keyboard_backspace

ನಕಲಿರಾಜನ ಬ್ಯಾಂಕ್ ಖಾತೆಯಿಂದ ನಟಿ ರಾಧಿಕಾ ಖಾತೆಗೆ ಕೋಟಿ ರೂ. ವರ್ಗ

Google Oneindia Kannada News

ಬೆಂಗಳೂರು, ಜನವರಿ 06 : ಅರ್‌ ಎಸ್ ಎಸ್ ಮುಖವಾಡ ಧರಿಸಿ ಪ್ರತಿಷ್ಠಿತರಿಗೆ ವಂಚನೆ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸ್ವಾಮಿ ಅಲಿಯಾಸ್ ಯುವರಾಜ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ಬ್ಯಾಂಕ್ ಖಾತೆಗೆ 1.52 ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂಬ ಸಂಗತಿ ಹೊರ ಬಿದ್ದಿದೆ.

ಪ್ರತಿಷ್ಠಿತ ವ್ಯಕ್ತಿಗಳಿಗೆ ಮೋಸ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಯುವರಾಜ್ ನ ಸುಮಾರು 40 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸಿದ್ದಾನೆ. ನಟಿ ರಾಧಿಕಾ ಮತ್ತು ಅವರ ಸಹೋದರ ರವಿರಾಜ್ ಅವರ ಬ್ಯಾಂಕ್ ಖಾತೆಗಳಿಗೆ ಕ್ರಮವಾಗಿ ಒಂದೂವರೆ ಕೋಟಿಗಿಂತಲೂ ಹೆಚ್ಚು ಮೊತ್ತ ಹಣ ವರ್ಗಾವಣೆಯಾಗಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಹೊರ ಬಿದ್ದಿದೆ. ನಟಿ ರಾಧಿಕಾ ಅವರಿಗೂ ಹಾಗೂ ಸ್ವಾಮಿ ಗೂ ಇರುವ ಸಂಬಂಧವೇನು ? ಯಾವ ವಿಚಾರವಾಗಿ ಹಣ ವಹಿವಾಟು ನಡೆದಿದೆ ಎಂಬ ಸಂಗತಿ ಸಿಸಿಬ ಪೊಲೀಸರ ತನಿಖೆಯಲ್ಲಿ ಹೊರ ಬೀಳಬೇಕಿದೆ.

ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿ 'ಮುಂಡಾಯಿಸಿದ' ಕಥೆ ಬಗೆದಷ್ಟು ಸಿಸಿಬಿ ಕಸ್ಟಡಿಯಲ್ಲಿರುವ ಯುವರಾಜ ಆಲಿಯಾಸ್ ಸ್ವಾಮಿ 'ಮುಂಡಾಯಿಸಿದ' ಕಥೆ ಬಗೆದಷ್ಟು

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಸ್ವಾಮಿ ಅಲಿಯಾಸ್ ಯುವರಾಜ್ ಬ್ಯಾಂಕ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಸಂಗತಿ ಹೊರ ಬೀಳುತ್ತಿದ್ದಂತೆ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ತಾನೇ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡುವುದಾಗಿ ನಟಿ ರಾಧಿಕಾ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಧಿಕಾ ಅವರ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ. ವಾಸ್ತವದಲ್ಲಿ ರಾಧಿಕಾ ಅವರು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಾಗ ದಾಖಲೆಗಳ ಸಮೇತ ಹೇಳಿಕೆ ದಾಖಲಿಸಬೇಕಾಗುತ್ತದೆ. ಅದಷ್ಟೇ ಮಹತ್ವ ವಾಗಲಿದೆ.

ಸ್ವಾಮಿ ಅವರ ಬ್ಯಾಂಕ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ಯಾವ ಕಾರಣಕ್ಕೆ ವರ್ಗಾವಣೆಯಾಗಿದೆ. ವ್ಯಾಪಾರ , ಬ್ಯುಸಿನೆಸ್ ಆಗಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಕರಾರು, ಒಡಂಬಡಿಕೆ ಪತ್ರಗಳನ್ನು ರಾಧಿಕಾ ಕುಮಾರಸ್ವಾಮಿ ಹಾಜರು ಪಡಿಸಬೇಕಾಗುತ್ತದೆ. ದಾಖಲೆಗಳಷ್ಟೇ ಮಹತ್ವ ಪಡೆದುಕೊಳ್ಳುತ್ತವೆ. ಇನ್ನು ಹಣ ವರ್ಗಾವಣೆಗಿದ್ದು ಯಾವ ಸಮಯದಲ್ಲಿ. ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿರುವ ಕಾರಣ ಅದಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ಸಹ ರಾಧಿಕಾ ಸಿಸಿಬಿ ಪೊಲೀಸರಿಗೆ ಒದಗಿಸುವ ಅಗತ್ಯತೆ ಬೀಳಲಿದೆ.

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಸ್ವಾಮಿ ಅಲಿಯಾಸ್ ಯುವರಾಜ್ ಗೆ ಸೇರಿದ ಸುಮಾರು ಅರ್ಧ ಶತಕ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಯಾರಿಗೆ ಹಣ ವರ್ಗಾವಣೆಯಾಗಿದೆ. ಯಾವ ಕಾರಣಕ್ಕಾಗಿ ನೀಡಲಾಗಿದೆ ಎಂಬುದರ ಬಗ್ಗೆ ಎಸಿಪಿ ನಾಗರಾಜ್ ನೇತೃತ್ವದ ಸಿಸಿಬಿ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ತನಿಖೆಯ ಮೊದಲ ಭಾಗವಾಗಿ ರಾಧಿಕಾ ಕುಮಾರಸ್ವಾಮಿ ಅವರಿಗೆ 1 ಕೋಟಿ ರೂಪಾಯಿ ಹಾಗೂ ಅವರ ಸಹೋದರ ರವಿರಾಜ್ ಅವರ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರವಿರಾಜ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ ಅಮಿತ್ ಶಾ ಪೋಟೋ ತೋರಿಸಿ ಕೋಟಿ ಗಳಿಸಿದ್ದ "ಕಿಲಾಡಿ ರಾಜ" ಸೆರೆ

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಸ್ವಾಮಿ ಲಿಂಕ್ ಡೇಂಜರ್ : ಇನ್ನು ಸ್ವಾಮಿ ಅಲಿಯಾಸ್ ಯುವರಾಜ್ ಎಂಬ ಬೋಗಸ್ ಲೀಡರ್ ನ ಮುಖವಾಡಕ್ಕೆ ಮರುಳಾಗಿ ಸಾಕಷ್ಟು ಮಂದಿ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈಗಾಗಲೇ ಎಂಟು ದೂರುಗಳು ಬಂದಿವೆ. ಕೆಎಸ್ ಆರ್‌ಟಿಸಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಸ್ವಾಮಿ ಉದ್ಯಮಿಯೊಬ್ಬರಿಗೆ ಟೋಪಿ ಹಾಕಿದ್ದರು. ಅವರು ಸಿಸಿಬಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ವಾಮಿಯ ನಾಗರಭಾವಿ ಮನೆ ಮೇಲೆ ದಾಳಿ ನಡೆದಿತ್ತು. ಈ ವೇಳೆ ಸುಮಾರು 91 ಕೋಟಿ ರೂಪಯಿ ಮೌಲ್ಯದ ಚೆಕ್ ಗಳು ಸಿಕ್ಕಿದ್ದವು. ತನ್ನ ಚಾಲಕ ಸೇರಿದಂತೆ ಹಲವರ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಹಣದ ವಹಿವಾಟು ನಡೆಸಿದ್ದ ಸಂಗತಿ ಹೊರ ಬಂದಿತ್ತು. ಸಿಸಿಬಿ ಪೊಲೀಸರು ಸ್ವಾಮಿಯನ್ನು ಬಂಧಿಸುತ್ತಿದ್ದಂತೆ ಸರಣಿ ದೂರುಗಳು ಡಿಸಿಪಿ ಕೆ.ಪಿ ರವಿಕುಮಾರ್ ಅಂಗಳಕ್ಕೆ ಸೇರಿದ್ದವು. ರಾಜ್ಯಪಾಲರನ್ನಾಗಿ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಎಂಟು ಕೋಟಿ ರೂಪಾಯಿ ನಾಮ ಹಾಕಿದ್ದ ಬಗ್ಗೆಯೂ ದೂರು ದಾಖಲಾಗಿತ್ತು.

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಟೋಪಿ ಸ್ವಾಮಿಯ ಡೀಲಿಂಗ್ ಲಿಂಕ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ !

ಸಾಕಷ್ಟು ಅಧಿಕಾರಿಗಳು ವರ್ಗಾವಣೆ ಬಡ್ತಿ ವಿಚಾರವಾಗಿ ಸ್ವಾಮಿಗೆ ಹಣ ಕೊಟ್ಟು ನಾಮ ಹಾಕಿಸಿಕೊಂಡಿದ್ದರು. ಸಿಸಿಬಿ ಪೊಲೀಸರ ಮುಂದೆ ಅಧಿಕಾರಿಗಳಾಗಿ ದೂರು ನೀಡಿದರೆ ಸಮಸ್ಯೆಯಾದೀತು ಎಂದು ಬಹುತೇಕರು ದೂರು ನೀಡಿರಲಿಲ್ಲ ಎಂಬ ಸಂಗತಿಯೂ ಹೊರ ಬಿದ್ದಿತ್ತು. ಇದೀಗ ಸ್ವಾಮಿಯ ಬ್ಯಾಂಕ್ ಖಾತೆಗಳ ವಹಿವಾಟು ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಹಲವರನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಮೊದಲ ಭಾಗವಾಗಿ ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಹೊರ ಬರುತ್ತಿದ್ದಂತೆ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ.

ಆರ್‌ಎಸ್ಎಸ್ ನಾಯಕನಂತೆ ಮುಖವಾಡ ಧರಿಸಿ ಯುವರಾಜ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಚಿತ್ರ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಕ್ಕದಲ್ಲೇ ನಿಂತು ಕೈ ಕುಲುಕುತ್ತಿರುವ ಚಿತ್ರ. ಬಸವರಾಜ್ ಯತ್ನಾಳ್ ಅವರ ಜತೆ ಮುಖಾ ಮುಖಿ ಭೇಟಿ, ಧರ್ಮಸ್ಥಳ ಮಂಜುನಾಥ್ ಸ್ವಾಮಿ ದೇಗುಲದ ಡಾ. ವೀರೇಂದ್ರ ಹೆಗಡೆ ಅವರ ಸಹೋದರನಂತೆ ಪಕ್ಕದಲ್ಲಿ ನಿಂತು ಕೊಡುತ್ತಿರುವ ಪೋಟೋಗಳು ಬಂಧನದ ವೇಳೆ ಹೊರ ಬಿದ್ದಿದ್ದವು.

English summary
Radhika Kumaraswamy-Yuvaraj Fund Transfer Case: Fund Transfer Suspected To Radhika Kumaraswamy's Account. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X