ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಈ ವ್ಯಕ್ತಿ ಪ್ರೌಢಶಾಲೆಯಲ್ಲಿ 26 ಬಾರಿ ಫೇಲ್ ಆಗಿದ್ದಾನೆ: ಇದು ಸತ್ಯವೇ?

|
Google Oneindia Kannada News

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಹಲವಾರು ಪೋಸ್ಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಹೆಚ್ಚಿನವುಗಳಲ್ಲಿ ಸತ್ಯದ ಅಂಶವಿಲ್ಲದೇ ವೈರಲ್ ಆಗುತ್ತವೆ. ಇದು ಹೆಚ್ಚಾಗಿ ಸಂಭವಿಸುತ್ತದೆ. ಏಕೆಂದರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ್ಯಂತ ಟ್ರೋಲ್ ಆಗಲು ಸತ್ಯಕ್ಕೆ ದೂರವಾಗಿರುವ ಹಲವು ವಿಷಯಗಳನ್ನು ವೈರಲ್ ಮಾಡಲಾಗುತ್ತದೆ. ಇಂತಹದೊಂದು ಪೋಸ್ಟ್‌ನಲ್ಲಿ ಹೈಸ್ಕೂಲ್‌ನಲ್ಲಿ 26 ಬಾರಿ ಅನುತ್ತೀರ್ಣರಾಗಿ ವಿಶ್ವದಾಖಲೆ ಮಾಡುವುದಾಗಿ ಹೇಳಿಕೊಂಡಿರುವ ವ್ಯಕ್ತಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ವೈರಲ್ ಪೋಸ್ಟ್‌ನ ಹಿಂದಿನ ಸತ್ಯವನ್ನು ನಾವು ನಿಮಗೆ ಹೇಳುತ್ತೇವೆ.

Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?

ಉತ್ತರ ಪ್ರದೇಶ ಮಂಡಳಿಯು ಇತ್ತೀಚೆಗೆ ಫಲಿತಾಂಶಗಳನ್ನು ಪ್ರಕಟಿಸಿತ್ತು. ಫಲಿತಾಂಶ ಬಿಡುಗಡೆಯ ಮಧ್ಯೆ ಉಮೇಶ್ ಚಂದ್ರ ಸತಿ ಎಂಬ ಫೇಸ್‌ಬುಕ್ ಖಾತೆಯಿಂದ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ "ಇಂದು ಎಲ್ಲಾ ಗ್ರಾಮಸ್ಥರು ಪ್ರೌಢಶಾಲೆಯಲ್ಲಿ ಸತತ 26 ನೇ ಬಾರಿಗೆ ಫೇಲ್ ಆದ ವ್ಯಕ್ತಿಗೆ ಹೂವಿನ ಹಾರಗಳನ್ನು ಅರ್ಪಿಸಿದರು" ಎಂದು ಬರೆಯಲಾಗಿದೆ.

Fact check: This guy fails 26 times in high school: What is the Truth?

ಈ ವೈರಲ್ ಪೋಸ್ಟ್ ಅನ್ನು ಶೇರ್ ಮಾಡಿದ ವ್ಯಕ್ತಿ ಅದರೊಂದಿಗೆ ಮಾರ್ಕ್‌ಶೀಟ್ ಕೂಡ ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ಮಹಿಳೆಯರು ವ್ಯಕ್ತಿಗೆ ಮಾಲೆಗಳನ್ನು ಹಾಕುತ್ತಿರುವುದನ್ನು ತೋರಿಸಲಾಗಿದೆ. ಈ ವಿಷಯದ ಸುತ್ತಲಿನ ಸತ್ಯವನ್ನು ಆಳವಾಗಿ ಕೆದಕಿದಾಗ ಪೋಸ್ಟ್ ನಕಲಿ ಎಂಬುದು ಗೊತ್ತಾಗಿದೆ.

ಉಮೇಶ್ ಚಂದ್ರ ಸತಿ ಅವರು ಹಂಚಿಕೊಂಡಿರುವ ಚಿತ್ರವು ಸಾಕಷ್ಟು ಹಳೆಯದಾಗಿದೆ ಮತ್ತು ಅದನ್ನು ಈಗ ಮತ್ತೆ ಹಂಚಿಕೊಳ್ಳಲಾಗಿದೆ. ಇದನ್ನು ಮೊದಲು 31 ಅಕ್ಟೋಬರ್ 2021 ರಂದು ಮತ್ತು ನಂತರ 1 ನವೆಂಬರ್ 2021 ರಂದು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗಳ ಕಾಮೆಂಟ್‌ಗಳ ವಿಭಾಗವು ಸತ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.

Fact check: ಸರಕಾರದಿಂದ ಪ್ರತಿಯೊಬ್ಬರಿಗೂ 30,628 ರೂ ಸಿಗುವುದು ನಿಜವಾ?Fact check: ಸರಕಾರದಿಂದ ಪ್ರತಿಯೊಬ್ಬರಿಗೂ 30,628 ರೂ ಸಿಗುವುದು ನಿಜವಾ?

ಮಾಧ್ಯಮ ವರದಿಗಳ ಪ್ರಕಾರ, ಜನರನ್ನು ನಗಿಸುವ ಸಲುವಾಗಿ ಮಾತ್ರ ಉಮೇಶ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆಶ್ಚರ್ಯಕರವಾಗಿ, ಪೋಸ್ಟ್ 24 ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಈ ಚಿತ್ರದಲ್ಲಿ ಕಂಡುಬರುವ ಅಂಕಪಟ್ಟಿ ಛಾಯಾಚಿತ್ರವನ್ನು ಸುಮಾರು 3-4 ವರ್ಷಗಳ ಹಿಂದೆ ಉಮೇಶ್ ಅವರಿಗೆ ಕಳುಹಿಸಲಾಗಿದೆ. ಹೀಗಾಗಿ ವೈರಲ್ ಪೋಸ್ಟ್ ನಕಲಿ ಎಂದು ತಿಳಿದು ಬಂದಿದೆ.

https://kannada.oneindia.com/fact-check/is-govt-providing-rs-30-638-for-every-citizen-256285.html

Recommended Video

ರೈಲು ಬೋಗಿಯ ಬಾಗಿಲ‌ ಬಳಿ‌ ನಿಂತು ನೀವು ಫೋನ್ ನೋಡ್ತಿದ್ರೆ ಹುಷಾರ್!!!ಈ ವಿಡಿಯೋ ನೋಡಿ | Oneindia Kannada

ಉಮೇಶ್ ಉತ್ತರಾಖಂಡದ ಚಮೋಲಿಯ ಪಿಪಲ್ಕೋಟಿ ಗ್ರಾಮದ ನಿವಾಸಿ ಎಂಬುದು ಗಮನಾರ್ಹ. 11ನೇ ತರಗತಿವರೆಗೆ ಓದಿರುವ ಇವರು ಸದ್ಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

(ಒನ್ಇಂಡಿಯಾ ಸುದ್ದಿ)

Fact Check

ಕ್ಲೇಮು

ಈ ವ್ಯಕ್ತಿ ಪ್ರೌಢಶಾಲೆಯಲ್ಲಿ 26 ಬಾರಿ ಫೇಲ್ ಆಗಿದ್ದಾನೆ.

ಪರಿಸಮಾಪ್ತಿ

ಈ ಚಿತ್ರದಲ್ಲಿ ಕಂಡುಬರುವ ಅಂಕಪಟ್ಟಿ ಸುಮಾರು 3-4 ವರ್ಷಗಳ ಹಿಂದೆ ಉಮೇಶ್ ಅವರಿಗೆ ಕಳುಹಿಸಲಾಗಿದೆ. ಹೀಗಾಗಿ ವೈರಲ್ ಪೋಸ್ಟ್ ನಕಲಿ ಎಂದು ತಿಳಿದು ಬಂದಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Viral message tells this guy has been failed 26 times in high school. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X