ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಭಾರತದ ಹಣದಿಂದ ಜಲಫಿರಂಗಿ ಖರೀದಿಸಿದ ಶ್ರೀಲಂಕಾ? ಇದು ಸತ್ಯವೇ

|
Google Oneindia Kannada News

ಹೊಸದಿಲ್ಲಿ ಮೇ 08: ನೆರೆಯ ರಾಷ್ಟ್ರ ಶ್ರೀಲಂಕಾ ಸ್ವಾತಂತ್ರ್ಯದ ನಂತರ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದಲ್ಲಿ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಜನರು ಬೀದಿಗಿಳಿದು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಮತ್ತು ಅವರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀಲಂಕಾದಲ್ಲಿ ಜನರ ಬಂಡಾಯ ತೀವ್ರಗೊಂಡಿದೆ. ಪೆಟ್ರೋಲ್-ಡೀಸೆಲ್‌ನಿಂದ ಹಿಡಿದು ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳವರೆಗೆ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ದಂಗೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಮತ್ತೊಮ್ಮೆ ತುರ್ತುಪರಿಸ್ಥಿತಿ ಹೇರಿದ್ದಾರೆ. ಈ ನಡುವೆ ಭಾರತ ಸರ್ಕಾರ ನೀಡಿದ ಕ್ರೆಡಿಟ್ ಲೈನ್ ಅಡಿಯಲ್ಲಿ ಶ್ರೀಲಂಕಾ ಸರ್ಕಾರವು ಜಲಫಿರಂಗಿ ವಾಹನವನ್ನು ಆಮದು ಮಾಡಿಕೊಂಡಿದೆ ಎಂದು ಹಲವಾರು ವರದಿಗಳು ಹೇಳಿವೆ. ಈ ಹೇಳಿಕೆಯ ಸತ್ಯಾಸತ್ಯತೆ ಏನು ನೋಡೋಣ...

Fact check: ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ?Fact check: ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ?

ವಾಸ್ತವವಾಗಿ ಶ್ರೀಲಂಕಾದಲ್ಲಿ ಉದ್ಭವಿಸಿದ ಬಿಕ್ಕಟ್ಟಿನಿಂದ ಭಾರತ ನೆರೆಯ ರಾಷ್ಟ್ರವಾಗಿ ಸಹಾಯ ಮಾಡುತ್ತಿದೆ. ಭಾರತ ಸರ್ಕಾರ ಶ್ರೀಲಂಕಾಕ್ಕೆ ಕ್ರೆಡಿಟ್ ಲೈನ್ ಅನ್ನು ನೀಡಿದೆ. ಇದರಿಂದಾಗಿ ಈ ಕೆಟ್ಟ ಸಮಯದಲ್ಲಿ ಅಲ್ಲಿನ ಜನರಿಗೆ ಆಹಾರ ಮತ್ತು ಪಾನೀಯ ಮತ್ತು ಅಗತ್ಯ ವಸ್ತುಗಳಿಗೆ ಸಹಾಯ ಮಾಡಬಹುದು. ಜೊತೆಗೆ ಭಾರತೀಯ ಸಾಲದ ಅಡಿಯಲ್ಲಿ ಶ್ರೀಲಂಕಾ ವಾಟರ್ ಕ್ಯಾನನ್ ವಾಹನವನ್ನು ಆಮದು ಮಾಡಿಕೊಂಡಿದೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಭಾರತೀಯ ಹೈಕಮಿಷನ್ ಶನಿವಾರ ಟ್ವೀಟ್ ಮಾಡಿ ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಹೇಳಿದೆ.

Fact check: Sri Lanka bought water cannons from Indias money?

ಭಾರತ ಶ್ರೀಲಂಕಾಕ್ಕೆ ವಿಸ್ತರಿಸಿದ ಸಾಲದ ಅಡಿಯಲ್ಲಿ ಶ್ರೀಲಂಕಾಕ್ಕೆ ಜಲಫಿರಂಗಿ ವಾಹನಗಳ ಪೂರೈಕೆಯ ಹಕ್ಕುಗಳನ್ನು ಭಾರತ ತಿರಸ್ಕರಿಸಿದೆ. ಶ್ರೀಲಂಕಾದಲ್ಲಿನ ಭಾರತೀಯ ಹೈಕಮಿಷನ್, "ಭಾರತ ಸರ್ಕಾರವು ವಿಸ್ತರಿಸಿದ ಕ್ರೆಡಿಟ್ ಲೈನ್ ಅಡಿಯಲ್ಲಿ ಶ್ರೀಲಂಕಾ ಸರ್ಕಾರವು ಜಲಫಿರಂಗಿ ವಾಹನವನ್ನು ಆಮದು ಮಾಡಿಕೊಂಡಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಈ ವರದಿಗಳು ವಾಸ್ತವಿಕವಾಗಿ ತಪ್ಪಾಗಿದೆ. ಭಾರತದ ಯಾವುದೇ ಕ್ರೆಡಿಟ್ ಲೈನ್ ಅಡಿಯಲ್ಲಿ ವಾಟರ್ ಕ್ಯಾನನ್ ವಾಹನಗಳನ್ನು ಸರಬರಾಜು ಮಾಡಲಾಗಿಲ್ಲ" ಎಂದು ಟ್ವೀಟ್ ಮಾಡಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಅಗತ್ಯವಾದ ಆಹಾರ, ಔಷಧಿಗಳು ಮತ್ತು ಇತರ ಅಗತ್ಯ ವಸ್ತುಗಳ ಲಭ್ಯತೆಯೊಂದಿಗೆ ಜನರಿಗೆ ಸಹಾಯ ಮಾಡುವುದು ಭಾರತದಿಂದ ಶ್ರೀಲಂಕಾಕ್ಕೆ 1 ಬಿಲಿಯನ್ ಕ್ರೆಡಿಟ್ ಲೈನ್‌ನ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ. ಇಂತಹ ತಪ್ಪು ವರದಿಯು ಶ್ರೀಲಂಕಾದ ಜನರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಮಾಡಿದ ಸಹಕಾರ ಮತ್ತು ಪ್ರಯತ್ನಗಳಿಗೆ ಯಾವುದೇ ಕೊಡುಗೆಯನ್ನು ನೀಡುವುದಿಲ್ಲ ಎಂದು ಅದು ಹೇಳಿದೆ. ಹೀಗಾಗಿ ಭಾರತದ ಹಣದಿಂದ ಶ್ರೀಲಂಕಾ ಜಲಫಿರಂಗಿ ಖರೀದಿಸಿದೆ ಹೇಳಿಕೆ ಸಂಪೂರ್ಣವಾಗಿ ತಪ್ಪು ಸಂದೇಶವಾಗಿದೆ.

Fact Check

ಕ್ಲೇಮು

ಭಾರತದ ಹಣದಿಂದ ಜಲಫಿರಂಗಿ ಖರೀದಿಸಿದ ಶ್ರೀಲಂಕಾ ಎಂದು ಸಂದೇಶ ಹಂಚಿಕೊಳ್ಳಲಾಗುತ್ತಿದೆ

ಪರಿಸಮಾಪ್ತಿ

ಭಾರತದ ಹಣದಿಂದ ಜಲಫಿರಂಗಿಯನ್ನು ಶ್ರೀಲಂಕಾ ಖರೀದಿಸಿಲ್ಲ ಎಂದು ಭಾರತೀಯ ಹೈಕಮಿಷನ್ ಶನಿವಾರ ಟ್ವೀಟ್ ಮಾಡಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Sri Lankan government has imported the water cannon vehicle under the credit line given by the Indian government. what is the truth of this claim, know...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X