ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರಿಯಾ ಚಕ್ರವರ್ತಿ ಪರ ಟ್ವಿಟರ್ ಪೋಸ್ಟ್ ಗಳ ಹಿಂದಿನ ರಹಸ್ಯ

|
Google Oneindia Kannada News

ಮುಂಬೈ, ಸಪ್ಟೆಂಬರ್.10: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೆಶಿಂಧೆ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಚಲಾವಣೆಯಲ್ಲಿ ಇರುವುದು ಬೆಳಕಿಗೆ ಬಂದಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಇದರ ನಡುವೆ ರಿಯಾ ಚಕ್ರವರ್ತಿರಿಗೆ ಡ್ರಗ್ಸ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸುಶಾಂತ್ ಸಿಂಗ್ ಕೇಸ್: ನಟಿ ರಿಯಾ ಚಕ್ರವರ್ತಿ ಬಂಧನವಾಗಿದ್ದು ಏಕೆ?ಸುಶಾಂತ್ ಸಿಂಗ್ ಕೇಸ್: ನಟಿ ರಿಯಾ ಚಕ್ರವರ್ತಿ ಬಂಧನವಾಗಿದ್ದು ಏಕೆ?

ಎರಡು ಪ್ರಕರಣಗಳಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಚಕ್ರವರ್ತಿ ಪರ ಹಿರಿಯ ವಕೀಲ ಸತೀಶ್ ಮನೆಶಿಂಧೆ ವಕಾಲತ್ತು ವಹಿಸಿಕೊಂಡಿದ್ದಾರೆ. ಈ ವಕೀಲರ ಹೆಸರು ಹಾಗೂ ರಿಯಾ ಚಕ್ರವರ್ತಿಯವರ ತಂದೆ ಇಂದ್ರಜಿತ್ ಚಕ್ರವರ್ತಿ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಗಳನ್ನು ತೆರೆದಿರುವುದು 'ದಿ ಕ್ವಿಂಟ್' ನಡೆಸಿದ ಸತ್ಯಾನ್ವೇಷಣೆಯಲ್ಲಿ ಬಯಲಾಗಿದೆ.

ಟ್ವಿಟರ್ ನಲ್ಲಿ ತೆರೆದ ಮೂರು ನಕಲಿ ಖಾತೆಗಳು

ಟ್ವಿಟರ್ ನಲ್ಲಿ ತೆರೆದ ಮೂರು ನಕಲಿ ಖಾತೆಗಳು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಆರೋಪಿ ಕೇಳಿ ಬರುತ್ತಿದೆ. ಇದರ ಜೊತೆಗೆ ಡ್ರಗ್ಸ್ ಸೇವನೆ ಪ್ರಕರಣ ಕೂಡಾ ಉರುಳಾಗಿದೆ. ಎರಡು ಪ್ರಕರಣಗಳಲ್ಲಿ ಸಿಲುಕಿರುವ ರಿಯಾ ಚಕ್ರವರ್ತಿ ಪರ ಪೋಸ್ಟ್ ಗಳನ್ನು ಮಾಡುವುದಕ್ಕೆ ನಕಲಿ ಟ್ವಿಟರ್ ಅಕೌಂಟ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೆಶಿಂಧೆ, ರಿಯಾ ಚಕ್ರವರ್ತಿ ತಂದೆ ಇಂದ್ರಜಿತ್ ಚಕ್ರವರ್ತಿ ಹಾಗೂ 'Police Case' ಹೆಸರಿನಲ್ಲಿ ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ.

ಟ್ವಿಟರ್ ನಲ್ಲಿ ರಿಯಾ ಚಕ್ರವರ್ತಿ ಪರ ಪೋಸ್ಟ್

ಹಿರಿಯ ವಕೀಲ ಸತೀಶ್ ಮನೆಶಿಂಧೆ ಹೆಸರಿನಲ್ಲಿ ಟ್ವಿಟರ್ ಖಾತೆಯೊಂದು ಆಕ್ಟಿವ್ ಆಗಿ ಕೆಲಸ ಮಾಡುತ್ತಿದೆ. ರಿಯಾ ಚಕ್ರವರ್ತಿ ವಿರುದ್ಧದ ಪ್ರಕರಣಗಳಲ್ಲಿ ನಡೆಯುವ ಪ್ರತಿಯೊಂದು ಅಪ್ ಡೇಟ್ ಗಳನ್ನು ಈ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ರಿಯಾ ಚಕ್ರವರ್ತಿ ನಿರಪರಾಧಿ ಎನ್ನುವಂತೆ ಬಿಂಬಿಸುವ ಬೆಂಬಲಿತ ಪೋಸ್ಟ್ ಮತ್ತು ಬರಹಗಳನ್ನು ಈ ಖಾತೆಯಲ್ಲಿ ಹಾಕಲಾಗುತ್ತಿರುವುದು ಎದ್ದು ಕಾಣುತ್ತಿದೆ.

ಬಾಣಸಿಗನ ಬಂಧನ: ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಹೊಸ ತಿರುವುಬಾಣಸಿಗನ ಬಂಧನ: ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಹೊಸ ತಿರುವು

ರಿಯಾ ಚಕ್ರವರ್ತಿ ಪರ ವಕೀಲರ ಅಭಿಮಾನಿ ಎಂದು ಉಲ್ಲೇಖ

ರಿಯಾ ಚಕ್ರವರ್ತಿ ಪರ ವಕೀಲರ ಅಭಿಮಾನಿ ಎಂದು ಉಲ್ಲೇಖ

ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೆಶಿಂಧೆ ಹೆಸರಿನಲ್ಲಿ 'Satish Maneshinde' ಎಂಬ ಟ್ವಿಟರ್ ಖಾತೆ ತೆರೆಯಲಾಗಿದೆ. ಇದರ ಕೆಳಭಾಗದಲ್ಲಿ 'This is an fan account of Satish maneshinde' ಎಂದು ಉಲ್ಲೇಖಿಸಲಾಗಿದೆ. ಅಂದರೆ ಇದು ಸತೀಶ್ ಮನೆಶಿಂಧೆ ಅಭಿಮಾನಿಗಳ ಟ್ವಿಟರ್ ಖಾತೆ ಎಂದು ಬರೆಯಲಾಗಿದೆ. 2020, ಸಪ್ಟೆಂಬರ್.2ರಂದು ಈ ಟ್ವಿಟರ್ ಖಾತೆಯನ್ನು ತೆರೆಯಲಾಗಿದ್ದು, ಈ ವರದಿ ಬರೆಯುತ್ತಿರುವ ವೇಳೆಗೆ ಖಾತೆಯಲ್ಲಿ 3944 ಫಾಲೋವರ್ಸ್ ಇರುವುದು ಪತ್ತೆಯಾಗಿದೆ. ಟ್ವಿಟರ್ ಖಾತೆಗೆ ಲಿಂಕ್ ಮಾಡಿರುವ ವೆಬ್ ಸೈಟ್ 'Satish.Org' ಕೂಡಾ ನಕಲಿಯಾಗಿದೆ.

ಸ್ಪೆಲ್ಲಿಂಗ್ ಮಿಸ್ಟೇಕ್ ಬಗ್ಗೆ ಗಮನ ಹರಿಸಬೇಕಾದ ವಿಚಾರ

ಸ್ಪೆಲ್ಲಿಂಗ್ ಮಿಸ್ಟೇಕ್ ಬಗ್ಗೆ ಗಮನ ಹರಿಸಬೇಕಾದ ವಿಚಾರ

ಹಿರಿಯ ವಕೀಲರೂ ಆಗಿರುವ ಸತೀಶ್ ಮನೆಶಿಂಧೆ ಅವರ ಖಾತೆಯಲ್ಲಿ ಬರೆಯಲಾಗುತ್ತಿದ್ದ ಸಂದೇಶಗಳನ್ನು ಹೆಚ್ಚು ಗಮಿಸಲಾಗುತ್ತಿತ್ತು. ಆದರೆ ಈ ಸಂದೇಶಗಳಲ್ಲಿನ ಸ್ಪೆಲ್ಲಿಂಗ್ ಮಿಸ್ಟೇಕ್ ಗಳು ಅನುಮಾನ ಹುಟ್ಟಿಸಲು ಆರಂಭಿಸಿತ್ತು. ವಿದ್ಯಾವಂತ ಹಿರಿಯ ವಕೀಲರು ಬರೆಯುವ ಇಂಗ್ಲೀಷ್ ಬರಹದಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಕಾಣಿಸುವುದಕ್ಕೆ ಸಾಧ್ಯವೇ. ಮೂರು ಟ್ವೀಟ್ ಸಂದೇಶಗಳಲ್ಲಿ ಬರೆದ 'Juditial' , 'Definately' ಮತ್ತು 'Confferencing' ಪದಗಳಲ್ಲಿನ ವ್ಯತ್ಯಾಸವು ಇದು ವಕೀಲರ ಅಧಿಕೃತ ಟ್ವಿಟರ್ ಖಾತೆ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುವಂತಿತ್ತು.

ಟ್ವಿಟರ್ ಖಾತೆಯನ್ನೇ ಹೊಂದಿಲ್ಲ ಎಂದ ಸತೀಶ್ ಮನೆಶಿಂಧೆ

ಟ್ವಿಟರ್ ಖಾತೆಯನ್ನೇ ಹೊಂದಿಲ್ಲ ಎಂದ ಸತೀಶ್ ಮನೆಶಿಂಧೆ

ರಿಯಾ ಚಕ್ರವರ್ತಿ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು, ಪೋಸ್ಟ್ ಗಳು, ಫೋಟೋಗಳು ಮತ್ತು ಬರಹಗಳು ನಿಮ್ಮದೇ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಆಗುತ್ತಿರುವ ಬಗ್ಗೆ ಕ್ವಿಂಟ್ ಸುದ್ದಿ ಸಂಸ್ಥೆಯು ಹಿರಿಯ ವಕೀಲ ಸತೀಶ್ ಮನೆಶಿಂಧೆಯವರ ಗಮನಕ್ಕೆ ತಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಮನೆಶಿಂಧೆ ಅವರು "ನಾನು ಯಾವುದೇ ರೀತಿ ಅಧಿಕೃತ ಟ್ವಿಟರ್ ಖಾತೆಯನ್ನು ಹೊಂದಿಲ್ಲ, ಆ ಖಾತೆಯಲ್ಲಿ ಪೋಸ್ಟ್ ಆಗುತ್ತಿರುವ ಸಂದೇಶಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ರೀ-ಟ್ವೀಟ್ ಮಾಡುವುದೇ Police Case ಟ್ವಿಟರ್ ಖಾತೆ ಕೆಲಸ

ರೀ-ಟ್ವೀಟ್ ಮಾಡುವುದೇ Police Case ಟ್ವಿಟರ್ ಖಾತೆ ಕೆಲಸ

ನಕಲಿ ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಆಗಿರುವ ಬರಹಗಳು ಮತ್ತು ಪೋಸ್ಟ್ ಗಳನ್ನು 'Police Case' ಟ್ವಿಟರ್ ಖಾತೆಯಲ್ಲಿ ರೀ-ಟ್ವೀಟ್ ಮಾಡಲಾಗುತ್ತಿತ್ತು. ಅದರಲ್ಲೂ ಸತೀಶ್ ಮನೆಶಿಂಧೆ ಹೆಸರಿನಲ್ಲಿರುವ ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾದ ಬಹುತೇಕ ಪೋಸ್ಟ್ ಗಳನ್ನು 'Police Case' ಖಾತೆಯಲ್ಲಿ ರೀ-ಟ್ವೀಟ್ ಮಾಡಲಾಗಿತ್ತು. ಸಪ್ಟೆಂಬರ್.04, 2020ರಲ್ಲಿ ತೆರೆಯಲಾದ ಈ ಟ್ವಿಟರ್ ಖಾತೆಯಲ್ಲಿ ಇದುವರೆಗೂ 21 ಟ್ವೀಟ್ ಗಳನ್ನು ಮಾಡಲಾಗಿದೆ. ಈ ಖಾತೆಗೆ 94 ಫಾಲೋವರ್ಸ್ ಗಳಿದ್ದಾರೆ.

Police Case ಟ್ವಿಟರ್ ನಲ್ಲಿ ಇಂಗ್ಲೀಷ್ ಸ್ಪೆಲ್ಲಿಂಗ್ ಮಿಸ್ಟೇಕ್

Police Case ಟ್ವಿಟರ್ ನಲ್ಲಿ ಇಂಗ್ಲೀಷ್ ಸ್ಪೆಲ್ಲಿಂಗ್ ಮಿಸ್ಟೇಕ್

ರಿಯಾ ಚಕ್ರವರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ವೊಂದನ್ನು ಈ ಖಾತೆಯ ಮೇಲ್ಭಾಗಕ್ಕೆ 'ಪಿನ್' ಮಾಡಲಾಗಿತ್ತು. ಹೀಗೆ ಪಿನ್ ಮಾಡಿರುವ ಬರಹದಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಕಂಡು ಬಂದಿದ್ದು 'Proove, Alligations' ಎಂದು ಬರೆಯಲಾಗಿತ್ತು.

ರಿಯಾ ಚಕ್ರವರ್ತಿ ತಂದೆ ಹೆಸರಿನಲ್ಲಿ ಟ್ವಿಟರ್ ಖಾತೆ

ರಿಯಾ ಚಕ್ರವರ್ತಿ ತಂದೆ ಹೆಸರಿನಲ್ಲಿ ಟ್ವಿಟರ್ ಖಾತೆ

ಮಾದಕ ವಸ್ತು ಸೇವನೆ ಆರೋಪದಡಿ ಸಪ್ಟೆಂಬರ್.08ರಂದು ರಿಯಾ ಚಕ್ರವರ್ತಿಯನ್ನು ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿದರು. ಇದರ ಬೆನ್ನಲ್ಲೇ ರಿಯಾ ಚಕ್ರವರ್ತಿ ತಂದೆ ಇಂದ್ರಜಿತ್ ಚಕ್ರವರ್ತಿ ಹೆಸರಿನಲ್ಲಿರುವ 'Col (Retd) Indrajit Chakraborty' ಟ್ವಿಟರ್ ಖಾತೆಯಲ್ಲಿ ಸಂದೇಶವೊಂದು ಪೋಸ್ಟ್ ಆಯಿತು. "ದೇಶದಲ್ಲಿನ ನಿರುದ್ಯೋಗ, ಜಿಡಿಪಿ ಕುಸಿತ, ಕೊವಿಡ್-19 ಬಿಕ್ಕಟ್ಟಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ನನ್ನ ಮಗಳನ್ನು ಬಲಿಪಶು ಮಾಡುತ್ತಿದ್ದಾರೆ" ಎಂದು ಟ್ವೀಟ್ ಮಾಡಲಾಗಿತ್ತು.

Fact Check

ಕ್ಲೇಮು

ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೆಶಿಂಧೆ, ಪೊಲೀಸ್ ಕೇಸ್, ಇಂದ್ರಜಿತ್ ಚಕ್ರವರ್ತಿ ಟ್ವಿಟರ್ ಖಾತೆ ಬರಹಗಳು,

ಪರಿಸಮಾಪ್ತಿ

ಹಿರಿಯ ವಕೀಲ ಸತೀಶ್ ಮನೆಶಿಂಧೆ, ಪೊಲೀಸ್ ಕೇಸ್, ಇಂದ್ರಜಿತ್ ಚಕ್ರವರ್ತಿ ಟ್ವಿಟರ್ ಖಾತೆಗಳೇ ನಕಲಿ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Sushant Singh Rajput Case: Fake Twitter Accounts Of Rhea Chakraborty’s Lawyer, Father Crop Up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X