ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: 'ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ' ಫೋಟೋದ ಸತ್ಯಾಸತ್ಯತೆ ಏನು?

|
Google Oneindia Kannada News

ಹೊಸದಿಲ್ಲಿ ಜೂನ್ 09: ದೇಶದ ಬಹುತೇಕ ರಾಜ್ಯಗಳಲ್ಲಿ ಸರಕಾರ ರಚಿಸಿರುವ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಇತ್ತೀಚೆಗೆ ತಮಿಳುನಾಡಿನ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದನ್ನು ಅನೇಕ ಬಿಜೆಪಿ ನಾಯಕರು ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ, ಫೋಟೋದೊಂದಿಗೆ 'ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ' ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗಿದೆ. ಆದರೆ ಯಾವಾಗ ಈ ಫೋಟೋದ ಸತ್ಯಾಸತ್ಯತೆ ಹೊರಬಿದ್ದಿದೆಯೋ, ಆಗ ವಿಷಯ ಬೇರೆಯೇ ಆಗಿರುವುದು ತಿಳಿದು ಬಂದಿದೆ.

ವಾಸ್ತವವಾಗಿ, ತಮಿಳುನಾಡಿನ ಅತ್ಯಂತ ಎತ್ತರದ ಕಂಬದಲ್ಲಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಧ್ವಜಗಳನ್ನು ಹಾರಿಸುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಹಿಮಾಚಲ ಪ್ರದೇಶ ಬಿಜೆಪಿ ವಕ್ತಾರ ಪ್ರಜ್ವಲ್ ಬಸ್ತಾ ಮತ್ತು ಉತ್ತರ ದೆಹಲಿಯ ಮಾಜಿ ಮೇಯರ್ ರವೀಂದರ್ ಗುಪ್ತಾ ಸೇರಿದಂತೆ ಹಲವಾರು ನಾಯಕರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ. ನಾಲ್ವರು ಕಾರ್ಯಕರ್ತರು ಪರಸ್ಪರ ಹೆಗಲ ಮೇಲೆ ನಿಂತು ಪಕ್ಷದ ಧ್ವಜವನ್ನು ಹಾರಿಸುತ್ತಿರುವುದು ಫೋಟೋದಲ್ಲಿದೆ. "ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಪೋಸ್ಟ್ ಮಾಡಲಾಗುತ್ತಿದೆ, ಆದರೆ ವಾಸ್ತವವಾಗಿ ಪರಿಶೀಲಿಸಿದರೆ ಈ ಫೋಟೋದ ನೈಜತೆ ಮುನ್ನೆಲೆಗೆ ಬಂದಿದೆ.

Fact check: What is the reality of the lotus bloom in Tamil Nadu photo?

ವೈರಲ್ ಆಗಿರುವ ಚಿತ್ರವನ್ನು ಪರಿಶೀಲಿಸಿದಾಗ, ಈ ಫೋಟೋವನ್ನು ಟ್ಯಾಂಪರ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ವೈರಲ್ ಫೋಟೋ ವಾಸ್ತವವಾಗಿ ಬಹುಜನ ಸಮಾಜ ಪಕ್ಷದದ್ದು, ಅದರ ಧ್ವಜವನ್ನು ಬಿಜೆಪಿಯ ಧ್ವಜದಿಂದ ಬದಲಾಯಿಸಲಾಗಿದೆ.

Recommended Video

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲು | *Cricket | OneIndia Kannada

ಮೇ 31 ರಂದು, ಬಿಎಸ್ಪಿಯ ತೆಲಂಗಾಣ ಘಟಕದ ವಕ್ತಾರರಾದ ಶಿರಿಶಾ ಸ್ವೆರೋ ಅಕಿನಪಲ್ಲಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಜನರು ಬಿಎಸ್ಪಿ ಧ್ವಜವನ್ನು ಹಾರಿಸುತ್ತಿದ್ದಾರೆ. ಹೀಗಿರುವಾಗ ಫೋಟೋ ಟ್ಯಾಂಪರಿಂಗ್ ಮಾಡಿ ಬಿಜೆಪಿ ಬಾವುಟ ಬಳಸಿರುವುದು ಬಯಲಾಗಿದೆ. ಮೂಲ ಫೋಟೋದಲ್ಲಿ ಬಿಎಸ್ಪಿ ಧ್ವಜವಿತ್ತು. ಹೀಗಾಘಿ ಈ ಚಿತ್ರವು ಸಂಪೂರ್ಣವಾಗಿ ನಕಲಿ ಎಂದು ತಿಳಿದಿದೆ.

Fact Check

ಕ್ಲೇಮು

ತಮಿಳುನಾಡಿನಲ್ಲಿ ಕಮಲ ಅರಳುತ್ತಿದೆ ಎಂದು ಫೋಟೋವೊಂದು ವೈರಲ್ ಆಗಿದೆ.

ಪರಿಸಮಾಪ್ತಿ

ಆದರೆ ಬಿಎಸ್ಪಿ ಧ್ವಜ ಹೊಂದಿರುವ ಫೋಟೋವನ್ನು ಎಡಿಟ್ ಮಾಡುವ ಮೂಲಕ ಬಿಜೆಪಿ ಧ್ವಜವನ್ನು ಹಾಕಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A photo has been shared with the caption 'Lotus is blooming in Tamil Nadu'. What is the truth behind this viral photo?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X