ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಆಸ್ಪತ್ರೆಯಲ್ಲಿ ಕುಸಿದು ಬಿದ್ದ ವೈದ್ಯೆ- ವೈರಲ್ ವಿಡಿಯೋ ಮುಂಬೈನದ್ದಾ?

|
Google Oneindia Kannada News

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಕೆಲವೊಮ್ಮೆ ಅದನ್ನು ತಪ್ಪು ಸಂದೇಶದೊಂದಿದೆ ಹಂಚಿಕೊಳ್ಳುವುದು ಕಂಡುಬರುತ್ತದೆ. ಹಿಂದೆ ಎಂದೂ ನಡೆದ ಘಟನೆಯನ್ನು ಪ್ರಸ್ತುತ ಘಟನೆಗಳಿಗೆ ಹೋಲಿಕೆ ಮಾಡಿ ಹಂಚಿಕೊಳ್ಳಲಾಗುತ್ತದೆ. ಅಂಥದ್ದೇ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಹೃದಯಾಘಾತದಿಂದ ವೈದ್ಯರೊಬ್ಬರು ಕುಸಿದು ಬೀಳುವ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಸ್ಪತ್ರೆಯ ಎಂಟ್ರೆಸ್‌ನಲ್ಲಿ ವೈದ್ಯರೊಬ್ಬರು ಫೈಲ್‌ನಲ್ಲಿ ಬರೆಯುತ್ತಾ ಸಹೋದ್ಯೋಗಿಯೊಂದಿಗೆ ನಿಂತಿರುತ್ತಾರೆ. ಕೊಂಚ ಸಮಯದ ನಂತರ ಆ ವೈದ್ಯರು ಕುಸಿದು ಬೀಳುತ್ತಾರೆ. ಆಕೆಯ ಸಹಾಯಕ್ಕೆ ಆಸ್ಪತ್ರೆ ಸಿಬ್ಬಂದಿ ಓಡಿ ಬರುತ್ತಾರೆ.

Fact check: ABHA ಅಡಿಯಲ್ಲಿ ಸರ್ಕಾರ 5 ಲಕ್ಷ ಆರೋಗ್ಯ ವಿಮೆಯನ್ನು ನೀಡುತ್ತಿದೆಯೇ?Fact check: ABHA ಅಡಿಯಲ್ಲಿ ಸರ್ಕಾರ 5 ಲಕ್ಷ ಆರೋಗ್ಯ ವಿಮೆಯನ್ನು ನೀಡುತ್ತಿದೆಯೇ?

ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಮುಂಬೈನ ವಿನಾಯಕ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುನಿತಾ. ಅಂತಹ ಒಂದು ಪೋಸ್ಟ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಬಹುದು. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವೈರಲ್ ಸಿಸಿಟಿವಿ ಫೂಟೇಜ್ ಬೆಂಗಳೂರಿನ ಆಸ್ಪತ್ರೆಯಿಂದ 2017ರಲ್ಲಿ ಕಂಡುಬಂದಿದೆ ಎಂದಿದೆ.

Fact Check: Truth Behind the Video of the Doctor Who Collapsed in the Hospital

ತನಿಖೆ

ವೈರಲ್ CCTV ಫೂಟೇಜ್‌ನ್ನು ಹುಡುಕಿದಾಗ ಅದೇ ವೀಡಿಯೊವನ್ನು 2018 ರ ಹಿಂದೆಯೇ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ವೀಡಿಯೊವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ವೀಡಿಯೊದ ಬಗ್ಗೆ ಯಾವುದೇ ನೈಜ ಮಾಹಿತಿ ಲಭ್ಯವಾಗಲಿಲ್ಲ. ಆದರೆ ಕೂಲಂಕಷವಾಗಿ ನೋಡಿದಾಗ ಕೆಲವು ಸುಳಿವು ಸಿಕ್ಕಿದೆ. ಇದು ನವೆಂಬರ್ 26, 2017 ರ ಭಾನುವಾರದಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದ ಮೇಲಿನ ಎಡ ಮೂಲೆಯಲ್ಲಿ ದಿನಾಂಕದ ಸ್ಟ್ಯಾಂಪ್ ಅನ್ನು ಕಾಣಬಹುದು.

ಸೂಚಿಸಿದ ದಿನಾಂಕದಂದು ಘಟನೆ ನಡೆದಿದೆ ಎಂದು ಊಹಿಸಿ, ಈ ವೀಡಿಯೊದ ಮೂಲವನ್ನು ಪತ್ತೆ ಹಚ್ಚಲಾಗಿದೆ. ಇದೇ ವಿಡಿಯೋವನ್ನು "ನ್ಯೂಸ್‌ಫ್ಲೇರ್" ಗೆ ಅಪ್‌ಲೋಡ್ ಮಾಡಿರುವುದನ್ನು ಕಂಡುಕೊಳ್ಳಳಾಯಿತು. "ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ವೈದ್ಯ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ವಿಡಿಯೋ ಮೂಲಕ ಪತ್ತೆ ಮಾಡಲಾಗಿದೆ.

Fact Check: Truth Behind the Video of the Doctor Who Collapsed in the Hospital

ಈ ವಿಡಿಯೋ ಬೆಂಗಳೂರಿನದ್ದಾಗಿದೆ. ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಡಾ. ಸುನಿತಾ ಕುಸಿದು ಬಿದ್ದಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆಸ್ಪತ್ರೆಯ ವಕ್ತಾರ ಡಾ. ಭರತ್, "ಘಟನೆ ನಡೆದ ಕೂಡಲೇ ನಾವು ಅವರನ್ನು ಐಸಿಯುಗೆ ಸೇರಿಸಿದೆವು ಮತ್ತು ಇಂಟ್ರಾಕಾರ್ಡಿಯಾಕ್ ಇಂಜೆಕ್ಷನ್ ಸೇರಿದಂತೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಿದೆವು. ಆದರೆ ಅವರು ಸ್ಪಂದಿಸದೇ ಸಾವನ್ನಪ್ಪಿದರು. ಅವರು ಮಧುಮೇಹಿಯಾಗಿದ್ದರು. ಈ ವೇಳೆ ಅವರ ಸಕ್ಕರೆ ಮಟ್ಟ ತುಂಬಾ ಹೆಚ್ಚಿತ್ತು. ಆದರೆ ಅವರು ತಮ್ಮ ಅನಾರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಲ್ಲಿ ತಿಳಿಸಿರಲಿಲ್ಲ" ಎಂದು ಹೇಳಿದ್ದಾರೆ.

ಇದನ್ನು ಪರಿಶೀಲಿಸಲು ಬೆಂಗಳೂರಿನ ವಿನಾಯಕ ಆಸ್ಪತ್ರೆಯನ್ನು ಸಂಪರ್ಕಿಸಲಾಯಿತು. ಆಸ್ಪತ್ರೆಯ ವಕ್ತಾರರ ಪ್ರಕಾರ, "ಇದು ಆರು ವರ್ಷಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ನಡೆದ ಘಟನೆ. ಸ್ಥಳದಲ್ಲಿದ್ದ ವೈದ್ಯೆ ಡಾ. ಸುನಿತಾ. ಅವರು ಮಧುಮೇಹಿ. ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ ಆಸ್ಪತ್ರೆಗೆ ಈ ಕುರಿತು ಹಲವು ಕರೆಗಳು ಬಂದಿವೆ ಎಂದು ವಕ್ತಾರರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು 2017 ರ ಬೆಂಗಳೂರಿನ ವಿನಾಯಕ ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದ ಬಂದವು ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಇದಕ್ಕೂ ಮುಂಬೈ ಅಥವಾ ಆನ್‌ಲೈನ್ ಪೋಸ್ಟ್‌ಗಳು ಹೇಳಿಕೊಂಡಂತೆ ಯಾವುದೇ ಇತ್ತೀಚಿನ ಸಮಯದಲ್ಲಿ ನಡೆದ ಘಟನೆ ಇದಲ್ಲ ಎಂಬುದು ದೃಢಪಡಿಸಬಹುದು.

Fact Check

ಕ್ಲೇಮು

ವಿಡಿಯೋದಲ್ಲಿ ಕಾಣಿಸುವಂತೆ ಕುಸಿದು ಬೀಳುವ ವೈದ್ಯೆ ಮುಂಬೈನ ವಿನಾಯಕ ಆಸ್ಪತ್ರೆಯ ಡಾ.ಸುನಿತಾ ಎಂದು ವೈರಲ್.

ಪರಿಸಮಾಪ್ತಿ

ವಿಡಿಯೋದಲ್ಲಿ ಕಾಣಿಸುವಂತೆ ಕುಸಿದು ಬೀಳುವ ವೈದ್ಯೆ ಬೆಂಗಳೂರು ವಿನಾಯಕ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಸುನಿತಾ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
The video has been made viral on the social networking site of Dr Sunita's collapsed video at Vinayaka Hospital in Mumbai. Learn the truth behind this video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X