ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾಂಬೆ ಬೇಗಮ್ಸ್' ನೆಟ್ ಫ್ಲಿಕ್ಸ್ ಸಿರೀಸ್ ನಲ್ಲಿ ಉತ್ತರ ಕನ್ನಡದ ಕುವರಿ!

|
Google Oneindia Kannada News

ಕಾರವಾರ, ಫೆಬ್ರವರಿ 13: ಮಾರ್ಚ್ 8ರ ಮಹಿಳಾ ದಿನದಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವ 'ಬಾಂಬೆ ಬೇಗಮ್ಸ್' ಸಿರೀಸ್- 1ರಲ್ಲಿ ಕನ್ನಡತಿ, ಅದರಲ್ಲೂ ಉತ್ತರ ಕನ್ನಡ ಮೂಲದ 13 ವರ್ಷ ವಯಸ್ಸಿನ ಆಧ್ಯಾ ಆನಂದ್ ಮುಖ್ಯ ತಾರೆಯರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿರುವ ಈ 'ಬಾಂಬೆ ಬೇಗಮ್ಸ್' ಸಿರೀಸ್, ಬಾಲಿವುಡ್ ನಿರ್ದೇಶಕಿ ಹಾಗೂ ಎಂಡಿಮೋಲ್ ಗ್ರೂಪ್ಸ್ ನ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈ ಸಿರೀಸ್ ನಲ್ಲಿ ಪೂಜಾ ಭಟ್ಟ, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್ಠಾಕೂರ್ ಅವರೊಂದಿಗೆ ಆಧ್ಯಾ ಆನಂದ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೆರಿಕದಲ್ಲಿ ಉದ್ಯೋಗದ ಆಮಿಷ; ಯುವತಿಗೆ 57.14 ಲಕ್ಷ ರೂ. ವಂಚನೆ ಅಮೆರಿಕದಲ್ಲಿ ಉದ್ಯೋಗದ ಆಮಿಷ; ಯುವತಿಗೆ 57.14 ಲಕ್ಷ ರೂ. ವಂಚನೆ

ಅಂಕೋಲಾ ಮೂಲದ ಆನಂದ್ ನಾಯಕ ಪುತ್ರಿ

ಅಂಕೋಲಾ ಮೂಲದ ಆನಂದ್ ನಾಯಕ ಪುತ್ರಿ

ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ, ಹುಟ್ಟಿದ್ದು ಮಡಿಕೇರಿಯ ಕೊಡಗಿನಲ್ಲಾದರೂ, ಬೆಳೆದಿದ್ದು ದೂರದ ಸಿಂಗಾಪುರ್ ನಲ್ಲಿ. ತನ್ನ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಆಸಕ್ತಿ ತೋರಿದ ಈಕೆ, ಪ್ರತಿಷ್ಠಿತ ಕೇನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ "ಎ ಯೆಲ್ಲೋ ಬರ್ಡ್' ಸಿನಿಮಾ, "ಒನ್ ಅವರ್ ಟು ಡೇಲೈಟ್', "ಸ್ಕೈಸಿಟಿ'ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ

ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ

ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ್ ನ ವಿಜೇತೆಯಾಗಿರುವ ಈಕೆ, ಸಿಂಗಾಪುರ್ ನಲ್ಲಿ ವ್ಹೂಪೀಸ್ ವರ್ಲ್ಡ್ ಸೀಸನ್ 1, 2, 3, 4, ಲಯನ್ ಮಮ್ಸ್ 2, 3, ವರ್ಲ್ಡ್ ವಿಜ್ಜ್ ಸ್ಲೈಮ್ ಪಿಟ್, ಮೆನಂತು ಇಂಟರ್ನ್ಯಾಷನಲ್ 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ. ಪ್ರಪ್ರಥಮ ಬಾರಿಗೆ ಈಕೆ ಜೂನಿಯರ್ ನಿರೂಪಕಿಯಾಗಿ ಝೀ ಟಿವಿಯಲ್ಲಿ ನಡೆಸಿಕೊಟ್ಟಿದ್ದ "ಬ್ರೈನ್ ಬೂಸ್ಟರ್ಸ್' ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್ ಗಳಲ್ಲಿ ಪ್ರಸಾರ ಕಂಡಿವೆ.

ಮಾಡೆಲ್ಸ್ ವಾಕಿಂಗ್ ರನ್ ವೇ'ನಲ್ಲಿ ಭಾಗವಹಿಸಿದ್ದಾಳೆ

ಮಾಡೆಲ್ಸ್ ವಾಕಿಂಗ್ ರನ್ ವೇ'ನಲ್ಲಿ ಭಾಗವಹಿಸಿದ್ದಾಳೆ

ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಈಕೆಗೆ ಸಿಂಗಾಪುರ್ ನ ಸಿಂಗ್ಟೆಲ್ ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್ ನಲ್ಲಿ‌ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಸಿಂಗಾಪುರ ಪುರಸ್ಕಾರಕ್ಕೆ 2016ರಲ್ಲೇ ಈಕೆ ಭಾಜನಳಾಗಿದ್ದಾಳೆ. ಅಲ್ಲದೇ, ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು "ಮಾಡೆಲ್ಸ್ ವಾಕಿಂಗ್ ರನ್ ವೇ'ನಲ್ಲಿ ಭಾಗವಹಿಸಿದ್ದಕ್ಕಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಕೂಡ ಹೊಂದಿದ್ದಾರೆ.

ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಷೆ

ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಷೆ

ಈಕೆ ಸದ್ಯ "ಬಾಂಬೆ ಬೇಗಮ್ಸ್'ನಲ್ಲಿ ಮುಖ್ಯ ಭೂಮಿಕೆಯ ನಟಿಯರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಭಾರತದಲ್ಲೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ "ಬಾಂಬೇ ಬೇಗಮ್ಸ್' ಆಡಿಷನ್ ನಲ್ಲಿ ಕೊನೆಗೂ ಆಯ್ಕೆಗೊಂಡು ಅವಕಾಶ ಪಡೆದುಕೊಂಡಿರುವ ಈಕೆ ಕನ್ನಡ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳ ಜ್ಞಾನ ಹೊಂದಿದ್ದು, ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಷೆ ಹೊಂದಿದ್ದಾಳೆ.

ಒಟ್ಟಾರೆಯಾಗಿ, ಸಿಂಗಾಪುರ್ ನಲ್ಲಿ ಕನ್ನಡದ ಕಂಪು ಹರಡಿದ್ದ ಈ ಪೋರಿ, ಈಗ ಭಾರತೀಯ ಚಿತ್ರರಂಗದಲ್ಲೂ ಇನ್ನಷ್ಟು ಮಿಂಚುವಂತಾಗಲಿ. ಕನ್ನಡ ಚಿತ್ರಗಳಲ್ಲೂ ನಟಿಸುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನೂ ಹಾರಿಸಲೆಂಬ ಹೆಬ್ಬಯಕೆ ನಮ್ಮದು.

English summary
13-year-old Aadhya Anand, who is based in Uttara Kannada, will be appearing in the "Bombay Begums" Series 1 on Netflix.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X