• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕ ಚುನಾವಣೆ ಸಂದರ್ಭದಲ್ಲಿ ಹರಿದಾಡಿದ್ದು, 1.30 ಲಕ್ಷ ಫೇಕ್ ಸುದ್ದಿಗಳು!

|

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ವಿಶ್ವಾಸಾರ್ಹವಲ್ಲದ ಸುದ್ದಿಗಳನ್ನು ಹರಡುತ್ತಿರುವುದು ಆತಂಕಕಾರಿಯಾಗಿದ್ದರೂ ಭಾರತೀಯ ಮಾಧ್ಯಮಗಳು ವಿಶ್ವಾಸಾರ್ಹ ಸುದ್ದಿಗಳನ್ನು ತಮ್ಮ ಓದುಗರಿಗೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ, ಶೇಕಡ 10ಕ್ಕಿಂತ ಕಡಿಮೆ ಸುದ್ದಿಗಳು 2019ರ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗಿರುವುದು ದೃಢಪಟ್ಟಿದೆ.

ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಮಟ್ಟಹಾಕಲು ಕೃತಕ ಬುದ್ಧಿಮತ್ತೆ(AI)ಯನ್ನು ಬಳಸುವ ಅಗ್ರಗಣ್ಯ ಬ್ರಿಟಿಷ್ ಸ್ಟಾರ್ಟ್‍ಅಪ್ ಸಂಸ್ಥೆ ಲಾಜಿಕಲಿ ನಡೆಸಿದ ಸಮೀಕ್ಷೆಯಿಂದ, ಕಳೆದ ಚುನಾವಣೆಯ ವೇಳೆ ಕೇವಲ 1.30 ಲಕ್ಷ ಸುದ್ದಿಗಳು ಮಾತ್ರ ವಿಶ್ವಾಸಾರ್ಹವಲ್ಲ ಮತ್ತು 33,897 ಲೇಖನಗಳು ಸಂಪೂರ್ಣ ಸುಳ್ಳು ಎಂದು ಹೇಳಿದೆ.

ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತಾ ಪತ್ರ ರದ್ದು

ಈ ಅಧ್ಯಯನದಲ್ಲಿ ತಿಳಿದುಬಂದಂತೆ, ಭಾರತದ ಮಾಧ್ಯಮಗಳಲ್ಲಿ ಪ್ರಕಟವಾದ ಶೇಕಡ 85ರಷ್ಟು ಇಂಗ್ಲಿಷ್ ಸುದ್ದಿಗಳು ಯಾವುದೇ ನಿಖರವಾದ ಅಂಕಿ ಅಂಶಗಳನ್ನು ಒಳಗೊಂಡಿಲ್ಲ.

ಭಾರತೀಯ ಮಾಧ್ಯಮಗಳ ಬಗ್ಗೆ ಸುಳ್ಳುಸುದ್ದಿ ಮತ್ತು ಮಾಧ್ಯಮಕ್ಕೆ ಪಾವತಿ ಮಾಡಿದ ಆರೋಪ ಕೇಳಿ ಬಂದಿದ್ದರೂ, ಈ ಸುಳ್ಳುಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇದೇ ವಿಶ್ವಾಸ ಕುಸಿಯುವ ಪರಿಸ್ಥಿತಿ ಮುಂದುವರಿದರೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿದ ಪತ್ರಿಕಾ ಮಾಧ್ಯಮಕ್ಕೆ ಗಂಭೀರ ಸಮಸ್ಯೆ ಎದುರಾಗಲಿದೆ.

ಸುಳ್ಳು ಸುದ್ದಿಗಳನ್ನು 1 ಲಕ್ಷಕ್ಕೂ ಹೆಚ್ಚು ಬಾರಿ ಶೇರ್

ಸುಳ್ಳು ಸುದ್ದಿಗಳನ್ನು 1 ಲಕ್ಷಕ್ಕೂ ಹೆಚ್ಚು ಬಾರಿ ಶೇರ್

ಲಾಜಿಕಲಿ ಸಂಸ್ಥೆ ಅಧ್ಯಯನ ತಿಳಿಸಿದಂತೆ, ಈ ಅವಧಿಯಲ್ಲಿ ಸುಳ್ಳು ಸುದ್ದಿಗಳನ್ನು 1 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. ದ್ವೇಷಪೂರಕ ಲೇಖನಗಳನ್ನು 3 ಲಕ್ಷ ಬಾರಿ ಶೇರ್ ಮಾಡಲಾಗಿದೆ. 15 ಲಕ್ಷ ಮಂದಿ ತೀರಾ ಪಕ್ಷಪಾತದ ಸುದ್ದಿಗಳು, ಆ ವಿಷಯಕ್ಕೆ ಸಂಬಂಧಿಸಿದಂತೆ ಕಳುಹಿಸಿದ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯಗಳನ್ನಷ್ಟೇ ಒಳಗೊಂಡಿವೆ. ಇದರ ಪರಿಣಾಮವಾಗಿ, ಓದುಗರು ತಮ್ಮದೇ ಆದ ಕೋಟೆಯನ್ನು ಕಟ್ಟಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

10 ಲಕ್ಷ ಮಂದಿ ವಿಶ್ಲೇಷಣೆಗೆ ಒಳಪಟ್ಟಿದ್ದಾರೆ

10 ಲಕ್ಷ ಮಂದಿ ವಿಶ್ಲೇಷಣೆಗೆ ಒಳಪಟ್ಟಿದ್ದಾರೆ

ಚುನಾವಣೆಯ ಅವಧಿಯಲ್ಲಿ ಅಂದರೆ 2019ರ ಏಪ್ರಿಲ್ 1 ರಿಂದ 30ರವರೆಗೆ ಪ್ರಕಟವಾದ ಇಂಗ್ಲಿಷ್ ಪತ್ರಿಕೆಗಳ ಲೇಖನಗಳನ್ನು ಓದಿದ ಸುಮಾರು 10 ಲಕ್ಷ ಮಂದಿಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ವಿಶ್ಲೇಷಣೆಯಿಂದ ತಿಳಿದುಬಂದಂತೆ ರಾಜಕೀಯ ಮತ್ತು ಸರ್ಕಾರಕ್ಕೆ ಸಂಬಂಧಿಸಿದ 1,69,144 ಲೇಖನಗಳ ಪೈಕಿ ಶೇಕಡ 14ರಷ್ಟು ಸುದ್ದಿಗಳು ವಿಶ್ವಾಸಾರ್ಹವಲ್ಲ ಮತ್ತು ಶೇಕಡ 4.6ರಷ್ಟು ಲೇಖನಗಳು ಸಂಪೂರ್ಣ ಸುಳ್ಳು. ಒಟ್ಟಾರೆ ಭಾರತೀಯರು 1 ಕೋಟಿ ಬಾರಿ ಸುದ್ದಿಗಳನ್ನು ಶೇರ್ ಮಾಡಿದ್ದಾರೆ.

ಲಾಜಿಕಲಿ ಸಂಸ್ಥೆಯ ಸಿಇಓ ಲಿರಿಕ್ ಜೈನ್

ಲಾಜಿಕಲಿ ಸಂಸ್ಥೆಯ ಸಿಇಓ ಲಿರಿಕ್ ಜೈನ್

ಲಾಜಿಕಲಿ ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕ ಲಿರಿಕ್ ಜೈನ್ ಹೇಳುವಂತೆ, "ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳ ಹರಡುವಿಕೆಯಿಂದಾಗಿ ಇಡೀ ವಿಶ್ವವು ವಿಶ್ವಾಸ ಕಳೆದುಕೊಳ್ಳುವುದರ ವಿರುದ್ಧ ಹೋರಾಡುತ್ತಿದೆ. ಜವಾಬ್ದಾರಿಯುತ ವರದಿಗಾರಿಕೆ ಇಂದಿನ ಅಗತ್ಯತೆಯಾಗಿದ್ದರೂ, ಸುಳ್ಳುಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನದ ಕೊರತೆ ಇಂದಿನ ದೊಡ್ಡ ಸವಾಲಾಗಿದೆ" ಎಂದಿದ್ದಾರೆ.

ವ್ಯತ್ಯಾಸವನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟಕರ

ವ್ಯತ್ಯಾಸವನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟಕರ

"ಈ ಅಂಕಿ ಸಂಖ್ಯೆಗಳು ನಿಜಕ್ಕೂ ಗಮನಾರ್ಹ; ಏಕೆಂದರೆ ನಮ್ಮ ಪತ್ರಕರ್ತರು ವಾಸ್ತವವನ್ನು ವರದಿ ಮಾಡಲು ಶಕ್ತಿ ಮೀರಿ ಶ್ರಮಿಸಿದರೂ, ಸುಳ್ಳು ಸುದ್ದಿಗಳನ್ನು ದಿನವಿಡೀ ನಿರಂತರವಾಗಿ ಪಸರಿಸುವುದರಿಂದ, ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಸುಳ್ಳು ಹಾಗೂ ನಿಜ ಸುದ್ದಿಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ನಿಜಕ್ಕೂ ಕಷ್ಟಕರ. ಅಂತೆಯೇ ಓದುಗರು ಕೂಡಾ ಸುಳ್ಳು ಹಾಗೂ ನಿಜ ಸುದ್ದಿಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಸುಲಭವಲ್ಲ.

ಆದರೆ, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತವೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ ಹಾಗೂ ನಿಖರವಾಗಿ ವರದಿ ಮಾಡದವರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಸುದ್ದಿಯ ಮೂಲದ ಜಾಡು ಹಿಡಿದರೆ, ವಿಶ್ವಾಸಾರ್ಹತೆ ಮತ್ತು ಮಾಹಿತಿಯ ನಿಖರತೆಯು ಈ ಸಂಕೀರ್ಣ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ ಎನಿಸಿದೆ. ಕೇವಲ ವಿಸ್ತರಿತ ಬುದ್ಧಿಮತ್ತೆ ಅಂದರೆ ತಂತ್ರಜ್ಞಾನ ಮತ್ತು ಮಾನವ ನೈಪುಣ್ಯದ ಸಮ್ಮಿಲನದಿಂದ ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ" ಎಂದು ಲಿರಿಕ್ ಹೇಳಿದರು.

ಜಾಗತಿಕ ಮಟ್ಟದ ಅತಿದೊಡ್ಡ ಸಂಸ್ಥೆ ಲಾಜಿಕಲಿ

ಜಾಗತಿಕ ಮಟ್ಟದ ಅತಿದೊಡ್ಡ ಸಂಸ್ಥೆ ಲಾಜಿಕಲಿ

22 ವರ್ಷದ ಲಿರಿಕ್ ಜೈನ್, ಕೇಂಬ್ರಿಡ್ಜ್ ಮತ್ತು ಎಂಐಟಿ ಪದವೀಧರರಾಗಿದ್ದು, ಸಾಮಾಜಿಕ ಬದಲಾವಣೆಯ ಉದ್ದೇಶವನ್ನು ಹೊಂದಿದ್ದಾರೆ. ಲಾಜಿಕಲಿ ಸಂಸ್ಥೆಯನ್ನು ಡಾಟಾ ವಿಜ್ಞಾನಿಗಳು, ಸಂಕೇತ ದಾಖಲೀಕರಿಸುವವರು, ವಿನ್ಯಾಸಗಾರರು ಮತ್ತು ಪತ್ರಕರ್ತರು ಅಭಿವೃದ್ಧಿಪಡಿಸಿದ್ದಾರೆ. ಸುಳ್ಳುಸುದ್ದಿಗಳ ವಿರುದ್ಧ ಸಮರ ಸಾರುವ ಮೂಲಕ ಇಂಟರ್‍ನೆಟ್‍ನಲ್ಲಿ ವಿಶ್ವಾಸಾರ್ಹತೆಯ ಒಂದು ಪದರವನ್ನು ನಿರ್ಮಿಸುವುದು ಇದರ ಉದ್ದೇಶ. ಇದು ತಕ್ಷಣ, ಬಳಕೆದಾರ ಸ್ನೇಹಿ ಫಿಲ್ಟರ್ ವ್ಯವಸ್ಥೆಯನ್ನು ಒಳಗೊಂಡಿದ್ದು, ನ್ಯಾಯಸಮ್ಮತವಾಗಿ, ಅಧಿಕೃತವಾಗಿ, ವಿಶ್ವಾಸಾರ್ಹ ಮತ್ತು ನಂಬಿಕೆಯ ಮಾಹಿತಿಯನ್ನು ಪಡೆಯಲು ಇದು ಸಹಕಾರಿಯಾಗಿದೆ. ಲಾಜಿಕಲಿ ಈ ಉದ್ದೇಶಕ್ಕಾಗಿ ಇರುವ ಜಾಗತಿಕ ಮಟ್ಟದ ಅತಿದೊಡ್ಡ ಸಂಸ್ಥೆಯಾಗಿದೆ.

English summary
While the spread of fake and unreliable news through social media continues to be a growing concern, Indian media is trying its best to provide reliable information to its readers. At the height of the recently concluded general elections - the largest democratic exercise was undertaken in the world - a survey of news published in English media established that less than 10 percent fake news were reported in April 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X