ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಕನ್ಹಯ್ಯಾ ಲಾಲ್ ಹಂತಕರನ್ನು ಬಂಧಿಸಿದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ?

|
Google Oneindia Kannada News

ಕನ್ಹಯ್ಯಾ ಲಾಲ್ ಹತ್ಯೆಯ ನಂತರ ರಾಜಸ್ಥಾನದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗಳು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಗೂ ಕಾರಣವಾಗಿವೆ. ಈ ನಡುವೆ ಗಾಯಗೊಂಡ ಪೊಲೀಸ್ ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಾರ್ಹ ಹೇಳಿಕೆಗಳೊಂದಿಗೆ ವೈರಲ್ ಆಗಿದೆ.

ಹಲವು ಗಾಯಗಳೊಂದಿಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಪೊಲೀಸ್ ಪೇದೆಯೇ ಕನ್ಹಯ್ಯಾ ಲಾಲ್ ಹಂತಕರನ್ನು ಬಂಧಿಸಿದ್ದು ಎಂದು ವಿಡಿಯೋ ಶೇರ್ ಮಾಡಿದವರು ಹೇಳಿದ್ದಾರೆ. ಈ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಫೋಟೋ ಹಂಚಿಕೊಂಡವರು ಹೇಳಿಕೊಂಡಿದ್ದಾರೆ.

"ದೇಶವು ಇಸ್ಲಾಮೀಕರಣದತ್ತ ಸಾಗುತ್ತಿದೆ: ಕನ್ಹಯ್ಯಾ ಲಾಲ್ ಹಂತಕರನ್ನು ಬಂಧಿಸಿದ ಪೊಲೀಸ್ ಪೇದೆಯ ಮೇಲೆ ಕತ್ತಿಯಿಂದ ದಾಳಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಅವರು ಕನ್ಹಯ್ಯಾ ಲಾಲ್ ಹತ್ಯೆ ಆರೋಪಿಗಳಾದ ರಿಯಾಜ್ ಮತ್ತು ಗೌಸ್ ಅವರನ್ನು ಬಂಧಿಸಿದ್ದರು" ಎಂದು ಹೇಳುವ ಪೋಸ್ಟ್ ವಿಡಿಯೊದ ಜೊತೆಗೆ ಹಂಚಿಕೊಳ್ಳಲಾಗಿದೆ.

Fact check: This injured cop was not a part of team that nabbed Kanhaiya Lals murderers

ಆದರೆ ಈ ವೈರಲ್ ವಿಡಿಯೊದಲ್ಲಿರುವ ಕಾನ್‌ಸ್ಟೆಬಲ್ ಕನ್ಹಯ್ಯಾ ಲಾಲ್ ಹಂತಕರನ್ನು ಬಂಧಿಸಿದ ತಂಡದಲ್ಲಿರಲಿಲ್ಲ ಎಂದು AFWA ತನಿಖೆಯಿಂದ ತಿಳಿದು ಬಂದಿದೆ. ವೈರಲ್ ವಿಡಿಯೋವನ್ನು ಹುಡುಕಾಡಿದಾಗ ಗಾಯಗೊಂಡ ಪೋಲೀಸ್‌ನ ಅದೇ ಚಿತ್ರವನ್ನು ಹೊಂದಿರುವ ಅನೇಕ ಸುದ್ದಿ ವರದಿಗಳು ಲಭ್ಯವಾಗಿವೆ.

ಜುಲೈ 4 ರಂದು ಪ್ರಕಟವಾದ ದೈನಿಕ್ ಭಾಸ್ಕರ್ ಮತ್ತು ಏಷ್ಯಾನೆಟ್ ನ್ಯೂಸ್ ವರದಿಗಳು ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಒಂದು ವಾರದೊಳಗೆ ಪೊಲೀಸರ ಮೇಲೆ ನಡೆದ ಎರಡನೇ ದಾಳಿ ಎಂದು ಉಲ್ಲೇಖಿಸಿದೆ. ಇದೇ ಪ್ರದೇಶದಲ್ಲಿ ಹಂತಕರನ್ನು ಬಂಧಿಸಲಾಗಿದೆ. ಈ ವರದಿಗಳ ಪ್ರಕಾರ, ಗಾಯಗೊಂಡ ಕಾನ್‌ಸ್ಟೆಬಲ್‌ನ ಹೆಸರು ಭಜಯ್ ಸಿಂಗ್. ಕಳೆದ ಸೋಮವಾರ, ಭೀಮ್‌ನ ಮಾರುಕಟ್ಟೆ ಪ್ರದೇಶದಲ್ಲಿ ಅವರನ್ನು ನಿಯೋಜಿಸಿದ್ದಾಗ, ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

Fact check: This injured cop was not a part of team that nabbed Kanhaiya Lals murderers

ಆರೋಪಿ ಇಬ್ಬರ ಬಂಧನದಲ್ಲಿ ಭಜಯ್ ಸಿಂಗ್ ಪಾತ್ರವಿದೆಯೇ ಎಂದು ಕಂಡುಹಿಡಿಯಲು ಪೊಲೀಸ್ ಸುಧೀರ್ ಚೌಧರಿ ಅವರನ್ನು ತಲುಪಿದಾಗ. "ಇದು ತಂಡದ ಪ್ರಯತ್ನ ಮತ್ತು ಸಾಮೂಹಿಕ ಯಶಸ್ಸು. ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಕ್ರೆಡಿಟ್ ನೀಡಬಾರದು. ಪೊಲೀಸರ ಇಡೀ ತಂಡವು ಇದನ್ನು ಸಾಧ್ಯವಾಗಿಸಿದೆ. ಆದರೆ, ಆರೋಪಿಯನ್ನು ಬಂಧಿಸಿದ ತಂಡದಲ್ಲಿ ಭಜಯ್ ರಾಮ್ ಚೇಸ್‌ನಲ್ಲಿ ಇರಲಿಲ್ಲ" ಎಂದು ಚೌಧರಿ ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ ಭೀಮ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಗಜೇಂದ್ರ ಸಿಂಗ್ ರಾಥೋಡ್ ಅವರನ್ನು ಸಂಪರ್ಕಿಸಲಾಯಿತು. ಆಪಾದಿತ ಕೊಲೆಗಾರರನ್ನು ಬೆನ್ನಟ್ಟಿ ಬಂಧಿಸಿದ ತಂಡದ ಭಾಗವಾಗಿ ಭಜಯ್ ರಾಮ್ ಇರಲಿಲ್ಲ ಎಂದು ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಗಾಯಗೊಂಡ ಪೊಲೀಸ್‌ನ ವಿಡಿಯೊವನ್ನು ತಪ್ಪುದಾರಿಗೆಳೆಯುವ ಸಂದೇಶದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತೀರ್ಮಾನಿಸಬಹುದು.

Fact Check

ಕ್ಲೇಮು

ಕನ್ಹಯ್ಯಾ ಲಾಲ್ ಹಂತಕರನ್ನು ಬಂಧಿಸಿದ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಸಂದೇಶ ವೈರಲ್ ಆಗಿದೆ.

ಪರಿಸಮಾಪ್ತಿ

ಕಾನ್‌ಸ್ಟೆಬಲ್‌ ಭಜಯ್ ಸಿಂಗ್ ಮೇಲೆ ಹಲ್ಲೆ ಮಾಡಿರುವುದು ಹಂತಕರನ್ನು ಬಂಧಿಸಿರುವುದು ಕಾರಣವಲ್ಲ ಎಂದು ತನಿಖೆಯಿಂದ ಬಯಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A post on social media has gone viral saying that the constable who arrested Kanhaiya Lal's killers was assaulted. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X