿದ್ದಾರೆ. ಅನನ್ಯಾರ ಚಿಕ್ಕಪ್ಪ ಮೇಜರ್‌ ಮೋಹಿತ್ ಶರ್ಮಾ ವಿಶೇಷ ಪಡೆಯ ಅಧಿಕಾರಿ ಆಗಿದ್ದರು. 2009 ರಲ್ಲಿ ಒಂದು ಕಾರ್ಯಚರಣೆಯಲ್ಲಿ ಸಾವನ್ನಪ್ಪಿದರು. ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಗಿದೆ. ಇನ್ನು ಪ್ರಸ್ತುತ ವಿಶೇಷ ಪಡೆಗೆ ಸೇನೆಯು ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಪರೀಕ್ಷೆಗೆ ಹದಿನೈದು ದಿನಗಳ ಮುಂಚಿತವಾಗಿ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಶುಕ್ರವಾರ ಮಹಿಳಾ ಕೆಡೆಟ್‌ಗಳನ್ನು ಖಡಕ್ವಾಸ್ಲಾ ಮೂಲದ ಅಕಾಡೆಮಿಗೆ ಸ್ವಾಗತಿಸಿದ್ದಾರೆ. ಈ ಅಕಾಡೆಮಿಯು ಪ್ರಸ್ತುತ ಪ್ರತಿ ವರ್ಷ ಸುಮಾರು 2,000 ಕೆಡೆಟ್‌ಗಳ ಗರಿಷ್ಠ ತರಬೇತಿ ಸಾಮರ್ಥ್ಯವನ್ನು ಹೊಂದಿದೆ.

ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಹಾಗೂ ನೌಕಾ ಅಕಾಡೆಮಿ ಪ್ರವೇಶ ಪರೀಕ್ಷೆ ಬರೆಯಲು ಅವಿವಾಹಿತ ಮಹಿಳೆಯರಿಗೆ ಕೇಂದ್ರ ಲೋಕಸೇವಾ ಆಯೋಗ ಅನುಮತಿ ನೀಡಿದೆ. ಚರ್ಚೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹಿಂದೆ ಸುಪ್ರೀಂಕೋರ್ಟ್‌ಗೆ ಎನ್‌ಡಿಎಯಲ್ಲಿ ಮಹಿಳೆಯರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ವಿಚಾರಣೆ ಸಂದರ್ಭದಲ್ಲಿ ಈ ವರ್ಷದಿಂದಲ್ಲ ಮುಂದಿನ ವರ್ಷದಿಂದ ಅವಕಾಶ ಕೊಡುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿತ್ತು. ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈ ವರ್ಷದಿಂದಲೇ ಅವಕಾಶ ನೀಡಲು ಏನು ಸಮಸ್ಯೆ, ಈ ವರ್ಷದಿಂದಲೇ ಎನ್‌ಡಿಎಯಲ್ಲಿ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಿ ಎಂದು ಹೇಳಿದೆ.

 NDAಗೆ ಸಶಸ್ತ್ರ ಪಡೆಗಳ ಕೆಡೆಟ್‌ಗಳಂತೆಯೇ ಮಹಿಳೆಯರನ್ನು ಸ್ವಾಗತಿಸಿ: ನರವಾಣೆ NDAಗೆ ಸಶಸ್ತ್ರ ಪಡೆಗಳ ಕೆಡೆಟ್‌ಗಳಂತೆಯೇ ಮಹಿಳೆಯರನ್ನು ಸ್ವಾಗತಿಸಿ: ನರವಾಣೆ

ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ಪೀಠ, ಮೇ 2022 ರಲ್ಲಿ ಪರೀಕ್ಷೆಗೆ ಹಾಜರಾದರೆ ಜೂನ್ 2023 ರಲ್ಲಿ ಪ್ರವೇಶಾತಿ ನಡೆಯುತ್ತದೆ. ನಾವು ಒಂದು ವರ್ಷದವರೆಗೆ ವಿಳಂಬ ಮಾಡಲು ಸಾಧ್ಯವಿಲ್ಲ. ನಾವು ಹುಡುಗಿಯರಿಗೆ ಭರವಸೆ ನೀಡಿದ್ದೇವೆ. ನಾವು ಈಗ ಆ ಭರವಸೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಈ ವರ್ಷವೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಆದೇಶಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
178,000 women apply for NDA as forces lift gender barrier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X