ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆತ್ತವರನ್ನೇ ಕಿತ್ತುಕೊಂಡ ಕೊರೊನಾ, ಭಾರತದಲ್ಲಿ ಅನಾಥರಾದ ಮಕ್ಕಳೆಷ್ಟು?

|
Google Oneindia Kannada News

ನವದೆಹಲಿ, ಜುಲೈ 21: ಕೊರೊನಾ ಸಾಂಕ್ರಾಮಿಕವು ಕೇವಲ ಉದ್ಯೋಗ, ನೆಮ್ಮದಿ, ಆರೋಗ್ಯವನ್ನು ಮಾತ್ರ ಕಸಿದುಕೊಂಡಿಲ್ಲ ಲಕ್ಷಾಂತರ ಮಕ್ಕಳ ಭವಿಷ್ಯವನ್ನೇ ಕಿತ್ತುಕೊಂಡಿದೆ.

ಕೊರೊನಾ ಸೋಂಕು ಜನರನ್ನು ತತ್ತರಿಸುವಂತೆ ಮಾಡಿದೆ, ಅದರಲ್ಲೂ ತಂದೆ, ತಾಯಿಯ ಆಶ್ರಯ ಪಡೆಯಬೇಕಿದ್ದ ಮಕ್ಕಳು ಸೋಂಕಿನಿಂದಾಗಿ ಪಾಲಕರನ್ನು ಕಳೆದುಕೊಂಡು ಕೆಲವರು ಅನಾಥರಾದರೆ, ಬಹುತೇಕರು ತಂದೆ ಅಥವಾ ತಾಯಿ ಪ್ರೀತಿಯಿಂದ ವಂಚಿತರಾಗಿದ್ದಾರೆ.

ಸಮುದಾಯ ಮಟ್ಟದಲ್ಲೂ ಸೋಂಕು ಹರಡುವ ಮೂಲಕ ಅನೇಕರು ಸೋಂಕಿಗೆ ತುತ್ತಾಗುವಂತೆ ಮಾಡಿದೆ. ಕುಟುಂಬದಲ್ಲೂ ಸೋಂಕು ಕಾಣಿಸಿಕೊಂಡು ಅನೇಕರು ತಮ್ಮ ಸಂಬಂಧಿಕರನ್ನು ಕಣ್ಣೆದುರೇ ಕಳೆದುಕೊಂಡಿರುವಂಥ ಪ್ರಸಂಗಗಳೂ ನಡೆದಿವೆ. ಅದರಲ್ಲೂ 2ನೇ ಅಲೆಯಲ್ಲಿ ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಅನೇಕ ಮಕ್ಕಳು ಪಾಲಕ, ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದಾರೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ; ಶಾಲೆ ತೆರೆಯುವ ಸಮಯ ಬಂದಿದೆಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ; ಶಾಲೆ ತೆರೆಯುವ ಸಮಯ ಬಂದಿದೆ

ಹೌದು, ಲಕ್ಷಾಂತರ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಭಾರತ, ಬ್ರೆಜಿಲ್‌ ಹಾಗೂ ಮೆಕ್ಸಿಕೋದಲ್ಲಿ ಹೆಚ್ಚು ಮಕ್ಕಳು ತಮ್ಮ ತಂದೆ, ತಾಯಿ, ಅಜ್ಜ ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ.

 ಎಷ್ಟು ಮಂದಿ ಮಕ್ಕಳು ಅನಾಥರು

ಎಷ್ಟು ಮಂದಿ ಮಕ್ಕಳು ಅನಾಥರು

ಕೊರೊನಾ ಸೋಂಕು ಆರಂಭವಾದ 14 ತಿಂಗಳುಗಳಲ್ಲಿ 21 ದೇಶದಗಳಲ್ಲಿ ಸುಮಾರು 1.5 ಮಿಲಿಯನ್ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲಿ 1,90,000 ಮಕ್ಕಳು ಭಾರತದಲ್ಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ 25,500 ಮಂದಿ ತಾಯಿಯನ್ನು ಕಳೆದುಕೊಂಡಿದ್ದಾರೆ. 90,751 ಮಂದಿ ತಂದೆಯನ್ನು ಕಳೆದುಕೊಂಡಿದ್ದಾರೆ. 12 ಮಂದಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ.

 ಅಧ್ಯಯನ ನೀಡಿದ ಮಾಹಿತಿ ಏನು?

ಅಧ್ಯಯನ ನೀಡಿದ ಮಾಹಿತಿ ಏನು?

ಕೊರೊನಾ ಕಾರಣದಿಂದಾಗಿ 1,134.000 ಮಕ್ಕಳು ಪೋಷಕರು ಅಥವಾ ಪಾಲನೆ ಮಾಡುವ ಅಜ್ಜ, ಅಜ್ಜಿಯಂದಿರನ್ನು ಕಳೆದುಕೊಂಡಿದ್ದಾರೆ. ಈ ಪೈಕಿ 10,42,000 ಮಕ್ಕಳು ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಒಬ್ಬರನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ 1,562,000 ಮಕ್ಕಳು ಕನಿಷ್ಠ ಒಬ್ಬ ಪೋಷಕರು ಅಥವಾ ಪಾಲನೆ ಮಾಡುವವರನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

 ಯಾವ್ಯಾವ ದೇಶದಲ್ಲಿ ಸಾವು

ಯಾವ್ಯಾವ ದೇಶದಲ್ಲಿ ಸಾವು

ಪ್ರಾಥಮಿಕ ಆರೈಕೆದಾರರನ್ನು ಕಳೆದುಕೊಂಡಿರುವ ದೇಶಗಳಲ್ಲಿ ದಕ್ಷಿಣ ಆಫ್ರಿಕಾ, ಪೆರು, ಅಮೆರಿಕ, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೋ, ಅರ್ಜೆಂಟೀನಾ, ರಷ್ಯಾ ಕೂಡ ಸೇರಿವೆ.

Recommended Video

ಗುಜರಾತ್ ಮಾದರಿಯಲ್ಲೇ ಸಿಎಂ ಪಟ್ಟದಿಂದ ಯಡಿಯೂರಪ್ಪ ಔಟ್ ?? | Oneindia Kannada
 ಅಜ್ಜ-ಅಜ್ಜಿಯಂದಿರೂ ಇಲ್ಲ

ಅಜ್ಜ-ಅಜ್ಜಿಯಂದಿರೂ ಇಲ್ಲ

ವರದಿ ಪ್ರಕಾರ, ಭಾರತದಲ್ಲಿ 2,898 ಮಕ್ಕಳು ಅಜ್ಜಿಯಂದಿರನ್ನು ಕಳೆದುಕೊಂಡಿದ್ದರೆ, 9 ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಆದಾಗ್ಯೂ ಭಾರತದಲ್ಲಿ 1 ಸಾವಿರ ಮಕ್ಕಳಿಗೆ ಪ್ರಾಥಮಿಕ ಮತ್ತು ಪಾಲನೆ ನಷ್ಟದ ದರ 0.5ರಷ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಶೇ.6.4, ಪೆರುವಿನಲ್ಲಿ ಶೇ.14.1, ಬ್ರೆಜಿಲ್‌ನಲ್ಲಿ ಶೇ.3.5, ಕೊಲಂಬಿಯಾದಲ್ಲಿ ಶೇ.3.4, ಮೆಕ್ಸಿಕೋದಲ್ಲಿ ಶೇ.5.1, ರಷ್ಯಾದಲ್ಲಿ ಶೇ.2.0, ಅಮೆರಿಕದಲ್ಲಿ ಶೇ.1.8ರಷ್ಟಿದೆ.

English summary
More than 1.5 million children in 21 countries, including 1,19,000 from India, lost their primary and secondary caregivers to COVID-19 during the first 14 months of the pandemic, according to a study published in The Lancet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X