ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮೇಲೆ ಮೊಟ್ಟೆ ಎಸೆದಿದ್ದು ನಿಜವೇ?

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮುಖದ ಮೇಲೆ ಮೊಟ್ಟೆ ಎಸೆಯಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆಗಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ವಿಡಿಯೋ ಸುಳ್ಳಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿರುವ ವಿಡಿಯೋ 2017ರಲ್ಲಿ ನಡೆದ ಫ್ರಾನ್ಸ್ ಚುನಾವಣೆ ಸಂದರ್ಭದಲ್ಲಿ ಚಿತ್ರೀಕರಿಸಲಾಗಿತ್ತು.

Fact Check: ಚೀನಾದಿಂದ ಭಾರತದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಳ? Fact Check: ಚೀನಾದಿಂದ ಭಾರತದ ಆಮದು ಪ್ರಮಾಣ ಶೇ.27ರಷ್ಟು ಹೆಚ್ಚಳ?

ಪ್ಯಾರಿಸ್‌ನ ಪೂರ್ವದ ಮಾಂಟ್ರಿಯಲ್‌ನಲ್ಲಿರುವ ಕಚೇರಿಗೆ ಮ್ಯಾಕ್ರನ್ ಭೇಟಿ ನೀಡುತ್ತಿದ್ದಾಗ, ಸರ್ಕಾರದ ವಿರುದ್ಧ ಕೋಪಗೊಂಡ ಕಾರ್ಮಿಕರು ಹಾಗೂ ಇತರೆ ಪ್ರತಿಭಟನಾಕಾರರು ಮ್ಯಾಕ್ರನ್ ಮೇಲೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು.

Fact Check: Video Of French President Macron Egged Has No Link To Remarks On Islam

ಹಾಗಾಗಿ 2020ರಲ್ಲಿ ಮ್ಯಾಕ್ರನ್ ಮೇಲೆ ಹೇಳಲಾಗುತ್ತಿರುವ ಮಾತುಗಳು ನಿಜವಲ್ಲ, ಹಳೆಯ ವಿಡಿಯೋ ಕ್ಲಿಪ್‌ಗಳನ್ನು ತೋರಿಸಿ ಜನರ ಹಾದಿ ತಪ್ಪಿಸಲಾಗುತ್ತಿದೆ.
ಫ್ರಾನ್ಸ್‌ನಲ್ಲಿಇಸ್ಲಾಂ ಭಯೋತ್ಪಾದನೆಯ ಅಟ್ಟಹಾಸ ಮರು ಕಳಿಸಿತ್ತು. ಶಾಲಾ ತರಗತಿಯಲ್ಲಿ ಪಾಠ ಮಾಡುವ ವೇಳೆ ಸಂದರ್ಭಿಕವಾಗಿ ಪ್ರವಾದಿ ಮೊಹಮ್ಮದ್‌ನ ವ್ಯಂಗ್ಯಚಿತ್ರ ತೋರಿಸಿ ವಿವರಿಸಿದ್ದ ಇತಿಹಾಸ ಶಿಕ್ಷಕನ ಶಿರಚ್ಛೇಧ ಮಾಡಲಾಗಿತ್ತು.

ಕೃತ್ಯ ಎಸಗಿದ್ದ ರಷ್ಯಾದ ಚೆಚನ್ಯಾ ಬಂಡುಕೋರ ಪ್ರದೇಶದಿಂದ ವಲಸೆ ಬಂದ 18 ವರ್ಷದ ಮುಸ್ಲಿಂ ವಿದ್ಯಾರ್ಥಿಯನ್ನು ಫ್ರಾನ್ಸ್‌ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದರು..

ನಿದರ್ಶನ ಸಮೇತ ಪಾಠ ಮಾಡುವ ಉಮೇದಿನಲ್ಲಿದ್ದ ಇತಿಹಾಸ ಶಿಕ್ಷಕ, ಧರ್ಮಾಂಧತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುವಾಗ ಪ್ರವಾದಿ ಮೊಹಮ್ಮದ್‌ ಹೆಸರು ಪ್ರಸ್ತಾಪಿಸಿ, ವ್ಯಂಗ್ಯಚಿತ್ರ ತೋರಿಸಿದ್ದರು.

ಅದರ ಮರುದಿನವೇ ಆ ಶಿಕ್ಷಕರ ತಲೆಕತ್ತರಿಸಿ ಹತ್ಯೆಗೈಯಲಾಗಿತ್ತು. ಪ್ರಕರಣವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ತ್ವರಿತ ಶೋಧ ನಡೆಸಿದ್ದ ಪೊಲೀಸರು ಪ್ಯಾರಿಸ್‌ ನಗರದ ಹೊರ ಭಾಗದಲ್ಲಿ ಬೀಡುಬಿಟ್ಟಿದ್ದ ಶಂಕಿತನನ್ನು ಗುಂಡು ಹಾರಿಸಿ ಸೆರೆ ಹಿಡಿದ್ದರು. ನಂತರ ಗಾಯದಿಂದ ಆತ ಮೃತಪಟ್ಟಿದ್ದಾನೆ. ಶಿಕ್ಷಕನ ಕೊಲೆಗೆ ಬೃಹತ್‌ ಜಾಲವೇ ಸೃಷ್ಟಿಯಾಗಿದ್ದು, ಆ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

Fact Check

ಕ್ಲೇಮು

ಇಸ್ಲಾಂ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷರ ಮಲೆ ಮೊಟ್ಟೆ ಎಸೆತ

ಪರಿಸಮಾಪ್ತಿ

ಈ ವಿಡಿಯೋ 2017ರಲ್ಲಿ ನಡೆದ ಚುನಾವಣೆ ವೇಳೆ ಚಿತ್ರೀಕರಿಸಿದ್ದು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
French President Emmanuel Macron has come under criticism over his remarks on radical Islam after a teacher was beheaded on the streets of Paris. Amid this, a video of Macron having an egg thrown at his face as he is in conversation with some people is circulating on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X