ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಶಾರುಖ್ ಅಭಿನಯದ 'ಪಠಾಣ್' ಸಿನಿಮಾ ನೋಡಬೇಡಿ ಎಂದ ಸಿಎಂ ಯೋಗಿ

|
Google Oneindia Kannada News

ನವದೆಹಲಿ ಏಪ್ರಿಲ್ 4: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂರೂವರೆ ವರ್ಷಗಳ ನಂತರ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ದೊಡ್ಡ ಪರದೆಗೆ ಮರಳಲಿದ್ದಾರೆ. ಈ ಚಿತ್ರದ ಬಗ್ಗೆ ಸಿಎಂ ಯೋಗಿ ಮಾತನಾಡಿದ್ದಾರೆನ್ನುವ ವಿಡಿಯೋ ಭಾರಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ಕ್ಲಿಪ್‌ನಲ್ಲಿ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್ ಅನ್ನು ನೋಡದಂತೆ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ ಎಂದು ಸಂದೇಶವನ್ನು ಹರಡಲಾಗಿದೆ. ಜೊತೆಗೆ ಚಿತ್ರದಲ್ಲಿ ಶಾರುಖ್ ಅವರು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಅವರೊಂದಿಗೆ ತಮ್ಮನ್ನು ಹೋಲಿಸಿದ್ದಾರೆ ಎನ್ನಲಾಗಿದೆ.

ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಯೋಗಿ ಆದಿತ್ಯನಾಥ್ ಅವರು ಈ ದೇಶದ ಕೆಲವು ಆಪಾದಿತ ಲೇಖಕರು ಮತ್ತು ಎಡಪಂಥೀಯ ಸಿದ್ಧಾಂತದ ಕಲಾವಿದರು ಭಾರತ ವಿರೋಧಿ ಧ್ವನಿಯನ್ನು ಎತ್ತಲು ಪ್ರಾರಂಭಿಸಿದ್ದಾರೆ. ಆದರೆ ಆ ಕೆಲಸವನ್ನು ಬಿಜೆಪಿ ಮಾಡಲು ಬಿಡುವುದಿಲ್ಲ. ದುರದೃಷ್ಟವಶಾತ್, ಶಾರುಖ್ ಖಾನ್ ಅವರಂತಹವರಿಗೆ ಧ್ವನಿಯಾಗಿದೆ. ಇದು ಮೊದಲ ಬಾರಿಗೆ ಆಗುತ್ತಿಲ್ಲ. ಈ ಹಿಂದೆಯೂ ಅವರು ಇಂತಹ ಕೆಲಸಗಳನ್ನು ಮಾಡಿದ್ದಾರೆ. ಬಹುಸಂಖ್ಯಾತ ಸಮುದಾಯ ಅವರ ಸಿನಿಮಾಗಳನ್ನು ಬಹಿಷ್ಕರಿಸಿದರೆ ಅವರೂ ಸಹ ಸಾಮಾನ್ಯ ಮುಸಲ್ಮಾನರಂತೆ ಬೀದಿಯಲ್ಲಿ ಅಲೆಯಬೇಕಾಗುತ್ತದೆ ಎಂಬುದನ್ನು ಶಾರುಖ್ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.

Fact check: Bollywood actor Shah Rukh Khan starrer 'Pathan'Fact check: Bollywood actor Shah Rukh Khan starrer 'Pathan'

ಸಯೀದ್ ಹೇಳಿಕೆಗಳ ಬಗ್ಗೆ ಏನು ಹೇಳುತ್ತೀರಿ ಎಂದು ಯೋಗಿ ಆದಿತ್ಯನಾಥ್ ಅವರನ್ನು ಕೇಳಿದಾಗ, ಆದಿತ್ಯನಾಥ್ ಅವರು ಪ್ರತಿಕ್ರಿಯಿಸಿ ಶಾರುಖ್ ಖಾನ್ ಮತ್ತು ಹಫೀಜ್ ಸಯೀದ್ ಅವರ ಭಾಷೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಪೋಸ್ಟ್ ಅನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸಾಕಷ್ಟು ಜನರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್ ನೋಡಬೇಡಿ ಎಂದು ಯೋಗಿ ಆದಿತ್ಯನಾಥ್ ಸಂದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Fact check: Yogi pleads not to watch Pathan movie

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಒನ್ ಇಂಡಿಯಾದ ಫ್ಯಾಕ್ಟ್ ಚೆಕ್ ತಂಡ ತನಿಖೆ ನಡೆಸಿದಾಗ ಅದರ ಸರಿಯಾದ ಮಾಹಿತಿ ಹೊರಬಿದ್ದಿದೆ. ನಾವು ಗೂಗಲ್‌ನಲ್ಲಿ ಅದಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಹುಡುಕಿದೆವು. ಹುಡುಕಾಟ ಫಲಿತಾಂಶದಲ್ಲಿ ಅದರ ಪೂರ್ಣ ವಿಡಿಯೊವನ್ನು ANI ಸುದ್ದಿ ಸಂಸ್ಥೆಯ YouTube ಚಾನಲ್‌ನಲ್ಲಿ ಲಭ್ಯವಾಗಿದೆ. ಇದಲ್ಲಿ ಯೋಗಿ ಆದಿತ್ಯನಾಥ್ 'ಪಠಾಣ್'ಸಿನಿಮಾವನ್ನು ನೋಡಬೇಡಿ ಎಂದು ಹೇಳಿಲ್ಲ. ಜೊತೆಗೆ ವೈರಲ್ ವಿಡಿಯೋ 2015ರಲ್ಲಿ ತೆಗೆದ ವಿಡಿಯೋವಾಗಿದೆ.

2015ರ ಈ 2 ನಿಮಿಷ 22 ಸೆಕೆಂಡುಗಳ ವಿಡಿಯೊದಲ್ಲಿ ಯೋಗಿ ಆದಿತ್ಯನಾಥ್, ಜಾತ್ಯತೀತತೆಯ ಹೆಸರಿನಲ್ಲಿ ಎಡ ಸಿದ್ಧಾಂತದ ಜನರು ಭಾರತ ವಿರೋಧಿ ಧ್ವನಿಯನ್ನು ಎತ್ತುತ್ತಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಕೂಡ ಸೇರಿದ್ದಾರೆ. ಹಿಂದೂ ಸಮಾಜ ಜಗತ್ತಿನ ಅತ್ಯಂತ ಸಹಿಷ್ಣು ಸಮಾಜವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ಸಂಚು ಇದಾಗಿದೆ ಎಂದಿದ್ದಾರೆ.

Fact check: Yogi pleads not to watch Pathan movie

ವರದಿಗಾರರು ಕೇಳಿದ ಪ್ರಶ್ನೆಗೆ ಯೋಗಿಯನ್ನು ಪ್ರತಿಕ್ರಿಯಿಸಿ, ಪಾಕ್ ಭಯೋತ್ಪಾದಕ ಮತ್ತು ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಹಫೀಜ್ ಸಯೀದ್, ಶಾರುಖ್ ಖಾನ್ ಅಥವಾ ಯಾವುದೇ ಕಲಾವಿದ ಭಾರತದಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದರೆ, ಅವರು ಪಾಕಿಸ್ತಾನಕ್ಕೆ ಬರಬಹುದು ಎಂದು ಹೇಳಿದ್ದಾರೆ. ಇಲ್ಲಿ ಸುರಕ್ಷಿತವಾಗಿಲ್ಲದ ಜನರು ಹೋಗಬಹುದು. ನಾವೂ ಆ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಶಾರುಖ್ ಖಾನ್ ಭಾಷೆ ಮತ್ತು ಹಫೀಜ್ ಸಯೀದ್ ಭಾಷೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಶಾರುಖ್ ಖಾನ್ ಅವರ ಅಸಹಿಷ್ಣುತೆಯ ಹೇಳಿಕೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ 'ಪಠಾಣ್' ಸಿನಿಮಾವನ್ನು ನೋಡಬೇಡಿ ಎನ್ನುವ ಸಂದೇಶವನ್ನು ಯೋಗಿ ಆದಿತ್ಯನಾಥ್ ನೀಡಿಲ್ಲ.

Fact Check

ಕ್ಲೇಮು

ಶಾರುಖ್ ಅಭಿನಯದ 'ಪಠಾಣ್' ಸಿನಿಮಾ ನೋಡಬೇಡಿ ಎಂದ ಸಿಎಂ ಯೋಗಿ

ಪರಿಸಮಾಪ್ತಿ

ಶಾರುಖ್ ಅಭಿನಯದ 'ಪಠಾಣ್' ಸಿನಿಮಾ ನೋಡಬೇಡಿ ಎಂದ ಸಿಎಂ ಯೋಗಿ ವಿಡಿಯೋದಲ್ಲಿ ಹೇಳಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
In a clip that is going viral, the message is spread that Adityanath Yogi pleads not to watch 'Pathan' movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X