ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಮುರಿದುಬಿದ್ದ ಟ್ವಿಟ್ಟರ್ ಖರೀದಿ ಒಪ್ಪಂದ: ಮಸ್ಕ್ Twitter ಖಾತೆ ಅಮಾನತು?

|
Google Oneindia Kannada News

ನವದೆಹಲಿ ಜುಲೈ 11: ಟ್ವಟರ್ 44 ಶತಕೋಟಿ ಖರೀದಿ ಒಪ್ಪಂದದಿಂದ ಹಿಂದೆ ಸರಿದ ನಂತರ ಎಲಾನ್ ಮಸ್ಕ್ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ ಎಂಬ ಸಂದೇಶ ವೈರಲ್ ಆಗಿದೆ. ನಕಲಿ ಖಾತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಟ್ವಿಟ್ಟರ್ ಕಂಪನಿಯು ವಿಫಲವಾದ ನಂತರ ಟ್ವಿಟರ್ ಖರೀದಿಸುವ ತನ್ನ ಪ್ರಸ್ತಾಪವನ್ನು ತ್ಯಜಿಸುವುದಾಗಿ ಎಲಾನ್ ಮಸ್ಕ್ ಶುಕ್ರವಾರ ಘೋಷಿಸಿದರು. ಈ ಘೋಷಣೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ವೈರಲ್ ಆಗಿದೆ. ಟ್ವಿಟರ್ ಬಳಕೆದಾರರ ಪೋಸ್ಟ್ ಪ್ರಕಾರ "ಟ್ವಿಟ್ಟರ್ @eIonmusk fr ಅನ್ನು ಅಮಾನತುಗೊಳಿಸಿದ್ದಾರೆ??" ಎಂಬ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಆದರೆ ಎಲಾನ್ ಮಸ್ಕ್ ಅವರ ಹೆಸರನ್ನು ಹುಡುಕಿದಾಗ ಟ್ವಿಟ್ಟರ್ ಖಾತೆ ಸಕ್ರಿಯವಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಟ್ವೀಟ್‌ನಲ್ಲಿ ಟ್ಯಾಗ್ ಮಾಡಲಾದ ಅಮಾನತುಗೊಳಿಸಿದ ಖಾತೆಯಲ್ಲಿ ಎಲ್ ಅಕ್ಷರದ ಬದಲಿಗೆ ದೊಡ್ಡಕ್ಷರ I ಅನ್ನು ಹೊಂದಿದೆ. ಇದು ಟೆಸ್ಲಾ CEO ನ ನಿಜವಾದ ಬಳಕೆದಾರ ಹೆಸರಿಗೆ ಹೋಲುತ್ತದೆ.

ಮಸ್ಕ್‌ನ ಟ್ವಿಟರ್ ಖರೀದಿ ಡೀಲ್‌ನಲ್ಲಿ ಏನಾಗುತ್ತಿದೆ?

ನೈಜ ಮತ್ತು ನಕಲಿ ಬಳಕೆದಾರ ಹೆಸರಿನ ನಡುವಿನ ಸಾಮ್ಯತೆ ಎಷ್ಟು ವಿಲಕ್ಷಣವಾಗಿದೆಯೆಂದರೆ ಅನೇಕ ನೆಟಿಜನ್‌ಗಳು ನಕಲಿ ಸುದ್ದಿಯನ್ನೇ ನಂಬಿದ್ದಾರೆ. ಅಮಾನತುಗೊಂಡ ಖಾತೆಯ ಹ್ಯಾಂಡಲ್‌ನ ವ್ಯತ್ಯಾಸವನ್ನು ಗುರುತಿಸಲು ಸ್ವಲ್ಪ ಹೆಚ್ಚು ಗಮನ ಹರಿಸಿದವರು ಇತರರಿಗೆ ತಿಳಿಸಲು ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮ ಟ್ವಿಟರ್‌ ಖರೀದಿ ಒಪ್ಪಂದ ಮುರಿದುಬೀಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಯಾಕೆಂದರೆ ಉದ್ಯಮಿ ಎಲಾನ್ ಮಸ್ಕ್ ಅವರು ಸ್ವತಃ ಟ್ವಿಟರ್ 44 ಬಿಲಿಯನ್ ಖರೀದಿ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್‌ ಈಗ ಟೆಸ್ಲಾ ಸಿಇಒ ಎಲಾನ್ ಮಸ್ಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯೋಜಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿನ ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಸಾಕಷ್ಟು ಮಾಹಿತಿ ನೀಡಲು ಟ್ವಿಟರ್ ವಿಫಲವಾಗಿದೆ ಎಂದು ಮಸ್ಕ್‌ ಆರೋಪಿಸಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಟ್ವಿಟ್ಟರ್ ಖರೀದಿ ಒಪ್ಪಂದ ಕೊನೆಗೊಳಿಸುತ್ತಿರುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ.

ಬೃಹತ್ ಕಾನೂನು ಸಮರ

ಬೃಹತ್ ಕಾನೂನು ಸಮರ

ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಟ್ವಿಟ್ಟರ್‌ ನಿರಾಕರಿಸಿದೆ ಅಥವಾ ಮಾಹಿತಿಯನ್ನು ಒದಗಿಸಲಿಲ್ಲ. ಕೆಲವೊಮ್ಮೆ ಟ್ವಿಟ್ಟರ್, ತನ್ನ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥನೀಯವೆಂದು ತೋರುವ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಿದೆ ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದ ಮುರಿದುಬಿದ್ದಿದೆ" ಎಂದು ಮಸ್ಕ್ ಹೇಳಿದ್ದಾರೆ.ಮಸ್ಕ್‌ ಟ್ವಿಟರ್‌ ಖರೀದಿಯನ್ನು ರದ್ದು ಮಾಡಿದ ಬೆನ್ನಲ್ಲಿಯೇ, ಎಲಾನ್‌ ಮಸ್ಕ್‌ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್‌ ಆಡಳಿತ ಮಂಡಳಿ ತಿಳಿಸಿದದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್‌ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ನಡುವೆ ಮುಂದೆ ನಡೆಯಬಹುದಾದ ಬಹುದೊಡ್ಡ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ.

ಮೆಗಾ ಡೀಲ್ ಅನ್ನು ಮುರಿಯವುದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳ ನಡುವೆ ಮುಂದೆ ಬೃಹತ್ ಕಾನೂನು ಸಮರವನ್ನು ಸೂಚಿಸುತ್ತದೆ.

ಒಪ್ಪಂದ ಮುರಿದರೆ ದಂಡ

ಒಪ್ಪಂದ ಮುರಿದರೆ ದಂಡ

ಆದರೆ ಮಸ್ಕ್‌ ಅವರ ಈ ನಿರ್ಧಾರದ ವಿರುದ್ಧ ಟ್ವಿಟ್ಟರ್ ಕಾನೂನು ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ಮಸ್ಕ್‌ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಅವರು $1 ಬಿಲಿಯನ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಟ್ವಿಟರ್ ಮತ್ತು ಮಸ್ಕ್ ಇಬ್ಬರೂ ಏಪ್ರಿಲ್‌ನಲ್ಲಿ ನಡೆದ ಒಡಂಬಡಿಕೆ ವೇಳೆ ಒಪ್ಪಿಕೊಂಡಿದ್ದರು. ಆದರೆ ಸ್ಪ್ಯಾಮ್ ಖಾತೆಗಳ ಸಾಕಷ್ಟು ಕುರಿತ ಮಾಹಿತಿ(ಡೇಟಾ)ಯನ್ನು ಟ್ವಿಟರ್‌ ನೀಡಲು ವಿಫಲವಾಗಿದ್ದು, ಹೀಗಾಗಿ 44 ಶತಕೋಟಿ ಡಾಲರ್‌ಗೆ ಖರೀದಿಸುವ ಒಪ್ಪಂದಕ್ಕೆ ಬ್ರೇಕ್ ಬಿದ್ದಿದೆ ಎಂದು ಮಸ್ಕ್ ಹೇಳಿದ್ದಾರೆ.

ಮುರಿದುಬಿದ್ದ ಟ್ವಿಟ್ಟರ ಖರೀದಿ ಒಪ್ಪಂದ

ಮುರಿದುಬಿದ್ದ ಟ್ವಿಟ್ಟರ ಖರೀದಿ ಒಪ್ಪಂದ

ಟ್ವಿಟ್ಟರ್ ಅಗತ್ಯ ಮಾಹಿತಿಗಳ ಬಗ್ಗೆ ಎರಡು ತಿಂಗಳ ಕಾಲ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಕೆಲವೊಮ್ಮೆ ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಟ್ವಿಟ್ಟರ್‌ ನಿರಾಕರಿಸಿದೆ ಅಥವಾ ಮಾಹಿತಿಯನ್ನು ಒದಗಿಸಲಿಲ್ಲ. ಕೆಲವೊಮ್ಮೆ ಟ್ವಿಟ್ಟರ್, ತನ್ನ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥಿಸಿಕೊಂಡಿದೆ ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದ ಮುರಿದುಬಿದ್ದಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಕಂಪನಿಯು ವಿಲೀನ ಒಪ್ಪಂದದ ಅನೇಕ ನಿಬಂಧನೆಗಳನ್ನು ಉಲ್ಲಂಘಿಸಿದ ಕಾರಣ ಟ್ವಿಟರ್‌ನ ತನ್ನ ಸ್ವಾಧೀನ ಒಪ್ಪಂದವನ್ನು ಕೊನೆಗೊಳಿಸಲು ಉದ್ದೇಶಿಸಿರುವುದಾಗಿ ಎಲೋನ್ ಮಸ್ಕ್ ಹೇಳಿದರು. ಟ್ವಿಟರ್ ಅಧ್ಯಕ್ಷ ಬ್ರೆಟ್ ಟೇಲರ್ ಕಂಪನಿಯು ಸ್ವಾಧೀನ ಒಪ್ಪಂದ ಜಾರಿಗೊಳಿಸಲು ಕಾನೂನು ಕ್ರಮ ಅನುಸರಿಸಲು ಯೋಜಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

Recommended Video

ಬಕ್ರೀದ್ ಸಂಭ್ರಮಕ್ಕೆ‌ ಜಮೀರ್ ಅಹ್ಮದ್ ಜೊತೆ‌ ಮುಸ್ಲಿಂ‌ ವೇಷ ತೊಟ್ಟ ಸಿದ್ದರಾಮಯ್ಯ | *Politics | OneIndia Kannada

Fact Check

ಕ್ಲೇಮು

ಟ್ವಿಟ್ಟರ ಖಾತೆ ಖರೀದಿ ಒಪ್ಪಂದ ಮುರಿದು ಬಿದ್ದಿದ್ದು ಮುರಿದುಬಿದ್ದ ಬಳಿಕ ಎಲೋನ್ ಮಸ್ಕ್ ಅವರ ಖಾತೆಯನ್ನು Twitter ಅಮಾನತುಗೊಳಿಸಿದೆ.

ಪರಿಸಮಾಪ್ತಿ

ಟ್ವಿಟ್ಟರ ಖಾತೆ ಖರೀದಿ ಒಪ್ಪಂದ ಮುರಿದು ಬಿದ್ದಿದ್ದು ಮುರಿದುಬಿದ್ದ ಬಳಿಕ ಎಲೋನ್ ಮಸ್ಕ್ ಅವರ ಖಾತೆಯನ್ನು Twitter ಅಮಾನತುಗೊಳಿಸಲಾಗಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A message has gone viral that Twitter has suspended Elon Musk's account after Musk backed out of a 44 billion purchase deal. What is the truth behind this message?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X