ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ನೀತಾ ಅಂಬಾನಿಗೆ ತಲೆ ಬಾಗಿ ನಮಸ್ಕರಿಸಿದರೇ ಮೋದಿ?

|
Google Oneindia Kannada News

ನವದೆಹಲಿ, ಜೂನ್ 07: ಪ್ರಸಾರ್ ಭಾರತಿ ಮಾಜಿ ಸಿಇಒ ಜವ್ಹಾರ್ ಸಿರ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿರ್ಕಾರ್ ಅವರು ಪೋಸ್ಟ್‌ ಮಾಡಿರುವ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀತಾ ಅಂಬಾನಿ ಎದುರು ತಲೆ ಬಾಗಿ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ಆದರೆ ಆ ಚಿತ್ರ ಸುಳ್ಳಾಗಿದ್ದು, ಚಿತ್ರವನ್ನು ಎಡಿಟ್ ಮಾಡಲಾಗಿದೆ, ಅಲ್ಲಿದ್ದಿದ್ದು ನೀತಾ ಅಂಬಾನಿ ಅಲ್ಲ ಎನ್‌ಜಿಒ ನಡೆಸುತ್ತಿರುವ ದೀಪಿಕಾ ಮಂಡಲ್ ಎಂಬುದು ತಿಳಿದುಬಂದಿದೆ. ಪ್ರೀತಿ ಅದಾನಿ ಅವರು ದಿವ್ಯ ಜ್ಯೋತಿ ಕಲ್ಚರಲ್ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ, ಈ ಸಂಸ್ಥೆಯು ಸಾಮಾಜಕ್ಕೆ ಒಳಿತನ್ನು ಮಾಡುವ ಕೆಲಸವನ್ನು ಮಾಡುತ್ತಿದೆ.

Fact Check: ಕೇಂದ್ರ ಸರ್ಕಾರವು 4 ಹಂತದಲ್ಲಿ ಕೋವಿಡ್ ಪರಿಹಾರ ನಿಧಿ ನೀಡುತ್ತಿದೆಯೇ?Fact Check: ಕೇಂದ್ರ ಸರ್ಕಾರವು 4 ಹಂತದಲ್ಲಿ ಕೋವಿಡ್ ಪರಿಹಾರ ನಿಧಿ ನೀಡುತ್ತಿದೆಯೇ?

ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ' ಸಿರ್ಕರ್ ಅವರು ಮಾಡಿರುವ ಟ್ವೀಟ್ ನಾಚಿಕೆಗೇಡಿನ ಸಂಗತಿಯಾಗಿದೆ, ಒಬ್ಬ ವ್ಯಕ್ತಿಯನ್ನು ಇಷ್ಟಪಡದಿರುವುದು ಬೇರೆ ವಿಚಾರ ಆದರೆ ಸಾಮಾಜಿಕವಾಗಿ ಸಾರ್ವಜನಿಕರೆದುರು ನಕಲಿ ಚಿತ್ರಗಳನ್ನು ಪ್ರದರ್ಶಿಸುವುದು ಖಂಡನೀಯ, ಅವರ ಈ ಕೆಲಸದಿಂದ ನಾವು ಮುಜುಗರಕ್ಕೆ ಒಳಗಾಗಿದ್ದೇವೆ' ಎಂದರು.

Fact Check Woman In This Picture With PM Modi Is Not Adani’s Wife, Viral Claim Is Fake

ದೀಪಿಕಾ ಮಂಡಲ್ ಅವರು ದಿವ್ಯಜ್ಯೋತಿ ಸಂಸ್ಕೃತಿ ಸಂಸ್ಥೆ ಮತ್ತು ಕಲ್ಯಾಣ ಸೊಸೈಟಿ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಅವರ ಪತಿ ಹೆಸರು ಸಮರ್ ಮಂಡಲ್ ಸಮರ್‌ರವರು ದೇಶದ ಕೊನೆಯ 8 ರಾಷ್ಟ್ರಪತಿಗಳ ಅಧಿಕೃತ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಿವಿನ್‌ ಇನ್ವೆಸ್ಟಿಚಚರ್ ಸಮಾರಂಭದಲ್ಲಿ ಪ್ರಧಾನ ಮಂತ್ರಿಯ ಈ ಫೋಟೋ ತೆಗೆಯಲಾಗಿತ್ತು.

ಸಿರ್ಕಾರ್ ಶೇರ್ ಮಾಡಿಕೊಂಡ ಫೋಟೊ ಈ ಹಿಂದೆಯೂ ಒಂದು ಬಾರಿ ವೈರಲ್ ಆಗಿತ್ತು, ಇದೊಂದು ಎಡಿಟ್ ಮಾಡಿರುವ ಫೋಟೊ ಆಗಿದೆ, ಅಂದರೆ ಇಲ್ಲಿ ಬೇರೊಬ್ಬರ ಫೋಟೋಗೆ ನೀತಾ ಅಂಬಾನಿ ಮುಖ ಹಾಕಲಾಗಿದೆ.

Fact Check

ಕ್ಲೇಮು

ಪ್ರಧಾನಿ ನರೇಂದ್ರ ಮೋದಿ ನೀತಾ ಅಂಬಾನಿ ಎದುರು ತಲೆ ಬಾಗಿ ನಮಸ್ಕರಿಸಿದರು

ಪರಿಸಮಾಪ್ತಿ

ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸಿದ್ದು ಎನ್‌ಜಿಒ ನಡೆಸುತ್ತಿರುವ ದೀಪಿಕಾ ಮಂಡಲ್ ಅವರಿಗೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Former CEO of Prasar Bharati Jawhar Sircar drew flak from various quarters after he shared a morphed image of Prime Minister Narendra Modi on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X