ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಯುದ್ಧ ಗೆದ್ದ 117 ವರ್ಷದ ಅಜ್ಜಿ, ಬೆರಗಾಯ್ತು ಇಡೀ ಜಗತ್ತು!

|
Google Oneindia Kannada News

ಇದು ಯುರೋಪ್‌ನ ಅಜ್ಜಿಯೊಬ್ಬರ ಯಶೋಗಾಥೆ. ಇಂದಿನ ಯುವ ಸಮೂಹಕ್ಕೆ ಮಾದರಿಯಾದ ಘಟನೆ. 50 ದಾಟಿದರೆ ಸಾಕಪ್ಪ ಅನ್ನೋ ಈ ಕಾಲಘಟ್ಟದಲ್ಲಿ ಶತಮಾನ ಪೂರೈಸಿ, 117ನೇ ಹುಟ್ಟುಹಬ್ಬಕ್ಕೆ ಸಿದ್ಧವಾಗಿದ್ದ ಅಜ್ಜಿಗೆ ಕೊರೊನಾ ವಕ್ಕರಿಸಿತ್ತು. ಫ್ರಾನ್ಸ್ ಮೂಲದ ಸಿಸ್ಟರ್ ಆಂಡ್ರೆಗೆ ಕೊರೊನಾ ದೃಢವಾಗಿತ್ತು. ಆದರೆ ಅಜ್ಜಿಗೆ ಸೋಂಕಿನ ಲಕ್ಷಣಗಳು ಇರಲಿಲ್ಲ.

ಜನವರಿ 16ರಂದು 117 ವರ್ಷದ ಸಿಸ್ಟರ್ ಆಂಡ್ರೆಗೆ ಸೋಂಕು ಕನ್ಫರ್ಮ್ ಆಗುತ್ತಿದ್ದಂತೆ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಅಜ್ಜಿ ಸಂಪೂರ್ಣ ಗುಣಮುಖರಾಗಿದ್ದು, ತಮ್ಮ 117ನೇ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಪಡೆದಿದ್ದಾರೆ. 1904ರ ಫೆಬ್ರವರಿ 11ರಂದು ಜನಿಸಿದ್ದ ಲುಸಿಲ್ ರಾಂಡನ್ 1944ರಲ್ಲಿ ಸಿಸ್ಟರ್ ಆಂಡ್ರೆ ಆಗಿ ಬದಲಾದರು.

ಪಾಸಿಟಿವ್ ಸುದ್ದಿ: ಮಕ್ಕಳಿಗೆ ಕೋವಿಡ್‌ನಿಂದ ರಕ್ಷಣೆ ನೀಡಲಿದೆ ಫ್ಲೂ ಲಸಿಕೆಪಾಸಿಟಿವ್ ಸುದ್ದಿ: ಮಕ್ಕಳಿಗೆ ಕೋವಿಡ್‌ನಿಂದ ರಕ್ಷಣೆ ನೀಡಲಿದೆ ಫ್ಲೂ ಲಸಿಕೆ

117 ವರ್ಷವಾದರೂ ಗಟ್ಟಿಮುಟ್ಟಾಗಿರುವ ಅಜ್ಜಿಗೆ ಎಲ್ಲಿಂದಲೋ ಸೋಂಕು ವಕ್ಕರಿಸಿತ್ತು. ಸಿಸ್ಟರ್ ಆಂಡ್ರೆಗೆ 'ಕೊರೊನಾ' ಕನ್ಫರ್ಮ್ ಆಗುತ್ತಲೇ ಆತಂಕ ಆವರಿಸಿತ್ತು. ಆದರೆ ಈ ಅಜ್ಜಿ ಮಾತ್ರ ಎದುಗುಂದಲಿಲ್ಲ. ಹೇ ಇದ್ಯಾವ ರೋಗ ಅಂತಾ ಧೈರ್ಯದಿಂದ ಚಿಕಿತ್ಸೆ ಪಡೆದರು. ಕ್ವಾರಂಟೈನ್ ಸಂದರ್ಭದಲ್ಲೂ ಸಿಸ್ಟರ್ ಆಂಡ್ರೆ ಭಯಪಡದೆ ತಾನೆಷ್ಟು ಗಟ್ಟಿಗಿತ್ತಿ ಅನ್ನೋದನ್ನ ಜಗತ್ತಿಗೆ ಸಾರಿ ಹೇಳಿದ್ದಾರೆ.

ಸಾವು ಎಂದರೆ ನನಗೆ ಭಯವಿಲ್ಲ..!

ಸಾವು ಎಂದರೆ ನನಗೆ ಭಯವಿಲ್ಲ..!

ಅಂತಾರಾಷ್ಟ್ರೀಯ ಮಾಧ್ಯಮಗಳ ಕಿವಿಗೆ 117ರ ಅಜ್ಜಿ 'ಕೊರೊನಾ'ದಿಂದ ಗುಣಮುಖರಾದ ಸುದ್ದಿ ಬೀಳುತ್ತಲೇ ಸಂದರ್ಶನ ಮಾಡಿದ್ದಾರೆ. ವರದಿಗಾರರು ಕೇಳುವ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರ ನೀಡಿರುವ ಅಜ್ಜಿ, ನೋಡಿ ನನಗೆ ಸಾವು ಅಂದರೆ ಭಯವಿಲ್ಲ. ಹೀಗಾಗಿ ಕೊರೊನಾ ವೈರಸ್ ಬಗ್ಗೆಯೂ ನಾನು ಭಯಪಡಲಿಲ್ಲ. ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಹೋರಾಡಿ ಗೆದ್ದಿದ್ದೇನೆ. ಗೆಲ್ಲದೆ ಇದ್ದಿದ್ದರೆ ನನ್ನ ಅಣ್ಣ, ನನ್ನ ಅಜ್ಜ ಹಾಗೂ ಅಜ್ಜಿ ಇದ್ದ ಜಾಗಕ್ಕೆ ಸೇರಿರುತ್ತಿದೆ ಎಂದಿದ್ದಾರೆ. ಹೀಗೆ ಎಂತಹ ಸಂದರ್ಭ ಬಂದರೂ ಎದೆಗುಂದಬೇಡಿ ಎಂದು ಸಂದರ್ಶನ ಮಾಡಲು ಬಂದವರಿಗೂ ಧೈರ್ಯ ತುಂಬಿದ್ದಾರೆ ಅಜ್ಜಿ ಸಿಸ್ಟರ್ ಆಂಡ್ರೆ.

 ಈ ವಯಸ್ಸಲ್ಲಿ ಸುಲಭದ ಮಾತಲ್ಲ..!

ಈ ವಯಸ್ಸಲ್ಲಿ ಸುಲಭದ ಮಾತಲ್ಲ..!

ದೇಹ ಯಾವುದಕ್ಕೂ ಸ್ಪಂದಿಸುವುದಿಲ್ಲ, ಪ್ರತಿಕಾಯಗಳು ಹುಟ್ಟಿಕೊಳ್ಳುವುದೇ ಪಕ್ಕಾ ಡೌಟ್. ಅಂದಹಾಗೆ ಈ ಮಾತುಗಳನ್ನ ಹೇಳಿರುವುದು ತಜ್ಞರು. ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಗೆ ಸಾಕಷ್ಟು ಸಮಯ ಬೇಕಿರುತ್ತದೆ. ಹಾಗೂ ವಯಸ್ಸಿನ ಅಂತರ ಕೂಡ ಮುಖ್ಯ. ಆದರೆ 117ರ ವಯಸ್ಸಲ್ಲೂ ಅಜ್ಜಿ ಧೈರ್ಯದಿಂದಲೇ ಎಲ್ಲವನ್ನೂ ಎದುರಿಸಿ ಗೆದ್ದಿರುವುದು ವೈದ್ಯ ಲೋಕದ ಅಚ್ಚರಿ ಎಂದು ಯುರೋಪ್‌ನ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಕೊರೊನಾ ಸುಳಿಗಾಳಿಗೆ ಯುರೋಪ್ ತರಗೆಲೆಯಂತೆ ಅಲುಗಾಡಿ ಹೋಗಿದೆ. ಯುರೋಪ್‌ನಲ್ಲಿ ಸಾವಿರಾರು ಯುವಕರು ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಆದ್ರೆ ಅಜ್ಜಿ 'ದಿ ಗ್ರೇಟ್' ಎನ್ನಿಸಿಕೊಂಡಿದ್ದಾರೆ.

ಕೊವಿಡ್19ನಿಂದ ಬಚಾವಾದ 114ರ ವೃದ್ಧ, ಚಿಕಿತ್ಸೆ ರಹಸ್ಯವೇನು?ಕೊವಿಡ್19ನಿಂದ ಬಚಾವಾದ 114ರ ವೃದ್ಧ, ಚಿಕಿತ್ಸೆ ರಹಸ್ಯವೇನು?

3.15 ಕೋಟಿ ಸೋಂಕಿತರು

3.15 ಕೋಟಿ ಸೋಂಕಿತರು

ಯುರೋಪ್ ರಾಷ್ಟ್ರಗಳಲ್ಲಿ 3 ಕೋಟಿ 15 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಪೈಕಿ ಸುಮಾರು ಮುಕ್ಕಾಲು ಮಿಲಿಯನ್ ಅಂದರೆ 7.5 ಲಕ್ಷ ಜನರು ಉಸಿರು ಚೆಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅಜ್ಜಿಯ ಧೈರ್ಯ ಯುರೋಪ್‌ಗೆ ಹೊಸ ಹುರುಪು ನೀಡುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯುರೋಪ್ ರಾಷ್ಟ್ರಗಳು, ಕೊರೊನಾ ಬಿರುಗಾಳಿಗೆ ತತ್ತರಿಸಿವೆ. ಪರಿಸ್ಥಿತಿ ಹೀಗಿರುವಾಗ ಸೋಂಕಿತರಿಗೆ ಸದ್ಯ ವ್ಯಾಕ್ಸಿನ್ ಮತ್ತು ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಸ್ಪೇನ್, ಫ್ರಾನ್ಸ್, ಇಟಲಿ ಸೇರಿದಂತೆ ಜರ್ಮನಿಯ ಸ್ಥಿತಿ ಸಂದಿಗ್ಧವಾಗಿದೆ.

ಸ್ಪೇನ್‌ನಲ್ಲಿ ಸೋಂಕಿತರ ನರಳಾಟ

ಸ್ಪೇನ್‌ನಲ್ಲಿ ಸೋಂಕಿತರ ನರಳಾಟ

ಯುರೋಪ್‌ನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಸ್ಪೇನ್ ಬಡರಾಷ್ಟ್ರ. ಅದರಲ್ಲೂ ಅಲ್ಲಿನ ಆರೋಗ್ಯ ವ್ಯವಸ್ಥೆ ತೀರಾ ಹದಗೆಟ್ಟು ಹೋಗಿದೆ. ಕೊರೊನಾ ಬಂದಪ್ಪಳಿಸಿದ ಬಳಿಕ ಸ್ಪೇನ್‌ನಲ್ಲಿ ಎಲ್ಲವೂ ಅಯೋಮಯವಾಗಿದೆ. ಜನರು ಕೊರೊನಾ ಸೋಂಕಿನಿಂದ ಬಚಾವ್ ಆಗಲು ನಾನಾ ತಂತ್ರ ಹೂಡುವಂತಾಗಿದೆ. ಏಕೆಂದರೆ ಆಸ್ಪತ್ರೆಗೆ ಹೋದವ ವಾಪಸ್ ಮನೆಗೆ ಬರ್ತಾನೆ ಅನ್ನೋದೇ ಡೌಟ್. ಪರಿಸ್ಥಿತಿ ಹೀಗಿರುವಾಗಲೇ ಸುಮಾರು 63 ಸಾವಿರ ಸ್ಪೇನ್ ನಾಗರಿಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 2020ರ ಮೇ-ಜೂನ್ ವೇಳೆ ಸ್ಪೇನ್‌ನಲ್ಲಿ ಎಲ್ಲಾ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿದ್ದವು. ಐಸಿಯು ಬೆಡ್ ಸಿಗದೆ ಎಷ್ಟೋ ಜನ ಉಸಿರು ಚೆಲ್ಲಿದ್ದರು.

ಕೊರೊನಾ ಸೋಂಕು ಗೆದ್ದ ಬಳ್ಳಾರಿಯ ಶತಾಯುಷಿ ಅಜ್ಜಿಕೊರೊನಾ ಸೋಂಕು ಗೆದ್ದ ಬಳ್ಳಾರಿಯ ಶತಾಯುಷಿ ಅಜ್ಜಿ

ಇನ್ನೂ ‘ಕೊರೊನಾ’ ಕಂಟಕ ಮುಗಿದಿಲ್ಲ..!

ಇನ್ನೂ ‘ಕೊರೊನಾ’ ಕಂಟಕ ಮುಗಿದಿಲ್ಲ..!

ಒಟ್ಟಾರೆ ಈ ಎಲ್ಲಾ ಅಂಶಗಳನ್ನ ಅಳೆದು, ತೂಗಿ ಹೇಳುವುದಾದರೆ ಕೊರೊನಾ ಎಂಬ ಮಹಾಮಾರಿಗೆ ವ್ಯಾಕ್ಸಿನ್ ಸಿಕ್ಕರೂ ಲಸಿಕೆಗಳ ಸುರಕ್ಷತೆ ಬಗ್ಗೆ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ. ಹೀಗಾಗಿ ಲಸಿಕೆಗಳ ಮೇಲೆ ನಿರೀಕ್ಷೆಯ ಭಾರ ಹಾಕುವುದಕ್ಕಿಂತ, ಸೋಂಕು ಹರಡದಂತೆ ತಡೆಯಲು ತಜ್ಞರು ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿಕೊಂಡು ಬರಬೇಕಿದೆ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಜಗತ್ತು 2ನೇ ಅಲೆಯ ಆತಂಕದಲ್ಲಿ ಬದುಕು ಸಾಗಿಸುತ್ತಿದ್ದು, ವ್ಯಾಕ್ಸಿನ್ ಕನ್ಫರ್ಮ್ ಆಗಿದ್ದರೂ ಅಲರ್ಟ್ ಆಗಿರುವುದೇ ಒಳ್ಳೆಯದು.

English summary
117-year-old woman cured from corona disease in Europe. The Sister Andre, who lives in southern France has won the war against covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X