ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸೌಮ್ಯ ಕೋವಿಡ್ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಅಗತ್ಯವಿಲ್ಲವೇ?

|
Google Oneindia Kannada News

ನವದೆಹಲಿ, ಮೇ 06: ಒಂದು ಸಿಟಿ ಸ್ಕ್ಯಾನ್ 300-400 ಎಕ್ಸ್‌ರೇಗೆ ಸಮ, ಹೀಗಾಗಿ ಸೌಮ್ಯ ತರದ ಲಕ್ಷಣಗಳನ್ನು ಹೊಂದಿರುವ ಕೊರೊನಾ ಪ್ರಕರಣಗಳಲ್ಲಿ ಸಿಟಿಸ್ಕ್ಯಾನ್ ಮಾಡಿಸಬಾರದು ಎಂದು ಏಮ್ಸ್ ಮುಖ್ಯಸ್ಥರು ಹೇಳಿದ್ದಾರೆ ಎನ್ನುವ ಸುದ್ದಿ ಬಹಳ ಚರ್ಚೆಯಲ್ಲಿದೆ.

ಈ ಆರೋಪವನ್ನು ಭಾರತೀಯ ರೇಡಿಯಾಲಜಿಕಲ್ ಹಾಗೂ ಇಮೇಜಿಂಗ್ ಅಸೋಸಿಯೇಷನ್ ತಳ್ಳಿ ಹಾಕಿದೆ. ಏಮ್ಸ್ ಮುಖ್ಯಸ್ಥರ ಹೇಳಿಕೆ ಜನರ ದಾರಿ ತಪ್ಪಿಸುತ್ತಿದೆ ಎಂದು ಅಸೋಸಿಯೇಷನ್ ಹೇಳಿದೆ, ಸಿಟಿಸ್ಕ್ಯಾನ್‌ಗಳು ಕೋವಿಡ್ 19 ರೋಗ ನಿರ್ಣಯದ ಪ್ರಮುಖ ಅಂಶವಾಗಿದೆ, ಅದು ರೋಗದ ತೀವ್ರತೆಯನ್ನು ನಿರ್ಧರಿಸುತ್ತದೆ ಎಂದು ಹೇಳಿದೆ.

Fact Check: ಮಾರ್ಚ್ 2021ರವರೆಗೆ ಕೊರೊನಾ ಲಸಿಕೆ ಖರೀದಿಸಿಯೇ ಇರಲಿಲ್ಲ ಭಾರತ? Fact Check: ಮಾರ್ಚ್ 2021ರವರೆಗೆ ಕೊರೊನಾ ಲಸಿಕೆ ಖರೀದಿಸಿಯೇ ಇರಲಿಲ್ಲ ಭಾರತ?

ಗುಲೇರಿಯಾ ಅವರ ಹೇಳಿಕೆ ಅವೈಜ್ಞಾನಿಕ, ಆತಂಕಕಾರಿ ಹಾಗೂ ಬೇಜವಾಬ್ದಾರಿಯಿಂದ ಕೂಡಿದೆ.ಶ್ವಾಸಕೋಶದ ಹಾನಿಯನ್ನು ಪತ್ತೆಹಚ್ಚುವಲ್ಲಿ ಪಲ್ಸ್ ಆಕ್ಸಿಮೀಟರ್‌, ಸ್ಯಾಚುರೇಶನ್ ಮಾನಿಟರಿಂಗ್‌ಗಿಂತ ಸಿಟಿ ಸ್ಕ್ಯಾನ್ ಹೆಚ್ಚು ಸೂಕ್ಷ್ಮವಾಗಿದೆ ಎಂದು ಐಆರ್‌ಐಎ ಹೇಳಿದೆ.

Fact Check: Should CT Scans Be Avoided In Mild COVID-19 Cases?

ಗುಲೇರಿಯಾ ಹೇಳಿರುವುದು 30-40 ವರ್ಷಗಳ ಹಿಂದಿನ ತಂತ್ರಜ್ಞಾನ, ಆಧುನಿಕ ಸಿಟಿ ಸ್ಕ್ಯಾನರ್‌ಗಳು ಅಲ್ಟ್ರಾ ಲೋ ಡೋಸ್ ಸಿಟಿಯನ್ನು ಬಳಸಲಾಗುತ್ತದೆ.
ಇದು ವಿಕರಣವನ್ನು ಕೇವಲ 5-10 ಕ್ಷಕಿರಣಗಳಿಗೆ ಹೋಲಿಸಬಹುದು.

ರೋಗವು ಸೌಮ್ಯ, ಮಧ್ಯಮ ಅಥವಾ ತೀವ್ರ ಹಂತದಲ್ಲಿದೆಯೇ ಎಂಬುದಕ್ಕೆ ಸಿಟಿ ಸ್ಕ್ಯಾನ್ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗಿದೆ. ನಿರಂತರ ಸಿಟಿ ಸ್ಕ್ಯಾನ್‌ಗೆ ಒಳಪಟ್ಟರೆ ಮಾತ್ರ ಭವಿಷ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರೋಗ ಪರೀಕ್ಷಾ ಸಂಬಂಧ ಈ ಪರೀಕ್ಷಾ ವಿಧಾನಕ್ಕೆ ಒಳಪಡಬಹುದಾಗಿದೆ.

Fact Check

ಕ್ಲೇಮು

ಒಂದು ಸಿಟಿ ಸ್ಕ್ಯಾನ್ 300-400 ಎಕ್ಸ್‌ರೇಗಳಿಗೆ ಸಮ ಹೀಗಾಗಿ ಸೌಮ್ಯ ಕೊರೊನಾ ಲಕ್ಷಣಗಳಿರುವವರು ಸಿಟಿ ಸ್ಕ್ಯಾನ್ ಮಾಡಿಸಬೇಡಿ.

ಪರಿಸಮಾಪ್ತಿ

ಆಧುನಿಕ ಸಿಟಿ ಸ್ಕ್ಯಾನರ್‌ಗಳು 5-10 ಎಕ್ಸ್‌ರೇಗೆ ಹೋಲಿಕೆ ಮಾಡಬಹುದಷ್ಟೇ ಎಂದು ಐಆರ್‌ಐಎ ಹೇಳಿದೆ

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A claim made by AIIMS chief that a CT scan is equivalent to 300-400 x-rays and should be avoided for mild cases has been rubbished by the Indian Radiological and Imaging Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X