• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

11 ವರ್ಷದ ಶ್ರಮ, $20 ಸಾವಿರ ಕೋಟಿ, ಒಂದೇ ಯೋಜನೆ..!

|

ಅದು ಅಂತಿಂತಹ ಯೋಜನೆಯಲ್ಲ. ಇಡೀ ಮಾನವನ ಭವಿಷ್ಯವ್ನೇ ಬದಲಿಸಬಲ್ಲದು. ಆದರೆ ಈ ಯೋಜನೆಗೆ ಅವರು ಪಟ್ಟ ಕಷ್ಟ ಅಂತಿಂತಹದ್ದಲ್ಲ. ಬರೋಬ್ಬರಿ 11 ವರ್ಷದ ಶ್ರಮ ಮತ್ತು 20 ಸಾವಿರ ಕೋಟಿ ರೂಪಾಯಿ ಸುರಿದಿದ್ದಾರೆ. ಹೌದು, ಹಾಗೇ ರಾತ್ರಿಯ ಆಕಾಶವನ್ನೊಮ್ಮೆ ದಿಟ್ಟಿಸಿ ನೋಡಿದರೆ ಕಣ್ಣಿಗೆ ಬೀಳುವ ಕೋಟ್ಯಂತರ ನಕ್ಷತ್ರಗಳು ನಮ್ಮ ಕೈಗೆಟುಕಲು ಸಾಧ್ಯವಿಲ್ಲ. ಆದರೆ ನಕ್ಷತ್ರಗಳಂತೆ ಫಳಫಳ ಹೊಳೆಯುವ ಗ್ರಹಗಳಿಗೆ ಮಾನವ ತಲುಪಬಲ್ಲ.

ಅದರಲ್ಲೂ ಶತ ಶತಮಾನದಿಂದ ಮಾನವನ ನಿದ್ದೆ ಕದ್ದಿರುವ ಮಂಗಳ, ಭೂ ವಾಸಿಗಳಿಗೆ ಇನ್ನೂ ಹತ್ತಿರವಾಗುತ್ತಿದೆ. ನಾಸಾ ಸಂಸ್ಥೆ ನಿರ್ಮಿತ 'ಪೆರ್‌ಸೆವೆರನ್ಸ್' ನೌಕೆ ಮಂಗಳ ಗ್ರಹದ ನೆಲ ಮುಟ್ಟಲು ಇನ್ನೇನು ಕೆಲವೇ ಕ್ಷಣಗಳು ಬಾಕಿ.

ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!

ಆದರೆ ಈ ಯೋಜನೆಗಾಗಿ ನಾಸಾ ಪಟ್ಟ ಕಷ್ಟ ಊಹೆಗೂ ನಿಲುಕುವುದಿಲ್ಲ. ಏಕೆಂದರೆ ಮಂಗಳ ಗ್ರಹದ ಮೇಲೆ ಈಗ 'ಪೆರ್‌ಸೆವೆರನ್ಸ್' ಇಳಿಯುತ್ತಿದ್ದರೆ, ಅದಕ್ಕೆ ಹತ್ತಾರು ವರ್ಷಗಳ ಪರಿಶ್ರಮ ಇದೆ. ಹಾಗೇ ಅಪಾರ ಪ್ರಮಾಣದ ಹಣವನ್ನೂ ಈ ಯೋಜನೆಗಾಗಿ ಸುರಿದಿದೆ ಅಮೆರಿಕ ಸರ್ಕಾರ.

 1 ಟನ್ ತೂಗುವ ‘ಪೆರ್‌ಸೆವೆರನ್ಸ್’

1 ಟನ್ ತೂಗುವ ‘ಪೆರ್‌ಸೆವೆರನ್ಸ್’

‘ಪೆರ್‌ಸೆವೆರನ್ಸ್' ಇಡೀ ಜಗತ್ತಿನ ಉಸಿರನ್ನು ಕಟ್ಟಿ ನಿಲ್ಲಿಸಿದೆ. ಇನ್ನೇನು ಮಂಗಳ ಗ್ರಹದ ವಾತಾವರಣಕ್ಕೆ ನುಗ್ಗಿ, ಅಲ್ಲಿನ ನೆಲ ಅಗೆದು ಮಾನವರ ಏಳೆಗೆಗೆ ಶ್ರಮಿಸಲಿದೆ. ಹೀಗೆ ‘ಪೆರ್‌ಸೆವೆರನ್ಸ್'ನ ತೂಕ, ಎತ್ತರ ಹಾಗೂ ಅದರ ಭೌತಿಕ ಮಾಹಿತಿ ತಿಳಿದುಕೊಳ್ಳುವುದಾದರೆ. ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲಕರವಾಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಹೀಗೆ ಬಲಾಢ್ಯ ರೋವರ್ ಒಂದು ಮಂಗಳ ಗ್ರಹದ ಅಧ್ಯಯನಕ್ಕೆ 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು.

11 ವರ್ಷ ಶ್ರಮ + $20 ಸಾವಿರ ಕೋಟಿ..!

11 ವರ್ಷ ಶ್ರಮ + $20 ಸಾವಿರ ಕೋಟಿ..!

ಅಂದಹಾಗೆ ನಾಸಾ ಅಮೆರಿಕದ ಸರ್ಕಾರಿ ಸಂಸ್ಥೆಯಾಗಿದ್ದರೂ, ಅದಕ್ಕೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಕಾರ್ಯಾಚರಣೆ ನಡೆಸಲಾಗುತ್ತದೆ. ಇಲ್ಲಿ ಖರ್ಚು ವೆಚ್ಚಗಳಿಗೆ ಭಾರಿ ಕಡಿವಾಣ ಬೀಳುತ್ತದೆ. ಇದೇ ರೀತಿ ನಾಸಾ ಹಲವು ಯೋಜನೆಗಳನ್ನ ದುಬಾರಿ ವೆಚ್ಚದ್ದು ಎಂಬ ಕಾರಣಕ್ಕೆ ಕೈಬಿಟ್ಟ ಉದಾಹರಣೆಗಳು ಇವೆ. ಆದರೆ ನಾಸಾ ಸಂಸ್ಥೆಯ ‘ಪೆರ್‌ಸೆವೆರನ್ಸ್' ಅದನ್ನೆಲ್ಲಾ ಮೀರಿ ಸಾಧನೆ ಮಾಡಿದೆ. ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಿದ್ದ ‘ಪೆರ್‌ಸೆವೆರನ್ಸ್' ಯೋಜನೆಗೆ 11 ವರ್ಷಗಳ ಕಾಲಾವಕಾಶ ಬೇಕಾಯಿತು. ವಿಜ್ಞಾನಿಗಳು ಇಂಚಿಂಚು ಅಧ್ಯಯನ ಮಾಡಿ ‘ಪೆರ್‌ಸೆವೆರನ್ಸ್'ನ ಪ್ರತಿಯೊಂದು ಭಾಗಗಳನ್ನು ತಯಾರಿಸಿದ್ದಾರೆ.

ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!

ಬ್ರಹ್ಮಾಂಡದಲ್ಲಿ ಮಾನವನ ಜಾದೂ..!

ಬ್ರಹ್ಮಾಂಡದಲ್ಲಿ ಮಾನವನ ಜಾದೂ..!

ಬ್ರಹ್ಮಾಂಡ ಅಂದುಕೊಂಡಷ್ಟು ಚಿಕ್ಕದಾಗಿಯೂ ಇಲ್ಲ, ಊಹೆಗೆ ನಿಲುಕದಷ್ಟು ದೊಡ್ಡದೂ ಅಲ್ಲ. ಸಂಶೋಧನೆ ಹಾಗೂ ಹುಡುಕಾಟ ಮಾತ್ರ ಮಾನವರ ಭವಿಷ್ಯ ನಿರ್ಧರಿಸಬಲ್ಲದು. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಗ್ರಹದ ಸಂಶೋಧನೆ ಅತ್ಯಗತ್ಯವಾಗಿದೆ. ಹೀಗಾಗಿಯೇ ಮಾನವ ಮಂಗಳ ಗ್ರಹದ ಹಿಂದೆ ಬಿದ್ದಿದ್ದಾನೆ. ನಿಮಗೆ ಆಶ್ಚರ್ಯ ಎನಿಸಬಹುದು, ಫೆಬ್ರವರಿ ಒಂದೇ ತಿಂಗಳಲ್ಲಿ ಮಂಗಳನಿಗೆ ಸಂಬಂಧಪಟ್ಟ ಒಟ್ಟು 3 ಯೋಜನೆಗಳು ಅಂತಿಮ ಹಂತ ತಲುಪಲಿವೆ. ಈ ಪೈಕಿ ಯುಎಇ ನಿರ್ಮಿತ ಬಾಹ್ಯಾಕಾಶ ನೌಕೆ ‘ಹೋಪ್' ಗುರಿ ತಲುಪಿದೆ. ಚೀನಾ ಕೂಡ ಈ ಸಾಧನೆ ಮಾಡಿದೆ. ಈಗ ನಾಸಾ ಸಂಸ್ಥೆಯ ‘ಪೆರ್‌ಸೆವೆರನ್ಸ್' ಸರದಿ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. ‘ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ ‘ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ಅರಬ್ಬರ ಮಹತ್ವದ ಸಾಧನೆ, ಮಂಗಳನ ಫೋಟೋ ಕಳಿಸಿದ ‘ಹೋಪ್'ಅರಬ್ಬರ ಮಹತ್ವದ ಸಾಧನೆ, ಮಂಗಳನ ಫೋಟೋ ಕಳಿಸಿದ ‘ಹೋಪ್'

English summary
NASA’s Perseverance Project Is Reflection Of 11 Years Hard Work. NASA spent more than 20 thousand crore rupees for Perseverance Project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X