ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೋವಿಡ್‌ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ..

|
Google Oneindia Kannada News

ನವದೆಹಲಿ, ನವೆಂಬರ್‌ 26: ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ B.1.1.529 ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್‌, ಬೋಟ್ಸ್ವಾನ, ಇಸ್ರೇಲ್‌ನಲ್ಲಿ ಕಾಣಿಸಿಕೊಂಡಿದೆ. ಕೋವಿಡ್‌ನ ಈ ಹೊಸ ರೂಪಾಂತರ ಡೆಲ್ಟಾಗಿಂತ ಅಧಿಕ ಸಾಂಕ್ರಾಮಿಕ ಆಗಿರುವ ಸಾಧ್ಯತೆ ಇದೆ ಎಂದು ತಜ್ಞರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ವಿರುದ್ಧವಾಗಿ ಕೋವಿಡ್‌ ಲಸಿಕೆಯನ್ನು ಪಡೆದಿದ್ದರೂ ಕೂಡಾ ಈ ಹೊಸ ಕೋವಿಡ್‌ ರೂಪಾಂತರ B.1.1.529 ಪ್ರತಿರೋಧ ಒಡ್ಡುವ ಸಾಧ್ಯತೆಗಳು ಇದೆ ಎಂದು ವರದಿಗಳು ಉಲ್ಲೇಖ ಮಾಡಿದೆ.

ಈ ನಡುವೆ ಹಲವಾರು ದೇಶಗಳು ತಮ್ಮ ಕೋವಿಡ್‌ ಮಾರ್ಗಸೂಚಿಯನ್ನು ಕಠಿಣಗೊಳಿಸುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನೆಯಿಂದಾಗಿ ಕೇಂದ್ರ ಸರ್ಕಾರವು ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್‌, ಬೋಟ್ಸ್ವಾನದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿದೆ.

ಕೇಂದ್ರ ಸರ್ಕಾರವು ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದೆ. "ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಈ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಬೇಕು ಹಾಗೂ ಅವರನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸಬೇಕು," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಕೊರೊನಾವೈರಸ್ ಬಿ.1.1.529 ರೂಪಾಂತರ ಬಗ್ಗೆ ಚರ್ಚೆಗೆ WHO ತುರ್ತುಸಭೆಕೊರೊನಾವೈರಸ್ ಬಿ.1.1.529 ರೂಪಾಂತರ ಬಗ್ಗೆ ಚರ್ಚೆಗೆ WHO ತುರ್ತುಸಭೆ

ಈ ರೂಪಾಂತರ ಏನು, ಇದಕ್ಕೆ ಎಷ್ಟು ತಳಿಗಳು ಇದೆ, ಎಂಬ ಬಗ್ಗೆ ನೀವು ತಿಳಿಯಲೇಬೇಕು, ಈ ಬಗ್ಗೆ ಮಾಹತಿ ಇಲ್ಲಿದೆ ಮುಂದೆ ಓದಿ...

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರದ ಬಗ್ಗೆ ಚರ್ಚೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ರೋಗಾಣು ವಿಕಸನ ವಿಭಾಗದ ತಾಂತ್ರಿಕ ಸಲಹಾ ಸಮಿತಿಯು ಶುಕ್ರವಾರ ತುರ್ತು ಸಭೆ ಕರೆದಿದೆ. ಈ ಸಭೆಯಲ್ಲಿ "ಕೊವಿಡ್-19 ರೂಪಾಂತರವು ಆಸಕ್ತಿಯ ರೂಪಾಂತರವೇ ಅಥವಾ ಕಾಳಜಿಯ ರೂಪಾಂತರವೇ ಎಂಬುದನ್ನು ಗೊತ್ತುಪಡಿಸುವ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಹಾಗಿದ್ದಲ್ಲಿ, ನಾವು ಅದಕ್ಕೆ ಗ್ರೀಕ್ ವರ್ಣಮಾಲೆಯಿಂದ ಹೆಸರನ್ನು ನೀಡುತ್ತೇವೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ ಮುಖಂಡರಾದ ಡಾ ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ. ಹೆಚ್ಚು ಸಾಂಕ್ರಾಮಿಕವಾಗಿರುವ ಈ ಕೊರೊನಾ ವೈರಸ್‌ ಸೋಂಕಿನ ರೂಪಾಂತರವು ಅಧಿಕ ಗಂಭೀರವಾದ ಲಕ್ಷಣಗಳನ್ನು ಹೊಂದಿರುತ್ತದೆ ಎಂದು ಕೂಡಾ ಮಾಧ್ಯಮಗಳು ವರದಿ ಮಾಡಿದೆ.

B.1.1.529: 50 ಕ್ಕೂ ಹೆಚ್ಚು ತಳಿ

B.1.1.529: 50 ಕ್ಕೂ ಹೆಚ್ಚು ತಳಿ

* B.1.1.529 ಹೊಸ ರೂಪಾಂತರವಾಗಿದ್ದು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ. ಈ ರೂಪಾಂತರವು ಸ್ಪೈಕ್ ಪ್ರೋಟೀನ್‌ನ 30 ಕ್ಕೂ ಹೆಚ್ಚು ತಳಿ ಸೇರಿದಂತೆ ಒಟ್ಟು 50 ತಳಿಗಳನ್ನು ಹೊಂದಿದೆ. ಈ ಕೋವಿಡ್‌ ರೂಪಾಂತರವು ಕೊರೊನಾ ಲಸಿಕೆಗೆ ಪ್ರತಿರೋಧ ಒಡ್ಡುವ ಸಾಧ್ಯತೆಗಳು ಇದೆ. ಈ ಕೋವಿಡ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವೇ ಅಥವಾ ಈ ಹಿಂದಿನ ರೂಪಾಂತರಕ್ಕಿಂತ ಕಡಿಮೆ ಸಾಂಕ್ರಾಮಿಕವೇ ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ಸಂಶೋಧಕರು ತೊಡಗಿದ್ದಾರೆ.
* ಡೆಲ್ಟಾ ರೂಪಾಂತರದಲ್ಲಿ ಎರಡು ತಳಿಗಳು ಇದ್ದವು, ಆದರೆ ಕೋವಿಡ್‌ನ ಈ ಹೊಸ ರೂಪಾಂತರ B.1.1.529 ನಲ್ಲಿ ಪ್ರಮುಖವಾಗಿ ಒಟ್ಟು 10 ತಳಿಗಳು ಇದೆ. ರೂಪಾಂತರಗೊಂಡ ಡೆಲ್ಟಾ ಪ್ಲಸ್ ಸ್ಪೈಕ್ ಪ್ರೋಟೀನ್‌ನಲ್ಲಿ K417N ರೂಪಾಂತರ ಕಂಡು ಬಂದಿದೆ.

 ಎಚ್‌ಐವಿ/ಏಡ್ಸ್‌ ರೋಗಿಯಲ್ಲಿ ರೂಪಾಂತರ?

ಎಚ್‌ಐವಿ/ಏಡ್ಸ್‌ ರೋಗಿಯಲ್ಲಿ ರೂಪಾಂತರ?

* ಇನ್ನು ಈ ಕೋವಿಡ್‌ನ ಹೊಸ ರೂಪಾಂತರದ ಹುಟ್ಟಿನ ಬಗ್ಗೆ ಹಲವಾರು ಊಹಾಪೋಹಗಳು ಇದೆ. ಆದರೆ ಇದು ಓರ್ವ ರೋಗಿಯಲ್ಲಿ ವಿಕಸನ ಹೊಂದಿರಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಲಂಡನ್ ಮೂಲದ ಯುಸಿಎಲ್ ಜೆನೆಟಿಕ್ಸ್ ಸಂಸ್ಥೆಯ ನಿರ್ದೇಶಕ ಫ್ರಾಂಕೋಯಿಸ್ ಬಲೂಕ್ಸ್ ಪ್ರಕಾರ, "ಪ್ರತಿರೋಧಕ ಕಡಿಮೆ ಇರುವ ವ್ತಕ್ತಿಯಲ್ಲಿ ದೀರ್ಘ ಕಾಲ ಕೋವಿಡ್‌ ಸೋಂಕು ಇದ್ದ ಸಂದರ್ಭದಲ್ಲಿ ಈ ರೂಪಾಂತರ ಸೃಷ್ಟಿ ಆಗಿರಬಹುದು. ಹೆಚ್‌ಐವಿ/ಏಡ್ಸ್‌ ರೋಗಿಗಳಲ್ಲಿ ಈ ಹೊಸ ಕೋವಿಡ್‌ ರೂಪಾಂತರ ಹುಟ್ಟಿಕೊಂಡಿರಬಹುದು."
* ಈ ಹೊಸ ಕೋವಿಡ್‌ ರೂಪಾಂತರವು ಮೊದಲ ಬಾರಿಗೆ ಈ ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದೆ. ಬಳಿಕ ನೆರೆ ರಾಷ್ಟ್ರವಾದ ಬೋಟ್ಸ್ವಾನಕ್ಕೆ ಹರಡಿದೆ. ಬೋಟ್ಸ್ವಾನದಲ್ಲಿ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಜನರಲ್ಲಿ ಈ ಹೊಸ ರೂಪಾಂತರ B.1.1.529 ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಹೊಸ ರೂಪಾಂತರದ ನೂರು ಪ್ರಕರಣಗಳು ದಾಖಲು ಆಗಿದೆ.

ದಕ್ಷಿಣ ಆಫ್ರಿಕಾದಿಂದ ಬಂದ ಪ್ರವಾಸಿಗರಲ್ಲಿ B.1.1.529

ದಕ್ಷಿಣ ಆಫ್ರಿಕಾದಿಂದ ಬಂದ ಪ್ರವಾಸಿಗರಲ್ಲಿ B.1.1.529

* ಹಾಂಗ್‌ಕಾಂಗ್‌ನಲ್ಲಿ ಎರಡು B.1.1.529 ಪ್ರಕರಣಗಳು ದಾಖಲು ಆಗಿದೆ. ದಕ್ಷಿಣ ಆಫ್ರಿಕಾದಿಂದ ಬಂದ ಪ್ರವಾಸಿಗರಲ್ಲಿ ಈ ಹೊಸ ರೂಪಾಂತರ ಪತ್ತೆಯಾಗಿದೆ. ಇಬ್ಬರು ಪ್ರವಾಸಿಗರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಸದ್ಯ ಪ್ರತ್ಯೇಕ ಕೋಣೆಯಲ್ಲಿ ಇಬ್ಬರನ್ನು ಇರಿಸಲಾಗಿದೆ. "ಇಬ್ಬರ ಸ್ಯಾಂಪಲ್‌ಗಳನ್ನು ನೋಡಿದಾಗ ಅತೀ ಹೆಚ್ಚು ವೈರಲ್‌ ಆಗುವ ಸಾಧ್ಯತೆಗಳು ಕಂಡು ಬಂದಿದೆ," ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಎರಿಕ್ ಫೀಗಲ್-ಡಿಂಗ್ ಹೇಳಿದ್ದಾರೆ. "ಪಿಸಿಆರ್‌ ಸಿಟಿ ಮೌಲ್ಯವು 18 ಹಾಗೂ 19 ಆಗಿದೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
* "ಈ ರೋಗಿಗಳು ಪ್ರತ್ಯೇಕ ಕೋಣೆಯಲ್ಲಿ ಇದ್ದಾರೆ. ಆದರೆ ಗಾಳಿಯಲ್ಲಿ ಈ ಹೊಸ ರೂಪಾಂತರ ಹರಡುತ್ತದೆಯೇ ಎಂಬ ಕಾಳಜಿ ಇದೆ. ಈ ಹೊಸ ರೂಪಾಂತರದೊಂದಿಗೆ ಲಸಿಕೆಗೆ ಹೇಗೆ ಪರಿಣಾಮಕಾರಿ ಎಂಬುವುದು ತಿಳಿಯಬೇಕು. ಹೌದು ಇದು ಗಾಳಿಯಲ್ಲಿ ತೀವ್ರವಾಗಿ ಹರಡುತ್ತದ. ಹೊಟೇಲ್‌ನಲ್ಲಿ ಇರುವ ಅತಿಥಿಗಳು ಬೇರೆ ಬೇರೆ ಕೋಣೆಯಲ್ಲಿ ಇದ್ದಾರೆ. ಸುಮಾರು 87 ಮಾದರಿಗಳನ್ನು ಪರೀಕ್ಷೆ ಮಾಡಿದಾಗ 25 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ ಎಂದು ಡಾ. ಫೀಗಲ್-ಡಿಂಗ್ ತಿಳಿಸಿದ್ದಾರೆ.

ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮ

ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮ

* ಇನ್ನು ಇಸ್ರೇಲ್‌ನಲ್ಲಿಯೂ ಈ ಹೊಸ ಕೋವಿಡ್‌ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಗಿದೆ. ಮಾಲಾವಿಯಿಂದ ಬಂದ ವ್ಯಕ್ತಿಯಲ್ಲಿ ಈ ಹೊಸ ರೂಪಾಂತರ ಕಾಣಿಸಿಕೊಂಡಿದೆ. ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
* ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನೆಯಿಂದಾಗಿ ಕೇಂದ್ರ ಸರ್ಕಾರವು ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್‌, ಬೋಟ್ಸ್ವಾನದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಿದೆ. "ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಈ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಬೇಕು ಹಾಗೂ ಅವರನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸಬೇಕು," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.

ಎಚ್ಚರ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ

ಎಚ್ಚರ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ

* ದಕ್ಷಿಣ ಆಫ್ರಿಕಾ, ಬೋಟ್ಸ್ವಾನ ಹಾಗೂ ಬೇರೆ ನಾಲ್ಕು ಆಫ್ರಿಕನ್‌ ದೇಶಗಳಿಂದ ವಿಮಾನವನ್ನು ಯುಕೆ, ಸಿಂಗಾಪುರ ಹಾಗೂ ಇಸ್ರೆಲ್‌ ಸ್ಥಗಿತ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸುವ ವಿಮಾನವನ್ನು ಜರ್ಮನಿ ಹಾಗೂ ಇಟಲಿ ಸ್ಥಗಿತ ಮಾಡಿದೆ. ಆದರೆ ಈ ನಡುವೆ ಯುಕೆಯ ವಿರುದ್ಧ ದಕ್ಷಿಣ ಆಫ್ರಿಕಾ ಅಸಮಾಧಾನ ವ್ಯಕ್ತಪಡಿಸಿದೆ.
* ಇನ್ನು ಈ ಹೊಸ ರೂಪಾಂತರದಿಂದ ಸುರಕ್ಷಿತ ಆಗಿರಲು ಈಗಲೇ ಎಚ್ಚರಿಕೆ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. B.1.1.529 ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. ಜನರಿಗೆ ಲಸಿಕೆ ನೀಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.

ಕೋವಿಡ್‌ ಹೊಸ ರೂಪಾಂತರ: ಈ 3 ದೇಶದಿಂದ ಆಗಮಿಸುವವರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್

English summary
10 Things You have To Know About New Strain That May Be More Infectious Than Delta
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X