ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: 'ಪ್ರಾರ್ಥನೆಗೆ ಅಡ್ಡಿಪಡಿಸಿದ ರೈಲು ಹಾರ್ನ್-ಮುಸ್ಲಿಂ ಗುಂಪಿನಿಂದ ಕಲ್ಲು ತೂರಾಟ'

|
Google Oneindia Kannada News

ರಾಮ ನವಮಿ ಮತ್ತು ಹನುಮಾನ್ ಜಯಂತಿ ಆಚರಣೆಗಳ ಸಂದರ್ಭದಲ್ಲಿ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಯದಲ್ಲಿ ರೈಲಿಗೆ ಕೆಲವರು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ ನಿಂತ ರೈಲು ಚಲಿಸಲು ಪ್ರಾರಂಭಿಸಿದಾಗ ಯುವಕರ ಗುಂಪೊಂದು ರೈಲಿನ ಮೇಲೆ ಕಲ್ಲು ತೂರಾಟ ನಡೆಸುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆದಾರರು 28 ಸೆಕೆಂಡ್‌ಗಳ ದೀರ್ಘಾವಧಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮುಸ್ಲಿಮರ ಗುಂಪು ರೈಲಿನ ಹಾರ್ನ್ ಅವರ ಪ್ರಾರ್ಥನೆಗೆ ಅಡ್ಡಿಪಡಿಸಿದ್ದರಿಂದ ಕಲ್ಲು ತೂರಾಟ ಮಾಡಿದ್ದಾರೆಂದು ಹೇಳಿಕೊಳ್ಳಲಾಗಿದೆ.

Fact check: ಧ್ವನಿವರ್ಧಕ ನಿಷೇಧ: ರಾಜ್ ಠಾಕ್ರೆ ಹೇಳಿಕೆಯಂತೆ ಫ್ರಾನ್ಸ್‌ನಲ್ಲಿ ಪ್ರೊಟೆಸ್ಟ್Fact check: ಧ್ವನಿವರ್ಧಕ ನಿಷೇಧ: ರಾಜ್ ಠಾಕ್ರೆ ಹೇಳಿಕೆಯಂತೆ ಫ್ರಾನ್ಸ್‌ನಲ್ಲಿ ಪ್ರೊಟೆಸ್ಟ್

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಹಕ್ಕು ತಪ್ಪುದಾರಿಗೆಳೆಯುತ್ತಿದೆ ಎಂದು ಕಂಡುಹಿಡಿದಿದೆ. ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಕಲ್ಲು ತೂರಾಟದ ವೈರಲ್ ವಿಡಿಯೊ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆಯದ್ದಾಗಿದೆ.

ಈ ವಿಡಿಯೋವನ್ನು ತಮಿಳು ನ್ಯೂಸ್ ಚಾನೆಲ್ ಸತ್ಯಂ ನ್ಯೂಸ್ ಅಪ್‌ಲೋಡ್ ಮಾಡಿದೆ. ಆದರೆ ಈ ವಿಡಿಯೋ ಶೀರ್ಷಿಕೆಯಲ್ಲಿ ನಮಾಜ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ವಿಡಿಯೊದ ಶೀರ್ಷಿಕೆಯಲ್ಲಿ ಚೆನ್ನೈನ ಪೆರಂಬೂರ್ ರೈಲು ನಿಲ್ದಾಣದ ಬಳಿ "ಕಾಲೇಜು ವಿದ್ಯಾರ್ಥಿಗಳ ನಡುವಿನ ಘರ್ಷಣೆ" ಎಂದು ವಿವರಿಸಲಾಗಿದೆ. ಇನ್ನಷ್ಟು ಈ ಬಗ್ಗೆ ಹುಡುಗಿದಾಗ ಏಪ್ರಿಲ್ 11 ರಂದು ಚೆನ್ನೈನ ಪೆರಂಬೂರ್ ನಿಲ್ದಾಣದ ಬಳಿ ಘರ್ಷಣೆ ಸಂಭವಿಸಿದೆ ಎಂದು ಎರಡೂ ವರದಿಗಳು ತಿಳಿಸಿವೆ.

Fact check: Train Horn disrupted to prayer; Muslim group throwing stones

ವರದಿಗಳ ಪ್ರಕಾರ, ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳು ತಿರುಪತಿ ಎಕ್ಸ್‌ಪ್ರೆಸ್‌ನಲ್ಲಿ ಮತ್ತು ಪಚ್ಚಯ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಅರಕ್ಕೋಣಂಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳು ಅಶಿಸ್ತಿನಿಂದ ಅರೋಕ್ಕಾನಮ್ ಕಡೆಗೆ ಪ್ರಯಾಣಿಸುತ್ತಿದ್ದ ರೈಲಿಗೆ ಕಲ್ಲು ತೂರಾಟ ಆರಂಭಿಸಿದ್ದಾರೆ. ಹೀಗಾಗಿ ರೈಲು ಚಾಲಕ ರೈಲು ನಿಲ್ಲಿಸಿದ್ದಾನೆ. ಬಳಿಕ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

Fact check: Train Horn disrupted to prayer; Muslim group throwing stones

ಈ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಗಳು ಹೊಸದೇನಲ್ಲ ಎಂದು ಹೆಚ್ಚಿನ ವರದಿಗಳು ಬಹಿರಂಗಪಡಿಸಿವೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ 2016 ರ ವರದಿ ಮತ್ತು 2018 ರ ಮತ್ತೊಂದು ವರದಿಯ ಪ್ರಕಾರ, ಎರಡೂ ಕಾಲೇಜುಗಳ ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ಜಗಳದಲ್ಲಿ ತೊಡಗಿದ್ದಾರೆ. ಆದರೆ ಪರಿಶೀಲನೆಯಲ್ಲಿ ಗುಂಪುಗಳ ನಡುವಿನ ಗಲಾಟೆಗೆ ಯಾವುದೇ ಕೋಮುವಾದ ಕೋನ ಕಂಡುಬಂದಿಲ್ಲ. ಹೀಗಾಗಿ ಎರಡು ವಿಭಿನ್ನ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ವಿಡಿಯೊವನ್ನು ಸುಳ್ಳು ಕೋಮು ಕೋನದಿಂದ ಪ್ರಸಾರ ಮಾಡಲಾಗಿದೆ.

Fact Check

ಕ್ಲೇಮು

ರೈಲು ಹಾರ್ನ್ ಪ್ರಾರ್ಥನೆಗೆ ಅಡ್ಡಿಪಡಿಸಿದೆ ಎಂದು ಮುಸ್ಲಿಂ ಗುಂಪಿನಿಂದ ಕಲ್ಲು ತೂರಾಟ

ಪರಿಸಮಾಪ್ತಿ

ಎರಡು ವಿಭಿನ್ನ ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ವಿಡಿಯೊವನ್ನು ಸುಳ್ಳು ಕೋಮು ಕೋನದಿಂದ ಪ್ರಸಾರ ಮಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
video claim that a group of Muslims started pelting stones at a train after its horn interrupted their prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X